ಶಿವಕುಮಾರ್ಗೆ ಒಬ್ಬ ಕಾಂಗ್ರೆಸ್ಸಿಗನಾಗಿ ತಮ್ಮ ತಪ್ಪಿನ ಅರಿವಾಗಿದ್ದರೆ ಬಹಳ ಸಂತೋಷ: ಬಿಕೆ ಹರಿಪ್ರಸಾದ್
ಶಿವಕುಮಾರ್ ಅವರಿಗೆ ಆರೆಸ್ಸೆಸ್ ಪ್ರಾರ್ಥನಾ ಗೀತೆ ಹೇಳಿದ್ದು ತಪ್ಪೆನಿಸಿದ್ದರೆ ಮತ್ತು ಒಬ್ಬ ಕಾಂಗ್ರೆಸ್ಸಿಗನಾಗಿ ಅವರಿಗೆ ತಮ್ಮ ತಪ್ಪಿನ ಅರಿವಾಗಿದ್ದರೆ ಬಹಳ ಸಂತೋಷ, ತಾನು ಆಗಲೇ ಹೇಳಿದಂತೆ ಕಾಂಗ್ರೆಸ್ ಒಬ್ಬಿಬ್ಬರಿಗೆ ಸೇರಿದ್ದಲ್ಲ, ಶೇಕಡ 20ರಿಂದ 60 ರಷ್ಟು ಭಾರತೀಯರು ಬೆಂಬಲ ನೀಡಿರುವ ಪಕ್ಷ ಇದು, ವೈಯಕ್ತಿಕವಾಗಿ ತನಗೆ ಶಿವಕುಮಾ್ ಜೊತೆ ಯಾವುದೇ ಸಮಸ್ಯೆಯಿಲ್ಲ ಎಂದು ಹರಿಪ್ರಸಾದ್ ಹೇಳಿದರು.
ಬೆಂಗಳೂರು, ಆಗಸ್ಟ್ 26: ಆರೆಸ್ಸೆಸ್ ಪ್ರಾರ್ಥನಾ ಗೀತೆಯನ್ನು ಸದನದಲ್ಲಿ ಹಾಡಿದ್ದಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಮತ್ತು ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಕ್ಷಮೆ ಕೇಳಿದ ನಂತರ ಮಾಧ್ಯಮದವರೊಂದಿಗೆ ಮಾತಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್, ತಾನು 50ವರ್ಷಗಳಿಂದ ಸೈದ್ಧಾಂತಿಕವಾಗಿ ಪಕ್ಷದಲ್ಲಿದ್ದೇನೆ, ಹಿರಿಯ ನಾಯಕನಾಗಿ, ವಿಧಾನ ಪರಿಷತ್ ಸದಸ್ಯನಾಗಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯನಾಗಿ ತಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದರು. ಕಾಂಗ್ರೆಸ್ ಪಕ್ಷವನ್ನು ನಾನಾಗಲೀ ಶಿವಕುಮಾರ್ ಆಗಲೀ ಕಟ್ಟಿದ್ದಲ್ಲ; ಪಕ್ಷವನ್ನು ಪೋಷಿಸಿ ಬೆಳೆಸಿದ ಮಹಾತ್ಮಾ ಗಾಂಧಿ, ಕಾಂಗ್ರೆಸ್ ಮತ್ತು ತಿರಂಗವನ್ನು ದ್ವೇಷಿಸುವ ಆರೆಸ್ಸೆಸ್ ಮತ್ತು ನಾಥೂರಾಮ್ ಗೋಡ್ಸೆಯ ಪ್ರಾರ್ಥನಾ ಗೀತೆ ನಮಗೆ ಬೇಕಿಲ್ಲ, ಶಿವಕುಮಾರ್ ಒಬ್ಬ ಮುಖ್ಯಮಂತ್ರಿಯಾಗಿ ಅದನ್ನು ಹೇಳಿಕೊಳ್ಳಲಿ, ಅಭ್ಯಂತರವೇನೂ ಇಲ್ಲ, ಆದರೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಅವರು ಅದನ್ನು ಹೇಳಲೇಬಾರದು ಎಂದು ಹರಿಪ್ರಸಾದ್ ಹೇಳಿದರು.
ಇದನ್ನೂ ಓದಿ: RSS ಎನ್ನುವುದು ಏನು? ಉತ್ತರಿಸುವಂತೆ ಬಿಜೆಪಿ ನಾಯಕರಿಗೆ ಬಿಕೆ ಹರಿಪ್ರಸಾದ್ ಸವಾಲು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

