AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Good News: ಅಮೆರಿಕದ H-1B ವೀಸಾಗೆ ಎರಡನೇ ಬಾರಿಗೆ ಲಾಟರಿ ಆಯ್ಕೆ; ಭಾರತದ ಐ.ಟಿ. ವೃತ್ತಿಪರರಿಗೆ ಗುಡ್ ನ್ಯೂಸ್

ಒಂದೇ ವರ್ಷದಲ್ಲಿ ಎರಡನೇ ಬಾರಿಗೆ H- 1B ವೀಸಾವನ್ನು ಲಾಟರಿ ಮೂಲಕ ವಿತರಿಸಲು ಅಮೆರಿಕ ಮುಂದಾಗಿದೆ. ಇಂಥ ಸನ್ನಿವೇಶ ಅಪರೂಪ. ಇದರಿಂದ ನೂರಾರು ಸಂಖ್ಯೆಯ ಭಾರತೀಯ ಐ.ಟಿ. ವೃತ್ತಿಪರರಿಗೆ ಅನುಕೂಲ ಆಗುತ್ತದೆ.

Good News: ಅಮೆರಿಕದ H-1B ವೀಸಾಗೆ ಎರಡನೇ ಬಾರಿಗೆ ಲಾಟರಿ ಆಯ್ಕೆ; ಭಾರತದ ಐ.ಟಿ. ವೃತ್ತಿಪರರಿಗೆ ಗುಡ್ ನ್ಯೂಸ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on:Jul 30, 2021 | 2:20 PM

ಅಮೆರಿಕದ H-1B ವೀಸಾಗೆ USCISನಿಂದ ಅಪರೂಪಕ್ಕೆ ಎರಡನೇ ಬಾರಿಗೆ ಲಾಟರಿ ಮೂಲಕ ಆಯ್ಕೆ ಆಯೋಜಿಸಲಾಗುತ್ತಿದೆ. ಯಶಸ್ವಿ ಅರ್ಜಿದಾರರ ಆಯ್ಕೆಗಾಗಿ ಹೀಗೆ ಒಂದು ಪದ್ಧತಿ ಅನುಸರಿಸಿಕೊಂಡು ಬರಲಾಗುತ್ತಿದೆ. ಮೊದಲನೇ ಆಯ್ಕೆ ವೇಳೆಯಲ್ಲಿ ವಿಫಲರಾದ ನೂರಾರು ಭಾರತೀಯ ಐ.ಟಿ. ವೃತ್ತಿಪರರಿಗೆ ಇದರಿಂದಾಗಿ ಮತ್ತೊಂದು ಅವಕಾಶ ದೊರೆತಂತಾಗುತ್ತದೆ. H-1B ವೀಸಾ ಎಂಬುದು ನಾನ್- ಇಮೈಗ್ರೆಂಟ್ ವೀಸಾ. ಇದರ ಮೂಲಕ ಅಮೆರಿಕದ ಕಂಪೆನಿಗಳು ವಿದೇಶಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬಹುದು. ಭಾರತೀಯ ಐ.ಟಿ. ವೃತ್ತಿಪರರಲ್ಲಿ ಇದಕ್ಕೆ ಭಾರೀ ಬೇಡಿಕೆ ಇದೆ. ಯುಎಸ್ ಸಿಟಿಜನ್​ಶಿಪ್ ಅಂಡ್ ಇಮೈಗ್ರೇಷನ್ ಸರ್ವೀಸಸ್ (USCIS) ಹೇಳಿರುವಂತೆ, ಈ ವರ್ಷದ ಆರಂಭದಲ್ಲಿ H-1B ವೀಸಾಗೆ ನಡೆದ ಮೊದಲ ಸುತ್ತಿನ ಕಂಪ್ಯೂಟರೈಸ್ಡ್ ಡ್ರಾದಲ್ಲಿ ಅಗತ್ಯ ಸಂಖ್ಯೆಯ ವೀಸಾ ನೀಡಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದರಿಂದ ಈಗ ಇನ್ನೊಮ್ಮೆ ಡ್ರಾ ಮಾಡಲಾಗುತ್ತಿದೆ.

USCIS ತಿಳಿಸಿರುವ ಮಾಹಿತಿಯಂತೆ, H-1B cap- subject ಅರ್ಜಿಯನ್ನು ಸರಿಯಾದ ಸೇವಾ ಕೇಂದ್ರದಲ್ಲಿ ಸಲ್ಲಿಸಬೇಕು. H-1Bಗೆ ಆನ್​ಲೈನ್ ಅರ್ಜಿ ದೊರೆಯುತ್ತಿಲ್ಲ. H-1Bಗೆ ಅರ್ಜಿ ಸಲ್ಲಿಸುವವರು ಕಾಗದದಲ್ಲಿ ಮಾಡಬೇಕು ಹಾಗೂ ಪ್ರಿಂಟೆಡ್ ಕಾಪಿ (ಮುದ್ರಿತ ನಕಲು) ಒಳಗೊಂಡಿರಬಹುದು. ಅನ್ವಯ ಆಗುವ ನೋಂದಣಿ ಆಯ್ಕೆಯ ನೋಟಿಸ್ FY 2022 H-1B cap- subject petition ಎಂದಿರುವುದಾಗಿ ಅಮೆರಿಕದ ಏಜೆನ್ಸಿ ಮಾಹಿತಿ ನೀಡಿದೆ. H-1B cap- ಅರ್ಜಿದಾರರು ಸಲ್ಲಿಸುವುದಕ್ಕೆ, ಅದರಲ್ಲಿ ಅಡ್ವಾನ್ಸ್ಡ್ ಪದವಿ ವಿನಾಯಿತಿ ಅರ್ಜಿಗೆ ಅರ್ಹವಾಗಿರುವುದು ಒಳಗೊಂಡಿರುತ್ತದೆ. ಆದರೂ ಸದ್ಯಕ್ಕೆ ಚಾಲ್ತಿಯಲ್ಲಿ ಇರುವ ಕಾನೂನು ನಿಯಮಾವಳಿ ಹಾಗೂ ನಿಬಂಧನೆಗಳ ಅಗತ್ಯಕ್ಕೆ ತಕ್ಕಂತೆ ಕಡ್ಡಾಯವಾಗಿ ಸಾಕ್ಷ್ಯವನ್ನು ಸಲ್ಲಿಸಬೇಕು ಮತ್ತು ಅರ್ಜಿ ಮಂಜೂರಿಗೆ ಅರ್ಹತೆಯನ್ನು ಸಾಬೀತು ಮಾಡಬೇಕು ಎಂದು USCIS ತಿಳಿಸಿದೆ.

ನೋಂದಣಿ ದಿನಾಂಕವನ್ನು ಜುಲೈ 28ನೇ ತಾರೀಕಿನಂದು ನಿರ್ಧರಿಸಲಾಗಿದೆ. ಆ ಪ್ರಕಾರ, ಆಗಸ್ಟ್ 2ನೇ ತಾರೀಕಿನಿಂದ ಶುರುವಾಗಿ ನವೆಂಬರ್ 3ನೇ ತಾರೀಕಿಗೆ ಕೊನೆ ಆಗುತ್ತದೆ. ಆಯ್ಕೆಯಾದ ನೋಂದಣಿ ಸಂಖ್ಯೆಯೊಂದಿಗೆ ಇರುವವರ myUSCIS ಖಾತೆಯು ಅಪ್​ಡೇಟ್ ಆಗಿರುತ್ತದೆ. ಆಯ್ಕೆಯ ನೋಟಿಸ್, ಅದರ ಜತೆಗೆ ಎಲ್ಲಿ ಹಾಗೂ ಹೇಗೆ ಫೈಲ್ ಮಾಡಬೇಕು ಎಂಬ ಮಾಹಿತಿ ಇರುತ್ತದೆ ಎನ್ನಲಾಗಿದೆ. USCIS ಹೇಳಿರುವಂತೆ, 2021ರ ಮಾರ್ಚ್​ನಲ್ಲಿ H-1B capಗೆ ಎಲೆಕ್ಟ್ರಾನಿಕ್ ಮೂಲಕ ಸಲ್ಲಿಸಲಾದ ನೋಂದಣಿಯಿಂದ ಆರಿಸಲಾಗಿತ್ತು. ಅದು 2022ರ ಹಣಕಾಸು ವರ್ಷಕ್ಕೆ ಸಂಬಂಧಿಸಿದ್ದಾಗಿತ್ತು. ಫಲಾನುಭವಿಗಳ ಪೈಕಿ ಅಡ್ವಾನ್ಸ್ಡ್ ಪದವಿ ವಿನಾಯಿತಿ ಇರುವವರು ಸಹ ಇದ್ದರು.

ಇದನ್ನೂ ಓದಿ: ಅಮೆರಿಕದಲ್ಲಿ ವಿದೇಶಿ ವಿದ್ಯಾರ್ಥಿಗಳಿಗಿರುವ ಅತಿಥಿ ಕೆಲಸಗಾರರ ಯೋಜನೆ ಕೊನೆಗೊಳಿಸುವ ಮಸೂದೆ ಮಂಡನೆ

(H- 1B Visa Rare Second Lottery Move By US Will Help Hundreds Of Indian IT Professionals)

Published On - 2:17 pm, Fri, 30 July 21

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ