AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಸ್ನಾನ ಮಾಡುವ ಸಮಯ ನಿಮ್ಮ ಸುಖ, ಸಂತೋಷ, ಆರ್ಥಿಕತೆ, ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ -ತಿಳಿದುಕೊಳ್ಳಿ

Snana or Ritual purification: ಮಾನವ ಸ್ನಾನ -ಮೂರನೇ ಸ್ನಾನವನ್ನು ಮನುಷ್ಯ ಸ್ನಾನ ಎಂದು ಕರೆಯಲಾಗುತ್ತದೆ. ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯ ಒಳಗೆ ಮಾಡುವ ಸ್ನಾನ ಇದಾಗಿದೆ. ಈ ಸಮಯದಲ್ಲಿ ಸ್ನಾನ ಮಾಡಿದರೆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂಬ ನಂಬಿಕೆಯಿದೆ.

ನೀವು ಸ್ನಾನ ಮಾಡುವ ಸಮಯ ನಿಮ್ಮ ಸುಖ, ಸಂತೋಷ, ಆರ್ಥಿಕತೆ, ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ -ತಿಳಿದುಕೊಳ್ಳಿ
ಸರಿಯಾದ ಸಮಯ ಸರಿಯಾದ ಕ್ರಮದಲ್ಲಿ ಸ್ನಾನ ಮಾಡುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿಯೋಣ
TV9 Web
| Updated By: ಸಾಧು ಶ್ರೀನಾಥ್​|

Updated on: Mar 06, 2022 | 6:06 AM

Share

ಸನಾತನ ಧರ್ಮವಾದ ಹಿಂದೂ ಧರ್ಮದಲ್ಲಿ ಪ್ರತಿ ಕಾರ್ಯಗಳಿಗೂ ಅದರದ್ದೇ ಆದ ಮಹತ್ವವಿದೆ. ಪ್ರಾತಃಕಾಲದಲ್ಲಿ ಎದ್ದು ಹಸ್ತವನ್ನು ನೋಡಿಕೊಂಡು ಕರಾಗ್ರೇ ವಸತೇ ಲಕ್ಷ್ಮೀ… ಪಠಿಸುವುದರಿಂದ ಆರಂಭಿಸಿ ರಾತ್ರಿ ಮಲಗುವ ಸಮಯದಲ್ಲಿ ರಾಮಸ್ಕಂದಮ್ ಹನುಮಂತಮ್… ಸ್ತೋತ್ರವನ್ನು ಹೇಳುವವರೆಗಿನ ಸರ್ವಕಾರ್ಯಗಳಿಗಿರುವ ವಿಶೇಷತೆ ಮತ್ತು ಲಾಭವನ್ನು ಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಹಾಗೆಯೇ ನಿತ್ಯಕಾರ್ಯವಾದ ಸ್ನಾನದ ಬಗ್ಗೆಯೂ ಹಲವಾರು ಮಹತ್ವದ ವಿಷಯಗಳಿವೆ. ಸ್ನಾನದ ಪ್ರಕಾರಗಳನ್ನು, ಸರಿಯಾದ ಸಮಯದಲ್ಲಿ ಸ್ನಾನ ಮಾಡುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿಯೋಣ.

ಬೇಗ ಏಳು- ಬೇಗ ಮಲಗು ಪದ್ಧತಿ ಈಗಿಲ್ಲ. ರಾತ್ರಿ 12ರ ಮೇಲೆ ನಿದ್ರೆ ಮಾಡುವವರ ಸಂಖ್ಯೆಯೇ ಹೆಚ್ಚು. ಇದರಿಂದಾಗಿ ಬೆಳಿಗ್ಗೆ ಏಳುವುದು ತಡವಾಗುತ್ತದೆ. ಸೂರ್ಯೋದಯಕ್ಕಿಂತ ಮೊದಲ ಸ್ನಾನ ಮಾಡುವವರ ಸಂಖ್ಯೆ ಅತೀ ಕಡಿಮೆ. ಸೂರ್ಯ ನೆತ್ತಿ ಮೇಲೆ ಬಂದರೂ ಕೆಲವರಿಗೆ ಸ್ನಾನ ಆಗಿರುವುದಿಲ್ಲ. ನೀವು ಇಂತವರಲ್ಲಿ ಒಬ್ಬರಾಗಿದ್ದರೆ ಎಚ್ಚರ. ನೀವು ಸ್ನಾನ ಮಾಡುವ ಸಮಯ ನಿಮ್ಮ ಸುಖ, ಸಂತೋಷ, ಆರ್ಥಿಕ ವ್ಯವಸ್ಥೆ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಧರ್ಮಶಾಸ್ತ್ರದಲ್ಲಿ ನಾಲ್ಕು ರೀತಿಯ ಸ್ನಾನವನ್ನು ಹೇಳಲಾಗಿದೆ.

ಸ್ನಾನದಿಂದ ಹಲವು ರೀತಿಯ ಲಾಭಗಳುಂಟು. ಸ್ವಾಸ್ಥ್ಯ ಸಂರಕ್ಷಣೆಗೆ, ಶರೀರ ಮತ್ತು ಶಾರೀರದ ನೆಮ್ಮದಿಗೆ, ಶುಚಿಯಾಗಿರಲು ಪ್ರತಿನಿತ್ಯ ಸ್ನಾನ ಮಾಡುತ್ತೇವೆ. ಧಾರ್ಮಿಕ ದೃಷ್ಟಿಯಿಂದ ಸಹ ಪ್ರತಿನಿತ್ಯ ಸೂರ್ಯೋದಯದ ಸಮಯದಲ್ಲಿ ಸ್ನಾನ ಮಾಡುವುದು ಹೆಚ್ಚು ಶುಭವೆಂದು ಹೇಳಲಾಗುತ್ತದೆ. ಹಾಗಾಗಿಯೇ ನಮ್ಮ ಹಿರಿಯರು, ಪುರಾಣದ ಕಾಲದಲ್ಲಿ ಋಷಿ ಮುನಿಗಳು, ವಿದ್ವಾಂಸರು ಪ್ರಾತಃಕಾಲದಲ್ಲಿ ಅಂದರೆ ಸೂರ್ಯೋದಯಕ್ಕೆ ಮುನ್ನ ಅಥವಾ ಸೂರ್ಯೋದಯದ ಸಮಯಕ್ಕೆ ಸ್ನಾನ ಮಾಡುತ್ತಿದ್ದರೆಂಬುದನ್ನು ಕೇಳಿರುತ್ತೇವೆ.

ಶಾಸ್ತ್ರಗಳ ಅನುಸಾರ ಸೂರ್ಯೋದಯದ ಸಮಯದಲ್ಲಿ ಸ್ನಾನಮಾಡಿ ಸೂರ್ಯನಿಗೆ ಜಲವನ್ನು ಅರ್ಪಿಸುವುದರಿಂದ ಅನೇಕ ರೀತಿಯ ಲಾಭಗಳುಂಟಾಗುತ್ತದೆ. ಸಮಾಜದಲ್ಲಿ ಸ್ಥಾನ-ಮಾನ ವೃದ್ಧಿಸುವುದಲ್ಲದೇ, ತ್ವಚೆಯ ಕಾಂತಿಯನ್ನು ಸಹ ಹೆಚ್ಚಿಸುತ್ತದೆ. ಆ ಸಮಯದಲ್ಲಿ ಶುರುವಾದ ನಿತ್ಯದ ಕಾರ್ಯಗಳೆಲ್ಲಾ ಸುಗಮವಾಗಿ ಸಾಗುವುದಲ್ಲದೇ, ಮಾನಸಿಕ ನೆಮ್ಮದಿ ಲಭಿಸುತ್ತದೆ. ಎಲ್ಲರೂ ಸೂರ್ಯೋದಯದ ಸಮಯದಲ್ಲಿ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯಕೊಡತಕ್ಕದ್ದಾಗಿ ಶಾಸ್ತ್ರ ಹೇಳುತ್ತದೆ.

ಧರ್ಮ ಶಾಸ್ತ್ರಗಳಲ್ಲಿ ಸಮಯಕ್ಕನುಸಾರವಾಗಿ ಸ್ನಾನದ ಹಲವು ಪ್ರಕಾರಗಳನ್ನು ತಿಳಿಸಲಾಗಿದೆ. ಅಷ್ಟೇ ಅಲ್ಲದೇ ಸ್ನಾನ ಮಾಡುವ ವಿಧಾನದ ಬಗ್ಗೆ ಹೇಳಲಾಗಿದೆ. ಶಾಸ್ತ್ರದ ಈ ನಿಯಮಗಳನ್ನು ಸರಿಯಾಗಿ ಅನುಸರಿಸಿದಲ್ಲಿ ಶುಭಫಲಗಳು ಪ್ರಾಪ್ತವಾಗುತ್ತವೆ.

ಶಾಸ್ತ್ರ ಹೇಳುವ ಸ್ನಾನದ ವಿಧಾನ: ಪುರಾಣಗಳಲ್ಲಿ ಹೇಳಿರುವಂತೆ ನಿತ್ಯದ ಕಾರ್ಯಗಳಲ್ಲಿ ಪ್ರತಿಯೊಂದಕ್ಕೂ ಮಂತ್ರವಿದೆ. ಆ ಮಂತ್ರಗಳನ್ನು ಹೇಳಿಕೊಂಡು ಕೆಲಸವನ್ನು ಮಾಡಬೇಕೆನ್ನುತ್ತದೆ ಶಾಸ್ತ್ರ. ಹಾಗಾಗಿ ಸ್ನಾನ ಮಾಡುವ ಸಮಯದಲ್ಲೂ ಮಂತ್ರಗಳನ್ನು ಪಠಿಸುವುದು ಶುಭದಾಯಕವಾಗಿದೆ.

ಸ್ನಾನದ ಸಮಯದಲ್ಲಿ ಹೇಳಬೇಕಾದ ಮಂತ್ರ ಮತ್ತು ಮಹತ್ವ: ಗಂಗೇ ಚ ಯಮುನೇ ಚ ಕೃಷ್ಣೇ ಗೋದಾವರೀ ಸರಸ್ವತೀ | ನರ್ಮದೇ ಸಿಂಧು ಕಾವೇರೀ ಜಲೇಸ್ಮಿನ್ ಸನ್ನಿಧಿಂ ಕುರು || ಗಂಗಾ, ಯಮುನಾ, ಕೃಷ್ಣಾ ಗೋದಾವರಿ, ಸರಸ್ವತಿ, ನರ್ಮದೆ, ಸಿಂಧು, ಮತ್ತು ಕಾವೇರಿ ಇವು ಪವಿತ್ರವಾದ ನದಿಗಳು. ಈ ನದಿಗಳನ್ನು ಸ್ನಾನದ ನೀರಿಗೆ ಆಹ್ವಾನಿಸುವುದು. ಈ ನೀರನ್ನು ಪವಿತ್ರಗೊಳಿಸೆಂದು ಕೇಳಿಕೊಳ್ಳುವುದು ಇದರ ಅರ್ಥ. ನಾರದ ಪುರಾಣದಲ್ಲಿ ಇದರ ಉಲ್ಲೇಖವಿದೆ.

ಸ್ನಾನ ಮಾಡುವ ಸಂದರ್ಭದಲ್ಲಿ ಮುಖ್ಯವಾಗಿ ಮೊದಲು ಗಮನದಲ್ಲಿಡಬೇಕಾದ ಅಂಶವೆಂದರೆ, ನೀರು ಹಾಕಿಕೊಳ್ಳುವಾಗ ತಲೆಗೆ ಮೊದಲು ನೀರು ಹಾಕಿಕೊಳ್ಳಬೇಕು ಆನಂತರ ಪೂರ್ತಿ ಶರೀರವನ್ನು ಒದ್ದೆ ಮಾಡಿಕೊಳ್ಳಬೇಕು, ಹಾಗೇ ಮಾಡದೇ ಇದ್ದರೆ ಅದು ಶಾಸ್ತ್ರ ಸಮ್ಮತವಲ್ಲವೆಂದು ಹೇಳಲಾಗುತ್ತದೆ. ಇದರ ಹಿಂದೆ ವೈಜ್ಞಾನಿಕ ಕಾರಣವಿದೆ, ಅದೇನೆಂದರೆ, ತಲೆಗೆ ಮೊದಲು ನೀರು ಹಾಕಿಕೊಳ್ಳುವುದರಿಂದ ದೇಹದ ಉಷ್ಣತೆ ತಲೆಯಿಂದ ಇಳಿದು ಪಾದದಿಂದ ಹೊರಹೋಗುತ್ತದೆ. ಇದರಿಂದ ಶರೀರದ ಉಷ್ಣತೆಯು ಕಡಿಮೆಯಾಗಿ ದೇಹವು ತಂಪಾಗುತ್ತದೆ. ಸ್ನಾನದ ಪ್ರಕಾರಗಳು ಕೆಳಗಿನಂತಿವೆ:

  1. ಬ್ರಹ್ಮ ಸ್ನಾನ: ಪ್ರಾತಃಕಾಲದ ನಾಲ್ಕು ಗಂಟೆಯೊಳಗಿನ ಸಮಯವನ್ನು ಬ್ರಾಹ್ಮೀ ಮುಹೂರ್ತವೆನ್ನುತ್ತಾರೆ. ಈ ಸಮಯದಲ್ಲಿ ಭಗವಂತನನ್ನು ಧ್ಯಾನಿಸುತ್ತಾ ಮಾಡುವ ಸ್ನಾನವೇ ಬ್ರಹ್ಮ ಸ್ನಾನ. ಬ್ರಾಹ್ಮೀ ಮೂಹೂರ್ತದಲ್ಲಿ ಮಾಡುವ ಸ್ನಾನದಿಂದ ಇಷ್ಟದೇವರ ವಿಶೇಷವಾದ ಕೃಪೆ ಪ್ರಾಪ್ತವಾಗುವುದಲ್ಲದೇ, ಕಷ್ಟಗಳೆಲ್ಲಾ ನಿವಾರಣೆಯಾಗುತ್ತವೆ.
  2. ಋಷಿ ಸ್ನಾನ: ಬೆಳಗಿನ ಜಾವ 4 ಗಂಟೆಯಿಂದ ಐದು ಗಂಟೆಯೊಳಗೆ ಮಾಡುವ ಸ್ನಾನವನ್ನು ಮುನಿ ಸ್ನಾನ ಎಂದು ಕರೆಯಲಾಗುತ್ತದೆ. ಇದು ಸ್ನಾನ ಮಾಡಲು ಅತ್ಯುತ್ತಮವಾದ ಸಮಯ. ಮುನಿ ಸ್ನಾನ ಮಾಡುವುದರಿಂದ ಮನೆಯಲ್ಲಿ ಸುಖ-ಶಾಂತಿ, ಸಮೃದ್ಧಿ ನೆಲೆಸುತ್ತದೆಂದು ನಂಬಲಾಗಿದೆ.
  3. ದೈವ ಸ್ನಾನ: ಬೆಳಿಗ್ಗೆ ಐದು ಗಂಟೆಯಿಂದ ಆರು ಗಂಟೆಯೊಳಗೆ ಸ್ನಾನ ಮಾಡಿದರೆ ಮಾಡಿದರೆ ಆಯಸ್ಸು, ಕೀರ್ತಿ, ಧನ, ಸಂತೋಷ ಲಭಿಸುತ್ತದೆ. ಇದನ್ನು ದೈವ ಸ್ನಾನ ಎಂದು ಕರೆಯಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಈ ಸ್ನಾನ ಕೂಡ ಉತ್ತಮವಾದದ್ದು.
  4. ಮಾನವ ಸ್ನಾನ: ಮೂರನೇ ಸ್ನಾನವನ್ನು ಮನುಷ್ಯ ಸ್ನಾನ ಎಂದು ಕರೆಯಲಾಗುತ್ತದೆ. ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯ ಒಳಗೆ ಮಾಡುವ ಸ್ನಾನ ಇದಾಗಿದೆ. ಈ ಸಮಯದಲ್ಲಿ ಸ್ನಾನ ಮಾಡಿದರೆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂಬ ನಂಬಿಕೆಯಿದೆ.
  5. ರಾಕ್ಷಸ ಸ್ನಾನ: ಕೊನೆಯ ಸ್ನಾನ ರಾಕ್ಷಸಿ ಸ್ನಾನ. ಇದೀಗ ಸಾಮಾನ್ಯವಾಗಿದೆ. 8 ಗಂಟೆ ನಂತರ ಮಾಡುವ ಸ್ನಾನ ಈ ಶ್ರೇಣಿಯಲ್ಲಿ ಬರುತ್ತದೆ. ಇದನ್ನು ಧರ್ಮ ನಿಷೇಧವೆಂದು ಪರಿಗಣಿಸಲಾಗಿದೆ. ಈ ಸ್ನಾನ ಮಾಡುವುದರಿಂದ ಮನೆಯಲ್ಲಿ ಬಡತನ, ಕಲಹ, ಅಶಾಂತಿ, ಅನಾರೋಗ್ಯ ಕಾಡುತ್ತದೆ. ‌ ‌ ‌

ಸೂರ್ಯೋದಯದ ನಂತರ ಆಹಾರಾದಿಗಳನ್ನು ಸೇವಿಸಿದ ನಂತರ ಮಾಡುವ ಸ್ನಾನವೇ ದಾನವ ಸ್ನಾನ. ಶಾಸ್ತ್ರದ ಪ್ರಕಾರ ಈ ಸಮಯದಲ್ಲಿ ಸ್ನಾನ ಮಾಡುವುದು ಒಳ್ಳೆಯದಲ್ಲ, ಯಾವುದೇ ಆಹಾರ ಅಥವಾ ಪಾನೀಯಗಳನ್ನು ಸೇವಿಸುವುದಕ್ಕಿಂತ ಮೊದಲು ಸ್ನಾನ ಮಾಡುವುದು ಉತ್ತಮವೆಂದು ಹೇಳಲಾಗುತ್ತದೆ.

ದೇವ ಸ್ನಾನ, ಋಷಿ ಸ್ನಾನ ಅಥವಾ ಬ್ರಹ್ಮ ಸ್ನಾನಗಳನ್ನೇ ಮಾಡುವುದು ಉತ್ತಮ ಮತ್ತು ಸರ್ವಶ್ರೇಷ್ಠವೆಂದು ಶಾಸ್ತ್ರ ಹೇಳುತ್ತದೆ. ಮುಖ್ಯವಾಗಿ ಸಂಜೆ ಮತ್ತು ರಾತ್ರಿಯ ಸಮಯದಲ್ಲಿ ಸ್ನಾನ ಮಾಡುವುದು ಒಳ್ಳೆಯದಲ್ಲವೆಂದು ಹೇಳಲಾಗುತ್ತದೆ. ಗ್ರಹಣಗಳು ಮತ್ತು ಇತರೇ ಅಶೌಚ ಸಂದರ್ಭಗಳನ್ನು ಹೊರತುಪಡಿಸಿ ಉಳಿದ ದಿನ ಸಂಜೆ ಮತ್ತು ರಾತ್ರಿ ಸ್ನಾನವು ನಿಷಿದ್ಧವಾಗಿದೆ. ‌ಕೆಳಗೆ ಸೂಚಿಸಿರುವ ಕೆಲವು ವಸ್ತುಗಳನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ನಿಮ್ಮ ದೇಹಕ್ಕೆ ಹಾಗೂ ನಿಮ್ಮ ಭವಿಷ್ಯಕ್ಕೆ ತುಂಬಾ ಒಳ್ಳೆಯದು.

  1. ಸ್ನಾನ ಮಾಡುವ ನೀರಿನಲ್ಲಿ ಸ್ವಲ್ಪ ಏಲಕ್ಕಿ ಹಾಗೂ ಕೇಸರಿಯನ್ನು ಬೆರೆಸಿದರೆ ಮಾಡಿದರೆ ನಿಮ್ಮ ಜೀವನದಲ್ಲಿ ಬರುವಂತಹ ಕಷ್ಟಗಳು ದೂರವಾಗು ಸಾಧ್ಯತೆ ಇರುತ್ತದೆ. ನಿಧಾನವಾಗಿ ನಿಮ್ಮ ಜೀವನದ ಬದಲಾವಣೆ ಕಂಡುಬರುತ್ತದೆ ಹಾಗೂ ನೀವು ಸಂತೋಷಕರ ವಾಗಿರಬಹುದು.
  2. ನೀವು ಸ್ನಾನ ಮಾಡುವ ನೀರಿನಲ್ಲಿ ಸ್ವಲ್ಪ ಒಂದು ಚಮಚ ಅಥವಾ ಎರಡು ಚಮಚ ಹಾಲನ್ನು ಸೇರಿಸಿ ಸ್ನಾನ ಮಾಡುವುದರಿಂದ ನಿಮ್ಮ ತ್ವಚೆ ಕಾಂತಿಯುತವಾಗುತ್ತದೆ ಹಾಗೆ ನೀವು ಚೆನ್ನಾಗಿ ಕಾಣುತ್ತೀರಿ. ಹಾಲನ್ನು ಸೇರಿಸಿ ದಾನ ಮಾಡುವುದರಿಂದ ನಿಮ್ಮ ಆಯುಷ್ಯ ವೃದ್ಧಿಯಾಗುತ್ತದೆ. ಇದಕ್ಕೆ ಉದಾಹರಣೆಯೆಂದರೆ ಮಹಾರಾಜ ಕಾಲದಲ್ಲಿ ರಾಣಿಯರು ಮಾಡುವಾಗ ಸ್ವಲ್ಪ ಹಾಲಿನ ಅಂಶವನ್ನು ಹಾಕಿ ಜಳಕ ಮಾಡುತ್ತಿದ್ದರು.
  3. ಹಾಗೆ ನೀವು ಸ್ನಾನ ಮಾಡುವ ನೀರಿನಲ್ಲಿ ಸ್ವಲ್ಪ ಎಳ್ಳು ಬೆರೆಸಿ ಸ್ನಾನ ಮಾಡಿದರೆ, ದೇವಿ ಮಹಾಲಕ್ಷ್ಮಿಯ ಕೃಪೆ ಆಗುತ್ತದೆ , ನಿಮ್ಮ ಮನೆಯಲ್ಲಿ ಆಯಃ ಆರೋಗ್ಯ ಹಾಗೆ ಧನವು ಪ್ರಾಪ್ತಿಯಾಗುತ್ತದೆ.
  4. ನೀವು ಸ್ನಾನ ಮಾಡುವ ನೀರಿನಲ್ಲಿ ಸ್ವಲ್ಪ ತುಪ್ಪದ ಅಂಶವನ್ನು ಹಾಕಿ ಸ್ನಾನ ಮಾಡಿದರೆ ನಿಮ್ಮ ದೇಹ ಕಾಂತಿಯಿಂದ ಹೊಳೆಯುತ್ತದೆ, ಹಾಗೆ ನಿಮ್ಮದೇ ಆರೋಗ್ಯಕರವಾಗಿರುತ್ತದೆ. ಇದಕ್ಕೆ ವೈಜ್ಞಾನಿಕ ಕಾರಣವೇನೆಂದರೆ ನಿಮ್ಮ ಚರ್ಮವನ್ನು ಯಾವಾಗಲೂ ತುಪ್ಪವು ಮೃದುವಾಗಿ ಇರುವ ಹಾಗೆ ನೋಡಿಕೊಳ್ಳುತ್ತದೆ ಇದರಿಂದ ನಿಮ್ಮ ಚರ್ಮ ಬಿರು ಬಿಡಲು ಬರುವುದಿಲ್ಲ.
  5. ನೀವು ಸ್ನಾನ ಮಾಡುವ ನೀರಿನಲ್ಲಿ ಸ್ವಲ್ಪ ಶ್ರೀಗಂಧವನ್ನು ಸೇರಿಸಿ ಸ್ನಾನ ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಕಷ್ಟ ದುಃಖಗಳು ನಿವಾರಣೆಯಾಗುತ್ತವೆ. (ಬರಹ – ವಾಟ್ಸ್​ಆಪ್​ ಸಂದೇಶ)

ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ