AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲು ಸಾಲು ರಜೆ: ಊರುಗಳಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್​

ಸಾಲು ಸಾಲು ರಜೆ: ಊರುಗಳಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್​

ವಿವೇಕ ಬಿರಾದಾರ
|

Updated on:Aug 22, 2025 | 10:14 PM

Share

ಬೆಂಗಳೂರಿನಲ್ಲಿ ವಾರಾಂತ್ಯದ ರಜೆ ಮತ್ತು ಗೌರಿ-ಗಣೇಶ ಹಬ್ಬದಿಂದಾಗಿ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ. ತುಮಕೂರು, ಬಳ್ಳಾರಿ, ಶಿವಾನಂದ ಸರ್ಕಲ್ ಫ್ಲೈಓವರ್ ಮತ್ತು ಮೈಸೂರು ರಸ್ತೆಗಳಲ್ಲಿ ವಾಹನಗಳು ಗಂಟೆಗಟ್ಟಲೆ ಸಿಲುಕಿಕೊಂಡಿವೆ. ಬಹುತೇಕ ರಸ್ತೆಗಳು ಜನದಟ್ಟಣೆಯಿಂದ ತುಂಬಿವೆ. ಇದರಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಬೆಂಗಳೂರು, ಆಗಸ್ಟ್​ 22: ವಾರಾಂತ್ಯದ ರಜೆ ಮತ್ತು ಗೌರಿ- ಗಣೇಶ ಹಬ್ಬ (Gauri-Ganesha Festival) ಅಂತ ಬೆಂಗಳೂರಿನಿಂದ (Bengaluru) ಅನೇಕ ಜನರು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತುಮಕೂರು, ಬಳ್ಳಾರಿ, ಶಿವನಾಂದ ಸರ್ಕಲ್​ ಫ್ಲೈ ಓವರ್ ಮತ್ತು ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​ ಉಂಟಾಗಿದೆ. ಇದರಿಂದ ವಾಹನ ಸವಾರರು ಗಂಟೆಗಟ್ಟಲೇ ಟ್ರಾಫಿಕ್​ನಲ್ಲಿ ಸಿಲುಕಿಕೊಂಡಿದ್ದಾರೆ. ಸಂಚಾರ ದಟ್ಟಣೆಗೆ ವಾಹನ ಸವಾರರು ಹೈರಾಣಾಗಿದ್ದಾರೆ.

Published on: Aug 22, 2025 10:13 PM