AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PF Transfer: 6 ಹಂತಗಳಲ್ಲಿ ಆನ್​ಲೈನ್​ನಲ್ಲಿ ಪಿಎಫ್ ವರ್ಗಾವಣೆ ಮಾಡುವುದರ ಮಾಹಿತಿ ಇಲ್ಲಿದೆ

ಆನ್​ಲೈನ್​ನಲ್ಲಿ ಪಿಎಫ್​ ವರ್ಗಾವಣೆಯನ್ನು 6 ಹಂತಗಳಲ್ಲಿ ಸುಲಭವಾಗಿ ಮಾಡುವುದು ಹೇಗೆ ಎಂಬ ಬಗ್ಗೆ ವಿವರ ಈ ಲೇಖನದಲ್ಲಿ ಇದೆ.

PF Transfer: 6 ಹಂತಗಳಲ್ಲಿ ಆನ್​ಲೈನ್​ನಲ್ಲಿ ಪಿಎಫ್ ವರ್ಗಾವಣೆ ಮಾಡುವುದರ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Dec 25, 2021 | 2:05 PM

Share

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಸೇವೆಗಳನ್ನು ಸರಳಗೊಳಿಸಲು ವಿಭಿನ್ನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಡಿಜಿಟಲ್ ಇಂಡಿಯಾ ಕಾರ್ಯಕ್ರಮವನ್ನು ಉತ್ತೇಜಿಸುವ ಪ್ರಯತ್ನವಾಗಿ ಇಪಿಎಫ್‌ಒ ತನ್ನ ವಿವಿಧ ಸೇವೆಗಳನ್ನು ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ತರುವಲ್ಲಿ ನಿರತವಾಗಿದೆ. ಈಗ ಇಪಿಎಫ್​ಒ ​​ಸದಸ್ಯ ಪೋರ್ಟಲ್ – unifiedportal-mem.epfindia.gov.in/memberinterfaceನಲ್ಲಿ ಲಾಗ್ ಇನ್ ಮಾಡುವ ಮೂಲಕ ​​ಸದಸ್ಯರು ಹೆಚ್ಚಿನ ಇಪಿಎಫ್​ಒ ​​ಸೇವೆಗಳನ್ನು ಆನ್‌ಲೈನ್‌ನಲ್ಲಿ ಪಡೆಯಬಹುದು. ಇಪಿಎಫ್ ವರ್ಗಾವಣೆ ಆನ್‌ಲೈನ್ ಇಪಿಎಫ್​ಒ ​​ಸೇವೆಗಳಲ್ಲಿ ಒಂದಾಗಿದೆ. ಇದನ್ನು ಇಪಿಎಫ್​ಒ ​​ಸದಸ್ಯ ಪೋರ್ಟಲ್‌ನಲ್ಲಿ ಲಾಗ್ ಇನ್ ಆಗುವ ಮೂಲಕ ಆನ್‌ಲೈನ್‌ನಲ್ಲಿ ಮಾಡಬಹುದಾಗಿದೆ. ಭವಿಷ್ಯ ನಿಧಿ ಅಥವಾ ಪಿಎಫ್ ಖಾತೆ ವರ್ಗಾವಣೆಯನ್ನು ಆನ್‌ಲೈನ್‌ನಲ್ಲಿ ಹೆಚ್ಚು ಸರಳಗೊಳಿಸಲು ಇಪಿಎಫ್​ಒ ​​ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ 6 ಸರಳ ಹಂತಗಳನ್ನು ಸೂಚಿಸಿದೆ.

ಈಗ ಇಪಿಎಫ್ ಖಾತೆದಾರನು ತಮ್ಮ ಹಿಂದಿನ ಮತ್ತು ಪ್ರಸ್ತುತ ಉದ್ಯೋಗದಾತರ ಕಚೇರಿಗೆ ಸುತ್ತಾಡದೆ ಪಿಎಫ್​ ಖಾತೆಯನ್ನು ಆನ್‌ಲೈನ್‌ನಲ್ಲಿ ವರ್ಗಾಯಿಸಬಹುದು. ಇಪಿಎಫ್​ಒ ಹೇಳಿಕೊಂಡಿರುವ ಪ್ರಕಾರ, 6 ಸರಳ ಹಂತಗಳನ್ನು ಅನುಸರಿಸಿದ ನಂತರ ಇಪಿಎಫ್ ಖಾತೆದಾರರು ನಿವೃತ್ತಿ ನಿಧಿಯಲ್ಲಿ ಹೂಡಿಕೆಯನ್ನು ಮುಂದುವರಿಸಲು ಸಾಧ್ಯವಾಗುತ್ತದೆ. ಭವಿಷ್ಯ ನಿಧಿ ನಿಯಂತ್ರಕ ಸಂಸ್ಥೆಯು ಇತ್ತೀಚೆಗೆ ಆನ್‌ಲೈನ್ ಇಪಿಎಫ್ ಖಾತೆ ವರ್ಗಾವಣೆಯ ಕುರಿತು ಟ್ವೀಟ್ ಮಾಡಿದ್ದು, ಇಪಿಎಫ್‌ಒ ಚಂದಾದಾರರಿಗೆ ಕೆಳಗೆ ತಿಳಿಸಲಾದ 6 ಸರಳ ಹಂತಗಳನ್ನು ಸಲಹೆ ಮಾಡಿದೆ:

1] ಇಪಿಎಫ್​ಒ ​​ಸದಸ್ಯ ಪೋರ್ಟಲ್‌ನಲ್ಲಿ ಲಾಗಿನ್ ಮಾಡಬೇಕು — unifiedportal-mem.epfindia.gov.in/memberinterface/ — ಮತ್ತು UAN ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಮಾಡಬೇಕು; 2] ‘ಆನ್‌ಲೈನ್ ಸರ್ವೀಸಸ್​’ಗೆ ತೆರಳಿ ಮತ್ತು ‘ಒನ್ ಮೆಂಬರ್ ಒನ್ ಅಕೌಂಟ್(ವರ್ಗಾವಣೆ ವಿನಂತಿ)’ ಕ್ಲಿಕ್ ಮಾಡಬೇಕು; 3] ಪ್ರಸ್ತುತ ಉದ್ಯೋಗಕ್ಕಾಗಿ ‘ವೈಯಕ್ತಿಕ ಮಾಹಿತಿ’ ಮತ್ತು ‘PF ಖಾತೆ’ ಪರಿಶೀಲಿಸಬೇಕು; 4] ‘ವಿವರಗಳನ್ನು ಪಡೆಯಿರಿ’ನಲ್ಲಿ ಕ್ಲಿಕ್ ಮಾಡಬೇಕು, ಹಿಂದಿನ ಉದ್ಯೋಗದ ಪಿಎಫ್​ ಖಾತೆಯ ವಿವರಗಳು ಕಾಣಿಸುತ್ತವೆ; 5] ಫಾರ್ಮ್ ಅನ್ನು ದೃಢೀಕರಿಸಲು ‘ಹಿಂದಿನ ಉದ್ಯೋಗದಾತ’ ಅಥವಾ ‘ಪ್ರಸ್ತುತ ಉದ್ಯೋಗದಾತ’ ಆಯ್ಕೆ ಮಾಡಬೇಕು; ಮತ್ತು 6] ನಿಮ್ಮ UAN ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ OTP ಸ್ವೀಕರಿಸಲು ‘OTP ಪಡೆಯಿರಿ’ ಎಂಬುದರ ಮೇಲೆ ಕ್ಲಿಕ್ ಮಾಡಬೇಕು. OTP ನಮೂದಿಸಿ ಮತ್ತು ‘ಸಲ್ಲಿಸು’ (Submit) ಬಟನ್ ಕ್ಲಿಕ್ ಮಾಡಬೇಕು.

ಆಯ್ಕೆ ಮಾಡಿದ ನೇಮಕಾತಿದಾರರಿಂದ ದೃಢೀಕರಣದ ನಂತರ ಇಪಿಎಫ್​ಒದಿಂದ ಇಪಿಎಫ್​ ಖಾತೆಯನ್ನು ಆನ್‌ಲೈನ್‌ನಲ್ಲಿ ವರ್ಗಾಯಿಸುತ್ತದೆ ಮತ್ತು ಅಸ್ತಿತ್ವದಲ್ಲಿರುವ ಇಪಿಎಫ್​ ಖಾತೆಯಲ್ಲಿ ಮಾಸಿಕ ಇಪಿಎಫ್​ ಕೊಡುಗೆಯನ್ನು ಮುಂದುವರಿಸಲು ಮತ್ತು ನಿಮ್ಮ ಹೊಸ ಖಾತೆಯನ್ನು ಸಕ್ರಿಯಗೊಳಿಸುವುದಕ್ಕೆ ಸಾಧ್ಯಗೊಳಿಸುತ್ತದೆ.

ಇದನ್ನೂ ಓದಿ: EPFO: ಡಿಸೆಂಬರ್​ ತಿಂಗಳ ಕೊನೆಯೊಳಗೆ ಇಪಿಎಫ್ ಚಂದಾದಾರರು ಈ ಜವಾಬ್ದಾರಿ ಪೂರ್ಣಗೊಳಿಸಿ​

‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ