AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರಿನ ಮುಸ್ಲಿಂ ಮಹಿಳೆ ವಿರುದ್ಧ ಸಮುದಾಯದವರಿಂದಲೇ ದೇಶದ್ರೋಹದ ದೂರು, ಮಹಿಳೆಯ ಸ್ಪಷ್ಟನೆ

ತುಮಕೂರಿನ ಮುಸ್ಲಿಂ ಮಹಿಳೆ ವಿರುದ್ಧ ಸಮುದಾಯದವರಿಂದಲೇ ದೇಶದ್ರೋಹದ ದೂರು, ಮಹಿಳೆಯ ಸ್ಪಷ್ಟನೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 26, 2025 | 1:09 PM

Share

ಬೇರೆ ದೇಶಗಳಿಂದ ತನಗೆ ಹಣ ಬರುತ್ತಿದೆ ಎಂದು ಅರೋಪಿಸಲಾಗಿದೆ, ಪಾಸ್ ಬುಕ್​ಅನ್ನು ಪೋಲಿಸರ ತಪಾಸಣೆಗೆ ಒಪ್ಪಿಸಿದ್ದೇನೆ, ಅದನ್ನವರು ಪ್ರೂವ್ ಮಾಡಲಿ, ಅಸಲಿಗೆ ತಾನು ಷರಿಯತ್ ಮತ್ತು ತರೀಖತ್ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಟಾರ್ಗೆಟ್ ಮಾಡಲಾಗುತ್ತಿದೆ , ಅವರ ಮಕ್ಕಳಾದರೆ ಒಳ್ಳೇ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿ ಸಮಾಜದಲ್ಲಿ ಉತ್ತಮ ಹೆಸರು ಪಡೆಯಬೇಕು, ಆದರೆ ತಾವಾದರೋ ಮದರಸಾಗಳಲ್ಲಿ ಓದಬೇಕು ಎನ್ನುವ ಮನೋಭಾವ ಅವರಲ್ಲಿದೆ ಎಂದು ಇಶ್ರತ್ ಹೇಳುತ್ತಾರೆ.

ತುಮಕೂರು, ಆಗಸ್ಟ್ 26: ತುಮಕೂರು ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದ (Muslim community) ಜನಸಂಖ್ಯೆ ಎಷ್ಟಿದೆಯೋ ನಿಖರವಾಗಿ ಗೊತ್ತಿಲ್ಲ, ಅದರೆ ಸಮುದಾಯದ ನಡುವೆ ಒಳಜಗಳಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಪ್ರಗತಿಪರ ವಿಚಾರಧಾರೆಗಳನ್ನು ಹೊಂದಿದಂತೆ ಕಾಣುವ ಇಶ್ರತ್ ಹೆಸರಿನ ಮಹಿಳೆಯ ವಿರುದ್ಧ ಸ್ಥಳೀಯ ಮುಸ್ಲಿಂ ಧಾರ್ಮಿಕ ಮುಖಂಡರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ದೂರೊಂದನ್ನು ಸಲ್ಲಿಸಿ ಅವರು ದೇಶವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆಂದು ಹೇಳಿದ್ದಾರೆ. ಮೆಹದಿ ಫೌಂಡೇಶನ್ ಇಂಟರ್​​ನ್ಯಾಶನಲ್ ಹೆಸರಿನ ಸಂಸ್ಥೆಯು ಪಾಕಿಸ್ತಾನ ಮೂಲದ ಸೂಫಿ ಪಂಥದ ಪ್ರಚಾರದಲ್ಲಿ ಇಶ್ರತ್ ತೊಡಗಿದ್ದರೆಂದು ಅರೋಪಿಸಿದೆ. ದೇಶದ್ರೋಹದಂಥ ಯಾವುದೇ ಕೆಲಸ ನಡೆದಿಲ್ಲ, ತನ್ನ ಆಚಾರ ವಿಚಾರಗಳಿಂದ ಅವರಿಗೇನು ಸಮಸ್ಯೆ ಇದೆಯೋ ಗೊತ್ತಿಲ್ಲ, ಇಸ್ಲಾಂ ಧರ್ಮದ ಯಾವ ಕಟ್ಟುಪಾಡನ್ನೂ ತಾನು ಉಲ್ಲಂಘಿಸಿಲ್ಲ ಎಂದು ಇಶ್ರತ್ ಹೇಳುತ್ತಾರೆ.

ಇದನ್ನೂ ಓದಿ:  ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ಗೆ ಸಿಡಿ ಶಾಕ್ ಕೊಟ್ಟ ಮುಸ್ಲಿಂ ಮುಖಂಡರು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ