Price Hike: ಬಟ್ಟೆ, ಎಲೆಕ್ಟ್ರಾನಿಕ್ಸ್​ನಿಂದ ಮದ್ಯದ ತನಕ ಹೊಸ ವರ್ಷದಿಂದ ಶೇ 8ರಿಂದ 10ರಷ್ಟು ಬೆಲೆ ಏರಿಕೆಗೆ ಸಿದ್ಧರಾಗಿ!

ಬಟ್ಟೆ, ಎಲೆಕ್ಟ್ರಾನಿಕ್ಸ್, ಮದ್ಯ ಸೇರಿದಂತೆ ಇತರ ವಸ್ತುಗಳ ಬೆಲೆ ಶೇಕಡಾ 8ರಿಂದ 10ರಷ್ಟು ಜಾಸ್ತಿ ಆಗುವ ಸಾಧ್ಯತೆ ಇದೆ. ಕಚ್ಚಾ ವಸ್ತುಗಳ ಬೆಲೆಯಲ್ಲಿ ಏರಿಕೆ ಆಗಿರುವುದರಿಂದ ಈ ಬದಲಾವಣೆ ಹೊಸ ವರ್ಷದಿಂದ ಆಗುವ ಸಾಧ್ಯತೆ ಇದೆ.

Price Hike: ಬಟ್ಟೆ, ಎಲೆಕ್ಟ್ರಾನಿಕ್ಸ್​ನಿಂದ ಮದ್ಯದ ತನಕ ಹೊಸ ವರ್ಷದಿಂದ ಶೇ 8ರಿಂದ 10ರಷ್ಟು ಬೆಲೆ ಏರಿಕೆಗೆ ಸಿದ್ಧರಾಗಿ!
ಗೃಹೋಪಯೋಗಿ ಎಲೆಕ್ಟ್ರಾನಿಕ್ ಉತ್ಪನ್ನಗಳು (ಪ್ರಾತಿನಿಧಿಕ ಚಿತ್ರ)
Follow us
| Updated By: Srinivas Mata

Updated on: Nov 12, 2021 | 12:47 PM

ಬಟ್ಟೆಗಳು, ಎಲೆಕ್ಟ್ರಾನಿಕ್ಸ್, ಮದ್ಯ ಮತ್ತಿತರ ವಸ್ತುಗಳು ಬೆಲೆ ಏರಿಕೆ ಆಗುವುದಕ್ಕೆ ಎಲ್ಲ ಸಿದ್ಧತೆ ನಡೆದಿದೆ. ಶೇ 8ರಿಂದ 10ರಷ್ಟು ಹೆಚ್ಚಳ ಮಾಡುವುದಕ್ಕೆ ಕಂಪೆನಿಗಳು ಸಿದ್ಧವಾಗಿದ್ದು, ಹೆಚ್ಚುವರಿ ವೆಚ್ಚದ ಹೊರೆ ಗ್ರಾಹಕರ ಮೇಲೆ ಬೀಳಲಿದೆ. ದಿನಸಿ ಅಗತ್ಯ ವಸ್ತುಗಳು, ಪರ್ಸನಲ್ ಕೇರ್ ಉತ್ಪನ್ನಗಳು, ಪ್ಯಾಕೇಜ್ಡ್ ಆಹಾರಗಳು, ಡೈನಿಂಗ್​ ದರಗಳನ್ನು ಈಗಾಗಲೇ ಕಂಪೆನಿಗಳು ಜಾಸ್ತಿ ಮಾಡಿವೆ. ಇದೀಗ ಮತ್ತೊಂದು ಸುತ್ತು ಬೆಲೆ ಏರಿಕೆಯನ್ನು ಹೊಸ ವರ್ಷ- 2022ರಿಂದ ಜಾರಿಗೆ ತರುವ ಸಾಧ್ಯತೆಗಳಿವೆ ಎಂದು ಪ್ರಮುಖ ವಾಣಿಜ್ಯ ದೈನಿಕವೊಂದು ವರದಿ ಮಾಡಿದೆ. ಈಗಾಗಲೇ ಬೇಡಿಕೆಯು ಕೊರೊನಾಗಿಂತ ಮುಂಚಿನ ಹಂತಕ್ಕೆ ಎಲ್ಲ ಸೆಗ್ಮೆಂಟ್​ನಲ್ಲಿಯೂ ದಾಟಿದ್ದು, ಇಂಥ ಸನ್ನಿವೇಶದಲ್ಲಿ ಉತ್ಪನ್ನಗಳ ಬೆಲೆ ಏರಿಕೆ ಬಗ್ಗೆ ಸುದ್ದಿ ಹೊರಬಿದ್ದಿದೆ. ವಿಶ್ಲೇಷಕರು ಹೇಳುವ ಪ್ರಕಾರ, ಈ ಬೆಲೆ ಏರಿಕೆಯು ವಸ್ತುಗಳ ಹಣದುಬ್ಬರ ಮತ್ತು ಸಹಜವಾಗಿಯೇ ಆಗಿರುವಂಥದ್ದಾಗಿದೆ.

ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ, ಸಗಟು ದರ ಹಣದುಬ್ಬರವು ಉದ್ಯಮಗಳಿಗೆ ತಗುಲುವ ವೆಚ್ಚವನ್ನು ಸೂಚಿಸುವಂಥ ಸೂಚ್ಯಂಕವಾಗಿದೆ. ಈಗಾಗಲೇ ಸತತ ಆರನೇ ತಿಂಗಳು ಎರಡಂಕಿ ಮುಟ್ಟಿದೆ. ಇನ್ನು ಚಿಲ್ಲರೆ ಹಣದುಬ್ಬರ ದರವು ಸೆಪ್ಟೆಂಬರ್​ನಲ್ಲಿ ಶೇ 4.35ಕ್ಕೆ ಕುಸಿತ ಕಂಡಿದೆ. ಸಗಟು ದರ ಹಣದುಬ್ಬರ ಹಾಗೂ ಚಿಲ್ಲರೆ ಹಣದುಬ್ಬರದ ಮಧ್ಯದ ವ್ಯತ್ಯಾಸವು ಹೆಚ್ಚುವರಿ ವೆಚ್ಚವಾಗಿದ್ದು, ಅದನ್ನು ಗ್ರಾಹಕರಿಗೆ ವರ್ಗಾಯಿಸಬೇಕಾಗುತ್ತದೆ. ಗಾಜು, ಹತ್ತಿ, ಉಕ್ಕು, ಚಿಪ್​ಗಳು ಮತ್ತು ರಾಸಾಯನಿಗಳು ಇಂಥ ಕಚ್ಚಾ ವಸ್ತುಗಳ ಬೆಲೆಯಲ್ಲಿ ತೀವ್ರವಾದ ಏರಿಕೆ ಆಗಿದ್ದು, ಉದ್ಯಮಗಳ ಮಾಲೀಕರಿಗೆ ಬರಬೇಕಾದ ಲಾಭದ ಮಾರ್ಜಿನ್​ನಲ್ಲಿ ಕಡಿಮೆ ಆಗುವಂತಾಗಿದೆ.

ಬಟ್ಟೆ ಮತ್ತು ಗಾರ್ಮೆಂಟ್​ ವಲಯಕ್ಕೆ ಹತ್ತಿ ಬೆಲೆ ಏರಿಕೆಯಿಂದಾಗಿ ಭಾರೀ ಪೆಟ್ಟು ಬಿದ್ದಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇಕಡಾ 60ರಷ್ಟು ದರ ಹೆಚ್ಚಳವಾಗಿದ್ದು, ದಶಕದಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದೆ. ಕಳೆದ ಕೆಲವು ವರ್ಷದಿಂದ ರೀಟೇಲರ್​ಗಳು ತಮ್ಮ ಲಾಭದ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವಂತಾಗಿತ್ತು. ಆದರೆ ಕಳೆದ ವರ್ಷ ಕಚ್ಚಾ ವಸ್ತು ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದರಿಂದ ಅದನ್ನು ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯ ಆಗಿದೆ. ರೀಟೇಲ್​ ಕ್ಷೇತ್ರದಲ್ಲೇ ಇರುವವರು ಹೇಳುವಂತೆ, ತಿಂಗಳಿಂದ ತಿಂಗಳಿಂದ ಇನ್​ಪುಟ್​ ವೆಚ್ಚ ಹೆಚ್ಚಾಗುತ್ತಲೇ ಇದೆ. ಕಂಪೆನಿಗಳು ಈ ಹಿಂದೆ ಇಂಥ ಸನ್ನಿವೇಶವನ್ನು ಎದುರಿಸಿರಲಿಲ್ಲ. ಇನ್ನು ಇದೇ ರೀತಿ ಬೆಲೆ ಏರಿಕೆ ಮುಂದುವರಿದರೆ ಬೇಡಿಕೆ ಇಳಿಕೆ ಆಗಬಹುದು.

ಇಂಧನ ಮತ್ತು ಸಾಗಣೆ ವೆಚ್ಚ ಕೂಡ ಒತ್ತಡಕ್ಕೆ ಇನ್ನಷ್ಟು ಸೇರ್ಪಡೆ ಮಾಡಿದೆ. ಸಗಟು ಇಂಧನ ಮತ್ತು ವಿದ್ಯುತ್ ಹಣದುಬ್ಬರ ಸೆಪ್ಟೆಂಬರ್​ನಲ್ಲಿ ದಾಖಲೆಯ ಶೇ 24.8ರಷ್ಟಿತ್ತು. ಸಾಗಣೆ ವೆಚ್ಚ ದಾಖಲೆ ಮಟ್ಟದಲ್ಲಿತ್ತು. ಬಂದರುಗಳಲ್ಲಿ ಮತ್ತು ಗೋದಾಮುಗಳಲ್ಲಿ ಸರಕುಗಳ ದಟ್ಟಣೆಯಿಂದಾಗಿ ಸರಕು ಸಾಗಣೆ ವೆಚ್ಚವು ಲೈಫ್​ಸ್ಟೈಲ್ ವಲಯದ ವೆಚ್ಚ ಹೆಚ್ಚಾಗಲು ಕಾರಣವಾಗಿದೆ.

ಏಸಿಗಳು, ವಾಷಿಂಗ್ ಮಶೀನ್, ರೆಫ್ರಿಜರೇಟರ್​, ಮೈಕ್ರೋವೇವ್ ಓವನ್​ನಂಥವು ಶೇ 5ರಿಂದ 6ರಷ್ಟು ಬೆಲೆ ಏರಿಕೆಗೆ ಸಿದ್ಧವಾಗಿವೆ. ಒಟ್ಟಿನಲ್ಲಿ ಮುಂದಿನ ವರ್ಷದ ಆರಂಭದ ಹೊತ್ತಿಗೆ ಬೆಲೆ ಹೆಚ್ಚಳವನ್ನು ನಿರೀಕ್ಷಿಸಬಹುದು. ಹೆಚ್ಚುತ್ತಿರುವ ಸಾಗಣೆ ಮತ್ತು ಕಚ್ಚಾ ವಸ್ತುಗಳ ಬೆಲೆ ಶೇ 8ರಿಂದ ಶೇ10ರಷ್ಟು ಜಾಸ್ತಿ ಆಗಿವೆ. ಆದರೆ ಹಬ್ಬದ ಋತುವಿನಲ್ಲಿ ಬೇಡಿಕೆಗೆ ಸಮಸ್ಯೆ ಮಾಡಿಕೊಳ್ಳಬಾರದು ಎಂಬ ಕಾರಣಕ್ಕೆ ಉತ್ಪಾದಕರು ಹಾಗೂ ರೀಟೇಲರ್​ಗಳು ಬೆಲೆಯನ್ನು ಹೆಚ್ಚಳ ಮಾಡಿಲ್ಲ. ಮದ್ಯ ಉತ್ಪಾದನೆ ವಲಯದಲ್ಲೂ ಹೀಗೇ ಆಗಿದೆ. ಗಾಜಿನ ಬಾಲಿ, ಎಕ್ಸ್ಟ್ರಾ ನ್ಯೂಟ್ರಲ್ ಆಲ್ಕೋಹಾಲ್, ಮದ್ಯದಲ್ಲಿ ಬಳಸುವ ಅಂಶಗಳು ಮತ್ತು ಪ್ಯಾಕೇಜಿಂಗ್ ವೆಚ್ಚದಲ್ಲಿ ಶೇ 5ರಿಂದ 17ರಷ್ಟು ದರ ಹೆಚ್ಚಳವಾಗಿದ್ದು, ಇದರ ಪರಿಣಾಮಗಳನ್ನು ಎದುರಿಸುತ್ತಿದೆ.

ಇದನ್ನೂ ಓದಿ: ಮಕ್ಕಳ ಬಿಸಿಯೂಟಕ್ಕೂ ತಟ್ಟಿದ ಬೆಲೆ ಏರಿಕೆ ಬಿಸಿ!

45 ಲಕ್ಷ ರೂ. ನೋಟುಗಳಿಂದ ದುರ್ಗಾದೇವಿಗೆ ಅಲಂಕಾರ! ಬೆರಗಾದ ಭಕ್ತರು
45 ಲಕ್ಷ ರೂ. ನೋಟುಗಳಿಂದ ದುರ್ಗಾದೇವಿಗೆ ಅಲಂಕಾರ! ಬೆರಗಾದ ಭಕ್ತರು
ನವರಾತ್ರಿ ಉತ್ಸವದಲ್ಲಿ ಕಣ್ಮನ ಸೆಳೆದ ಕಾಂತಾರ ಚಿತ್ರದ ಪಂಜುರ್ಲಿ ನೃತ್ಯ
ನವರಾತ್ರಿ ಉತ್ಸವದಲ್ಲಿ ಕಣ್ಮನ ಸೆಳೆದ ಕಾಂತಾರ ಚಿತ್ರದ ಪಂಜುರ್ಲಿ ನೃತ್ಯ
ಇದು ಮೌನವಾಗಿರುವ ಕಾಲ: ಜೈಲಿಂದ ಹೊರಬಂದ ಮುರುಘಾಶ್ರೀ ಮೊದಲ ಮಾತು
ಇದು ಮೌನವಾಗಿರುವ ಕಾಲ: ಜೈಲಿಂದ ಹೊರಬಂದ ಮುರುಘಾಶ್ರೀ ಮೊದಲ ಮಾತು
ನರಕದ ನೋವು ಹೆಚ್ಚಲು ಕಾರಣವಾದ ಚೈತ್ರಾ ಕುಂದಾಪುರ? ಎಲ್ಲ ಮುಗಿದ ಬಳಿಕ ಅಳು
ನರಕದ ನೋವು ಹೆಚ್ಚಲು ಕಾರಣವಾದ ಚೈತ್ರಾ ಕುಂದಾಪುರ? ಎಲ್ಲ ಮುಗಿದ ಬಳಿಕ ಅಳು
ಒಳ ಉಡುಪಿನ ವಿಷಯ ಪ್ರಸ್ತಾಪಿಸಿ ಮಹಿಳಾ ಸ್ಪರ್ಧಿಗಳಿಗೆ ಮುಜುಗರ ತಂದ ಜಗದೀಶ್
ಒಳ ಉಡುಪಿನ ವಿಷಯ ಪ್ರಸ್ತಾಪಿಸಿ ಮಹಿಳಾ ಸ್ಪರ್ಧಿಗಳಿಗೆ ಮುಜುಗರ ತಂದ ಜಗದೀಶ್
ಬೆಂಗಳೂರು: ನಿಂತಿದ್ದ ಮಹಿಳೆ ಮೇಲೆ ವಿದ್ಯುತ್ ಲೈನ್ ಬಿದ್ದು ಸಾವು
ಬೆಂಗಳೂರು: ನಿಂತಿದ್ದ ಮಹಿಳೆ ಮೇಲೆ ವಿದ್ಯುತ್ ಲೈನ್ ಬಿದ್ದು ಸಾವು
ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಟ್ರೋಫಿ ಎತ್ತಿ ಹಿಡಿದ ಫಾಫ್ ಡುಪ್ಲೆಸಿಸ್
ರೋಹಿತ್ ಶರ್ಮಾ ಸ್ಟೈಲ್​ನಲ್ಲಿ ಟ್ರೋಫಿ ಎತ್ತಿ ಹಿಡಿದ ಫಾಫ್ ಡುಪ್ಲೆಸಿಸ್
ದರ್ಶನ್​ಗೆ ಬೆನ್ನು ನೋವು; ಪತಿಯನ್ನು ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮೀ  
ದರ್ಶನ್​ಗೆ ಬೆನ್ನು ನೋವು; ಪತಿಯನ್ನು ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮೀ  
ಉಡುಪಿ ಹೆಬ್ರಿಯಲ್ಲಿ ಮೇಘ ಸ್ಫೋಟ: ಮನೆ, ಕೃಷಿ ಜಮೀನಿಗೆ ನೀರು ನುಗ್ಗಿ ಅವಾಂತರ
ಉಡುಪಿ ಹೆಬ್ರಿಯಲ್ಲಿ ಮೇಘ ಸ್ಫೋಟ: ಮನೆ, ಕೃಷಿ ಜಮೀನಿಗೆ ನೀರು ನುಗ್ಗಿ ಅವಾಂತರ
ಬಿಗ್ ಬಾಸ್​ನಲ್ಲಿ ಮಸಿ ಬಳಿಯೋ ಟಾಸ್ಕ್; ಮತ್ತದೇ ಕಿರುಚಾಟ, ಕಿತ್ತಾಟ
ಬಿಗ್ ಬಾಸ್​ನಲ್ಲಿ ಮಸಿ ಬಳಿಯೋ ಟಾಸ್ಕ್; ಮತ್ತದೇ ಕಿರುಚಾಟ, ಕಿತ್ತಾಟ