KYC deadline extension: ಕೆವೈಸಿ ಅಪ್​ಡೇಟ್​ಗಾಗಿ 2022ರ ಮಾರ್ಚ್​ ತನಕ ಅವಧಿ ವಿಸ್ತರಿಸಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಬ್ಯಾಂಕ್ ಗ್ರಾಹಕರ ಕೆವೈಸಿ ಅಪ್​ಡೇಟ್ ಮಾಡುವುದಕ್ಕೆ ಗಡುವನ್ನು 2022ರ ಮಾರ್ಚ್​ಗೆ ವಿಸ್ತರಣೆ ಮಾಡಿದೆ.

KYC deadline extension: ಕೆವೈಸಿ ಅಪ್​ಡೇಟ್​ಗಾಗಿ 2022ರ ಮಾರ್ಚ್​ ತನಕ ಅವಧಿ ವಿಸ್ತರಿಸಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Dec 30, 2021 | 5:05 PM

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ ಬ್ಯಾಂಕ್‌ಗಳಲ್ಲಿ ಪೀರಿಯಾಡಿಕ್ KYC (ನೋ ಯುವರ್ ಕಸ್ಟಮರ್) ಅಪ್‌ಡೇಟ್‌ಗಾಗಿ ಮಾರ್ಚ್ 31, 2022ರ ವರೆಗೆ ಮೂರು ತಿಂಗಳ ಕಾಲ ಗಡುವನ್ನು ವಿಸ್ತರಿಸಿದೆ. ಕೊವಿಡ್-19ನ ಹೊಸ ರೂಪಾಂತರದಿಂದಾಗಿ (ವೇರಿಯಂಟ್) ಪ್ರಚಲಿತದಲ್ಲಿರುವ ಅನಿಶ್ಚಿತತೆ ದೃಷ್ಟಿಯಿಂದ ವಿಸ್ತರಣೆಯನ್ನು ನೀಡಲಾಗಿದೆ, ಎಂದು ಆರ್​ಬಿಐ ಹೇಳಿದೆ.

ಈ ವರ್ಷದ ಮೇ ತಿಂಗಳಲ್ಲಿ ದೇಶದಲ್ಲಿ ಕೊವಿಡ್-19ನ ಎರಡನೇ ಅಲೆ ಮತ್ತು ವಿವಿಧ ರಾಜ್ಯಗಳಲ್ಲಿ ಅದರ ಕಾರಣಕ್ಕೆ ಹೇರಿದ್ದ ನಿರ್ಬಂಧಗಳ ನಡುವೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಬ್ಯಾಂಕ್​ಗಳು ಮತ್ತು ಇತರ ನಿಯಂತ್ರಿತ ಹಣಕಾಸು ಸಂಸ್ಥೆಗಳನ್ನು ವರ್ಷಾಂತ್ಯದವರೆಗೆ ಕೆವೈಸಿ ಅಪ್​ಡೇಟ್ ಮಾಡಲು​ ವಿಫಲವಾದ ಗ್ರಾಹಕರ ವಿರುದ್ಧ ಯಾವುದೇ ದಂಡ ಹಾಕುವ ಕ್ರಮಕ್ಕೆ ಮುಂದಾಗದಂತೆ ನಿರ್ದೇಶಿಸಿದೆ.

ಪ್ರಕಟಣೆಯ ಭಾಗವಾಗಿ ಮಾಲೀಕತ್ವ ಸಂಸ್ಥೆಗಳು, ಅಧಿಕೃತ ಸಹಿದಾರರು ಮತ್ತು ಕಾನೂನು ಸಂಸ್ಥೆಗಳ ಲಾಭದಾಯಕ ಮಾಲೀಕರಂತಹ ಹೊಸ ವರ್ಗದ ಗ್ರಾಹಕರಿಗೆ ವಿಡಿಯೋ ಕೆವೈಸಿ ಅಥವಾ V-CIP (ವಿಡಿಯೋ ಆಧಾರಿತ ಗ್ರಾಹಕ ಗುರುತಿಸುವಿಕೆ ಪ್ರಕ್ರಿಯೆ) ವ್ಯಾಪ್ತಿಯನ್ನು ವಿಸ್ತರಿಸಲು ಕೇಂದ್ರ ಬ್ಯಾಂಕ್ ನಿರ್ಧರಿಸಿದೆ.

ಇದನ್ನೂ ಓದಿ: ಸರ್ಕಾರದ ವ್ಯವಹಾರಗಳನ್ನು ನಡೆಸಲು ಪೇಮೆಂಟ್ಸ್ ಬ್ಯಾಂಕ್​ಗಳು, ಸಣ್ಣ ಹಣಕಾಸು ಬ್ಯಾಂಕ್​ಗಳಿಗೆ ಆರ್​ಬಿಐ ಅವಕಾಶ

Published On - 5:04 pm, Thu, 30 December 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್