Two Wheeler Loan: ದ್ವಿಚಕ್ರ ವಾಹನ ಸಾಲಕ್ಕೆ ಯಾವ ಬ್ಯಾಂಕ್​ನಲ್ಲಿ ಕಡಿಮೆ ಬಡ್ಡಿ ದರ? ಇಲ್ಲಿದೆ ಇಎಂಐ ಮತ್ತಿತರ ವಿವರ

ಕಡಿಮೆ ಬಡ್ಡಿ ದರದ ದ್ವಿಚಕ್ರ ವಾಹನ ಸಾಲದ ಬಗ್ಗೆ ಮಾಹಿತಿ ಇಲ್ಲಿದೆ. ಯಾವ ಬ್ಯಾಂಕ್​ನಲ್ಲಿ ಕಡಿಮೆ ಬಡ್ಡಿ ದರ ಇದೆ ಹಾಗೂ ಇಎಂಐ ಎಷ್ಟು ಬರುತ್ತದೆ ಎಂಬ ಲೆಕ್ಕಾಚಾರ ಸಹಿತವಾದ ವಿವರ ಇದು.

Two Wheeler Loan: ದ್ವಿಚಕ್ರ ವಾಹನ ಸಾಲಕ್ಕೆ ಯಾವ ಬ್ಯಾಂಕ್​ನಲ್ಲಿ ಕಡಿಮೆ ಬಡ್ಡಿ ದರ? ಇಲ್ಲಿದೆ ಇಎಂಐ ಮತ್ತಿತರ ವಿವರ
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: Jan 07, 2022 | 11:38 AM

ಕೊವಿಡ್-19 ಹುಟ್ಟು ಹಾಕಿರುವ ಭಯಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನರು ತಮ್ಮದೇ ಸ್ವಂತ ವಾಹನಗಳಿರಲಿ ಎಂದು ಬಯಸುತ್ತಿದ್ದಾರೆ. ಇನ್ನು ಕೊವಿಡ್ ಬಾಧಿತ ಆರ್ಥಿಕತೆಗೆ ಜೀವ ತುಂಬುವ ಸಲುವಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ದೊರೆಯುವಂತೆ ಮಾಡಲಾಗುತ್ತಿದೆ. ಭಾರತದಲ್ಲಿ ಸ್ವಂತ ವಾಹನ ಅಂದಾಗ ಮೊದಲ ಆದ್ಯತೆ ದ್ವಿಚಕ್ರ ವಾಹನ ಆಗಿರುತ್ತದೆ. ಏಕೆಂದರೆ, ಕೈಗೆಟುಕುವ ಬೆಲೆ, ವಾಹನ ನಿರ್ವಹಣೆ ಮತ್ತಿತರ ಕಾರಣಗಳು ಸೇರಿಕೊಳ್ಳುತ್ತವೆ. ಈ ಹೊಸ ವರ್ಷಕ್ಕೆ ನೀವೂ ದ್ವಿಚಕ್ರ ವಾಹನ ಖರೀದಿ ಮಾಡಬೇಕು ಅಂತಿದ್ದೀರಾ? ಅದಕ್ಕೆ ಹಣದ ಕೊರತೆ ಆಗಿದೆಯಾ? ಕಡಿಮೆ ಬಡ್ಡಿ ದರದಲ್ಲಿ ಹಾಗೂ ಸುಲಭ ಕಂತುಗಳಲ್ಲಿ ಸಾಲ ಎಲ್ಲಿ ದೊರೆಯುತ್ತದೆ ಎಂದು ಹುಡುಕುತ್ತಿದ್ದೀರಾ? ಹಾಗಿದ್ದಲ್ಲಿ ನಿಮಗೆ ಈ ಲೇಖನ ಸಹಾಯ ಮಾಡುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದು, ಅರ್ಹತಾ ಮಾನದಂಡಗಳನ್ನು ಪೂರೈಸುತ್ತೀರಿ ಅಂತಾದರೆ ಸುಲಭವಾಗಿಯೇ ದ್ವಿಚಕ್ರ ವಾಹನ ಸಾಲ ದೊರೆಯುತ್ತದೆ.

ಅಂದಹಾಗೆ, ಸಾಲ ಪಡೆಯುವಾಗ ಕೆಲವು ಅಂಶಗಳನ್ನು ಗಮನಿಸಬೇಕು. ಬಡ್ಡಿ ದರ, ಪ್ರೊಸೆಸಿಂಗ್ ಫೀ, ಪ್ರೀಪೇಮೆಂಟ್ ಶುಲ್ಕಗಳು ಮತ್ತು ಎಷ್ಟು ಸಮಯದೊಳಗೆ ಸಾಲವನ್ನು ವಿತರಿಸುತ್ತಾರೆ ಹಾಗೂ ಎಷ್ಟು ವೇಗವಾಗಿ ಪ್ರೊಸೆಸ್ ಆಗುತ್ತದೆ ಎಂದು ತಿಳಿದುಕೊಳ್ಳಬೇಕು. ಹಲವು ಹಣಕಾಸು ಸಂಸ್ಥೆಗಳು ಪ್ರೀ ಅಪ್ರೂವ್ಡ್ ಸಾಲವನ್ನೇ ನೀಡುತ್ತವೆ. ಈ ಮೂಲಕ ಗ್ರಾಹಕರಿಗೆ ವೇಗವಾಗಿ ಪ್ರೊಸೆಸ್ ಆಗಿ, ಆಕರ್ಷಕ ಬಡ್ಡಿ ದರದ ಆಫರ್ ಕೂಡ ಸಿಗುತ್ತದೆ. ದಾಖಲಾತಿಗಳ ಬಗ್ಗೆ ನೋಡುವುದಾದರೆ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಆದಾಯ ಪುರಾವೆ ಇತ್ಯಾದಿಗಳು ಕೇಳುತ್ತಾರೆ. ಇದು ಒಂದು ಬ್ಯಾಂಕ್​ನಿಂದ ಮತ್ತೊಂದಕ್ಕೆ ಬದಲಾಗುತ್ತದೆ.

ದ್ವಿಚಕ್ರ ವಾಹನಗಳಿಗೆ 1 ಲಕ್ಷ ರೂಪಾಯಿ ಮೊತ್ತಕ್ಕೆ ಮೂರು ವರ್ಷದ ಅವಧಿಗೆ ಯಾವ ಬ್ಯಾಂಕ್​ನಲ್ಲಿ ಎಷ್ಟು ಬಡ್ಡಿ ದರ ಹಾಗೂ ಇಎಂಐ ಎಂಬ ವಿವರ ಇಲ್ಲಿದೆ: – ಬ್ಯಾಂಕ್ ಆಫ್ ಇಂಡಿಯಾ: ಶೇ 6.85 – ರೂ. 3081 – ಸೆಂಟ್ರಲ್ ಬ್ಯಾಂಕ್: ಶೇ 7.25- ರೂ. 3099 – ಜಮ್ಮು ಅಂಡ್ ಕಾಶ್ಮೀರ್ ಬ್ಯಾಂಕ್: ಶೇ 8.45- ರೂ. 3154 – ಪಂಜಾಬ್ ನ್ಯಾಷನಲ್ ಬ್ಯಾಂಕ್: ಶೇ 8.65- ರೂ. 3164 – ಪಂಜಾಬ್ ಅಂಡ್ ಸಿಂದ್ ಬ್ಯಾಂಕ್: ಶೇ 8.80- ರೂ. 3171 – ಕೆನರಾ ಬ್ಯಾಂಕ್: ಶೇ 9- ರೂ. 3180 – ಆಕ್ಸಿಸ್ ಬ್ಯಾಂಕ್: ಶೇ 9- ರೂ. 3180 – ಐಡಿಬಿಐ ಬ್ಯಾಂಕ್: ಶೇ 9.80- ರೂ. 3217 – ಯೂನಿಯನ್ ಬ್ಯಾಂಕ್: ಶೇ 9.90- ರೂ. 3222 – ಇಂಡಿಯನ್ ಓವರ್​ಸೀಸ್ ಬ್ಯಾಂಕ್: ಶೇ 10.05- ರೂ. 3229 – ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ಶೇ 10.25- ರೂ. 3238 – ಇಂಡಿಯನ್ ಬ್ಯಾಂಕ್: ಶೇ 10.35- ರೂ. 3243 – ಯೆಸ್ ಬ್ಯಾಂಕ್: ಶೇ 10.39- ರೂ. 3245 – ಬ್ಯಾಂಕ್ ಆಫ್ ಬರೋಡ: ಶೇ 10.75- ರೂ. 3262 – ಬ್ಯಾಂಕ್ ಆಫ್ ಮಹಾರಾಷ್ಟ್ರ: ಶೇ 10.80- ರೂ. 3264 – ಸೌತ್ ಇಂಡಿಯನ್ ಬ್ಯಾಂಕ್: ಶೇ 11- ರೂ. 3274 – ಯುಕೋ ಬ್ಯಾಂಕ್: ಶೇ 11.70- ರೂ. 3307 – ಎಚ್​ಡಿಎಫ್​ಸಿ ಬ್ಯಾಂಕ್: ಶೇ 12- ರೂ. 3321 – ಕರ್ಣಾಟಕ ಬ್ಯಾಂಕ್: ಶೇ 12.45- ರೂ. 3343 – ಧನಲಕ್ಷ್ಮೀ ಬ್ಯಾಂಕ್: ಶೇ 12.50- ರೂ. 3345 – ಫೆಡರಲ್ ಬ್ಯಾಂಕ್: ಶೇ 12.50- ರೂ. 3345 – ಕರೂರ್ ವೈಶ್ಯ ಬ್ಯಾಂಕ್: ಶೇ 14- ರೂ. 3418

ಈ ಮಾಹಿತಿ ಆಯಾ ಬ್ಯಾಂಕ್​ ವೆಬ್​ಸೈಟ್​ನಿಂದ ಜನವರಿ 4, 2022ಕ್ಕೆ ಸಂಗ್ರಹಿಸಲಾಗಿದೆ. ಈ ಮೇಲ್ಕಂಡ ಪಟ್ಟಿಯಲ್ಲಿ ಕಾಣಿಸಿರುವ ಬಡ್ಡಿ ದರ ಸಾಂಕೇತಿಕವಾದದ್ದು ಮಾತ್ರ. ಬ್ಯಾಂಕ್​ನ ನಿಯಮ ಹಾಗೂ ನಿಬಂಧನಗೆ ಅನುಗುಣವಾಗಿ ಬದಲಾವಣೆ ಆಗುತ್ತದೆ.

ಇದನ್ನೂ ಓದಿ: KYC deadline extension: ಕೆವೈಸಿ ಅಪ್​ಡೇಟ್​ಗಾಗಿ 2022ರ ಮಾರ್ಚ್​ ತನಕ ಅವಧಿ ವಿಸ್ತರಿಸಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ