AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಾಫಿಕ್ ಫೈನ್‌ ಶೇ 50ರ ರಿಯಾಯಿತಿಗೆ ಭರ್ಜರಿ‌ ರೆಸ್ಪಾನ್ಸ್: ನಾಲ್ಕೇ ದಿನದಲ್ಲಿ ಸಂಗ್ರಹವಾದ ದಂಡವೆಷ್ಟು ಗೊತ್ತಾ?

ಬೆಂಗಳೂರು ಸಂಚಾರ ಪೊಲೀಸರಿಂದ ಟ್ರಾಫಿಕ್ ಫೈನ್‌ ಕಟ್ಟಲು 50% ರಿಯಾಯಿತಿ ನೀಡಿರುವುದಕ್ಕೆ ಸವಾರರಿಂದ ಭರ್ಜರಿ‌ ರೆಸ್ಪಾನ್ಸ್ ಸಿಕ್ಕಿದೆ. ಆರಂಭವಾಗಿ 4 ದಿನಗಳಲ್ಲಿ 14,89,36,300 ರೂ ಹಣ ಬಾಕಿ ದಂಡ ಸಂಗ್ರಹವಾಗಿದೆ. ಆ ಮೂಲಕ 5,25,551 ಬಾಕಿ ಕೇಸ್‌ಗಳಿಗೆ ವಾಹನ ಮಾಲೀಕರು ದಂಡ ಪಾವತಿ ಮಾಡಿದ್ದಾರೆ.

ಟ್ರಾಫಿಕ್ ಫೈನ್‌ ಶೇ 50ರ ರಿಯಾಯಿತಿಗೆ ಭರ್ಜರಿ‌ ರೆಸ್ಪಾನ್ಸ್: ನಾಲ್ಕೇ ದಿನದಲ್ಲಿ ಸಂಗ್ರಹವಾದ ದಂಡವೆಷ್ಟು ಗೊತ್ತಾ?
ಪ್ರಾತಿನಿಧಿಕ ಚಿತ್ರ
ರಾಚಪ್ಪಾಜಿ ನಾಯ್ಕ್
| Updated By: ಗಂಗಾಧರ​ ಬ. ಸಾಬೋಜಿ|

Updated on: Aug 26, 2025 | 10:48 PM

Share

ಬೆಂಗಳೂರು, ಆಗಸ್ಟ್​ 26: ಟ್ರಾಫಿಕ್ ಫೈನ್‌ ಕಟ್ಟಲು 50% ರಿಯಾಯಿತಿ (Traffic Fine Discount) ಕ್ರಮಕ್ಕೆ ವಾಹನ ಸವಾರರಿಂದ ಭರ್ಜರಿ‌ ರೆಸ್ಪಾನ್ಸ್​​ ಸಿಕ್ಕಿದೆ. ರಾಜ್ಯ ಸರ್ಕಾರ ಆಗಸ್ಟ್ 23ರಿಂದ ರಿಯಾಯಿತಿ ನೀಡಿತ್ತು. ನಾಲ್ಕು ದಿನಗಳಲ್ಲಿ 5,25,551 ವಾಹನ ಮಾಲೀಕರು 14,89,36,300 ರೂ ಬಾಕಿ ದಂಡ ಕಟ್ಟಿದ್ದಾರೆ. ಸೆಪ್ಟೆಂಬರ್ 9ರ ವರೆಗೆ 50% ರಿಯಾಯಿತಿ ಬಾಕಿ ದಂಡ ಪಾವತಿಸಲು ಅವಕಾಶವಿದೆ.

ಕಳೆದ ವರ್ಷದಂತೆಯೇ ಈ ವರ್ಷ ಕೂಡ ಸಂಚಾರ ಪೊಲೀಸರು ಶೇ 50ರಷ್ಟು ರಿಯಾಯಿತಿ ಘೋಷಣೆ ಮಾಡಿದ್ದರು. ಬೆಂಗಳೂರಿನಲ್ಲಿ ಬಾಕಿ ಉಳಿದಿದ್ದ ದಂಡ ವಸೂಲಿಗೆ ಪೊಲೀಸ್​ ಇಲಾಖೆ 50% ರಿಯಾಯಿತಿ ನೀಡಿದೆ. ಸದ್ಯ ಇದಕ್ಕೆ ಸವಾರರಿಂದ ಭರ್ಜರಿ‌ ರೆಸ್ಪಾನ್ಸ್ ಸಿಗುತ್ತಿದೆ.

ಮೊದಲ ದಿನವೇ 4 ಲಕ್ಷಕ್ಕೂ ಹೆಚ್ಚು ದಂಡ ಪಾವತಿ

ಮಾಧ್ಯಮ ಪ್ರಕಟಣೆಯ ಪ್ರಕಾರ, 50% ರಿಯಾಯಿತಿ ನೀಡಿದ ಮೊದಲ ದಿನವೇ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆಗಸ್ಟ್ 23ರಂದು ನಗರದಾದ್ಯಂತ 1,48,747 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಒಟ್ಟು 4,18,20,500 ರೂ ಹಣ ಸಂಗ್ರಹವಾಗಿತ್ತು.

ಇದನ್ನೂ ಓದಿ
Image
ಹೆಬ್ಬಾಳದಲ್ಲಿ ತಪ್ಪುತ್ತಿಲ್ಲ ಟ್ರಾಫಿಕ್ ಗೋಳು! ಡ್ರೋನ್ ವಿಡಿಯೋ ವೈರಲ್
Image
ಟ್ರಾಫಿಕ್ ಫೈನ್ ಶೇ 50ರ ರಿಯಾಯಿತಿಯಿಂದ ಅಪಾಯವೆಂದ ತಜ್ಞರು: ಕಾರಣ ಏನು?
Image
ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
Image
ಟ್ರಾಫಿಕ್ ಫೈನ್ ರಿಯಾಯಿತಿ: ಸುಲಭವಾಗಿ ಪಾವತಿಸೋದು ಹೇಗೆಂದು ಇಲ್ಲಿದೆ ಮಾಹಿತಿ

ಇದನ್ನೂ ಓದಿ: ಶೇ 50ರ ರಿಯಾಯಿತಿಯೊಂದಿಗೆ ಟ್ರಾಫಿಕ್ ಫೈನ್ ಆನ್​ಲೈನ್, ಆಫ್​ಲೈನ್ ಮೂಲಕ ಪಾವತಿಸುವ ಸುಲಭ ವಿಧಾನ ಇಲ್ಲಿದೆ

ಆಗಸ್ಟ್ 23 ರಂದು 882 ವಾಹನ ಮಾಲೀಕರು ಪಾವತಿಸುವ ಮೂಲಕ 2.23 ಲಕ್ಷ ರೂ, ಆಗಸ್ಟ್ 24 ರಂದು 1,229 ವಾಹನ ಮಾಲೀಕರು ಪಾವತಿಸುವ ಮೂಲಕ 3.09 ಲಕ್ಷ ರೂ, ಆಗಸ್ಟ್ 25 ರಂದು 1,370 ವಾಹನ ಮಾಲೀಕರು ಪಾವತಿಸುವ ಮೂಲಕ 3.49 ಲಕ್ಷ ರೂ ಬಾಕಿ ದಂಡವನ್ನು ಸಂಗ್ರಹಿಸಲಾಗಿದೆ.

ಇದನ್ನೂ ಓದಿ: ಟ್ರಾಫಿಕ್ ಫೈನ್ ಶೇ 50ರ ರಿಯಾಯಿತಿಯಿಂದ ಅಪಾಯವೆಂದ ತಜ್ಞರು: ಕಾರಣ ಏನು ಗೊತ್ತೇ?

ವಾಹನ ಚಾಲಕರು, ಕರ್ನಾಟಕ ರಾಜ್ಯ ಪೊಲೀಸ್ ಅಪ್ಲಿಕೇಶನ್, BTP ASTraM ಅಪ್ಲಿಕೇಶನ್, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಪೋರ್ಟಲ್‌ಗಳು ಸೇರಿದಂತೆ ಬಹು ಅನುಕೂಲಕರ ಮಾರ್ಗಗಳ ಮೂಲಕ ಅಥವಾ ತಮ್ಮ ವಾಹನ ನೋಂದಣಿ ವಿವರಗಳೊಂದಿಗೆ ಸಂಚಾರ ಪೊಲೀಸ್ ಠಾಣೆಗಳು ಮತ್ತು ಸಂಚಾರ ನಿರ್ವಹಣಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಬಾಕಿ ದಂಡವನ್ನು ಪಾವತಿ ಮಾಡಬಹುದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.