AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Salary Hike: ಕೇಂದ್ರ ಸರ್ಕಾರಿ ನೌಕರರ ವೇತನ ಎಷ್ಟು ಜಾಸ್ತಿ ಆಗುತ್ತಿದೆ ಗೊತ್ತೆ? ಇಲ್ಲಿದೆ ಲೆಕ್ಕಾಚಾರ

ಏಳನೆ ವೇತನ ಆಯೋಗದ ಶಿಫಾರಸಿನಂತೆ ಹೆಚ್ಚಳ ಮಾಡಿದ ಮೇಲೆ ಕೇಂದ್ರ ಸರ್ಕಾರಿ ನೌಕರರ ವೇತನ ಎಷ್ಟಾಗಲಿದೆ? ಇಲ್ಲಿದೆ ಒಂದು ಲೆಕ್ಕಾಚಾರ.

Salary Hike: ಕೇಂದ್ರ ಸರ್ಕಾರಿ ನೌಕರರ ವೇತನ ಎಷ್ಟು ಜಾಸ್ತಿ ಆಗುತ್ತಿದೆ ಗೊತ್ತೆ? ಇಲ್ಲಿದೆ ಲೆಕ್ಕಾಚಾರ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jul 30, 2021 | 6:11 PM

Share

ಇತ್ತೀಚೆಗೆ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (Dearness Allowance- DA) ಹೆಚ್ಚಳ ಮಾಡಿದ ಮೇಲೆ ತಿಂಗಳ ಗ್ರಾಸ್ ಬೇಸಿಕ್ ಪೇ (ಸಗಟು ಮೂಲ ವೇತನ) ಏರಿಕೆ ಮಾಡುವ ಯೋಜನೆ ಸರ್ಕಾರಕ್ಕೆ ಇಲ್ಲ ಎಂದು ಕೇಂದ್ರ ಸರ್ಕಾರವು ಈಚೆಗೆ ಸ್ಪಷ್ಟಪಡಿಸಿದೆ. ಏಳನೇ ವೇತನ ಆಯೋಗದ ಶಿಫಾರಸಿನಂತೆ ಡಿಎ ಹಾಗೂ ಡಿಆರ್ ಮತ್ತೆ ಸರ್ಕಾರಿ ನೌಕರರಿಗೆ ನೀಡುವುದಕ್ಕೆ ಆರಂಭಿಸಿದ ಮೇಲೆ ತಿಂಗಳ ಸಗಟು ಮೂಲ ವೇತನವನ್ನು ಹೆಚ್ಚಳ ಮಾಡುವ ಆಲೋಚನೆ ಕೇಂದ್ರ ಸರ್ಕಾರಕ್ಕೆ ಇದೆಯೇ ಎಂದು ಪ್ರಶ್ನಿಸಲಾಗಿತ್ತು. ಹಣಕಾಸು ಖಾತೆ ರಾಜ್ಯ ಸಚಿವರಾದ ಪಂಕಜ್ ಚೌಧರಿ ಮಾತನಾಡಿ, ಕೇಂದ್ರ ಸರ್ಕಾರವು ಅಂಥ ಯಾವುದೇ ಯೋಜನೆಯು ಸರ್ಕಾರದ ಬಳಿ ಸಕ್ರಿಯವಾಗಿಲ್ಲ. “ಏಳನೇ ವೇತನ ಆಯೋಗದ ಶಿಫಾರಸಿನಂತೆ ಪರಿಷ್ಕೃತ ವೇತನ ರಚನೆಯಂತೆ ಏಕರೂಪವಾಗಿ ಎಲ್ಲ ವಿಭಾಗದ ಸಿಬ್ಬಂದಿಗೂ ಫಿಟ್​ಮೆಂಟ್ ಫ್ಯಾಕ್ಟರ್ 2.7 ಅನ್ವಯ ಆಗುತ್ತದೆ,” ಎಂದು ರಾಜ್ಯಸಭೆಯಲ್ಲಿ ಲಿಖಿತ ರೂಪದಲ್ಲಿ ಮಾಹಿತಿ ನೀಡಿದ್ದಾರೆ.

ಈ ತಿಂಗಳ ಆರಂಭದಲ್ಲಿ ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರಿಗೆ ಡಿಯರ್​ನೆಸ್ ಅಲೋವೆನ್ಸ್, ಡಿಯರ್​ನೆಸ್​ ರಿಲೀಫ್​ ಅನ್ನು ಶೇ 17ರಿಂದ ಶೇ 28ಕ್ಕೆ ಏರಿಸಿತ್ತು. ಸತತ ಎರಡನೇ ತಿಂಗಳು ಹಣದುಬ್ಬರ ದರ ಶೇ 6ರ ಮೇಲಿದೆ. ಅಲೋವೆನ್ಸ್​ನಲ್ಲಿ ಏರಿಕೆ ಆಗಿರುವುದರಿಂದ ಹತ್ತಾರು ಲಕ್ಷ ಮಂದಿಗೆ ಅನುಕೂಲ ಆಗುತ್ತದೆ. ಕೊರೊನಾ ಬಿಕ್ಕಟ್ಟಿನ ಮಧ್ಯೆ ಆಹಾರ ಮತ್ತು ತೈಲ ಬೆಲೆಯಲ್ಲಿ ಹೆಚ್ಚಳ ಆಗಿದ್ದು, ಪರಿಷ್ಕೃತ ಡಿಎ 2021ರ ಜುಲೈನಿಂದ ಜಾರಿಗೆ ಬರಲಿದೆ. ದೇಶದಲ್ಲಿನ ಏರಿಕೆ ಆಗುತ್ತಿರುವ ಹಣದುಬ್ಬರವನ್ನು ಸರಹೊಂದಿಸುವ ನಿಟ್ಟಿನಲ್ಲಿ ಸಿಬ್ಬಂದಿಗೆ ಹಾಗೂ ಪೆನ್ಷನರ್ಸಸ್​ಗಳಿಗೆ ಕೇಂದ್ರ ಸರ್ಕಾರದಿಂದ ತುಟ್ಟಿಭತ್ಯೆ ನೀಡಲಾಗುತ್ತದೆ.

ಆ ಕಾರಣಕ್ಕೆ ಸಿಬ್ಬಂದಿಯು ಎಲ್ಲಿದ್ದಾರೆ ಹಾಗೂ ವರ್ಷದ ಆಯಾ ಸಂದರ್ಭದಲ್ಲಿ ಇರುವ ಹಣದುಬ್ಬರ ಪ್ರಮಾಣ ಏನು ಎಂಬುದರ ಆಧಾರದಲ್ಲಿ ಡಿಯರ್​ನೆಸ್ ಅಲೋವೆನ್ಸ್ ಪಾವತಿಸಲಾಗುತ್ತದೆ. 1996ರಿಂದ ಈಚೆಗೆ ಬೆಲೆ ಏರಿಕೆ ಅಥವಾ ಹಣದುಬ್ಬರಕ್ಕೆ ಪರಿಹಾರ ಎಂಬಂತೆ ಡಿ.ಎ. ನೀಡಲಾಗುತ್ತಿದೆ. ಪ್ರತಿ ವರ್ಷದಲ್ಲಿ ಎರಡು ಬಾರಿ- ಜನವರಿ, ಜುಲೈ ತಿಂಗಳಲ್ಲಿ ಪರಿಷ್ಕರಿಸಲಾಗುತ್ತದೆ. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಳೆದ ವರ್ಷ ಡಿಎ ಹೆಚ್ಚಳವನ್ನು ತಡೆದಿತ್ತು. ಜುಲೈ ತಿಂಗಳಲ್ಲಿ ಡಿ.ಎ. ಏ 28ಕ್ಕೆ ಹೆಚ್ಚಿಸಲಾಗಿದೆ. 18,000 ರೂಪಾಯಿ ಸಂಬಳ ಪಡೆಯುವ ಕೇಂದ್ರ ಸರ್ಕಾರದ ಸಿಬ್ಬಂದಿ ಶೇ 11ರಷ್ಟು ಹೆಚ್ಚುವರಿ ಟೇಕ್ ಹೋಮ್ ಸ್ಯಾಲರಿ ಪಡೆಯುತ್ತಾರೆ. ಜುಲೈನಿಂದ ಅಂಥವರ ವೇತನದಲ್ಲಿ 5040 ರೂಪಾಯಿ ಏರಿಕೆ ಆಗುತ್ತದೆ. ಜನವರಿ 1, 2020ರಿಂದ ಜೂನ್ 30, 2021ರ ತನಕ ಸರ್ಕಾರಿ ನೌಕರರ ಡಿಎ ಶೇ 17ರಷ್ಟೇ ಇತ್ತು. ಈ ಅವಧಿಗೆ ಬಾಕಿ ಉಳಿದ ಮೊತ್ತವನ್ನು ಸಹ ನೀಡುವುದಿಲ್ಲ ಎಂದು ಈಗಾಗಲೇ ಸರ್ಕಾರ ಹೇಳಿದೆ.

ಇದನ್ನೂ ಓದಿ: DA News Today: ಕೇಂದ್ರ ಸರ್ಕಾರಿ ನೌಕರರು, ಪೆನ್ಷನರ್ಸ್​ಗಳಿಗೆ ಡಿಎ, ಡಿಆರ್ ಹೆಚ್ಚಳಕ್ಕೆ ಅನುಮತಿ; ಶೇ 17ರಿಂದ 28ಕ್ಕೆ ಏರಿಕೆ

(7th Pay Commission After The Hike How Much Salary Will Get By Central Government Employees )

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು