ATM Cash Withdrawal: ಎಟಿಎಂ/ಡೆಬಿಟ್ ಕಾರ್ಡ್ ಇಲ್ಲದೆಯೂ ಎಚ್ಡಿಎಫ್ಸಿ ಎಟಿಎಂನಲ್ಲಿ ಕ್ಯಾಶ್ ವಿಥ್ ಡ್ರಾ ಹೀಗೆ ಮಾಡಿ
ಬ್ಯಾಂಕ್ ಗ್ರಾಹಕರು ಎಟಿಎಂ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಇಲ್ಲದಂತೆ ಆಟೋಮೆಟಿಕ್ ಟೆಲ್ಲರ್ ಮಶೀನ್ಗಳಿಂದ (ಎಟಿಎಂ) ಹಣ ವಿಥ್ಡ್ರಾ ಮಾಡುವುದಕ್ಕೆ ಸಾಧ್ಯವಾ? ಸಾಮಾನ್ಯವಾಗಿ ಸಾಧ್ಯವಿಲ್ಲ. ಆದರೆ ಎಚ್ಡಿಎಫ್ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ಇಂಥದ್ದೊಂದು ಅವಕಾಶ ನೀಡುತ್ತಿದೆ. ಡೆಬಿಟ್ ಅಥವಾ ಎಟಿಎಂ ಕಾರ್ಡ್ ಇಲ್ಲದೆಯೇ ಎಟಿಎಂನಿಂದ ಹಣ ವಿಥ್ಡ್ರಾ ಮಾಡಬಹುದು. ಯಾವ ಗ್ರಾಹಕರು ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ತೆರೆದಿರುತ್ತಾರೋ ಅಂಥವರು ದೇಶದಾದ್ಯಂತ ಇರುವ ಎಚ್ಡಿಎಫ್ಸಿ ಬ್ಯಾಂಕ್ ಎಟಿಎಂಗಳಲ್ಲಿ ಈ ಸೌಲಭ್ಯ ಪಡೆಯಬಹುದು. ನೆನಪಿನಲ್ಲಿಡಿ: ಈ ಅವಕಾಶ ಇರುವುದು […]
ಬ್ಯಾಂಕ್ ಗ್ರಾಹಕರು ಎಟಿಎಂ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಇಲ್ಲದಂತೆ ಆಟೋಮೆಟಿಕ್ ಟೆಲ್ಲರ್ ಮಶೀನ್ಗಳಿಂದ (ಎಟಿಎಂ) ಹಣ ವಿಥ್ಡ್ರಾ ಮಾಡುವುದಕ್ಕೆ ಸಾಧ್ಯವಾ? ಸಾಮಾನ್ಯವಾಗಿ ಸಾಧ್ಯವಿಲ್ಲ. ಆದರೆ ಎಚ್ಡಿಎಫ್ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ಇಂಥದ್ದೊಂದು ಅವಕಾಶ ನೀಡುತ್ತಿದೆ. ಡೆಬಿಟ್ ಅಥವಾ ಎಟಿಎಂ ಕಾರ್ಡ್ ಇಲ್ಲದೆಯೇ ಎಟಿಎಂನಿಂದ ಹಣ ವಿಥ್ಡ್ರಾ ಮಾಡಬಹುದು. ಯಾವ ಗ್ರಾಹಕರು ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ತೆರೆದಿರುತ್ತಾರೋ ಅಂಥವರು ದೇಶದಾದ್ಯಂತ ಇರುವ ಎಚ್ಡಿಎಫ್ಸಿ ಬ್ಯಾಂಕ್ ಎಟಿಎಂಗಳಲ್ಲಿ ಈ ಸೌಲಭ್ಯ ಪಡೆಯಬಹುದು. ನೆನಪಿನಲ್ಲಿಡಿ: ಈ ಅವಕಾಶ ಇರುವುದು ಎಚ್ಡಿಎಫ್ಸಿ ಬ್ಯಾಂಕ್ ಎಟಿಎಂಗಳಲ್ಲಿ ಮಾತ್ರ. ಅಂದಹಾಗೆ ಬ್ಯಾಂಕ್ನಿಂದಲೇ ಹೇಳಿಕೊಂಡಿರುವಂತೆ, ಈ ಪ್ರಕ್ರಿಯೆ ಬಹಳ ಸರಳ ಮತ್ತು ಸುರಕ್ಷಿತವಾಗಿರುತ್ತದೆ. ಗ್ರಾಹಕರು ಕೆಲವು ಸರಳ ಹಂತಗಳನ್ನು ಅನುಸರಿಸಿದರೆ ಸಾಕು, ಎಚ್ಡಿಎಫ್ಸಿ ಬ್ಯಾಂಕ್ ಎಟಿಎಂಗಳಿಂದ ಎಟಿಎಂ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಅಗತ್ಯ ಇಲ್ಲದೆಯೇ ಹಣ ವಿಥ್ ಡ್ರಾ ಮಾಡಬಹುದು.
ಈ ಬಗ್ಗೆ ಎಚ್ಡಿಎಫ್ಸಿಯಿಂದ ಟ್ವೀಟ್ ಕೂಡ ಮಾಡಲಾಗಿದೆ. ನಿಮ್ಮ ಎಟಿಎಂ ಕಾರ್ಡ್ ಮರೆತಿರಾ? ಯೋಚಿಸಬೇಡಿ. ಎಚ್ಡಿಎಫ್ಸಿ ಬ್ಯಾಂಕ್ ಕಾರ್ಡ್ಲೆಸ್ ಕ್ಯಾಶ್ ಡಿಜಿಟಲಿ ನಿಮ್ಮದು. 24X7 ಎಚ್ಡಿಎಫ್ಸಿ ಎಟಿಎಂಗಳಿಂದ ನಗದು ವಿಥ್ಡ್ರಾ ಮಾಡುವ ಸೇವೆ ಒದಗಿಸುತ್ತದೆ. ಎಟಿಎಂ/ಡೆಬಿಟ್ ಕಾರ್ಡ್ ಇಲ್ಲದೆ ತಕ್ಷಣದ ಹಾಗೂ ಸುರಕ್ಷಿತ ವಿಧಾನದ ನಗದು ವಿಥ್ಡ್ರಾ ಎಂಜಾಯ್ ಮಾಡಿ ಎಂದಿದೆ. ಆದರೆ ಹೀಗೆ ಹಣ ವಿಥ್ಡ್ರಾ ಮಾಡುವಾಗ ಗ್ರಾಹಕರು ಗಮನಿಸಬೇಕಾದ ಅಂಶಗಳು ಇಲ್ಲಿವೆ.
– ಗ್ರಾಹಕರು ಈ ಕಾರ್ಡ್ಲೆಸ್ ವಿಥ್ ಡ್ರಾ ವ್ಯವಸ್ಥೆ ಅಡಿಯಲ್ಲಿ ಕನಿಷ್ಠ 100 ರೂ. ಹಾಗೂ ಗರಿಷ್ಠ 10 ಸಾವಿರ ರೂಪಾಯಿ ಒಂದು ದಿನಕ್ಕೆ ವಿಥ್ ಡ್ರಾ ಮಾಡಬಹುದು.
– ಎಚ್ಡಿಎಫ್ಸಿ ಬ್ಯಾಂಕ್ ಎಟಿಎಂಗಳಿಂದ ಒಂದು ತಿಂಗಳಲ್ಲಿ ಗರಿಷ್ಠ 25,000 ರೂಪಾಯಿ ಮೊತ್ತವನ್ನು ಡೆಬಿಟ್ ಅಥವಾ ಎಟಿಎಂ ಕಾರ್ಡ್ ಇಲ್ಲದೆ ಡ್ರಾ ಮಾಡಬಹುದು.
ಕಾರ್ಡ್ಲೆಸ್ ಆಗಿ ಹಣ ವಿಥ್ಡ್ರಾ ಮಾಡುವ ಹಂತಹಂತವಾದ ವಿಧಾನ ಇಲ್ಲಿದೆ: 1. ಹತ್ತಿರದ ಎಚ್ಡಿಎಫ್ಸಿ ಬ್ಯಾಂಕ್ಗೆ ಭೇಟಿ ನೀಡಬೇಕು. 2. ಮೆನು ಎಂಬ ಆಯ್ಕೆಯಿಂದ ಕಾರ್ಡ್ಲೆಸ್ ಕ್ಯಾಶ್ ಆರಿಸಿಕೊಳ್ಳಬೇಕು. ಸಾಮಾನ್ಯವಾಗಿ ಅದು ಹಾಗೇ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ. 3. ಆದ್ಯತೆಯ ಭಾಷೆ ಯಾವುದು ಎಂಬುದನ್ನು ಆರಿಸಿಕೊಳ್ಳಬೇಕು. 4. ಗ್ರಾಹಕರು ನೋಂದಾಯಿತ ಫೋನ್ ನಂಬರ್ ಅನ್ನು ಹಂಚಿಕೊಳ್ಳಬೇಕು. 5. ಸುರಕ್ಷಿತ ವಹಿವಾಟಿಗಾಗಿ ಆ ಸಂಖ್ಯೆಯನ್ನು ಪರಿಶೀಲಿಸುವುದಕ್ಕೆ ಮೊಬೈಲ್ ನಂಬರ್ಗೆ ಒಟಿಪಿ (ಒನ್ ಟೈಮ್ ಪಾಸ್ವರ್ಡ್) ಬರುತ್ತದೆ. 6. ಡಿಜಿಟ್ ಆರ್ಡರ್ ಐಡಿಯನ್ನು ಮತ್ತು ಎಷ್ಟು ಮೊತ್ತ ವಿಥ್ಡ್ರಾ ಮಾಡಬೇಕು ಎಂದು ನಮೂದಿಸಿ.
ಇದನ್ನೂ ಓದಿ: HDFC Overdraft: ಸಣ್ಣ ಉದ್ಯಮಿಗಳು, ವರ್ತಕರಿಗೆ ಎಚ್ಡಿಎಫ್ಸಿ ಬ್ಯಾಂಕ್ನಿಂದ ಸಾಲ ದುಕಾನ್ದಾರ್ ಓವರ್ಡ್ರಾಫ್ಟ್ ಸ್ಕೀಮ್
(Customers Can Withdraw Money From HDFC ATM Without Debit Or ATM Card Know How)
Published On - 11:08 am, Fri, 30 July 21