AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Price Today: ಒಂದೇ ದಿನದಲ್ಲಿ 2,000 ರೂ. ಏರಿಕೆ ಕಂಡ ಬೆಳ್ಳಿ ದರ; ಚಿನ್ನದ ಬೆಲೆಯೂ ಮತ್ತೆ ಹೆಚ್ಚಳ

Silver Price Today: ನಿನ್ನೆ ಒಂದೇ ದಿನದಲ್ಲಿ ಬೆಳ್ಳಿಯ ದರ 1 ಕೆಜಿಗೆ 2,000 ರೂ. ಏರಿಕೆಯಾಗಿದೆ. ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ ಸೇರಿ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

Gold Price Today: ಒಂದೇ ದಿನದಲ್ಲಿ 2,000 ರೂ. ಏರಿಕೆ ಕಂಡ ಬೆಳ್ಳಿ ದರ; ಚಿನ್ನದ ಬೆಲೆಯೂ ಮತ್ತೆ ಹೆಚ್ಚಳ
ಚಿನ್ನ
TV9 Web
| Edited By: |

Updated on: Mar 06, 2022 | 5:55 AM

Share

ಭಾರತದಲ್ಲಿ ಚಿನ್ನದ ದರ (Gold Rate) ಇಂದು ಕೂಡ ಏರಿಕೆಯತ್ತ ಸಾಗಿದೆ. 24 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ 760 ರೂ. ಹೆಚ್ಚಳವಾಗುವ ಮೂಲಕ ಮತ್ತೆ ಬಂಗಾರದ ಬೆಲೆ (Gold Price) ಏರುಗತಿಯಲ್ಲಿ ಸಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ರಷ್ಯಾ- ಉಕ್ರೇನ್ ಯುದ್ಧ ಕೂಡ ಕಾರಣ ಎನ್ನಲಾಗಿದೆ. ಚಿನ್ನ ಮಾತ್ರವಲ್ಲದೆ ಬೆಳ್ಳಿ ಬೆಲೆಯಲ್ಲೂ (Silver Price) ಹೆಚ್ಚಳವಾಗುತ್ತಲೇ ಇದೆ. ನಿನ್ನೆ ಒಂದೇ ದಿನದಲ್ಲಿ ಬೆಳ್ಳಿಯ ದರ 1 ಕೆಜಿಗೆ 2,000 ರೂ. ಏರಿಕೆಯಾಗಿದೆ. ಇದರಿಂದಾಗಿ ಶುಭ ಸಮಾರಂಭಗಳಿಗೆ ಬೆಳ್ಳಿ ಖರೀದಿಯ ಯೋಚನೆಯಲ್ಲಿದ್ದ ಗ್ರಾಹಕರಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ ಸೇರಿ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದ ಅನೇಕ ನಗರಗಳಲ್ಲಿ ಚಿನ್ನದ ಬೆಲೆ 2 ದಿನಗಳಿಂದ ಹೆಚ್ಚುತ್ತಲೇ ಇದೆ. ನಿನ್ನೆ ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 47,700 ರೂ. ಇದ್ದುದು ಇಂದು 48,400 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 52,040 ರೂ. ಇದ್ದುದು 52,800 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 49,700 ರೂ, ಮುಂಬೈ- 48,400 ರೂ, ದೆಹಲಿ- 48,400 ರೂ, ಕೊಲ್ಕತ್ತಾ- 48,400 ರೂ, ಬೆಂಗಳೂರು- 48,400 ರೂ, ಹೈದರಾಬಾದ್- 48,400 ರೂ, ಕೇರಳ- 48,400 ರೂ, ಪುಣೆ- 48,450 ರೂ, ಮಂಗಳೂರು- 48,400 ರೂ, ಮೈಸೂರು- 48,400 ರೂ. ಇದೆ.

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ: ಚೆನ್ನೈ- 54,220 ರೂ, ಮುಂಬೈ- 52,800 ರೂ, ದೆಹಲಿ- 52,800 ರೂ, ಕೊಲ್ಕತ್ತಾ- 52,800 ರೂ, ಬೆಂಗಳೂರು- 52,800 ರೂ, ಹೈದರಾಬಾದ್- 52,800 ರೂ, ಕೇರಳ- 52,800 ರೂ, ಪುಣೆ- 52,850 ರೂ, ಮಂಗಳೂರು- 52,800 ರೂ, ಮೈಸೂರು- 52,800 ರೂ. ಇದೆ.

ಇಂದಿನ ಬೆಳ್ಳಿಯ ದರ: ಬೆಳ್ಳಿ ಬೆಲೆಯಲ್ಲಿ ನಿನ್ನೆಗಿಂತ ಇಂದು ಕೂಡ ಮತ್ತೆ ಏರಿಕೆಯಾಗಿದೆ. ನಿನ್ನೆಗಿಂತ ಇಂದು 1 ಕೆಜಿ ಬೆಳ್ಳಿಗೆ 2000 ರೂ. ಏರಿಕೆಯಾಗಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿ ದರ 68,000 ರೂ. ಇದ್ದುದು 70,000 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 73,400 ರೂ, ಮೈಸೂರು- 73,400 ರೂ., ಮಂಗಳೂರು- 73,400 ರೂ., ಮುಂಬೈ- 70,000 ರೂ, ಚೆನ್ನೈ- 73,400 ರೂ, ದೆಹಲಿ- 70,000 ರೂ, ಹೈದರಾಬಾದ್- 73,400 ರೂ, ಕೊಲ್ಕತ್ತಾ- 70,000 ರೂ. ಇದೆ.

ಇದನ್ನೂ ಓದಿ: Gold Price Today: ಚಿನ್ನ ಕೊಳ್ಳುವವರಿಗೆ ದೊಡ್ಡ ಶಾಕ್; ಬೆಳ್ಳಿ ಬೆಲೆಯೂ 2,200 ರೂ. ಏರಿಕೆ

Gold Price Today: ಹೆಚ್ಚುತ್ತಲೇ ಇದೆ ಚಿನ್ನದ ಬೆಲೆ; 700 ರೂ. ಏರಿಕೆ ಕಂಡ ಬೆಳ್ಳಿ ದರ

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ