AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಘಟಿತ ವಲಯದ ಕಾರ್ಮಿಕರಿಗೆ ಹೊಸ ಪಿಂಚಣಿ ಯೋಜನೆ: ಇಪಿಎಫ್​ಒ ಚಿಂತನೆ

ಕಾರ್ಮಿಕರು ನಿವೃತ್ತಿಯ ನಂತರ ಹೆಚ್ಚು ಪಿಂಚಣಿ ಬಯಸುವ ಕಾರಣ ಹೊಸ ಪಿಂಚಣಿ ಯೋಜನೆಯನ್ನು ರೂಪಿಸಲು ಪಿಎಫ್ ಚಿಂತನೆ ನಡೆಸಿದೆ ಎಂದು ಮೂಲಗಳು ಹೇಳಿವೆ.

ಸಂಘಟಿತ ವಲಯದ ಕಾರ್ಮಿಕರಿಗೆ ಹೊಸ ಪಿಂಚಣಿ ಯೋಜನೆ: ಇಪಿಎಫ್​ಒ ಚಿಂತನೆ
ಮಹಿಳಾ ಕಾರ್ಮಿಕರು ಮತ್ತು ಇಪಿಎಫ್​ಒ (ಪ್ರಾತಿನಿಧಿಕ ಚಿತ್ರ)
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Feb 20, 2022 | 6:24 PM

Share

ನವದೆಹಲಿ: ನಿವೃತ್ತಿಯ ನಂತರ ಕಾರ್ಮಿಕರಿಗೆ ಆರ್ಥಿಕ ಭದ್ರತೆ ಕಲ್ಪಿಸುವ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯು (Employees Provident Fund Organisation – EPFO) ಸಂಘಟಿತ ವಲಯದಲ್ಲಿ 15 ಸಾವಿರ ರೂಪಾಯಿಗಿಂತ ಹೆಚ್ಚು ಮೂಲ ವೇತನ ಇರುವ ಕಾಮಿರ್ಕರಿಗೆ ಹೊಸ ರೀತಿಯ ಪಿಂಚಣಿ ಯೋಜನೆಯನ್ನು ರೂಪಿಸಲು ಮುಂದಾಗಿದೆ.  1995ರ ಕಾರ್ಮಿಕರ ಪಿಂಚಣಿ ಯೋಜನೆಗೆ ಕಡ್ಡಾಯವಾಗಿ ಒಳಪಡದವರಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಈ ಯೋಜನೆ ರೂಪಿಸಿದೆ. ಕಾರ್ಮಿಕರು ನಿವೃತ್ತಿಯ ನಂತರ ಹೆಚ್ಚು ಪಿಂಚಣಿ ಬಯಸುವ ಕಾರಣ ಹೊಸ ಪಿಂಚಣಿ ಯೋಜನೆಯನ್ನು ರೂಪಿಸಲು ಪಿಎಫ್ ಚಿಂತನೆ ನಡೆಸಿದೆ. ಈ ಬಗ್ಗೆ ಮಾರ್ಚ್​ 11 ಮತ್ತು 12ರಂದು ಗುವಾಹಟಿಯಲ್ಲಿ ನಡೆಯುವ ಪಿಎಫ್​ ಟ್ರಸ್ಟಿಗಳ ಕೇಂದ್ರೀಯ ಮಂಡಳಿಯ (The Central Board of Trustees – CBT) ಸಭೆಯಲ್ಲಿ ಈ ಸಂಬಂಧದ ಚರ್ಚೆ ನಡೆಯಲಿದೆ. ಪಿಂಚಣಿ ಕುರಿತಂತೆ 2021ರ ನವೆಂಬರ್​ನಲ್ಲಿ ಸಿಬಿಟಿ ರಚಿಸಿದ್ದ ಉಪಸಮಿತಿಯ ವರದಿ ಕೂಡ ಈ ಸಭೆಯಲ್ಲಿ ಮಂಡನೆ ಆಗಲಿದೆ ಎಂದು ಮೂಲಗಳು ತಿಳಿಸಿವೆ.

ಮೂಲವೇತನ ಮತ್ತು ತುಟ್ಟಿಭತ್ಯೆ ಸೇರಿ 15 ಸಾವಿರ ರೂಪಾಯಿಗಿಂತ ಹೆಚ್ಚು ವೇತನ ಪಡೆಯುವ ಕಾಮಿರ್ಕರು 1995ರ ಪಿಂಚಣಿ ಯೋಜನೆಗೆ ಕಡ್ಡಾಯವಾಗಿ ಒಳಪಡುತ್ತಾರೆ. ಇವರು ಶೇ. 8.33 ದರದಲ್ಲಿ ಕಡಿಮೆ ವಂತಿಗೆಯನ್ನು ಪಿಂಚಣಿ ನಿಧಿಗೆ ಪಾವತಿಸುತ್ತಿರುವ ಕಾರಣ ನಿವೃತ್ತಿಯ ನಂತರ ಕಡಿಮೆ ಪಿಂಚಣಿ ಪಡೆಯುತ್ತಾರೆ. ಇದಕ್ಕೆ 2014ರಲ್ಲಿ ತಿದ್ದುಪಡಿ ತಂದ ಪಿಎಫ್ ಸಂಘಟನೆಯು ಪಿಂಚಣಿ ಪಡೆಯುವುದಕ್ಕೆ 15 ಸಾವಿರ ರೂಪಾಯಿ ಮೂಲವೇತನದ ಮಿತಿಯನ್ನು ಹಾಕಿತು.

ಉದ್ಯೋಗಕ್ಕೆ ಸೇರುವ ವೇಳೆಗೆ 15 ಸಾವಿರ ರೂಪಾಯಿ ಮೂಲ ವೇತನ ಇದ್ದವರಿಗೆ ಮಾತ್ರ ಇದು ಅನ್ವಯ ಆಗುತ್ತಿತ್ತು. ಅದಕ್ಕೂ ಮೊದಲು 6,500 ರೂಪಾಯಿ ಮೂಲ ವೇತನ ಇದ್ದವರನ್ನು ಮಾತ್ರ ಪಿಂಚಣಿಗೆ ಪರಿಗಣಿಸಲಾಗುತ್ತಿತ್ತು. ಪಿಂಚಣಿಗೆ ಪರಿಗಣಿತವಾಗುವ ಮೂಲ ವೇತನವನ್ನು ಪರಿಷ್ಕರಣೆ ಮಾಡಿದ್ದರಿಂದ ಈ ಯೋಜನೆಗೆ ಒಳಪಡುವ ಕಾಮಿರ್ಕರ ಸಂಖ್ಯೆ 50 ಲಕ್ಷ ತಲುಪಿದೆ ಎಂದು ಅಂದಾಜು ಮಾಡಲಾಗಿದೆ. ಆದರೆ, ಕನಿಷ್ಠ ಮೂಲವೇತನವನ್ನು 15 ಸಾವಿರ ರೂಪಾಯಿಯ ಬದಲಿಗೆ 25 ಸಾವಿರ ರೂಪಾಯಿಗೆ ಏರಿಸಬೇಕು ಎಂಬ ಪ್ರಸ್ತಾವ ಕೂಡ ಇಪಿಎಫ್​ಒ ಮುಂದೆ ಇದೆ. ಆದರೆ, ಈ ಬಗ್ಗೆ ಈವರೆಗೆ ಯಾವುದೇ ನಿರ್ಧಾರ ಆಗಿಲ್ಲ.

ಇದನ್ನೂ ಓದಿ: EPFO e-nomination: ಇಪಿಎಫ್​ಒ ಇ-ನಾಮಿನೇಷನ್ ಮಾಡುವುದು ಹೇಗೆ ಎಂಬ ಬಗ್ಗೆ ಹಂತಹಂತವಾದ ಮಾಹಿತಿ ಇಲ್ಲಿದೆ

ಇದನ್ನೂ ಓದಿ: PPF Vs NPS: ಪಿಪಿಎಫ್​ ವರ್ಸಸ್ ಎನ್​ಪಿಎಸ್​ ಇವೆರಡರಲ್ಲಿ ಯಾವ ಹೂಡಿಕೆ ಉತ್ತಮ?

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?