Price hike: ಎಲೆಕ್ಟ್ರಾನಿಕ್ಸ್​ನಿಂದ ಕಾರಿನ ತನಕ ಹೊಸ ವರ್ಷದಲ್ಲಿ ಬೆಲೆ ಏರಿಕೆಗೆ ಸಿದ್ಧತೆ

2022ರ ಜನವರಿಯಿಂದ ಮತ್ತೊಂದು ಸುತ್ತಿನ ಬೆಲೆ ಏರಿಕೆ ಮಾಡುವ ಸಾಧ್ಯತೆ ಇದೆ. ಯಾವ ಕಾರಣಕ್ಕೆ ಬೆಲೆ ಏರಿಕೆ ಆಗಬಹುದು ಎಂಬ ಬಗ್ಗೆ ವಿವರಣೆ ಇಲ್ಲಿದೆ.

Price hike: ಎಲೆಕ್ಟ್ರಾನಿಕ್ಸ್​ನಿಂದ ಕಾರಿನ ತನಕ ಹೊಸ ವರ್ಷದಲ್ಲಿ ಬೆಲೆ ಏರಿಕೆಗೆ ಸಿದ್ಧತೆ
ಸಾಂದರ್ಭಿಕ ಚಿತ್ರ
Follow us
| Updated By: Srinivas Mata

Updated on:Dec 25, 2021 | 8:15 PM

ಭಾರತದ ದೊಡ್ಡ ಉತ್ಪಾದನೆ ಮತ್ತು ಗ್ರಾಹಕ ಸರಕುಗಳ ಕಂಪೆನಿಗಳು ಮುಂದಿನ ಕೆಲವು ತಿಂಗಳಲ್ಲಿ ಮತ್ತೊಂದು ಬೆಲೆ ಹೆಚ್ಚಳವನ್ನು ಮಾಡುವ ಬಗ್ಗೆ ಆಲೋಚನೆ ಮಾಡುತ್ತಿವೆ. ಈ ವರ್ಷದ ಆರಂಭದಲ್ಲಿ ಈಗಾಗಲೇ ಕನಿಷ್ಠ ಎರಡು-ಮೂರು ಹೆಚ್ಚಳವನ್ನು ಮಾಡಿವೆ. ಏಕೆಂದರೆ ಹೆಚ್ಚಿನ ಇನ್​ಪುಟ್ ಮತ್ತು ಸರಕು ಸಾಗಣೆ ವೆಚ್ಚಗಳು ಹಾಗೂ ಪೂರೈಕೆ ಅಡೆತಡೆಗಳಿಂದಾಗಿ ಮಾರ್ಜಿನ್​ ಅನ್ನು ಕಳೆದುಕೊಳ್ಳುತ್ತಿವೆ. ಮಾರಾಟಕ್ಕೆ ಹೊಡೆತ ನೀಡುತ್ತದೆ ಎಂಬ ಅಂದಾಜಿದ್ದರೂ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ (ಎಫ್‌ಎಂಸಿಜಿ) ಕಂಪೆನಿಗಳು ಮುಂದಿನ ಮೂರು ತಿಂಗಳಲ್ಲಿ ಬೆಲೆಗಳನ್ನು ಶೇ 4ರಿಂದ 10ರ ತನಕ ಹೆಚ್ಚಿಸಬಹುದು ಎಂದು ಹೇಳಿವೆ.

ಗ್ರಾಹಕ ಎಲೆಕ್ಟ್ರಾನಿಕ್ ಕಂಪೆನಿಗಳು ಈಗಾಗಲೇ ರೆಫ್ರಿಜರೇಟರ್‌ಗಳು, ವಾಷಿಂಗ್ ಮೆಷಿನ್‌ಗಳು ಮತ್ತು ಏಸಿಗಳ ಮೇಲೆ ಈ ತಿಂಗಳು ಶೇ 3ರಿಂದ 5ರಷ್ಟು ಬೆಲೆಗಳನ್ನು ಹೆಚ್ಚಿಸಿವೆ. ಮುಂದಿನ ತಿಂಗಳಿನಿಂದ ಶೇ 6ರಿಂದ 10ರಷ್ಟು ಮತ್ತೊಂದು ಸುತ್ತಿನ ಹೆಚ್ಚಳವನ್ನು ಅಂತಿಮಗೊಳಿಸಿವೆ. ಇದು 2020ರ ಡಿಸೆಂಬರ್ ಈಚೆಗೆ ವೈಟ್​ ಗೂಡ್ಸ್​ಗಳ ಮೇಲೆ ನಾಲ್ಕನೇ ಸುತ್ತಿನ ಬೆಲೆ ಹೆಚ್ಚಳವಾಗಿದೆ. ಉದ್ಯಮಕ್ಕೆ ಇದು ದಾಖಲೆಯಾಗಿದೆ. ದೇಶದ ವಾಹನ ತಯಾರಕರು ಕೂಡ ಬೆಲೆ ಏರಿಕೆಯನ್ನು ಜಾರಿಗೆ ತಂದಿದ್ದಾರೆ ಮತ್ತು ಅವುಗಳನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಕೋಕಿಂಗ್ ಕಲ್ಲಿದ್ದಲು ಮತ್ತು ಇತರ ಇನ್‌ಪುಟ್ ವೆಚ್ಚಗಳು ಸ್ವಲ್ಪ ಕಡಿಮೆಯಾದರೂ ಉಕ್ಕು ತಯಾರಕರಿಂದ ಅವರು ಯಾವುದೇ ವಿನಾಯಿತಿ ಪಡೆಯುವ ಸಾಧ್ಯತೆಯಿಲ್ಲ.

ಶೇ 4ರಷ್ಟು ಬೆಲೆಗಳನ್ನು ಹೆಚ್ಚಿಸಲಾಗಿದೆ ಹಾಗೂ ಮತ್ತೊಂದು ಬೆಲೆ ಏರಿಕೆ ಸಾಧ್ಯತೆ ಇದೆ ಎಂದು ಡಾಬರ್ ಹೇಳಿದೆ. “ಒಂದು ವೇಳೆ ಒತ್ತಡ ಹೆಚ್ಚಾದರೆ ಮತ್ತು ಹಣದುಬ್ಬರ ಕಡಿಮೆ ಆಗದಿದ್ದರೆ ನಾಲ್ಕನೇ ತ್ರೈಮಾಸಿಕದಲ್ಲಿ ಮತ್ತೊಂದು ಸುತ್ತಿನ ಬೆಲೆ ಏರಿಕೆಯನ್ನು ಮಾಡಬೇಕಾಗುತ್ತದೆ,” ಎಂದು ಕಂಪೆನಿಯ ಸಿಇಒ ಹೇಳಿದ್ದಾರೆ. ಕಳೆದ ಎರಡು ತ್ರೈಮಾಸಿಕಗಳಲ್ಲಿ ಕಚ್ಚಾ, ತಾಳೆ ಎಣ್ಣೆ ಮತ್ತು ಪ್ಯಾಕೇಜಿಂಗ್ ವೆಚ್ಚಗಳು ಕಳೆದ ವರ್ಷಕ್ಕಿಂತ ದ್ವಿಗುಣಗೊಂಡ ನಂತರ ಹಿಂದೂಸ್ತಾನ್ ಯುನಿಲಿವರ್, ಡಾಬರ್, ಬ್ರಿಟಾನಿಯಾ, ಮಾರಿಕೊ ಮತ್ತು ಇತರ ಕಂಪೆನಿಗಳು ಬೆಲೆಗಳನ್ನು ಶೇ 5ರಿಂದ 12ರಷ್ಟು ಹೆಚ್ಚಿಸಿವೆ.

ಬೆಲೆ ಏರಿಕೆ ಅನಿವಾರ್ಯ “ಹೆಚ್ಚಿದ ಬೆಲೆಗಳ ಹೊರತಾಗಿಯೂ ಲಾಭದ ಮಾರ್ಜಿನ್ ಇಳಿದಿದೆ. ಇದನ್ನು ಮುಖ್ಯವಾಗಿ ಪ್ಯಾಕೇಜ್​ಗೆ ಬಳಸುವ ವಸ್ತುವಿನ ವೆಚ್ಚ ಕಡಿಮೆ ಮಾಡುವ ಮೂಲಕ ಮಾಡಲಾಗುತ್ತದೆ,” ಎಂದು ಭಾರತದ ಅತಿದೊಡ್ಡ ಆಹಾರ ಕಂಪೆನಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. “ಕಚ್ಚಾ ವಸ್ತುಗಳ ಬೆಲೆಯಲ್ಲಿ ಸ್ವಲ್ಪ ಕುಸಿತದ ಹೊರತಾಗಿಯೂ ಸ್ಪಷ್ಟವಾಗಿ ಯಾವುದೇ ಬಿಡುವು ಇಲ್ಲ ಮತ್ತು ನಾವು ಮುಂದಿನ ತ್ರೈಮಾಸಿಕದಲ್ಲಿ ಮತ್ತೊಂದು ಶೇ 4ರಿಂದ 5ರಷ್ಟು ಬೆಲೆಗಳನ್ನು ಹೆಚ್ಚಿಸಬೇಕಾಗಿದೆ,” ಎಂದು ಅವರು ಹೇಳಿದ್ದಾರೆ. ನೀಲ್ಸನ್ ಪ್ರಕಾರ, ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಎಫ್‌ಎಂಸಿಜಿ ಮಾರುಕಟ್ಟೆಯು ಶೇ 12ರಷ್ಟು ವಿಸ್ತರಿಸಿದೆ. ಆದರೆ ಶೇ 90ರ ಬೆಳವಣಿಗೆಯು ಬೆಲೆ ಪರಿಷ್ಕರಣೆಗಳಿಂದ ನಡೆದಿದೆ. ಆದರೆ ಉಳಿದವು ಪರಿಮಾಣದಿಂದ (ವಾಲ್ಯೂಮ್) ಮುನ್ನಡೆಸಿದೆ – ಖರೀದಿಸಿದ ಅಥವಾ ಬಳಸಿದ ಉತ್ಪನ್ನಗಳ ಯೂನಿಟ್​ ಸಂಖ್ಯೆಯಿಂದ.

ಉಕ್ಕು, ತಾಮ್ರ, ಅಲ್ಯೂಮಿನಿಯಂ, ಪ್ಲಾಸ್ಟಿಕ್ ಮತ್ತು ಇತರ ಘಟಕದ ಸರಕುಗಳ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿವೆ. ಇದರೊಂದಿಗೆ ಇನ್‌ಪುಟ್ ವೆಚ್ಚವು ಶೇ 22ರಿಂದ 23ರಷ್ಟು ಹೆಚ್ಚಾಗಿದೆ ಎಂದು ಸಂಬಂಧಪಟ್ಟ ಉದ್ಯಮದ ಅಧಿಕಾರಿಗಳು ಹೇಳಿದ್ದಾರೆ. “ಸರಕು ವೆಚ್ಚ, ಸರಕು ಸಾಗಣೆ ಮತ್ತು ವಿನಿಮಯ ದರದಲ್ಲಿನ ಹೆಚ್ಚಳವನ್ನು ಪರಿಗಣಿಸಿ ಬೆಲೆ ಏರಿಕೆ ಅನಿವಾರ್ಯ” ಎಂದು ದೇಶದ ಅತಿದೊಡ್ಡ ಉಪಕರಣ ತಯಾರಕ ಎಲ್‌ಜಿ ಎಲೆಕ್ಟ್ರಾನಿಕ್ಸ್‌ನ ಗೃಹೋಪಯೋಗಿ ಮತ್ತು ಏಸಿ ವ್ಯವಹಾರದ ಉಪಾಧ್ಯಕ್ಷ ದೀಪಕ್ ಬನ್ಸಾಲ್ ಹೇಳಿದ್ದಾರೆ. “ಇನ್‌ಪುಟ್ ವೆಚ್ಚದ ಹೆಚ್ಚಳದ ಒಂದು ಭಾಗವನ್ನು ತಗ್ಗಿಸಲು ಎಲ್ಲ ವೆಚ್ಚದ ಆವಿಷ್ಕಾರಗಳ ಹೊರತಾಗಿಯೂ ವೆಚ್ಚ ಸರಿತೂಗಿಸಲು ಮತ್ತು ಯಾವುದೇ ಲಾಭವನ್ನು ಹೆಚ್ಚಿಸದಿರಲು ಸತತ ಎರಡು ಬೆಲೆ ಏರಿಕೆ ಮಾಡಬೇಕಾಗಿದೆ.”

ದುಬಾರಿ ಕಾರುಗಳು ಮಾರುತಿ ಸುಜುಕಿ, ಹ್ಯುಂಡೈ ಮೋಟಾರ್ ಇಂಡಿಯಾ, ಟಾಟಾ ಮೋಟಾರ್ಸ್, ಮಹೀಂದ್ರಾ ಅಂಡ್ ಮಹೀಂದ್ರಾ, ಸ್ಕೋಡಾ, ಫೋಕ್ಸ್‌ವ್ಯಾಗನ್, ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) ಮತ್ತು ಹೀರೋ ಮೋಟೋಕಾರ್ಪ್‌ನಂತಹ ಪ್ರಮುಖ ವಾಹನ ತಯಾರಕರು ಕಚ್ಚಾ ವಸ್ತುಗಳ ಬೆಲೆಯಲ್ಲಿ ಹೆಚ್ಚಳವನ್ನು ಗ್ರಾಹಕರಿಗೆ ದಾಟಿಸಲು ವರ್ಷವಿಡೀ ಹಲವಾರು ಬಾರಿ ಬೆಲೆಗಳನ್ನು ಹೆಚ್ಚಿಸಿದ್ದಾರೆ. ಹೀರೋ ಮೋಟೋಕಾರ್ಪ್ ತನ್ನ ಶ್ರೇಣಿಯಾದ್ಯಂತ ಮತ್ತೆ 2,000 ರೂಪಾಯಿವರೆಗೆ ಬೆಲೆಗಳನ್ನು ಹೆಚ್ಚಿಸುವ ಯೋಜನೆಯನ್ನು ಪ್ರಕಟಿಸಿದೆ. ಇದು ಜನವರಿ 4 ರಿಂದ ಜಾರಿಗೆ ಬರಲಿದೆ. ಈ ತಿಂಗಳ ಆರಂಭದಲ್ಲಿ ಮಾರುತಿ ಸುಜುಕಿ ಹೊಸ ವರ್ಷದಲ್ಲಿ ಮತ್ತೆ ವಾಹನಗಳ ಬೆಲೆಯನ್ನು ಹೆಚ್ಚಿಸುವುದಾಗಿ ಹೇಳಿದೆ. ಇದು ಕಳೆದ ವರ್ಷದಲ್ಲಿ ಕಂಪೆನಿಯ ನಾಲ್ಕನೇ ಬೆಲೆ ಹೆಚ್ಚಳವಾಗಿದೆ ಮತ್ತು 18 ತಿಂಗಳಲ್ಲಿ ಆರನೇ ಬೆಲೆಯಾಗಿದೆ.

“ನಾವು ಒಟ್ಟಾರೆಯಾಗಿ ಈ ವರ್ಷ ಶೇ 4.9ರಷ್ಟು ಬೆಲೆಗಳನ್ನು ಹೆಚ್ಚಿಸಿದ್ದೇವೆ. ಆದರೆ ಸರಕು ವೆಚ್ಚದಲ್ಲಿನ ಒಟ್ಟಾರೆ ಹೆಚ್ಚಳಕ್ಕೆ ಹೋಲಿಸಿದರೆ ಇದು ತುಂಬಾ ಕಡಿಮೆಯಾಗಿದೆ,” ಎಂದು ಮಾರುತಿ ಸುಜುಕಿಯ ಮಾರುಕಟ್ಟೆ ಮತ್ತು ಮಾರಾಟದ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ಮಾತನಾಡಿ, “ನಾವು ದಕ್ಷತೆ ಮತ್ತು ಉತ್ಪಾದಕತೆಯನ್ನು ಸುಧಾರಿಸಲು ಆಂತರಿಕ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಆದರೂ ಉಕ್ಕು, ತಾಮ್ರ, ಪ್ಲಾಸ್ಟಿಕ್, ಅಲ್ಯೂಮಿನಿಯಂನಂತಹ ಕಚ್ಚಾ ವಸ್ತುಗಳ ಬೆಲೆಯಲ್ಲಿ ಭಾರೀ ಹೆಚ್ಚಳ ಕಂಡುಬಂದಿದೆ. ನಮ್ಮ ಗ್ರಾಹಕರಿಗೆ ಕೆಲವು ವೆಚ್ಚಗಳನ್ನು ವರ್ಗಾಯಿಸಬೇಕಾಗಿತ್ತು,” ಎಂದು ಹೇಳಿದ್ದಾರೆ. ವಾಹನದ ಒಟ್ಟಾರೆ ವೆಚ್ಚದಲ್ಲಿ ಶೇ 75ರಿಂದ 80ರಷ್ಟನ್ನು ಕಚ್ಚಾ ವಸ್ತುವು ಹೊಂದಿದೆ.

ಬೆಲೆಯ ಒಳಹರಿವು ಈ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಉಕ್ಕಿನ ಬೆಲೆಗಳು ಪ್ರತಿ ಕೇಜಿಗೆ ರೂ. 77ಕ್ಕೆ ಏರಿದೆ. 2020ರ ಏಪ್ರಿಲ್-ಮೇ ತಿಂಗಳಲ್ಲಿ ಕೇಜಿಗೆ ರೂ. 38 ಇದ್ದದ್ದು ಹೆಚ್ಚಾಗಿದೆ. ತಾಮ್ರದ ಬೆಲೆಗಳು ಪ್ರತಿ ಟನ್‌ಗೆ ರೂ. 9,700ಕ್ಕೆ ಏರಿದೆ. 2020ರ ಮೇ ತಿಂಗಳಿನಲ್ಲಿ ಟನ್‌ಗೆ ರೂ. 5,200 ಇತ್ತು. ಅಲ್ಯೂಮಿನಿಯಂ ಬೆಲೆ ಹೆಚ್ಚಾಗಿದ್ದು, ಪ್ರತಿ ಟನ್‌ಗೆ ರೂ. 1,700-1,800ರಿಂದ ರೂ. 2,700-2,800ಕ್ಕೆ ಹೆಚ್ಚಳವಾಗಿದೆ. ಬೆಲೆಬಾಳುವ ಲೋಹಗಳಾದ ರೋಢಿಯಮ್‌ನ ಬೆಲೆಗಳಲ್ಲಿ ಸ್ವಲ್ಪ ಕಡಿಮೆ ಆಗಿದೆ. ಇದು ಈಗ ಪ್ರತಿ ಟನ್‌ಗೆ ರೂ. 18,000 ಆಗಿದ್ದು, ಇದು ಪ್ರತಿ ಟನ್‌ಗೆ ರೂ. 26,000 ತಲುಪಿ, ದಾಖಲೆ ಮಟ್ಟದಿಂದ ಕಡಿಮೆ ಆಗಿದೆ. ಆದರೆ ಈ ಟ್ರೆಂಡ್ ತಾತ್ಕಾಲಿಕ ಎಂದು ಪರಿಣತರು ಹೇಳುತ್ತಾರೆ.

ಕೆಲವು ಉಕ್ಕು ತಯಾರಕ ಕಂಪೆನಿಗಳ ಉನ್ನತ ಕಾರ್ಯನಿರ್ವಾಹಕರು ಅಕ್ಟೋಬರ್‌ನಲ್ಲಿ ಕೋಕಿಂಗ್ ಕಲ್ಲಿದ್ದಲು ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿದಾಗ, ವೆಚ್ಚವನ್ನು ಭರಿಸುತ್ತೇವೆ ಎಂದು ಹೇಳಿದರು ಮತ್ತು ಈಗ ಇನ್‌ಪುಟ್ ಬೆಲೆಗಳು ಕಡಿಮೆ ಆಗಿರುವುದರಿಂದ ಬೆನಿಫಿಟ್​ ಅನ್ನು ವರ್ಗಾಯಿಸುವುದಿಲ್ಲ. ಕೋಕಿಂಗ್ ಕಲ್ಲಿದ್ದಲು ಬೆಲೆ ಅಕ್ಟೋಬರ್‌ನಲ್ಲಿ ಕ್ವಿಂಟಲ್‌ಗೆ 432 ರೂಪಾಯಿಗೆ ತಲುಪಿತ್ತು. ವರ್ಷದ ಆರಂಭದಲ್ಲಿ ಅದು 180 ರೂಪಾಯಿ ಇತ್ತು. “ಉಕ್ಕಿನ ಬೆಲೆಗಳು ಹೆಚ್ಚಾದಾಗ, ನಾವು ಆ ಮಟ್ಟಿಗೆ ವಾಹನಗಳ ಬೆಲೆ ಒಪ್ಪಂದಗಳ ಮಾತುಕತೆ ನಡೆಸಲಿಲ್ಲ. ಹೀಗಾಗಿ, ಕೆಲವು ಉಕ್ಕು ತಯಾರಕರು ವೆಚ್ಚದ ಹಣದುಬ್ಬರವನ್ನು ಭರಿಸಬೇಕಾಯಿತು ಮತ್ತು ಸಂಪೂರ್ಣ ಸ್ಪಾಟ್ ಬೆಲೆ ಏರಿಕೆಯನ್ನು ಗ್ರಾಹಕರಿಗೆ ವರ್ಗಾಯಿಸಲಿಲ್ಲ,” ಎಂದು ಸಮಗ್ರ ಉಕ್ಕಿನ ತಯಾರಕ ಕಂಪೆನಿಯಾದ AM/NS ಇಂಡಿಯಾದ ಮುಖ್ಯ ಮಾರುಕಟ್ಟೆ ಅಧಿಕಾರಿ ರಂಜನ್ ಧರ್ ಹೇಳಿದ್ದಾರೆ.

“ಇದು ಈಗ ಮಾರ್ಜಿನ್​ಗಳ ಮೇಲೆ ಪ್ರತಿಬಿಂಬಿಸದೆ ಇರಬಹುದು, ಆದರೆ ಮುಂದಿನ ಕ್ಯಾಲೆಂಡರ್ ವರ್ಷದ Q1ನಲ್ಲಿ ಪ್ರತಿಫಲಿಸಬಹುದು. ಕೇವಲ ಕಬ್ಬಿಣದ ಅದಿರು ಮತ್ತು ಕೋಕಿಂಗ್ ಕಲ್ಲಿದ್ದಲು ಹೊರತುಪಡಿಸಿ, ಇತರ ವಸ್ತುಗಳ ಬೆಲೆಗಳು ಸಹ ಮಹತ್ತರವಾಗಿ ಏರಿವೆ. ಯುರೋಪಿಯನ್ ಒಕ್ಕೂಟಕ್ಕೆ ಸರಕು ಸಾಗಣೆ ವೆಚ್ಚವು 35ರಿಂದ 36 ಡಾಲರ್​ರಷ್ಟಿತ್ತು, ಇಂದು 110 ಡಾಲರ್ ಇದೆ.

ಇದನ್ನೂ ಓದಿ: Price Hike: ಜಿಎಸ್​ಟಿ ಏರಿಕೆಯಿಂದಾಗಿ ಜನವರಿಯಲ್ಲಿ ಉಡುಪು, ಪಾದರಕ್ಷೆ, ಜವಳಿ ಬೆಲೆ ಹೆಚ್ಚಳ ಸಾಧ್ಯತೆ

Published On - 8:13 pm, Sat, 25 December 21

ನವರಾತ್ರಿ ಉತ್ಸವದಲ್ಲಿ ಕಣ್ಮನ ಸೆಳೆದ ಕಾಂತಾರ ಚಿತ್ರದ ಪಂಜುರ್ಲಿ ನೃತ್ಯ
ನವರಾತ್ರಿ ಉತ್ಸವದಲ್ಲಿ ಕಣ್ಮನ ಸೆಳೆದ ಕಾಂತಾರ ಚಿತ್ರದ ಪಂಜುರ್ಲಿ ನೃತ್ಯ
ಇದು ಮೌನವಾಗಿರುವ ಕಾಲ: ಜೈಲಿಂದ ಹೊರಬಂದ ಮುರುಘಾಶ್ರೀ ಮೊದಲ ಮಾತು
ಇದು ಮೌನವಾಗಿರುವ ಕಾಲ: ಜೈಲಿಂದ ಹೊರಬಂದ ಮುರುಘಾಶ್ರೀ ಮೊದಲ ಮಾತು
ನರಕದ ನೋವು ಹೆಚ್ಚಲು ಕಾರಣವಾದ ಚೈತ್ರಾ ಕುಂದಾಪುರ? ಎಲ್ಲ ಮುಗಿದ ಬಳಿಕ ಅಳು
ನರಕದ ನೋವು ಹೆಚ್ಚಲು ಕಾರಣವಾದ ಚೈತ್ರಾ ಕುಂದಾಪುರ? ಎಲ್ಲ ಮುಗಿದ ಬಳಿಕ ಅಳು
ಒಳ ಉಡುಪಿನ ವಿಷಯ ಪ್ರಸ್ತಾಪಿಸಿ ಮಹಿಳಾ ಸ್ಪರ್ಧಿಗಳಿಗೆ ಮುಜುಗರ ತಂದ ಜಗದೀಶ್
ಒಳ ಉಡುಪಿನ ವಿಷಯ ಪ್ರಸ್ತಾಪಿಸಿ ಮಹಿಳಾ ಸ್ಪರ್ಧಿಗಳಿಗೆ ಮುಜುಗರ ತಂದ ಜಗದೀಶ್
ಬೆಂಗಳೂರು: ನಿಂತಿದ್ದ ಮಹಿಳೆ ಮೇಲೆ ವಿದ್ಯುತ್ ಲೈನ್ ಬಿದ್ದು ಸಾವು
ಬೆಂಗಳೂರು: ನಿಂತಿದ್ದ ಮಹಿಳೆ ಮೇಲೆ ವಿದ್ಯುತ್ ಲೈನ್ ಬಿದ್ದು ಸಾವು
ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಟ್ರೋಫಿ ಎತ್ತಿ ಹಿಡಿದ ಫಾಫ್ ಡುಪ್ಲೆಸಿಸ್
ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಟ್ರೋಫಿ ಎತ್ತಿ ಹಿಡಿದ ಫಾಫ್ ಡುಪ್ಲೆಸಿಸ್
ದರ್ಶನ್​ಗೆ ಬೆನ್ನು ನೋವು; ಪತಿಯನ್ನು ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮೀ  
ದರ್ಶನ್​ಗೆ ಬೆನ್ನು ನೋವು; ಪತಿಯನ್ನು ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮೀ  
ಉಡುಪಿ ಹೆಬ್ರಿಯಲ್ಲಿ ಮೇಘ ಸ್ಫೋಟ: ಮನೆ, ಕೃಷಿ ಜಮೀನಿಗೆ ನೀರು ನುಗ್ಗಿ ಅವಾಂತರ
ಉಡುಪಿ ಹೆಬ್ರಿಯಲ್ಲಿ ಮೇಘ ಸ್ಫೋಟ: ಮನೆ, ಕೃಷಿ ಜಮೀನಿಗೆ ನೀರು ನುಗ್ಗಿ ಅವಾಂತರ
ಬಿಗ್ ಬಾಸ್​ನಲ್ಲಿ ಮಸಿ ಬಳಿಯೋ ಟಾಸ್ಕ್; ಮತ್ತದೇ ಕಿರುಚಾಟ, ಕಿತ್ತಾಟ
ಬಿಗ್ ಬಾಸ್​ನಲ್ಲಿ ಮಸಿ ಬಳಿಯೋ ಟಾಸ್ಕ್; ಮತ್ತದೇ ಕಿರುಚಾಟ, ಕಿತ್ತಾಟ
ಚೆನ್ನೈ ಏರ್​ ಶೋ, ಉಸಿರುಗಟ್ಟಿ 5 ಮಂದಿ ಸಾವು
ಚೆನ್ನೈ ಏರ್​ ಶೋ, ಉಸಿರುಗಟ್ಟಿ 5 ಮಂದಿ ಸಾವು