7th pay commission: ಜ. 26ಕ್ಕೆ ಮುನ್ನ ಸರ್ಕಾರಿ ನೌಕರರಿಗೆ ಬಂಪರ್ ವೇತನ ಏರಿಕೆ; ಫಿಟ್‌ಮೆಂಟ್ ಫ್ಯಾಕ್ಟರ್ ಹೆಚ್ಚಳ ಸಾಧ್ಯತೆ
ಕೇಂದ್ರ ಸರ್ಕಾರಿ ನೌಕರರ ವೇತನವು ಜನವರಿ 26ಕ್ಕೆ ಮೊದಲು ಹೆಚ್ಚಳ ಆಗಬಹುದು. ಕೇಂದ್ರ ಸರ್ಕಾರವು ಫಿಟ್‌ಮೆಂಟ್ ಫ್ಯಾಕ್ಟರ್ ಏರಿಕೆ ಮಾಡುವ ಸಾಧ್ಯತೆ ಇದೆ.
ಜನವರಿ 26ರ ಗಣರಾಜ್ಯೋತ್ಸವಕ್ಕೆ ಕೇಂದ್ರ ಸರ್ಕಾರಿ ನೌಕರರಿಗೆ ನರೇಂದ್ರ ಮೋದಿ ಸರ್ಕಾರವು ಇನ್ನೂ ಕೆಲ ಒಳ್ಳೆಯ ಸುದ್ದಿ ನೀಡಬಹುದು. ಮಾಧ್ಯಮಗಳಲ್ಲಿನ ವರದಿಗಳ ಪ್ರಕಾರ, ಮೋದಿ ಸರ್ಕಾರವು ಕೇಂದ್ರ ಮತ್ತು ರಾಜ್ಯ ನೌಕರರ ಫಿಟ್‌ಮೆಂಟ್ ಫ್ಯಾಕ್ಟರ್ನಲ್ಲಿ ಹೆಚ್ಚಳವನ್ನು ಘೋಷಿಸಬಹುದು. ಇದು ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನವನ್ನು ಹೆಚ್ಚಿಸುತ್ತದೆ. ಕನಿಷ್ಠ ವೇತನವನ್ನು 18,000 ರೂಪಾಯಿಗಳಿಂದ 26,000 ರೂಪಾಯಿಗಳಿಗೆ ಹೆಚ್ಚಿಸಬೇಕು ಮತ್ತು ಫಿಟ್‌ಮೆಂಟ್ ಫ್ಯಾಕ್ಟರ್ ಅನ್ನು 2.57 ರಿಂದ 3.68 ಪಟ್ಟು ಹೆಚ್ಚಿಸಬೇಕು ಎಂದು ಕೇಂದ್ರ ಸರ್ಕಾರಿ ನೌಕರರ ಸಂಘಗಳು ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿವೆ. ಮಾಧ್ಯಮ ವರದಿಗಳ ಪ್ರಕಾರ, ಕೇಂದ್ರ ಸರ್ಕಾರಿ ನೌಕರರ ಫಿಟ್‌ಮೆಂಟ್ ಫ್ಯಾಕ್ಟರ್ ಅನ್ನು ಜನವರಿ 26 (ಗಣರಾಜ್ಯೋತ್ಸವ) ಮೊದಲು ನಿರ್ಧರಿಸಬಹುದು, ಅಂದರೆ ಸರ್ಕಾರಿ ನೌಕರರ ಮೂಲ ವೇತನದಲ್ಲಿ ದೊಡ್ಡ ಹೆಚ್ಚಳವಾಗಲಿದೆ.
ಕೇಂದ್ರ ಸರ್ಕಾರಿ ಉದ್ಯೋಗಿಗಳ ಫಿಟ್‌ಮೆಂಟ್ ಫ್ಯಾಕ್ಟರ್ ಹೆಚ್ಚಿಸುವ ಬಗ್ಗೆ ಸರ್ಕಾರ ಘೋಷಣೆ ಮಾಡಿದರೆ ಅದರ ಪರಿಣಾಮವಾಗಿ ಅವರ ಸಂಬಳ ಹೆಚ್ಚಾಗುತ್ತದೆ. ವಾಸ್ತವವಾಗಿ, ಫಿಟ್‌ಮೆಂಟ್ ಫ್ಯಾಕ್ಟರ್ ಹೆಚ್ಚಳದೊಂದಿಗೆ ಕನಿಷ್ಠ ವೇತನವೂ ಹೆಚ್ಚಾಗುತ್ತದೆ. ನೌಕರರು ಪ್ರಸ್ತುತ ಫಿಟ್‌ಮೆಂಟ್ ಫ್ಯಾಕ್ಟರ್ ಅಡಿಯಲ್ಲಿ ಶೇಕಡಾ 2.57ರ ಆಧಾರದ ಮೇಲೆ ವೇತನವನ್ನು ಪಡೆಯುತ್ತಿದ್ದಾರೆ. ಇದನ್ನು ಶೇಕಡಾ 3.68ಕ್ಕೆ ಹೆಚ್ಚಿಸಿದರೆ ನೌಕರರ ಕನಿಷ್ಠ ವೇತನದಲ್ಲಿ 8,000 ರೂಪಾಯಿ, ಅಂದರೆ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನವನ್ನು 18,000 ರೂಪಾಯಿಯಿಂದ 26,000 ರೂಪಾಯಿಗೆ ಹೆಚ್ಚಿಸಲಾಗುವುದು.
ಫಿಟ್‌ಮೆಂಟ್ ಫ್ಯಾಕ್ಟರ್ 3.68ಕ್ಕೆ ಏರಿಸಿದರೆ, ನೌಕರರ ಮೂಲ ವೇತನ 26,000 ರೂಪಾಯಿ. ಇದೀಗ, ಕನಿಷ್ಠ ವೇತನವು ರೂ. 18,000 ಆಗಿದ್ದರೆ, ಭತ್ಯೆಗಳನ್ನು ಹೊರತುಪಡಿಸಿ 2.57 ಫಿಟ್‌ಮೆಂಟ್ ಫ್ಯಾಕ್ಟರ್ ಪ್ರಕಾರ ರೂ. 46,260 (18,000 X 2.57 = 46,260) ದೊರೆಯುತ್ತದೆ. ಈಗ ಫಿಟ್‌ಮೆಂಟ್ ಫ್ಯಾಕ್ಟರ್ 3.68 ಆಗಿದ್ದರೆ, ಸಂಬಳ ರೂ. 95,680 ಆಗಿರುತ್ತದೆ (26000X3.68 = 95,680). ಕೇಂದ್ರ ಸಚಿವ ಸಂಪುಟವು 2017ರ ಜೂನ್ನಲ್ಲಿ 34 ಮಾರ್ಪಾಡುಗಳೊಂದಿಗೆ 7ನೇ ವೇತನ ಆಯೋಗದ ಶಿಫಾರಸುಗಳನ್ನು ಅನುಮೋದಿಸಿತು. ಆರಂಭಿಕ ಹಂತದ ಮೂಲ ವೇತನಕ್ಕೆ ಒದಗಿಸಲಾದ ಹೊಸ ವೇತನ ಶ್ರೇಣಿಗಳು ತಿಂಗಳಿಗೆ ರೂ. 7,000ರಿಂದ ರೂ. 18,000ಕ್ಕೆ ಏರಿದರೆ, ಉನ್ನತ ಮಟ್ಟದಲ್ಲಿ ಅಂದರೆ ಕಾರ್ಯದರ್ಶಿ ಮಟ್ಟಕ್ಕೆ ರೂ. 90,000ದಿಂದ ರೂ. 2.5 ಲಕ್ಷಕ್ಕೆ ಏರಿತು. ವರ್ಗ 1 ಅಧಿಕಾರಿಗಳಿಗೆ ಆರಂಭಿಕ ವೇತನ 56,100 ರೂಪಾಯಿ ಇತ್ತು.
ಇದನ್ನೂ ಓದಿ: 7th Pay Commission: ಕೇಂದ್ರ ಸರ್ಕಾರಿ ನೌಕರರ ಎಕ್ಸ್ಗ್ರೇಷಿಯಾ ಇಡಿಗಂಟು ಪಾವತಿಯಲ್ಲಿ ಭಾರೀ ಬದಲಾವಣೆ
Published On - 6:18 pm, Fri, 7 January 22