7th Pay Commission: ಕೇಂದ್ರ ಸರ್ಕಾರಿ ನೌಕರರ ಎಕ್ಸ್ಗ್ರೇಷಿಯಾ ಇಡಿಗಂಟು ಪಾವತಿಯಲ್ಲಿ ಭಾರೀ ಬದಲಾವಣೆ
ಸಿಬ್ಬಂದಿಗೆ ಎಕ್ಸ್-ಗ್ರೇಷಿಯಾ ಇಡಿಗಂಟನ್ನು ಪಾವತಿ ಮಾಡುವ ವಿಚಾರದಲ್ಲಿ ಇಲ್ಲಿಯವರೆಗೆ ಇದ್ದ ನಿಯಮಾವಳಿಗಳಲ್ಲಿ ಬದಲಾವಣೆಯನ್ನು ಮಾಡಿ, ಕೇಂದ್ರ ಸರ್ಕಾರವು ಕಚೇರಿ ಸುತ್ತೋಲೆಯನ್ನು ಹೊರಡಿಸಿದೆ. ಏನೇನು ಬದಲಾವಣೆಗಳು ಎಂಬ ವಿವರ ಇಲ್ಲಿದೆ.
ಅಧಿಕೃತ ಕಾರ್ಯ ನಿರ್ವಹಿಸುವ ವೇಳೆ ಒಂದು ವೇಳೆ ಸಿಬ್ಬಂದಿ ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ ನೀಡುವ ಎಕ್ಸ್-ಗ್ರೇಷಿಯಾ ಇಡಿಗಂಟಿನ ಪಾವತಿ ನಿಯಮಾವಳಿಯಲ್ಲಿ ಕೇಂದ್ರ ಸರ್ಕಾರವು ಮಾರ್ಪಾಟು ಮಾಡಲಾಗಿದೆ ಕೇಂದ್ರ ಸರ್ಕಾರಿ ಸಿಬ್ಬಂದಿ ನಿವೃತ್ತಿಗೂ ಮುಂಚೆ ಇನ್ನೂ ಸೇವೆಯಲ್ಲಿ ಇರುವಾಗಲೇ ಅಧಿಕೃತ ಕಾರ್ಯ ನಿರ್ವಹಣೆ ವೇಳೆಯಲ್ಲಿ ಮೃತಪಟ್ಟಲ್ಲಿ ಅಂಥವರ ಕುಟುಂಬಕ್ಕೆ ಎಕ್ಸ್-ಗ್ರೇಷಿಯಾ ಇಡಿಗಂಟನ್ನು ಪಾವತಿಸಲಾಗುತ್ತದೆ. ಈ ಮೊತ್ತವನ್ನು ಕಾಲಾನುಕಾಲಕ್ಕೆ ಬದಲಾವಣೆ ಮಾಡುತ್ತಾ ಬರಲಾಗುತ್ತಿದೆ. ಇದೀಗ ಹಣಕಾಸು ಸಚಿವಾಲಯದಿಂದ ನಿರ್ಧಾರ ಕೈಗೊಂಡಿದ್ದು, ಕುಟುಂಬ ಸದಸ್ಯರೊಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ಯಾರನ್ನು ನಾಮಿನಿ ಎಂದು ಮಾಡಿರುತ್ತಾರೋ ಅಂಥವರಿಗೆ ಪಾವತಿಸಲಾಗುತ್ತದೆ. “ಸರ್ಕಾರಿ ನೌಕರ ಮೃತಪಟ್ಟಲ್ಲಿ ಡೆತ್ ಗ್ರಾಚ್ಯುಟಿ, ಜಿಪಿಎಫ್ ಬಾಕಿ ಮತ್ತು ಸಿಜಿಇಜಿಐಎಸ್ ಮೊತ್ತವು ಆತ ಅಥವಾ ಆಕೆ ಮಾಡಿದ ನಾಮಿನೇಷನ್ ಪ್ರಕಾರ ವಿತರಣೆ ಆಗುತ್ತದೆ. ಅದೇ ರೀತಿ, ಅಧಿಕೃತವಾದ ಕಾರ್ಯ ನಿರ್ವಹಣೆ ವೇಳೆ ಮೃತಪಟ್ಟಲ್ಲಿ ನಾಮಿನಿಯಾಗಿ ಯಾರು ಇರುತ್ತಾರೋ ಅವರಿಗೆ ಎಕ್ಸ್-ಗ್ರೇಷಿಯಾ ಇಡಿಗಂಟು ಪಾವತಿಸಲಾಗುತ್ತದೆ,” ಎಂದು ಪಿಂಚಣಿ ಮತ್ತು ಪಿಂಚಣಿದಾರರ ಕ್ಷೇಮಾಭಿವೃದ್ಧಿ ಇಲಾಖೆ (DoPPW) ಇಲಾಖೆಯು ಸೆಪ್ಟೆಂಬರ್ 30, 2021ರ ಕಚೇರಿ ಸುತ್ತೋಕೆಯಲ್ಲಿ ತಿಳಿಸಿದೆ.
ಸರ್ಕಾರದಿಂದ ಸಿಸಿಎಸ್ (ಪಿಂಚಣಿ) ನಿಯಮಾವಳಿ, 1972ರ ಸಾಮಾನ್ಯ ನಾಮಿನೇಷನ್ ಅರ್ಜಿಯಾದ ಫಾರ್ಮ್ 1ಕ್ಕೆ ತಿದ್ದುಪಡಿ ತರಲಾಗಿದೆ. ಇದು ಎಕ್ಸ್-ಗ್ರೇಷಿಯಾ ಇಡಿಗಂಟು ಪಾವತಿಗೆ ಸಂಬಂಧಿಸಿದ ನಾಮಿನೇಷನ್ ಸಹ ಒಳಗೊಂಡಿದೆ.
ನಾಮಿನೇಷನ್ ಮಾಡದಿದ್ದಲ್ಲಿ ಹೇಗೆ? DoPPW ಹೇಳಿರುವಂತೆ, ಯಾವುದೇ ನಾಮಿನೇಷನ್ ಮಾಡದಿದ್ದಲ್ಲಿ ಅಥವಾ ಸರ್ಕಾರಿ ನೌಕರರು ಮಾಡಿದ ನಾಮಿನೇಷನ್ ಇಲ್ಲದಿದ್ದಲ್ಲಿ ಎಕ್ಸ್-ಗ್ರೇಷಿಯಾದ ಇಡಿಗಂಟು ಕುಟುಂಬದ ಎಲ್ಲ ಅರ್ಹ ಸದಸ್ಯರಿಗೂ ಸಮಾನವಾಗಿ ಹಂಚಿಕೆ ಆಗುತ್ತದೆ. ಸಿಸಿಎಸ್ (ಪಿಂಚಣಿ) ನಿಯಮಾವಳಿ 51ರ ಪ್ರಕಾರವಾಗಿ, ಗ್ರಾಚ್ಯುಟಿಯಲ್ಲಿ ಹೇಗಾಗುತ್ತದೋ ಹಾಗೆ ಆಗುತ್ತದೆ.
ಕುಟುಂಬದ ಹೊರಗಿನ ನಾಮಿನೇಷನ್ಗೆ ಅವಕಾಶ ಇಲ್ಲ DoPPW ಕೂಡ ಹೇಳಿರುವಂತೆ, ಕುಟುಂಬ ಸದಸ್ಯರಲ್ಲದವರನ್ನು ನಾಮಿನೇಷನ್ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಆ ಸರ್ಕಾರಿ ನೌಕರರಿಗೆ ಕುಟುಂಬ ಅಂತ ಇಲ್ಲದಿದ್ದರೂ ಇದೇ ನಿಯಮಾವಳಿ ಅನ್ವಯ ಆಗುತ್ತದೆ. ಸಿಸಿಎಸ್ (ಪಿಂಚಣಿ) ನಿಯಮಾವಳಿ, 1972ರ ಅಡಿಯಲ್ಲಿ ಬರುವ ಗ್ರಾಚ್ಯುಟಿಗೆ ಬರುವಂಥದ್ದೇ ಎಕ್ಸ್-ಗ್ರೇಷಿಯಾ ಇಡಿಗಂಟು ಪಾವತಿಯ ನಾಮಿನೇಷನ್ಗೂ ಬರುತ್ತದೆ. ಆದರೆ ಎಕ್ಸ್ಗ್ರೇಷಿಯಾವನ್ನು ಸರ್ಕಾರಿ ನೌಕರರ ಕುಟುಂಬದ ಸದಸ್ಯರಿಗೆ ಮಾತ್ರ ಪಾವತಿಸಲಾಗುತ್ತದೆ. ಆ ನೌಕರರಿಗೆ ಕುಟುಂಬವೇ ಇಲ್ಲದಿದ್ದರೂ ಇದೇ ನಿಯಮಾವಳಿ ಬರುತ್ತದೆ ಎಂದು ಕಚೇರಿ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಹೊಸ ನಿಯಮ ಏಕೆ? ಸರ್ಕಾರಿ ನೌಕರ ಮೃತರಾದಲ್ಲಿ ಡೆತ್ ಗ್ರಾಚ್ಯುಟಿ, ಜಿಪಿಎಫ್ ಬಾಕಿ, ಸಿಜಿಇಜಿಐಎಸ್ ಮೊತ್ತ ಇತ್ಯಾದಿ ಇಡಿಗಂಟನ್ನು ನಾಮಿನೇಷನ್ ಮಾಡಿರುವ ಪ್ರಕಾರ ವಿತರಿಸಲಾಗುತ್ತದೆ. ಆದರೆ ಈಗಾಗಲೇ ಇರುವ ನಿಯಮವು ಇಂಥ ಎಕ್ಸ್ಗ್ರೇಷಿಯಾವನ್ನು ಕುಟುಂಬ ಸದಸ್ಯರ ಪೈಕಿ ಯಾರಿಗೆ ಪಾವತಿಸಬೇಕು ಎಂಬುದನ್ನು ಈಗಿರುವ ನಿಯಮಾವಳಿಯಲ್ಲಿ ನಿರ್ದಿಷ್ಟವಾಗಿ ತಿಳಿಸಿಲ್ಲ. ಆದ್ದರಿಂದ ಇಲ್ಲಿಯ ತನಕ ಏನು ಮಾಡಲಾಗುತ್ತಿತ್ತು ಅಂದರೆ, ಸಿಸಿಎಸ್ (ಎಕ್ಸ್ಟ್ರಾರ್ಡನರಿ ಪೆನ್ಷನ್) ನಿಯಮಾವಳಿ, 1939ರ ಅಡಿಯಲ್ಲಿ ಯಾವ ಕುಟುಂಬ ಸದಸ್ಯರು ಎಕ್ಸ್ಟ್ರಾರ್ಡನರಿ ಪಿಂಚಣಿಗೆ ಅರ್ಹರಾಗಿರುತ್ತಿದ್ದರೋ ಅವರಿಗೆ ಪಾವತಿಸಲಾಗುತ್ತಿತ್ತು.
ಕೇಂದ್ರ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದ ಶಿಫಾರಸಿನ ಅನ್ವಯ ಸಂಬಳ ಪಾವತಿಸಲಾಗುತ್ತಿದೆ.
ಇದನ್ನೂ ಓದಿ: Salary Hike: ಕೇಂದ್ರ ಸರ್ಕಾರಿ ನೌಕರರ ವೇತನ ಎಷ್ಟು ಜಾಸ್ತಿ ಆಗುತ್ತಿದೆ ಗೊತ್ತೆ? ಇಲ್ಲಿದೆ ಲೆಕ್ಕಾಚಾರ
Published On - 11:31 am, Mon, 4 October 21