Digital EPF, EPS Nomination: ಇಪಿಎಫ್, ಇಪಿಎಸ್ ನಾಮನಿರ್ದೇಶನ ಡಿಜಿಟಲಿ ಮಾಡುವುದು ಹೇಗೆ?
ಇಪಿಎಫ್, ಇಪಿಎಸ್ಗಾಗಿ ಡಿಜಿಟಲಿ ನಾಮ ನಿರ್ದೇಶನ (ನಾಮಿನೇಷನ್) ಮಾಡುವುದು ಹೇಗೆ ಎಂಬ ಬಗ್ಗೆ ಹಂತ ಹಂತವಾದ ವಿವರಣೆ ಈ ಲೇಖನದಲ್ಲಿದೆ.
ಕಾರ್ಮಿಕ ಭವಿಷ್ಯ ನಿಧಿ ಸಂಸ್ಥೆ (EPFO)ಯು ಪ್ರಾವಿಡೆಂಟ್ ಫಂಡ್ ಚಂದಾದಾರರಿಗೆ ಇ-ನಾಮಿನೇಷನ್ ಭರ್ತಿ ಮಾಡುವುದಕ್ಕೆ ಕೇಳಿಕೊಂಡಿದೆ. ಹೀಗೆ ಮಾಡುವ ಮೂಲಕ ಸಾಮಾಜಿಕ ಭದ್ರತೆಯು ಚಂದಾದಾರರ ಕುಟುಂಬಕ್ಕೆ ಖಾತ್ರಿ ಆಗುತ್ತದೆ. ಈ ಸಂಬಂಧವಾಗಿ ಇಪಿಎಫ್ಒ ಟ್ವೀಟ್ ಮಾಡಿದೆ. ಚಂದಾದಾರರ ಕುಟುಂಬಗಳಿಗೆ ಸಾಮಾಜಿಕ ಭದ್ರತೆ ಒದಗಿಸುವುದಕ್ಕೆ ಸದಸ್ಯರು ಕಡ್ಡಾಯವಾಗಿ ಇ-ನಾಮಿನೇಷನ್ ಅನ್ನು ಇಂದೇ ಫೈಲ್ ಮಾಡಬೇಕು. ಡಿಜಿಟಲಿ ಇಪಿಎಫ್/ಇಪಿಎಸ್ ನಾಮಿನೇಷನ್ ಫೈಲ್ ಮಾಡುವುದಕ್ಕೆ ಇಲ್ಲಿರುವ ಸರಳ ಹಂತಗಳನ್ನು ಅನುಸರಿಸಿ ಎಂದು ತಿಳಿಸಿದೆ. ಇಪಿಎಫ್ ಮತ್ತು ಇಪಿಎಸ್ ನಾಮಿನೇಷನ್ ಆನ್ಲೈನ್ ಮೂಲಕ ಸಲ್ಲಿಕೆ ಮಾಡುವುದಕ್ಕೆ ಹಂತಹಂತವಾದ ಮಾರ್ಗದರ್ಶನವನ್ನು ವಿವರಿಸುವ ವಿಡಿಯೋ ಹಂಚಿಕೊಳ್ಳಲಾಗಿದೆ.
ಇಪಿಎಫ್, ಇಪಿಎಸ್ ನಾಮಿನೇಷನ್ ಆನ್ಲೈನ್ ಮೂಲಕ ಸಲ್ಲಿಸುವುದಕ್ಕೆ ಮಾರ್ಗದರ್ಶನ ಹೀಗಿದೆ: – EPFO ವೆಬ್‌ಸೈಟ್ ಕ್ಲಿಕ್ ಮಾಡಿ – epfindia.gov.in; – ‘Service’ಗೆ ತೆರಳಿ ಮತ್ತು ಡ್ರಾಪ್‌ಡೌನ್‌ನಲ್ಲಿ ‘For Employees’ ಎಂಬುದನ್ನು ಆಯ್ಕೆ ಮಾಡಿ; – ‘Member UAN/ಆನ್ಲೈನ್ Services (OCS/OTCP)’ ಕ್ಲಿಕ್ ಮಾಡಿ; – UAN ಮತ್ತು ಪಾಸ್‌ವರ್ಡ್ ಲಾಗಿನ್ ಮಾಡಿ; – ‘Manage’ ಟ್ಯಾಬ್ ಅಡಿಯಲ್ಲಿ ‘ಇ-ನಾಮಿನೇಷನ್’ ಆಯ್ಕೆ ಮಾಡಿ; – ಕುಟುಂಬ ಘೋಷಣೆಯನ್ನು ನವೀಕರಿಸಲು ‘Yes’ ಮೇಲೆ ಕ್ಲಿಕ್ ಮಾಡಿ; – ಒಟ್ಟು ಕುಟುಂಬದಲ್ಲಿ ಯಾರಿಗೆ ಎಷ್ಟು ಮೊತ್ತ ಎಂಬುದನ್ನು ಘೋಷಿಸಲು ‘ಕುಟುಂಬದ ವಿವರಗಳನ್ನು ಸೇರಿಸಿ’ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ‘ನಾಮನಿರ್ದೇಶನ ವಿವರಗಳು’ ಮೇಲೆ ಕ್ಲಿಕ್ ಮಾಡಿ; – ಘೋಷಣೆಯ ನಂತರ, ‘ಸೇವ್ ಇಪಿಎಫ್ ನಾಮಿನೇಷನ್’ ಮೇಲೆ ಕ್ಲಿಕ್ ಮಾಡಿ; – ಒಟಿಪಿ ಜನರೇಟ್ ಮಾಡುವುದಕ್ಕೆ ‘ಇ-ಸೈನ್’ ಮೇಲೆ ಕ್ಲಿಕ್ ಮಾಡಿ; – ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿದ ನಿಮ್ಮ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ; – OTP ಸಲ್ಲಿಸಿ ಮತ್ತು ಈಗ ಇ- ನಾಮಿನೇಷನ್ EPFOದಲ್ಲಿ ನೋಂದಾಯಿಸಿರುತ್ತದೆ
ಇಪಿಎಫ್‌ಒ ಚಂದಾದಾರರು ತಮ್ಮ ಇ-ನಾಮಿನೇಷನ್‌ನಲ್ಲಿ ಒಂದಕ್ಕಿಂತ ಹೆಚ್ಚು ನಾಮಿನಿಯನ್ನು ಸೇರಿಸಬಹುದು. ಇಪಿಎಫ್, ಇಪಿಎಸ್ ನಾಮನಿರ್ದೇಶನವನ್ನು ಡಿಜಿಟಲ್ ಆಗಿ ಸಲ್ಲಿಸಿದ ನಂತರ ಯಾವುದೇ ಭೌತಿಕ (Physical) ದಾಖಲೆಗಳ ಅಗತ್ಯವಿಲ್ಲ. ಈ ಇ-ನಾಮಿನೇಷನ್ ಸೇವೆಯನ್ನು ಪಿಎಫ್ ಚಂದಾದಾರರಿಗಾಗಿ ಇಪಿಎಫ್ಒ ಆರಂಭಿಸಿದೆ. ಈ ಪ್ರಕ್ರಿಯೆಯು ಸರಿಯಾಗಿ ಪೂರ್ಣಗೊಂಡ ನಂತರ, ನಾಮಿನಿಯ ಹೆಸರು, ಹುಟ್ಟಿದ ದಿನಾಂಕದಂತಹ ಇತರ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡಲಾಗುತ್ತದೆ.
ಇದನ್ನೂ ಓದಿ: PF Balance Check: ದೀಪಾವಳಿಗೂ ಮುನ್ನ 6 ಕೋಟಿ ಖಾತೆಗಳಿಗೆ ಬರಲಿದೆ ಶೇ 8.5ರ ಪಿಎಫ್ ಬಡ್ಡಿ; ಬ್ಯಾಲೆನ್ಸ್ ಚೆಕ್ ಹೇಗೆ?