AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

EPFO: ಇಪಿಎಫ್​ಒದಿಂದ ಎಕ್ಸ್​ಗ್ರೇಷಿಯಾ ಮರಣ ಪರಿಹಾರ ನಿಧಿ ರೂ. 4.20 ಲಕ್ಷದಿಂದ 8 ಲಕ್ಷಕ್ಕೆ ವಿಸ್ತರಣೆ

ಎಕ್ಸ್​ಗ್ರೇಷಿಯಾ ಮರಣ ಪರಿಹಾರ ನಿಧಿಯನ್ನು 4.20 ಲಕ್ಷ ರೂಪಾಯಿಯಿಂದ 8 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಇದು ಕೇಂದ್ರೀಯ ಮಂಡಳಿ ಸಿಬ್ಬಂದಿಗೆ ಅನ್ವಯ ಆಗುತ್ತದೆ.

EPFO: ಇಪಿಎಫ್​ಒದಿಂದ ಎಕ್ಸ್​ಗ್ರೇಷಿಯಾ ಮರಣ ಪರಿಹಾರ ನಿಧಿ ರೂ. 4.20 ಲಕ್ಷದಿಂದ 8 ಲಕ್ಷಕ್ಕೆ ವಿಸ್ತರಣೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Nov 19, 2021 | 10:03 AM

Share

ಕೇಂದ್ರ ಸರ್ಕಾರ, ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯದ ಅಡಿಯಲ್ಲಿ ಬರುವ ಕಾರ್ಮಿಕ ಭವಿಷ್ಯ ನಿಧಿ ಸಂಸ್ಥೆ (EPFO) ಘೋಷಣೆ ಮಾಡಿರುವಂತೆ, ಕೊವಿಡ್-19 ಹೊರತಾಗಿ ಬೇರೆ ಕಾರಣಗಳಿಗೆ (ಸಾಮಾನ್ಯ ಸಾವು) ಕೇಂದ್ರೀಯ ಮಂಡಳಿ ಉದ್ಯೋಗಿಗಳಿಗೆ ಎಕ್ಸ್​ಗ್ರೇಷಿಯಾ ಮರಣ ಪರಿಹಾರ ನಿಧಿಯಾಗಿ 8 ಲಕ್ಷ ರೂಪಾಯಿಗೆ ವಿಸ್ತರಣೆ ಮಾಡಲಾಗಿದೆ. ಎಕ್ಸ್​ಗ್ರೇಷಿಯಾ ಮರಣ ಪರಿಹಾರ ನಿಧಿಯನ್ನು ರೂ. 4.20 ಲಕ್ಷದಿಂದ 8 ಲಕ್ಷಕ್ಕೆ ಹೆಚ್ಚಿಸಲಾಗಿದೆ. ನವೆಂಬರ್ 2, 2021ರಂದು ಹೊರಡಿಸಲಾದ ಅಧಿಕೃತ ಹೇಳಿಕೆಯಲ್ಲಿ ಇದನ್ನು ತಿಳಿಸಲಾಗಿದೆ. “ಕೊವಿಡ್​-19 ಕಾಯಿಲೆ ಹೊರತಾದ ಕಾರಣದಿಂದ ಮೃತಪಟ್ಟ ಕೇಂದ್ರೀಯ ಮಂಡಳಿಯ ಸಿಬ್ಬಂದಿಯ ಕುಟುಂಬ ಸದಸ್ಯರಿಗೆ (ನಾಮಿನಿಗಳು ಅಥವಾ ಕಾನೂನು ಉತ್ತರಾಧಿಕಾರಿಗಳು) ಕಲ್ಯಾಣ ನಿಧಿಯಿಂದ 8 ಲಕ್ಷ ರೂಪಾಯಿ ಮೊತ್ತವನ್ನು ಎಕ್ಸ್​ಗ್ರೇಷಿಯಾ ಮರಣ ಪರಿಹಾರ ನಿಧಿಯಿಂದ ಪಾವತಿಸಲಾಗುವುದು,” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಕ್ಷಣದಿಂದಲೇ ಈ ಸೂಚನೆಯು ಜಾರಿಗೆ ಬರಲಿದೆ ಎಂಬುದನ್ನು ಇಪಿಎಫ್​ಒ ಸದಸ್ಯರು ಗಮನದಲ್ಲಿ ಇಟ್ಟುಕೊಳ್ಳಬೇಕು. ಈ ಅಧಿಸೂಚನೆ ಹೊರಡಿಸಿದ ನಂತರದ ದಿನಾಂಕದಲ್ಲಿ ಸಂಭವಿಸಿದ ಸಾವಿನ ಪ್ರಕರಣಗಳಿಗೆ ಅನ್ವಯ ಆಗುತ್ತದೆ. ಈ ಹಿಂದೆಯೇ ಹೇಳಿದಂತೆ ಎಕ್ಸ್​ಗ್ರೇಷಿಯಾ ಮರಣ ಪರಿಹಾರ ನಿಧಿಯನ್ನು ಪಿಎಫ್ ಚಂದಾದಾರರ ನಾಮಿನಿಗಳಿಗೆ ಪಾವತಿ ಮಾಡಲಾಗುತ್ತದೆ. ಆದ್ದರಿಂದ ನಾಮಿನೇಷನ್ ಶೀಘ್ರದಲ್ಲೇ ಮಾಡಬೇಕು. ಯುಎಎನ್​ ಮೂಲಕವಾಗಿ ಇ-ನಾಮಿನೇಷನ್ ಆನ್​ಲೈನ್​ನಲ್ಲಿ ಫೈಲ್ ಮಾಡಬಹುದು. ಆ ಮೂಲಕ ತಮ್ಮ ಕುಟುಂಬ ಸದಸ್ಯರಿಗೆ ಸಾಮಾಜಿಕ ಭದ್ರತೆ ಖಾತ್ರಿಪಡಿಸಬಹುದು. ಇದಕ್ಕಾಗಿ ಯುಎಎನ್​ ಪೋರ್ಟಲ್​ಗೆ ಲಾಗ್​ ಇನ್​ ಆಗಿ, ಸ್ವ ಘೋಷಣೆಯನ್ನು ಮಾಡಬೇಕು. ಇದಕ್ಕಾಗಿ ಉದ್ಯೋಗದಾತರಿಂದ ಯಾವುದೇ ದಾಖಲಾತಿಗಳು ಅಥವಾ ಮಂಜೂರಾತಿ ಅಗತ್ಯ ಇಲ್ಲ.

ಇಪಿಎಫ್​ಒ ಪ್ರಕಾರವಾಗಿ, ಆನ್​ಲೈನ್​ನಲ್ಲಿ ಇ-ನಾಮಿನೇಷನ್ ಫೈಲ್​ ಮಾಡುವುದರಿಂದ ಪ್ರಾವಿಡೆಂಟ್ ಫಂಡ್ (PF), ಪೆನ್ಷನ್​ (EPS) ಮತ್ತು ಇನ್ಷೂರೆನ್ಸ್ (EDLI) ಅನುಕೂಲಗಳನ್ನು ಸದಸ್ಯರ ಸಾವಿನ ಸಂದರ್ಭದಲ್ಲಿ ಪಡೆಯಲು ಸಹಾಯ ಆಗುತ್ತದೆ. ಇದರರ್ಥ ಏನೆಂದರೆ, ಇಪಿಎಫ್​ ಸದಸ್ಯರು ಶೀಘ್ರವಾಗಿ ಇ-ನಾಮಿನೇಷನ್ ಮಾಡಿಸಬೇಕು. ಇದಕ್ಕಾಗಿ, www.epfindia.gov.in> Services > For Employees > Member UAN/ Online Serviceಗೆ ಭೇಟಿ ನೀಡಬೇಕು.

ಇದನ್ನೂ ಓದಿ: Digital EPF, EPS Nomination: ಇಪಿಎಫ್​, ಇಪಿಎಸ್​ ನಾಮನಿರ್ದೇಶನ ಡಿಜಿಟಲಿ ಮಾಡುವುದು ಹೇಗೆ?

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ