AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ. 27ಕ್ಕೆ ವಿನಾಯಕ ಚತುರ್ಥಿ: ಬ್ಯಾಂಕು ಮತ್ತು ಷೇರುಮಾರುಕಟ್ಟೆ ತೆರೆದಿರುತ್ತಾ?

Ganesha festival holidays: ಆಗಸ್ಟ್ 27ಕ್ಕೆ ಗಣೇಶನ ಹಬ್ಬ ಇದ್ದು, ಇದು ಘೋಷಿತ ಸರ್ಕಾರಿ ರಜೆಗಳಲ್ಲಿ ಒಂದು. ಕರ್ನಾಟಕವೂ ಸೇರಿದಂತೆ ಹೆಚ್ಚಿನ ರಾಜ್ಯಗಳಲ್ಲಿ ಗಣೇಶನ ಹಬ್ಬಕ್ಕೆ ಬ್ಯಾಂಕುಗಳು ರಜೆ ಹೊಂದಿರುತ್ತವೆ. ಷೇರು ಮಾರುಕಟ್ಟೆಯ ಎರಡೂ ಸ್ಟಾಕ್ ಎಕ್ಸ್​ಚೇಂಜ್​ಗಳು ಆಗಸ್ಟ್ 27ರಂದು ರಜೆ ಹೊಂದಿರುತ್ತವೆ.

ಆ. 27ಕ್ಕೆ ವಿನಾಯಕ ಚತುರ್ಥಿ: ಬ್ಯಾಂಕು ಮತ್ತು ಷೇರುಮಾರುಕಟ್ಟೆ ತೆರೆದಿರುತ್ತಾ?
ಷೇರುಬಜಾರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 26, 2025 | 5:26 PM

Share

ನವದೆಹಲಿ, ಆಗಸ್ಟ್ 26: ಇವತ್ತು ಗೌರಿ ಹಬ್ಬ, ನಾಳೆ ವಿನಾಯಕ ಚತುರ್ಥಿ. ಹಲವೆಡೆ ಎರಡೂ ದಿನ ರಜೆಗಳಿವೆ. ಗಣೇಶನ ಹಬ್ಬ ಬಹುತೇಕ ಭಾರತದಾದ್ಯಂತ ಆಚರಿಸಲ್ಪಡುವುದರಿಂದ ಹೆಚ್ಚಿನ ಕಡೆ ರಜೆ ಇದೆ. ಆದರೆ, ಬ್ಯಾಂಕುಗಳು ಮತ್ತು ಷೇರು ಬಜಾರುಗಳಿಗೆ ಆಗಸ್ಟ್ 27, ಬುಧವಾರ ರಜೆ ಇರುತ್ತದಾ? ಆಗಸ್ಟ್ 27, ಬುಧವಾರದಂದು ಗಣೇಶ ಹಬ್ಬದ ಪ್ರಯುಕ್ತ ರಾಷ್ಟ್ರೀಯ ರಜಾ ದಿನವಾಗಿ ಘೋಷಿಸಲಾಗಿದೆ. ಆರ್​ಬಿಐ ಕ್ಯಾಲಂಡರ್ ಪ್ರಕಾರವೂ (RBI holiday calendar) ಬಹುತೇಕ ಎಲ್ಲಾ ಪ್ರದೇಶಗಳಲ್ಲೂ ವಿನಾಯಕ ಚತುರ್ಥಿಗೆ ರಜೆ ಇರುತ್ತದೆ.

ಆಗಸ್ಟ್ ತಿಂಗಳಲ್ಲಿ ಒಟ್ಟು 16 ದಿನ ಬ್ಯಾಂಕ್ ರಜೆ ಇತ್ತು. ಇದರಲ್ಲಿ ಸ್ವಾತಂತ್ರ್ಯ ದಿನಾಚರಣೆ, ಕೃಷ್ಣ ಜನ್ಮಾಷ್ಟಮಿ ಮತ್ತು ವಿನಾಯಕ ಚತುರ್ಥಿಗೆ ಸಾರ್ವತ್ರಿಕವಾಗಿ ರಜೆ ನೀಡಲಾಗಿತ್ತು. ಆಗಸ್ಟ್ 28ರಂದು ನುವಾಖೈ ಹಬ್ಬ ಇದೆಯಾದರೂ ಒಡಿಶಾ ಮತ್ತು ಗೋವಾದಲ್ಲಿ ಮಾತ್ರ ರಜೆ ಇರುವುದು. ಆಗಸ್ಟ್ 30, ಶನಿವಾರ ಎಂದಿನಂತೆ ಬ್ಯಾಂಕ್ ತೆರೆದಿರುತ್ತದೆ. ಆಗಸ್ಟ್ 31, ಭಾನುವಾರ ಬ್ಯಾಂಕುಗಳಿಗೆ ರಜೆ ಇರುತ್ತದೆ.

ಇದನ್ನೂ ಓದಿ: ಆರ್​ಬಿಐ ಹೊಸ ವ್ಯವಸ್ಥೆ: ಚೆಕ್ ಡೆಪಾಸಿಟ್ ಆಗಲು 2 ದಿನ ಕಾಯಬೇಕಿಲ್ಲ; ಕೆಲವೇ ಗಂಟೆಯಲ್ಲಿ ಹಣ ಬರುತ್ತೆ

ಆಗಸ್ಟ್ 27ಕ್ಕೆ ಷೇರು ಮಾರುಕಟ್ಟೆ ಇರುತ್ತದಾ?

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ಗಳು ವಿನಾಯಕ ಚತುರ್ಥಿಗೆ ರಜೆ ನೀಡಿವೆ. ಈ ಬುಧವಾರ ಯಾವುದೇ ಟ್ರೇಡಿಂಗ್ ನಡೆಯಲು ಅವಕಾಶ ಇರುವುದಿಲ್ಲ. ನೀವು ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡಬಹುದಾದರೂ, ಅವು ಎಕ್ಸಿಕ್ಯೂಟ್ ಆಗುವುದು ಗುರುವಾರ ಬೆಳಗ್ಗೆಯೇ.

ಷೇರುಪೇಟೆಗೆ ಮತ್ತಿನ್ಯಾವತ್ತು ರಜೆ ಇದೆ?

ಆಗಸ್ಟ್​ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಈಗ ವಿನಾಯಕ ಚತುರ್ಥಿಗೆ ಷೇರು ಮಾರುಕಟ್ಟೆ ಬಂದ್ ಆಗಿದೆ. ಸೆಪ್ಟೆಂಬರ್​ನಲ್ಲಿ ಶನಿವಾರ ಮತ್ತು ಭಾನುವಾರ ಬಿಟ್ಟರೆ ಬೇರೆ ದಿನ ಪೇಟೆಗೆ ರಜೆ ಇರುವುದಿಲ್ಲ. ಅಕ್ಟೋಬರ್​ನಲ್ಲಿ ಬರೋಬ್ಬರಿ ಮೂರು ದಿನ ರಜೆ ಇದೆ.

ಇದನ್ನೂ ಓದಿ: ಆಗಸ್ಟ್​ನಲ್ಲಿ ಗಣೇಶ ಹಬ್ಬ, ಸ್ವಾತಂತ್ರ್ಯ ದಿನಾಚರಣೆ; 16 ದಿನ ಬ್ಯಾಂಕ್ ರಜೆ; ಇಲ್ಲಿದೆ ಪಟ್ಟಿ

ಅಕ್ಟೋಬರ್ 2ರಂದು ಗಾಂಧಿ ಜಯಂತಿ; 21ರಂದು ದೀಪಾವಳಿ ಲಕ್ಷ್ಮೀ ಪೂಜೆ; ಹಾಗೂ 22ರಂದು ಬಲಿಪಾಡ್ಯಮಿ ಪ್ರಯುಕ್ತ ಷೇರು ಮಾರುಕಟ್ಟೆಗಳು ಬಂದ್ ಆಗಿರುತ್ತವೆ. ನವೆಂಬರ್​ನಲ್ಲಿ 5ನೇ ತಾರೀಖು ಗುರುನಾನಕ್ ಜಯಂತಿ ಹಾಗೂ ಡಿಸೆಂಬರ್ 25ರಂದು ಕ್ರಿಸ್ಮಸ್ ಹಬ್ಬಕ್ಕೆ ಷೇರುಪೇಟೆ ವ್ಯವಹಾರ ಇರುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ