EPFO e-nomination: ಇಪಿಎಫ್‌ಒ ಇ-ನಾಮಿನೇಷನ್ ಮಾಡುವುದು ಹೇಗೆ ಎಂಬ ಬಗ್ಗೆ ಹಂತಹಂತವಾದ ಮಾಹಿತಿ ಇಲ್ಲಿದೆ
ಇಪಿಎಫ್‌ಒ ನಾಮಿನೇಷನ್ ಸಲ್ಲಿಸುವುದಕ್ಕೆ ಡಿಸೆಂಬರ್ 31, 2021 ಕೊನೆ ದಿನವಾಗಿದೆ. ಚಂದಾದಾರರು ಸಲ್ಲಿಸುವುದು ಹೇಗೆ ಮತ್ತು ಹಂತಹಂತವಾದ ವಿವರ ಈ ಲೇಖನದಲ್ಲಿ ಇದೆ.
ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಎಲ್ಲ ಖಾತೆದಾರರಿಗೆ ಡಿಸೆಂಬರ್ 31ರೊಳಗೆ ನಾಮಿನಿಯನ್ನು ಸೇರ್ಪಡೆ ಮಾಡುವಂತೆ ಸೂಚನೆ ನೀಡಿದೆ. ಒಂದು ವೇಳೆ ಖಾತೆದಾರರು ನಾಮಿನಿಯನ್ನು ಮಾಡದಿದ್ದಲ್ಲಿ ಅಂಥವರಿಗೆ ಇಪಿಎಫ್‌ಒದಿಂದ ನೀಡುವ ವಿವಿಧ ಪ್ರಯೋಜನಗಳು ದೊರಯುವುದಿಲ್ಲ. ಇಪಿಎಫ್‌ಒ ಸೂಚಿಸಿದಂತೆ ಕೆಲವು ಹಂತಗಳನ್ನು ಅನುಸರಿಸುವ ಮೂಲಕ ಚಂದಾದಾರರು ಆನ್‌ಲೈನ್‌ನಲ್ಲಿ ನಾಮಿನಿ ಸೇರ್ಪಡೆ ಮಾಡಬಹುದು. ಚಂದಾದಾರರ ಅಕಾಲಿಕ ಮರಣದ ಸಂದರ್ಭದಲ್ಲಿ, ನಾಮಿನಿ ಯಾರಿರುತ್ತಾರೆ ಅವರಿಗೆ ಮಾತ್ರ ಇಪಿಎಫ್ದಲ್ಲಿನ ಉಳಿತಾಯದ ಮೊತ್ತಕ್ಕೆ ಹಕ್ಕನ್ನು ಹೊಂದಿರುತ್ತಾರೆ. ಅಂದಹಾಗೆ ಇಪಿಎಫ್‌ಒ ಖಾತೆದಾರರು ಹಲವು ನಾಮಿನಿಗಳನ್ನು ಮಾಡಬಹುದು ಮತ್ತು ಅಕಾಲಿಕ ಸಾವು ಸಂಭವಿಸಿದ ಸನ್ನಿವೇಶದಲ್ಲಿ ಪ್ರತಿ ನಾಮಿನಿಗೆ ಶೇಕಡಾವಾರು ಪ್ರಮಾಣ ಇಷ್ಟು ಎಂದು ಸೂಚಿಸಲೂಬಹುದು.
ಆನ್‌ಲೈನ್‌ನಲ್ಲಿ ನಾಮಿನಿಯನ್ನು ಸೇರ್ಪಡೆ ಮಾಡುವುದು ಹೇಗೆ? ಇಪಿಎಫ್‌ಒ ವೆಬ್‌ಸೈಟ್‌ಗೆ ಭೇಟಿ ನೀಡಿ >> ಸರ್ವೀಸಸ್ >> ಫಾರ್ ಎಂಪ್ಲಾಯೀಸ್ >> “ಮೆಂಬರ್ UAN/ಆನ್‌ಲೈನ್ ಸರ್ವೀಸಸ್’ ಕ್ಲಿಕ್ ಮಾಡಬೇಕು.
ಹಂತ 2 “UAN ಮತ್ತು ಪಾಸ್‌ವರ್ಡ್”ನೊಂದಿಗೆ ಲಾಗಿನ್ ಮಾಡಬೇಕು.
ಹಂತ 3 ‘ಮ್ಯಾನೇಜ್ ಟ್ಯಾಬ್’ ಅಡಿಯಲ್ಲಿ ‘ಇ-ನಾಮಿನೇಷನ್’ ಆಯ್ಕೆ ಮಾಡಬೇಕು.
ಹಂತ 4 ‘ಪ್ರೊವೈಡ್ ಡೀಟೇಲ್ಸ್’ ಟ್ಯಾಬ್ ಪರದೆಯ ಮೇಲೆ ಕಾಣಿಸುತ್ತದೆ. ‘ಸೇವ್’ ಕ್ಲಿಕ್ ಮಾಡಬೇಕು.
ಹಂತ 5 ಕುಟುಂಬದ ಘೋಷಣೆಯನ್ನು ಅಪ್ಡೇಟ್ ಮಾಡುವುದಕ್ಕೆ ‘ಯೆಸ್’ ಕ್ಲಿಕ್ ಮಾಡಬೇಕು.
ಹಂತ 6 ಕುಟುಂಬದ ವಿವರಗಳನ್ನು ಸೇರಿಸಿ ಕ್ಲಿಕ್ ಮಾಡಬೇಕು. (ಒಂದಕ್ಕಿಂತ ಹೆಚ್ಚು ನಾಮಿನಿಗಳನ್ನು ಸೇರಿಸಬಹುದು)
ಹಂತ 7 ಷೇರಿನ ಒಟ್ಟು ಮೊತ್ತವನ್ನು ಘೋಷಿಸಲು ‘ನಾಮಿನೇಷನ್ ಡೀಟೇಲ್ಸ್’ ಕ್ಲಿಕ್ ಮಾಡಬೇಕು. “ಇಪಿಎಫ್ ನಾಮಿನೇಷನ್ ಸೇವ್” ಕ್ಲಿಕ್ ಮಾಡಬೇಕು.
ಹಂತ 8 OTPಗಾಗಿ ‘E-sign’ ಕ್ಲಿಕ್ ಮಾಡಬೇಕು. ಆಧಾರ್‌ನೊಂದಿಗೆ ಜೋಡಣೆ ಮಾಡಲಾದ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ OTP ಅನ್ನು ಸಲ್ಲಿಸಬೇಕು.
ಇಪಿಎಫ್‌ಒ ಅಕ್ಟೋಬರ್‌ನಲ್ಲಿ 12.73 ಲಕ್ಷ ನಿವ್ವಳ ಚಂದಾದಾರರನ್ನು ಸೇರ್ಪಡೆ ಮಾಡಿದೆ. ಇತ್ತೀಚಿನ ವೇತನದಾರರ ಮಾಹಿತಿಯ ಪ್ರಕಾರ, ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಶೇ 10.22ರಷ್ಟು ಹೆಚ್ಚಳವನ್ನು ದಾಖಲಿಸಿದೆ. “2021 ರ ಡಿಸೆಂಬರ್ 20 ರಂದು ಬಿಡುಗಡೆಯಾದ EPFO ತಾತ್ಕಾಲಿಕ ವೇತನದಾರರ ಡೇಟಾವು EPFO ಅಕ್ಟೋಬರ್ 2021ರಲ್ಲಿ 12.73 ಲಕ್ಷ ನಿವ್ವಳ ಚಂದಾದಾರರನ್ನು ಸೇರ್ಪಡೆ ಮಾಡಿದೆ ಎಂದು ತೋರಿಸುತ್ತದೆ,” ಎಂಬ ಮಾಹಿತಿಯನ್ನು ಕಾರ್ಮಿಕ ಸಚಿವಾಲಯದ ಹೇಳಿಕೆ ತಿಳಿಸಿದೆ. 7.57 ಲಕ್ಷ ಹೊಸ ಸದಸ್ಯರನ್ನು ಮೊದಲ ಬಾರಿಗೆ ಇಪಿಎಫ್ ಮತ್ತು ಎಂಪಿ ಕಾಯ್ದೆ, 1952ರ ಅಡಿಯಲ್ಲಿ ನೋಂದಾಯಿಸಲಾಗಿದೆ.
ಇದನ್ನೂ ಓದಿ: PF Transfer: 6 ಹಂತಗಳಲ್ಲಿ ಆನ್‌ಲೈನ್‌ನಲ್ಲಿ ಪಿಎಫ್ ವರ್ಗಾವಣೆ ಮಾಡುವುದರ ಮಾಹಿತಿ ಇಲ್ಲಿದೆ