AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯ ಉದ್ಯಮ ಪ್ರತಿನಿಧಿಗಳು, ಗಣ್ಯರ ಜತೆ ಎಲಾನ್ ಮಸ್ಕ್ ಸಂವಾದ: ಏನೇನು ನಡೀತು ಚರ್ಚೆ?

ಅಮೆರಿಕದ ಇಂಡಿಯಾ ಗ್ಲೋಬಲ್ ಫೋರಂ ನಂತರ, ಎಲಾನ್ ಮಸ್ಕ್ ಅವರು ಟೆಕ್ಸಾಸ್‌ನ ಸ್ಪೇಸ್​ ಎಕ್ಸ್ ಸ್ಟಾರ್‌ಬೇಸ್‌ನಲ್ಲಿ ಭಾರತೀಯ ಉದ್ಯಮ ನಾಯಕರೊಂದಿಗೆ ಸಭೆ ನಡೆಸಿದರು. ತಂತ್ರಜ್ಞಾನ, ಬಾಹ್ಯಾಕಾಶ, ಕೃತಕ ಬುದ್ಧಿಮತ್ತೆ ಮತ್ತು ಹಣಕಾಸು ಕ್ಷೇತ್ರಗಳಲ್ಲಿನ ಸಹಯೋಗದ ಬಗ್ಗೆ ಚರ್ಚೆ ನಡೆಯಿತು. ಭಾರತ-ಅಮೇರಿಕಾ ವ್ಯಾಪಾರ ಸಂಬಂಧವನ್ನು ಬಲಪಡಿಸುವ ಸಂಬಂಧ ಚರ್ಚೆ ನಡೆಯಿತು.

ಭಾರತೀಯ ಉದ್ಯಮ ಪ್ರತಿನಿಧಿಗಳು, ಗಣ್ಯರ ಜತೆ ಎಲಾನ್ ಮಸ್ಕ್ ಸಂವಾದ: ಏನೇನು ನಡೀತು ಚರ್ಚೆ?
ಭಾರತೀಯ ಉದ್ಯಮ ಪ್ರತಿನಿಧಿಗಳು, ಗಣ್ಯರ ಜತೆ ಎಲಾನ್ ಮಸ್ಕ್ ಸಂವಾದ
TV9 Web
| Edited By: |

Updated on: Jan 18, 2025 | 6:30 PM

Share

ಟೆಕ್ಸಾಸ್, ಜನವರಿ 18: ಅಮೆರಿಕದಲ್ಲಿ ಇಂಡಿಯಾ ಗ್ಲೋಬಲ್ ಫೋರಂ ಉದ್ಘಾಟನೆಯ ನಂತರ ಭಾರತದ ಉದ್ಯಮ ವಲಯದ ಪ್ರತಿನಿಧಿಗಳು ಹಾಗೂ ಗಣ್ಯರನ್ನು ಟೆಕ್ಸಾಸ್​​​ನ ಸ್ಪೇಸ್​ ಎಕ್ಸ್​​​ ಸ್ಟಾರ್​ಬೇಸ್​​ಗೆ ಆಹ್ವಾನಿಸಿದ ಉದ್ಯಮಿ ಎಲಾನ್ ಮಸ್ಕ್, ಸಂವಾದ ನಡೆಸಿದ್ದಾರೆ. ಅಮೆರಿಕ ಮತ್ತು ಭಾರತದ ನಡುವಿನ ವಾಣಿಜ್ಯ ವ್ಯವಹಾರಗಳ ಅಡೆತಡೆಗಳ ನಿವಾರಣೆ ನಿಟ್ಟಿನಲ್ಲಿ ಸಂವಾದ ನಡೆದಿದೆ. ತಂತ್ರಜ್ಞಾನದ ಕ್ಷೇತ್ರದಲ್ಲಿ ಅಮೆರಿಕ ಮತ್ತು ಭಾರತದ ನಡುವಿನ ಗಾಢ ಸಹಯೋಗದ ಕಲ್ಪನೆಯೊಂದಿಗೆ ಮಸ್ಕ್ ಈ ಕಾರ್ಯಕ್ರಮ ಆಯೋಜಿಸಿದ್ದರು.

ಏನೇನು ಚರ್ಚೆಯಾಯ್ತು?

ಹಣಕಾಸು ಕ್ಷೇತ್ರದಲ್ಲಿ ತಂತ್ರಜ್ಞಾನದ ಪಾತ್ರ, ಬಾಹ್ಯಾಕಾಶ ಮತ್ತು ಎಐ (ಕೃತಕ ಬುದ್ಧಿಮತ್ತೆ) ಆವಿಷ್ಕಾರಗಳಲ್ಲಿ ಪಾಲುದಾರಿಕೆಗೆ ಸಂಬಂಧಿಸಿ ಮಸ್ಕ್ ಹಾಗೂ ಭಾರತದ ಗಣ್ಯರು ಚರ್ಚೆ ನಡೆಸಿದ್ದಾರೆ.

ಭಾಗವಹಿಸಿದವರು ಯಾರೆಲ್ಲ?

ಭಾರತದ ಉದ್ಯಮ ಪ್ರತಿನಿಧಿಗಳ ಹಾಗೂ ಗಣ್ಯರ ನಿಯೋಗದಲ್ಲಿ ಎಸ್ಸಾರ್ ಕ್ಯಾಪಿಟಲ್ ನಿರ್ದೇಶಕ ಪ್ರಶಾಂತ್ ರೂಯಾ, ಕೋಟಕ್‌ನ ಜೇ ಕೋಟಕ್, ಇನೋವ್8 ಸಂಸ್ಥಾಪಕ ರಿತೇಶ್ ಮಲಿಕ್, ಓಯೋ ಸಂಸ್ಥಾಪಕ ರಿತೇಶ್ ಮಲಿಕ್, ಫ್ಲಿಪ್‌ಕಾರ್ಟ್ ಸಿಇಒ ಕಲ್ಯಾಣ್ ರಾಣಾ, ಆದಿತ್ಯ ಬಿರ್ಲಾ ಮ್ಯಾನೇಜ್‌ಮೆಂಟ್‌ನಿಂದ ಆರ್ಯಮನ್ ಬಿರ್ಲಾ, ಲೇಖಕ ಅಮಿಶ್ ತ್ರಿಪಾಠಿ ಸೇರಿದಂತೆ ಹಲವು ಮಂದಿ ಇದ್ದರು.

ಇಂಡಿಯಾ ಗ್ಲೋಬಲ್ ಫೋರಂ ಏಕೆ?

ಉದ್ಯಮ ಕ್ಷೇತ್ರದಲ್ಲಿನ ಭಾರತದ ಸಾಧನೆಯನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಇಂಡಿಯಾ ಗ್ಲೋಬಲ್ ಫೋರಂ ಅನ್ನು ಸ್ಥಾಪನೆ ಮಾಡಲಾಗಿದೆ. ಅಮೆರಿಕ ಹಾಗೂ ಭಾರತದ ನಡುವಣ ಉದ್ಯಮ ಅಡೆತಡೆಗಳ ನಿವಾರಣೆಯ ಉದ್ದೇಶವನ್ನೂ ಇದು ಹೊಂದಿದೆ.

ಮಸ್ಕ್ ಹೇಳಿದ್ದೇನು?

ಟೆಕ್ಸಾಸ್​​​ನ ಸ್ಪೇಸ್​ ಎಕ್ಸ್​​​ ಸ್ಟಾರ್​ಬೇಸ್​​ನಲ್ಲಿ ಭಾರತೀಯ ಉದ್ಯಮಿಗಳ ಜತೆ ಸಂವಾದ ನಡೆಸಿದ ಮಸ್ಕ್, ಭಾರತವು ಪ್ರಾಚೀನ ನಾಗರಿಕತೆಗಳಲ್ಲಿ ಒಂದಾಗಿದೆ ಮತ್ತು ಅತ್ಯಂತ ಶ್ರೇಷ್ಠ ನಾಗರಿಕತೆಯಾಗಿದೆ ಎಂದರು. ಅಮೆರಿಕ ಮತ್ತು ಭಾರತದ ನಡುವೆ ಆಳವಾದ ಸಹಕಾರದ ಸಾಧ್ಯತೆಯನ್ನು ಒತ್ತಿ ಹೇಳಿದ ಮಸ್ಕ್, ವಿಶೇಷವಾಗಿ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಪರಿಶೋಧನೆಯಂತಹ ಕ್ಷೇತ್ರಗಳಲ್ಲಿ ಸಕಾರಾತ್ಮಕ ಬದಲಾವಣೆ ಕಂಡುಬರುತ್ತಿದೆ ಎಂದರು.

ಅಮೆರಿಕ ಮತ್ತು ಭಾರತದ ನಡುವಿನ ವಹಿವಾಟು ಹೆಚ್ಚಿಸಲು ಹಾಗೂ ವ್ಯಾಪಾರ ಅಡೆತಡೆಗಳನ್ನು ಕಡಿಮೆ ಮಾಡುವ ವಿಚಾರದಲ್ಲಿ ಖಂಡಿತವಾಗಿಯೂ ನಿಮ್ಮ ಜತೆಗೆ ಇದ್ದೇನೆ ಎಂದು ಮಸ್ಕ್ ಭರವಸೆ ನೀಡಿದ್ದಾರೆ.

ತಂತ್ರಜ್ಞಾನ, ಉತ್ಪಾದನೆಯಿಂದ ತೊಡಗಿ ನವೀಕರಿಸಬಹುದಾದ ಇಂಧನದವರೆಗಿನ ವೈವಿಧ್ಯಮಯ ವಲಯಗಳ ಮಸ್ಕ್ ಹಾಗೂ ಭಾರತೀಯ ಉದ್ಯಮ ಪ್ರತಿನಿಧೀಗಳು ಚರ್ಚೆ ನಡೆಸಿದರು. ಈ ವಿಚಾರಗಳಲ್ಲಿ ಇರುವ ಜಾಗತಿಕ ಸವಾಲುಗಳು ಮತ್ತು ಸಹಯೋಗದ ಅವಕಾಶಗಳ ಬಗ್ಗೆಯೂ ನಿಯೋಗ ಚರ್ಚಿಸಿತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ