GOLD BOND: ಏನಿದು ಸಾವರಿನ್ ಗೋಲ್ಡ್ ಬಾಂಡ್; ಇದರ ಲಾಭಗಳೇನು?

GOLD BOND: ಏನಿದು ಸಾವರಿನ್ ಗೋಲ್ಡ್ ಬಾಂಡ್; ಇದರ ಲಾಭಗಳೇನು?

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Mar 06, 2022 | 7:42 AM

ಸಾವರಿನ್ ಗೋಲ್ಡ್ ಬಾಂಡ್​ಗಳಲ್ಲಿ ಹೂಡಿಕೆ ಮಾಡುವವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಮೆಚ್ಯುರಿಟಿ ಅವಧಿಗೆ ಮುನ್ನ ಮಾರುವ ಆಯ್ಕೆಯನ್ನೂ ನೀಡಿದೆ. ಈ ಕುರಿತು ಇನ್ನಷ್ಟು ಮಾಹಿತಿಯನ್ನ ವಿಡಿಯೋದಲ್ಲಿ ತಿಳಿಯಿರಿ.

ಭಾರತ ಸರ್ಕಾರವು ಭೌತಿಕ ಚಿನ್ನವನ್ನು ಖರೀದಿಸಲು ಪರ್ಯಾಯವಾಗಿ ಸಾವರಿನ್ ಗೋಲ್ಡ್ ಬಾಂಡ್ (GOLD BOND)  ಯೋಜನೆಯನ್ನು ಪ್ರಾರಂಭಿಸಿತು. ಸುರಕ್ಷಿತ ರೀತಿಯಲ್ಲಿ ಹಣ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಸಾವರಿನ್ ಗೋಲ್ಡ್ ಬಾಂಡ್ ಉತ್ತಮ ಆಯ್ಕೆಯಾಗಿದೆ. ಕೇಂದ್ರ ಸರ್ಕಾರದ ಪರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI)ಸಾವರಿನ್ ಗೋಲ್ಡ್ ಬಾಂಡ್ ಗಳನ್ನು ವಿತರಿಸುತ್ತದೆ. ಈ ಬಾಂಡ್​ನ ಮೆಚ್ಯುರಿಟಿ ಅವಧಿ 8ವರ್ಷವಾಗಿದ್ರೂ ಇದನ್ನು 5ವರ್ಷಗಳ ನಂತರ ಹಿಂಪಡೆಯಬಹುದು. ನಿಮಗೆ ಹಣ ಬಂದ್ರೆ ಅದರ ಮೇಲಿನ ಲಾಭಕ್ಕೆ ಯಾವುದೇ ತೆರಿಗೆ ಇರೋದಿಲ್ಲ. ಸಾವರಿನ್ ಗೋಲ್ಡ್ ಬಾಂಡ್​ಗಳಲ್ಲಿ ಹೂಡಿಕೆ ಮಾಡುವವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಮೆಚ್ಯುರಿಟಿ ಅವಧಿಗೆ ಮುನ್ನ ಮಾರುವ ಆಯ್ಕೆಯನ್ನೂ ನೀಡಿದೆ. ಈ ಕುರಿತು ಇನ್ನಷ್ಟು ಮಾಹಿತಿಯನ್ನ ವಿಡಿಯೋದಲ್ಲಿ ತಿಳಿಯಿರಿ.

ಇದನ್ನೂ ಓದಿ:

self caring: ನಮ್ಮ ಬಗ್ಗೆ ನಾವು ಕಾಳಜಿ ವಹಿಸುವುದು ಹೇಗೆ..! ಇಲ್ಲಿದೆ ಉಪಯುಕ್ತ ಮಾಹಿತಿ

ನೀವು ಸ್ನಾನ ಮಾಡುವ ಸಮಯ ನಿಮ್ಮ ಸುಖ, ಸಂತೋಷ, ಆರ್ಥಿಕತೆ, ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ -ತಿಳಿದುಕೊಳ್ಳಿ