AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೇ 50ರ ರಿಯಾಯಿತಿಯೊಂದಿಗೆ ಟ್ರಾಫಿಕ್ ಫೈನ್ ಆನ್​ಲೈನ್, ಆಫ್​ಲೈನ್ ಮೂಲಕ ಪಾವತಿಸುವ ಸುಲಭ ವಿಧಾನ ಇಲ್ಲಿದೆ

ಬೆಂಗಳೂರಿನ ಸಂಚಾರ ಪೊಲೀಸರು 2023 ರ ಫೆಬ್ರುವರಿ 11 ರವರೆಗೆ ದಾಖಲಾದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡದ ಮೇಲೆ ಆಗಸ್ಟ್ 23 ರಿಂದ ಸೆಪ್ಟೆಂಬರ್ 12 ರವರೆಗೆ ಶೇ 50 ರ ರಿಯಾಯಿತಿಯನ್ನು ಘೋಷಿಸಿದ್ದಾರೆ. ರಿಯಾಯಿತಿ ಮೊತ್ತದ ದಂಡವನ್ನು ಆನ್​ಲೈನ್ ಮತ್ತು ಆಫ್​ಲೈನ್ ಮೂಲಕ ಸುಲಭವಾಗಿ ಪಾವತಿ ಮಾಡಬಹುದಾದ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ.

ಶೇ 50ರ ರಿಯಾಯಿತಿಯೊಂದಿಗೆ ಟ್ರಾಫಿಕ್ ಫೈನ್ ಆನ್​ಲೈನ್, ಆಫ್​ಲೈನ್ ಮೂಲಕ ಪಾವತಿಸುವ ಸುಲಭ ವಿಧಾನ ಇಲ್ಲಿದೆ
ಸಾಂದರ್ಭಿಕ ಚಿತ್ರ
Ganapathi Sharma
|

Updated on: Aug 22, 2025 | 11:25 AM

Share

ಬೆಂಗಳೂರು, ಆಗಸ್ಟ್ 22: ಸಂಚಾರಿ ನಿಯಮಗಳ ಉಲ್ಲಂಘನೆ (Traffic Rules Violation) ಮಾಡಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡವರಿಗೆ ಕಳೆದ ವರ್ಷದಂತೆಯೇ ಈ ವರ್ಷ ಕೂಡ ಸಂಚಾರ ಪೊಲೀಸರು ಶೇ 50 ರ ರಿಯಾಯಿತಿ ಘೋಷಣೆ (Traffic Fine Discount)  ಮಾಡಿದ್ದಾರೆ. ಒಂದು ಬಾರಿಯ ರಿಯಾಯಿತಿ ಇದಾಗಿದ್ದು, ಆಗಸ್ಟ್ 23 ರಿಂದ ಸೆಪ್ಟೆಂಬರ್ 12 ರ ವರೆಗೆ ಅವಕಾಶ ನೀಡಲಾಗಿದೆ. ಈ ಆಫರ್ 2023 ರ ಫೆಬ್ರವರಿ 11 ರವರೆಗೆ ದಾಖಲಾದ ಪ್ರಕರಣಗಳಿಗೆ ಮಾತ್ರ ಅನ್ವಯವಾಗಲಿದೆ. ಕಳೆದ ವರ್ಷದಂತೆ ಈ ಬಾರಿ ಕೂಡ ವಾಹನ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ರಿಯಾಯಿತಿಯೊಂದಿಗೆ ದಂಡ ಪಾವತಿಸುವ ನಿರೀಕ್ಷೆ ಇದ್ದು, ಎಲ್ಲೆಲ್ಲಿ ದಂಡ ಪಾವತಿ ಮಾಡಬಹುದು ಎಂಬ ಮಾಹಿತಿಯನ್ನು ಬೆಂಗಳೂರು ಸಂಚಾರ ಪೊಲೀಸರು ಹಂಚಿಕೊಂಡಿದ್ದಾರೆ.

ಬಾಕಿ ಇರುವ ದಂಡ ವೀಕ್ಷಿಸುವುದು, ಪಾವತಿಸುವುದು ಹೇಗೆ?

ಕರ್ನಾಟಕ ಸ್ಟೇಟ್ ಪೊಲೀಸ್ (ಕೆಎಸ್​​​ಪಿ) ಆ್ಯಪ್, ಬಿಟಿಪಿ ಅಸ್ತ್ರಂ ಆ್ಯಪ್ ಮುಖಾಂತರ ರಿಯಾಯಿತಿ ದರದಲ್ಲಿ ದಂಡ ಪಾವತಿಸಬಹುದಾಗಿದೆ. ಹತ್ತಿರದ ಸಂಚಾರ ಪೊಲೀಸ್ ಠಾಣೆಗಳಲ್ಲಿ ನಿಮ್ಮ ವಾಹನದ ನೊಂದಣಿ ಸಂಖ್ಯೆಯ ವಿವರಗಳನ್ನು ಒದಗಿಸಿ ದಂಡವನ್ನು ಪಾವತಿಸಬಹುದಾಗಿದೆ. ಅಲ್ಲದೆ, ಅಲ್ಲಲ್ಲಿ ಇರುವ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಪಾವತಿಸಬಹುದಾಗಿದೆ. ಕರ್ನಾಟಕ ಒನ್/ಬೆಂಗಳೂರು ಒನ್ ವೆಬ್‌ಸೈಟ್‌ನಲ್ಲಿ ವಿವರಗಳನ್ನು ಪಡೆದು ಪಾವತಿಸಬಹುದಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಟ್ರಾಫಿಕ್ ಫೈನ್ ಆನ್​ಲೈನ್ ಮೂಲಕ ಪಾವತಿಸೋದು ಹೇಗೆ?

  • ಕರ್ನಾಟಕ ಸ್ಟೇಟ್ ಪೊಲೀಸ್ (KSP App) ಅಥವಾ ಬಿಟಿಪಿ ಅಸ್ತ್ರಂ (BTP ASTraM) ಅಪ್ಲಿಕೇಶನ್ ಇನ್​ಸ್ಟಾಲ್ ಮಾಡಿಕೊಳ್ಳಿ.
  • ಬಾಕಿ ಇರುವ ಟ್ರಾಫಿಕ್ ಚಲನ್‌ಗಳನ್ನು ವೀಕ್ಷಿಸಲು ನಿಮ್ಮ ವಾಹನ ನೋಂದಣಿ ಸಂಖ್ಯೆಯನ್ನು ನಮೂದಿಸಿ.
  • ನೀವು ಪಾವತಿಸಲು ಬಯಸುವ ದಂಡದ ಮೊತ್ತವನ್ನು ಆಯ್ಕೆ ಮಾಡಿ.
  • ಈಗ ನಿಮಗೆ ಟ್ರಾಫಿಕ್ ದಂಡದ ರಿಯಾಯಿತಿ ಮೊತ್ತ ಕಾಣಿಸುತ್ತದೆ, ಇದು ಮೂಲ ದಂಡದ ಶೇ 50 ಆಗಿದೆ. ನಂತರ ಪಾವತಿಗೆ ಮುಂದುವರಿಯಿರಿ.
  • ನಿಮ್ಮ ಆದ್ಯತೆಯ ಆನ್‌ಲೈನ್ ವಿಂಡೋ (ಫೋನ್ ಪೇ, ಗೂಗಲ್ ಪೇ ಇತ್ಯಾದಿ) ಆಯ್ಕೆ ಮಾಡುವ ಮೂಲಕ ಪಾವತಿ ಮಾಡಿ.
  • ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ವೆಬ್‌ಸೈಟ್‌ಗಳಲ್ಲಿಯೂ ಆನ್​ಲೈನ್​ ಪಾವತಿಗೆ ಅವಕಾಶ ಇದೆ.

ಟ್ರಾಫಿಕ್ ಫೈನ್ ಆಫ್​ಲೈನ್ ಪಾವತಿ ಹೇಗೆ?

  • ನಿಮ್ಮ ಹತ್ತಿರದ ಸಂಚಾರ ಪೊಲೀಸ್ ಠಾಣೆ ಅಥವಾ ಸಂಚಾರ ನಿರ್ವಹಣಾ ಕೇಂದ್ರಕ್ಕೆ ಹೋಗಿ.
  • ಕೌಂಟರ್‌ನಲ್ಲಿರುವ ಸಿಬ್ಬಂದಿಗೆ ನಿಮ್ಮ ವಾಹನ ನೋಂದಣಿ ಸಂಖ್ಯೆಯನ್ನು ನೀಡಿ.
  • ರಿಯಾಯಿತಿ ಮೊತ್ತವನ್ನು (ಮೂಲ ದಂಡದ 50%) ಕೌಂಟರ್‌ನಲ್ಲಿ ಪಾವತಿಸಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ