EPF: ಇಪಿಎಫ್ಒನಿಂದ ಉದ್ಯೋಗದಾತರ ಇಪಿಎಫ್ ಟ್ರಸ್ಟ್‌ಗೆ ಇಪಿಎಫ್ ಖಾತೆ ವರ್ಗಾವಣೆ ಹೇಗೆ? ಇಲ್ಲಿದೆ ಎಲ್ಲ ಮಾಹಿತಿ
ಉದ್ಯೋಗಿಯ ಇಪಿಎಫ್ ಖಾತೆಯನ್ನು ಇಪಿಎಫ್ಒದಿಂದ ಇಫಿಎಫ್ ಟ್ರಸ್ಟ್‌ಗೆ ವರ್ಗಾವಣೆ ಮಾಡುವುದು ಹೇಗೆ ಎಂಬುದನ್ನು ಹಂತಹಂತವಾಗಿ ವಿವರಿಸುವಂಥ ಲೇಖನ ಇಲ್ಲಿದೆ.
ಉದ್ಯೋಗವನ್ನು ಬದಲಾಯಿಸುವುದು ಅಂದರೆ ಕಚೇರಿ ಮತ್ತು ಕೆಲಸದ ಹೊರೆಯನ್ನು ಬದಲಾಯಿಸುವುದು ಎಂದಷ್ಟೇ ಅರ್ಥವಲ್ಲ. ಇದರ ಜತೆಗೆ ಹಿಂದಿನ ಉದ್ಯೋಗದಾತರೊಂದಿಗೆ ಹೊಂದಿರುವ ಉದ್ಯೋಗಿಗಳ ಭವಿಷ್ಯ ನಿಧಿ (EPF) ಖಾತೆಯನ್ನು ಹೊಸ ಉದ್ಯೋಗದಾತರಿಗೆ ವರ್ಗಾಯಿಸುವುದು ಎಂದು ಕೂಡ ಅರ್ಥ. ಆದರೆ ಹಿಂದಿನ ಉದ್ಯೋಗದಾತರಂತೆ ಇಪಿಎಫ್ ಹಣವನ್ನು ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆಯಲ್ಲಿ (EPFO) ಠೇವಣಿ ಇಡದೆ ಹೊಸ ಉದ್ಯೋಗದಾತರು ಇಪಿಎಫ್ ಆದಾಯಕ್ಕಾಗಿ ಖಾಸಗಿ ಟ್ರಸ್ಟ್ ಅನ್ನು ನಿರ್ವಹಿಸಿದರೆ ಆಗ ಹೇಗೆ, ಅಂತಹ ಪರಿಸ್ಥಿತಿಯಲ್ಲಿ ಉದ್ಯೋಗಿ ಏನು ಮಾಡಬೇಕು? ಈ ಸಂದರ್ಭದಲ್ಲಿ ಖಾಸಗಿ ಇಪಿಎಫ್ ಟ್ರಸ್ಟ್ ಮತ್ತು ಇಪಿಎಫ್ಒನಿಂದ ಹಳೆಯ ಇಪಿಎಫ್ ಖಾತೆಯಿಂದ ಹೊಸ ಇಪಿಎಫ್ ಖಾತೆಗೆ ಹಣವನ್ನು ವರ್ಗಾಯಿಸಲು ಅವರು ಅರ್ಹರಾಗುತ್ತಾರೆಯೇ?
ಇದಕ್ಕೆ ಸಣ್ಣದಾಗಿ ಉತ್ತರಿಸಬೇಕು ಅಂದರೆ, ಹೌದು! ಇಪಿಎಫ್ಒ ನಿಯಮಗಳು ಹೇಳುವಂತೆ ಒಬ್ಬ ವ್ಯಕ್ತಿಯು ಹಳೆಯ ಉದ್ಯೋಗದಾತರೊಂದಿಗೆ ಹೊಂದಿರುವ ತಮ್ಮ ಇಪಿಎಫ್ ಖಾತೆಯನ್ನು ಹೊಸ ಉದ್ಯೋಗದಾತರಿಗೆ ಸುಲಭವಾಗಿ ವರ್ಗಾಯಿಸಬಹುದು. ಹಿಂದಿನ ಅಥವಾ ಹೊಸ ಖಾತೆಯು ಟ್ರಸ್ಟ್ ಅಥವಾ ಇಪಿಎಫ್ಒ ಅನ್ನು ಹೊಂದಿದ್ದರೂ ವರ್ಗಾವಣೆ ಮಾಡಬಹುದು. ಟೀಮ್‌ಲೀಸ್ ಸರ್ವೀಸಸ್‌ನ ಪ್ರಶಾಂತ್ ಸಿಂಗ್ ಹೇಳುವಂತೆ, “ಇಪಿಎಫ್ ಸದಸ್ಯರು ಹಳೆ ಇಪಿಎಫ್ ಖಾತೆಯಿಂದ ಹೊಸ ಇಪಿಎಫ್ ಖಾತೆಗೆ ಹಣವನ್ನು ವರ್ಗಾವಣೆ ಮಾಡುವುದಲ್ಲದೆ, ಅವರು ನೌಕರರ ಪಿಂಚಣಿ ಯೋಜನೆಗೆ ಸಂಬಂಧಿಸಿದ ವಿವರಗಳನ್ನು ಸಹ ವರ್ಗಾಯಿಸುತ್ತಾರೆ. (ಇಪಿಎಸ್) ಖಾತೆಯನ್ನು ಹೊಸ ಉದ್ಯೋಗದಾತರಿಗೆ ವರ್ಗಾವಣೆ ಮಾಡಲಾಗುತ್ತದೆ.”
ಉದ್ಯೋಗದಾತರು (ಹಳೆಯ ಮತ್ತು ಹೊಸ) ಇಪಿಎಸ್ ಖಾತೆಯಲ್ಲಿ ಠೇವಣಿ ಮಾಡಿದ ಹಣವನ್ನು ಇಪಿಎಫ್‌ಒಗೆ ಠೇವಣಿ ಮಾಡಲಾಗುತ್ತದೆ. ವರ್ಗಾವಣೆ ಸಮಯದಲ್ಲಿ ಇದು ಇಪಿಎಫ್‌ಒಗೆ ಇರುತ್ತದೆ ಮತ್ತು ಅವರು ಅರ್ಹರಾದಾಗ ಪಿಂಚಣಿ ನೀಡಲಾಗುತ್ತದೆ. ಇಪಿಎಫ್ ಖಾತೆಯ ವರ್ಗಾವಣೆಯನ್ನು ಆನ್‌ಲೈನ್‌ನಲ್ಲಿ ಮಾಡಬಹುದು. ಉದ್ಯೋಗದಾತರು (ಹಳೆಯ ಮತ್ತು ಹೊಸ) ಎರಡೂ ಏಕೀಕೃತ ಪೋರ್ಟಲ್‌ನಲ್ಲಿ ವರ್ಗಾವಣೆಯನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ. ಇಪಿಎಫ್ಒನಿಂದ ಉದ್ಯೋಗದಾತರ ಇಪಿಎಫ್ ಟ್ರಸ್ಟ್‌ಗೆ HoEPF ಖಾತೆ ವರ್ಗಾವಣೆ ಆಗುತ್ತದೆ. ಸದಸ್ಯ ಸೇವಾ ಪೋರ್ಟಲ್‌ನಲ್ಲಿ ನಿರ್ದಿಷ್ಟ ಕಂಪೆನಿ ಅಥವಾ ಟ್ರಸ್ಟ್‌ನ ವಿವರಗಳು ಲಭ್ಯ ಇಲ್ಲದಿದ್ದರೆ ಉದ್ಯೋಗಿ ಫಾರ್ಮ್ 13 ಅನ್ನು ಮ್ಯಾನ್ಯುಯಲ್ ಆಗಿ ಭರ್ತಿ ಮಾಡಬೇಕು ಮತ್ತು ಅದನ್ನು ಅವಳ ಮಾನವ ಸಂಪನ್ಮೂಲ ಇಲಾಖೆಗೆ ಸಲ್ಲಿಸಬೇಕು.
ಇಪಿಎಫ್ಒನಿಂದ ಉದ್ಯೋಗದಾತರ ಟ್ರಸ್ಟ್‌ಗೆ ಇಪಿಎಫ್ ಖಾತೆ ನೀವು ಹೇಗೆ ವರ್ಗಾಯಿಸಬಹುದು ಇಲ್ಲಿದೆ: ಒಬ್ಬ ವ್ಯಕ್ತಿಯು ತಮ್ಮ ಇಪಿಎಫ್ ಖಾತೆಯು ಕೆವೈಸಿ ಆಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಯೂನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ಅನ್ನು ಆಧಾರ್ ಸಂಖ್ಯೆಗೆ ಜೋಡಣೆ ಮಾಡಲಾಗಿದೆ ಮತ್ತು ಇಪಿಎಫ್ ಖಾತೆಯೊಂದಿಗೆ ಜೋಡಣೆ ಮಾಡಲಾದ ಮೊಬೈಲ್ ಸಂಖ್ಯೆಯನ್ನು ವರ್ಗಾವಣೆ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಬೇಕು.
ಹಂತ 1: ಯುಎಎನ್ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸುವ ಮೂಲಕ ಸದಸ್ಯ ಸೇವಾ ಪೋರ್ಟಲ್‌ನಲ್ಲಿ ಖಾತೆಗೆ ಲಾಗಿನ್ ಮಾಡಿ.
ಹಂತ 2: ಒಮ್ಮೆ ಲಾಗ್ ಇನ್ ಮಾಡಿದ ನಂತರ, ‘ಆನ್‌ಲೈನ್ ಸೇವೆಗಳು’ ಮೇಲೆ ಕ್ಲಿಕ್ ಮಾಡಿ ಮತ್ತು ‘ಒನ್ ಮೆಂಬರ್ – ಒನ್ ಇಪಿಎಫ್ ಅಕೌಂಟ್ (ವರ್ಗಾವಣೆ ವಿನಂತಿ)’ ಆಯ್ಕೆ ಮಾಡಿ.
ಹಂತ 3: ಹೊಸ ಟ್ಯಾಬ್ ತೆರೆಯುತ್ತದೆ. ನೀವು ಹಣವನ್ನು ವರ್ಗಾಯಿಸಲು ಬಯಸುವ ಹೊಸ ಇಪಿಎಫ್ ಖಾತೆ ವಿವರಗಳನ್ನು ಇಲ್ಲಿ ತೋರಿಸಲಾಗುತ್ತದೆ. ನಿಮ್ಮ ಹೊಸ ಇಪಿಎಫ್ ಖಾತೆ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಇದು ನಿಮ್ಮ ಸಂಬಳದ ಸ್ಲಿಪ್ ಅಥವಾ ನಿಮ್ಮ ಹೊಸ ಉದ್ಯೋಗದಾತರ ಇಪಿಎಫ್ ಸ್ಟೇಟ್ಮೆಂಟ್ನಲ್ಲಿ ಲಭ್ಯವಿರುತ್ತದೆ.
ಹಂತ 4: ನಿಮ್ಮ ಆನ್‌ಲೈನ್ ವರ್ಗಾವಣೆ ದೃಢೀಕರಣವನ್ನು ಪ್ರಸ್ತುತ ಉದ್ಯೋಗದಾತ ಅಥವಾ ಹಿಂದಿನ ಉದ್ಯೋಗದಾತರಿಂದ ಮಾಡಬೇಕೇ ಎಂಬುದನ್ನು ಆಯ್ಕೆ ಮಾಡಬೇಕಾಗುತ್ತದೆ. ಪ್ರಸ್ತುತ ಉದ್ಯೋಗದಾತರನ್ನು ಇಪಿಎಫ್ ಖಾತೆ ವರ್ಗಾವಣೆಯ ದೃಢೀಕರಣಕ್ಕಾಗಿ ಆಯ್ಕೆ ಮಾಡಬಹುದೇ ಎಂದು ಪರಿಶೀಲಿಸಬೇಕು.
ಹಂತ 5: ನಿಮ್ಮ ಹಳೆಯ ಮತ್ತು ಹೊಸ ಉದ್ಯೋಗದಾತರ ಯುಎಎನ್ ಒಂದೇ ಆಗಿದ್ದಲ್ಲಿ ಸದಸ್ಯರ ಐಡಿ (ಹಿಂದಿನ ಇಪಿಎಫ್ ಖಾತೆ ಸಂಖ್ಯೆ) ಅನ್ನು ನಮೂದಿಸಿ ಅಥವಾ ಅದು ವಿಭಿನ್ನವಾಗಿದ್ದರೆ ಹಳೆಯ ಉದ್ಯೋಗದಾತರ ಯುಎಎನ್ ಅನ್ನು ನಮೂದಿಸಿ. ‘ವಿವರಗಳನ್ನು ಪಡೆಯಿರಿ’ ಎಂಬುದನ್ನು ಕ್ಲಿಕ್ ಮಾಡಿ ಮತ್ತು ಇಪಿಎಫ್ ಖಾತೆ ವಿವರಗಳನ್ನು ತೋರಿಸಲಾಗುತ್ತದೆ. ಹಣವನ್ನು ವರ್ಗಾವಣೆ ಮಾಡುವ ಖಾತೆಯನ್ನು ಆಯ್ಕೆ ಮಾಡಿ.
ಹಂತ 6: ನಿಮ್ಮ ಆಧಾರ್ ಜೋಡಣೆ ಮಾಡಲಾದ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವ ‘ಒಟಿಪಿ ಪಡೆಯಿರಿ’ ಮೇಲೆ ಕ್ಲಿಕ್ ಮಾಡಿ. ಒಟಿಪಿ ಅನ್ನು ನಮೂದಿಸಿ ಮತ್ತು ನಿಮ್ಮ ವರ್ಗಾವಣೆ ವಿನಂತಿಯನ್ನು ಯಶಸ್ವಿಯಾಗಿ ಸಲ್ಲಿಸಲಾಗುತ್ತದೆ.
ಸಾಮಾನ್ಯವಾಗಿ ಇಪಿಎಫ್ ವರ್ಗಾವಣೆ ಪೂರ್ಣಗೊಳ್ಳಲು 30ರಿಂದ 45 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ಈ ಬಗ್ಗೆ ಮಾಹಿತಿ ಇರುವವರು ಹೇಳುತ್ತಾರೆ. ಇಪಿಎಫ್ ವರ್ಗಾವಣೆಯು ಯಶಸ್ವಿಯಾಗಿ ಪೂರ್ಣಗೊಂಡ ನಂತರ ಹಳೆಯ ಇಪಿಎಫ್ ಖಾತೆ ಉದ್ಯೋಗದಾತರು (EPFO/Trust) ಎರಡು ಪ್ರತಿಗಳಲ್ಲಿ ಅನುಬಂಧ K ಅನ್ನು ನೀಡುತ್ತಾರೆ – ಒಂದು ಪ್ರತಿಯನ್ನು ಉದ್ಯೋಗಿಗೆ ನೀಡಲಾಗುತ್ತದೆ ಮತ್ತು ಇನ್ನೊಂದು ಪ್ರತಿಯನ್ನು ಹೊಸ ಉದ್ಯೋಗದಾತರಿಗೆ (ಟ್ರಸ್ಟ್/EPFO) ನೀಡಲಾಗುತ್ತದೆ.
ಇದನ್ನೂ ಓದಿ: EPFO: ಇಪಿಎಫ್ಒದಿಂದ ಎಕ್ಸ್ಗ್ರೇಷಿಯಾ ಮರಣ ಪರಿಹಾರ ನಿಧಿ ರೂ. 4.20 ಲಕ್ಷದಿಂದ 8 ಲಕ್ಷಕ್ಕೆ ವಿಸ್ತರಣೆ