ನಾಳೆ ಗಣೇಶ ಚತುರ್ಥಿ ಹಬ್ಬ ಪ್ರಯುಕ್ತ ಊರುಗಳಿಗೆ ತೆರಳುತ್ತಿರುವ ಜನ, ಕೆಎಸ್ಆರ್ಟಿಸಿಯಿಂದ ಹೆಚ್ಚುವರಿ ಬಸ್ಗಳು
ಬಳ್ಳಾರಿಗೆ ರಾತ್ರಿ 12 ಗಂಟೆಗೆ ಮುಟ್ಟುವ ಉದ್ದೇಶದಿಂದ ಈ ಬಸ್ನಲ್ಲಿ ಪ್ರಯಾಣಿಸುತ್ತಿರುವ ವ್ಯಕ್ತಿಯೊಬ್ಬರು ಖಾಸಗಿ ಬಸ್ ನವರು ಸಂದರ್ಭದ ಪ್ರಯೋಜನ ಪಡೆದು ಪ್ರಯಾಣಿಕರಿಂದ ದುಪ್ಪಟ್ಟು ಹಣವನ್ನು ಪೀಕುತ್ತಿದ್ದಾರಂತೆ. ಇದೇ ಬಸ್ಸಲ್ಲಿ ಪ್ರಯಾಣಿಸುತ್ತಿರುವ ಯುವತಿಯೊಬ್ಬರು ಮಹಿಳೆಯರಿಗೆ ಶಕ್ತಿ ಯೋಜನೆ ಅಡಿ ಉಚಿತ ಪ್ರಯಾಣದ ಅವಕಾಶವಿದ್ದರೂ ಹಬ್ಬದ ಅನಿವಾರ್ಯತೆಯಿಂದಾಗಿ ಲಕ್ಸುರಿ ಬಸ್ಸಲ್ಲಿ ದುಡ್ಡು ತೆತ್ತು ಚಳ್ಳಕೆರೆಗೆ ಪ್ರಯಾಣಿಸುತ್ತಿದ್ದಾರಂತೆ.
ಬೆಂಗಳೂರು, ಆಗಸ್ಟ್ 26 : ನಾಳೆ ವಿನಾಯಕ ಚತುರ್ಥಿ ಹಬ್ಬ. ಆದರೆ ಹಬ್ಬ ವಾರದ ನಡುವೆ ಬಂದಿರೋದ್ರಿಂದ ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರುಗೆ ಬಂದು ಬದುಕು ನಡೆಸುತ್ತಿರುವ ಲಕ್ಷಾಂತರ ಜನಕ್ಕೆ ಕೇವಲ ಒಂದು ದಿನದಮಟ್ಟಿಗೆ ಊರಿಗೆ ಬರುವಷ್ಟು ಮಾತ್ರ ಅವಕಾಶ. ಹಬ್ಬಕ್ಕೆ ಊರುಗಳಿಗೆ ತೆರಳುವ ಜನ ಜಾಸ್ತಿ ಅಂತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು 1,500 ಹೆಚ್ಚುವರಿ ಬಸ್ಗಳನ್ನು ಬೆಂಗಳೂರು ನಗರದಿಂದ ಬೇರೆ ಬೇರೆ ಊರುಗಳಿಗೆ ಓಡಿಸುತ್ತಿದೆ. ನಮ್ಮ ಬೆಂಗಳೂರು ವರದಿಗಾಗರ ತಮ್ಮ ಊರುಗಳಿಗೆ ಪ್ರಯಾಣಿಸುತ್ತಿರುವ ಜನರೊಂದಿಗೆ ಬಸ್ ಸೌಕರ್ಯ, ಪ್ರಯಾಣ ಅನಿವಾರ್ಯತೆ ಹಿನ್ನಲೆ ಖಾಸಗಿ ಬಸ್ಗಳು ಸುಲಿಗೆಗಿಳಿದಿರುವುದು ಮೊದಲಾದ ಸಂಗತಿಗಳ ಬಗ್ಗೆ ಮಾತಾಡಿದ್ದಾರೆ.
ಇದನ್ನೂ ಓದಿ: Ganesha Chaturthi Rituals: ಗಣೇಶ ಚತುರ್ಥಿಗೆ ಯಾವ ರೀತಿಯ ಮೂರ್ತಿ ಇಡಬೇಕು, ಹೇಗೆ ಮನೆಗೆ ತರಬೇಕು?
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

