Price Hike: ಜಿಎಸ್​ಟಿ ಏರಿಕೆಯಿಂದಾಗಿ ಜನವರಿಯಲ್ಲಿ ಉಡುಪು, ಪಾದರಕ್ಷೆ, ಜವಳಿ ಬೆಲೆ ಹೆಚ್ಚಳ ಸಾಧ್ಯತೆ

ಹೊಸ ವರ್ಷದಿಂದ ಜಿಎಸ್​ಟಿ ದರ ಹೆಚ್ಚಳದ ಹಿನ್ನೆಲೆಯಲ್ಲಿ ಬಟ್ಟೆ, ಪಾದರಕ್ಷೆ, ಜವಳಿ ದರಗಳು ಏರಿಕೆ ಆಗುವ ನಿರೀಕ್ಷೆ ಇದ್ದು, ಆ ಬಗ್ಗೆ ಮಾಹಿತಿ ಇಲ್ಲಿದೆ.

Price Hike: ಜಿಎಸ್​ಟಿ ಏರಿಕೆಯಿಂದಾಗಿ ಜನವರಿಯಲ್ಲಿ ಉಡುಪು, ಪಾದರಕ್ಷೆ, ಜವಳಿ ಬೆಲೆ ಹೆಚ್ಚಳ ಸಾಧ್ಯತೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Nov 20, 2021 | 11:38 AM

ಜವಳಿ, ಪಾದರಕ್ಷೆಗಳು, ಉಡುಪುಗಳ ಬೆಲೆ ಮುಂದಿನ ವರ್ಷದ ಆರಂಭದಿಂದ ಏರಿಕೆ ಆಗುವ ಎಲ್ಲ ಸಾಧ್ಯತೆ ಇದೆ. ಕೇಂದ್ರೀಯ ಪರೋಕ್ಷ ತೆರಿಗೆಗಳ ಮಂಡಳಿಯು (CBDT) ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರವನ್ನು ಶೇ 5ರಿಂದ ಶೇ 12ಕ್ಕೆ ಹೆಚ್ಚಿಸಿ, ಅಧಿಸೂಚನೆ ಹೊರಡಿಸಿರುವುದರಿಂದ ಈ ಬೆಳವಣಿಗೆ ಆಗಲಿದೆ. ಇವುಗಳ ಮೇಲೆ ಹೆಚ್ಚಿದ ಜಿಎಸ್​ಟಿ ದರವು ಜನವರಿ 1, 2022 ರಿಂದ ಅನ್ವಯವಾಗುತ್ತದೆ. ಆದರೂ ಕೆಲವು ಸಿಂಥೆಟಿಕ್ ಫೈಬರ್‌ಗಳು ಮತ್ತು ನೂಲುಗಳ ಮೇಲಿನ ಜಿಎಸ್‌ಟಿ ದರಗಳನ್ನು ಶೇ 18ರಿಂದ ಶೇ 12ಕ್ಕೆ ಇಳಿಸಲಾಗಿದ್ದು, ಇಡೀ ಜವಳಿ ವಲಯದಾದ್ಯಂತ ದರಗಳು ಏಕರೂಪವಾಗಿವೆ. ಸುಂಕ ರಚನೆಯು ಹೇಗಾಗಲಿದೆ ಅಂದರೆ, ಸಿದ್ಧಪಡಿಸಿದ ಉತ್ಪನ್ನದ ಮೇಲಿನ ತೆರಿಗೆಗಿಂತ ಇನ್​ಪುಟ್​ ತೆರಿಗೆ ದರವು ಹೆಚ್ಚಾಗಲಿದೆ ಎಂಬುದನ್ನು ಸೂಚಿಸುತ್ತದೆ.

ಜಿಎಸ್​ಟಿ ಸಮಿತಿಯು ತನ್ನ ಸೆಪ್ಟೆಂಬರ್ ಸಭೆಯಲ್ಲಿ ಜವಳಿ ಮತ್ತು ಪಾದರಕ್ಷೆಗಳಲ್ಲಿನ ಇನ್​ವರ್ಟೆಡ್ ಸುಂಕ ರಚನೆಯನ್ನು ಸರಿಪಡಿಸಲು ತೀರ್ಮಾನ ಮಾಡಿತು. ಇದು ಜನವರಿ 1, 2022ರಂದು ಜಾರಿಗೆ ಬರಲಿದೆ ಎಂದು ಹೇಳಿದೆ. ಆದರೆ ಆ ಸಮಯದಲ್ಲಿ ಪರಿಣಾಮಕಾರಿ ದರಗಳನ್ನು ನಿರ್ಧರಿಸಿರಲಿಲ್ಲ. ಜನವರಿ 1ರಿಂದ ಯಾವುದೇ ಮೌಲ್ಯದ ಉಡುಪುಗಳ ಮೇಲಿನ ಜಿಎಸ್​ಟಿ ದರವು ಶೇ 12 ಆಗಿರುತ್ತದೆ. ಮೊದಲು ಇದು 1000 ರೂಪಾಯಿಯೊಳಗೆ ಇರುವ ಬಟ್ಟೆ ಮೇಲೆ ಶೇ 5ರಷ್ಟು ತೆರಿಗೆ ಇತ್ತು.

ತಜ್ಞರು ಈ ಕ್ರಮವನ್ನು ಶ್ಲಾಘಿಸಿದರೂ ಇನ್​ವರ್ಟೆಡ್ (ತಲೆಕೆಳಗಾದ) ಸುಂಕ ರಚನೆಯು ಜನಸಂಖ್ಯೆಯ ಒಂದು ವರ್ಗದ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಎಂದು ಬಟ್ಟೆಗಳ ಬಗ್ಗೆ ತೆಗೆದುಕೊಂಡಿರುವ ಕ್ರಮಕ್ಕೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. “ಜಿಎಸ್‌ಟಿ ದರ ಬದಲಾವಣೆಯು ವ್ಯಾಲ್ಯೂ ಉದ್ದಕ್ಕೂ ಶೇ 12ರ ಏಕರೂಪದ ದರದ ಖಾತೆಯಲ್ಲಿ ಇನ್ವರ್ಟೆಡ್ ಸುಂಕ ರಚನೆಯ ಸಮಸ್ಯೆಗಳು ಅಂತ್ಯಗೊಳ್ಳುವುದನ್ನು ಖಚಿತಪಡಿಸುತ್ತದೆ,” ಎಂದು ಡೆಲಾಯ್ಟ್ ಇಂಡಿಯಾದ ಹಿರಿಯ ನಿರ್ದೇಶಕ ಎಂ.ಎಸ್. ಮಣಿ ಹೇಳಿದ್ದಾರೆ.

ಇದನ್ನೂ ಓದಿ: Price Hike: ಬಟ್ಟೆ, ಎಲೆಕ್ಟ್ರಾನಿಕ್ಸ್​ನಿಂದ ಮದ್ಯದ ತನಕ ಹೊಸ ವರ್ಷದಿಂದ ಶೇ 8ರಿಂದ 10ರಷ್ಟು ಬೆಲೆ ಏರಿಕೆಗೆ ಸಿದ್ಧರಾಗಿ!

Published On - 11:38 am, Sat, 20 November 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್