AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಟ್ಟಣ್ಣನವರ್​ಗೆ ಮತ್ತಷ್ಟು ಸಂಕಷ್ಟ, ಜೈನ ರಾಜರನ್ನು ಕ್ರೂರಿಗಳು ಅಂದ ಆರೋಪದ ಹಿನ್ನೆಲೆ ಎಫ್ಐಆರ್

ಮಟ್ಟಣ್ಣನವರ್​ಗೆ ಮತ್ತಷ್ಟು ಸಂಕಷ್ಟ, ಜೈನ ರಾಜರನ್ನು ಕ್ರೂರಿಗಳು ಅಂದ ಆರೋಪದ ಹಿನ್ನೆಲೆ ಎಫ್ಐಆರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 26, 2025 | 5:57 PM

Share

ಮಟ್ಟಣ್ಣನವರ್ ವಿರುದ್ಧ ದಾಖಲಾಗಿರುವ ಎಫ್ಐಅರ್ ಪ್ರತಿ ಮತ್ತು ತನ್ನಲ್ಲಿರುವ ಸಾಕ್ಷ್ಯಗಳನ್ನು ತೆಗೆದುಕೊಂಡು ಬರುವಂತೆ ಬೆಳ್ತಂಗಡಿ ಪೊಲೀಸರು ಹೇಳಿದ್ದರಿಂದ ಮಂಜುನಾಥ್ ಇಲ್ಲಿಗೆ ಆಗಮಿಸಿದ್ದಾರೆ. ಮಟ್ಟಣ್ಣನವರ್ ಮತ್ತು ಯೂಟ್ಯೂಬ್ ಚ್ಯಾನೆಲ್ ಮಾಲೀಕ ವಿರುದ್ಧ ಕಾನೂನು ಕ್ರಮ ಜರುಗಬೇಕು, ಅವರು ಕ್ಷಮಾಪಣೆ ಕೇಳಿದರೆ ಅದು ತನಗೆ ಸ್ವೀಕೃತವಲ್ಲ ಎಂದು ಜೈನ ಸಮುದಾಯದವರಾಗಿರುವ ಮಂಜುನಾಥ್ ಹೇಳುತ್ತಾರೆ.

ದಕ್ಷಿಣ ಕನ್ನಡ, ಆಗಸ್ಟ್ 26: ಹೋರಾಟಗಾರ ಎಂದು ಹೇಳಿಕೊಂಡು ತಿರುಗುತ್ತಿರುವ ಗಿರೀಶ್ ಮಟ್ಟಣ್ಣನವರ್​ಗೆ (Girish Mattennanavar) ಸಂಕಷ್ಟಗಳ ಸರಮಾಲೆ ಎದುರಾಗಿದೆ. ಧಾರವಾಡದ ಮಂಜುನಾಥ್ (Manjunath, Dharwad) ಎನ್ನುವವರು ಮಟ್ಟಣ್ಣನವರ್ ವಿರುದ್ಧ ಧಾರವಾಡ ಗ್ರಾಮೀಣ ಪೊಲೀಸ್ ಸ್ಟೇಶನ್​ನಲ್ಲಿ ದೂರೊಂದನ್ನು ನೀಡಿ ಎಫ್​ಐಆರ್ ದಾಖಲಿಸಿದ್ದರು. ಮಟ್ಟಣ್ಣನವರ್ ಬೆಳ್ತಂಗಡಿಯಲ್ಲಿ ಜೈನ ರಾಜರು ಮತ್ತು ಸುಮುದಾಯದ ವಿರುದ್ಧ ಹೇಳಿಕೆ ನೀಡಿದ್ದರಿಂದ ಆ ಎಫ್​ಐಅರ್ ಅನ್ನು ಇಲ್ಲಿಗೆ ವರ್ಗಾಯಿಸಲಾಗಿದೆ. ಜೈನ ರಾಜರು ಕ್ರೂರಿಗಳಾಗಿದ್ದರು, ಏಕಶಿಲೆಯಲ್ಲಿ ಬಾಹುಬಲಿಯನ್ನು ಕೆತ್ತಿದ ಶಿಲ್ಪಿಗಳ ಕೈಗಳನ್ನು ಕಟ್ ಮಾಡಿದ್ದರು, ಮತ್ತು ಅವರ ಶಾಸನ ಕಾಲದಲ್ಲಿ ಮದುವೆಯಾದ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಜೊತೆ ಮೊದಲ ರಾತ್ರಿಯಲ್ಲಿ ಭಾಗಿಯಾಗುವ ಮೊದಲು ಆಕೆಯನ್ನು ರಾಜರ ಬಳಿಗೆ ಕಳಿಸಬೇಕಿತ್ತು ಅಂತ ಗಿರೀಶ್ ಮಟ್ಟಣ್ಣನವರ್ ಜೈನ ರಾಜರನ್ನು ಬಹಳ ಕೆಟ್ಟದ್ದಾಗಿ ಚಿತ್ರಿಸುವ ಕೆಲಸ ಮಾಡಿದ್ದಾರೆ ಎಂದು ಮಂಜುನಾಥ್ ಆರೋಪಿಸಿದ್ದಾರೆ.

ಇದನ್ನೂ ಓದಿ:  ಧರ್ಮಸ್ಥಳ ಪ್ರಕರಣ: ‘ಬುರುಡೆ’ ಚಿನ್ನಯ್ಯನ ಮೂಲ ಕೆದಕಿದ ಎಸ್ಐಟಿ, ತಮಿಳುನಾಡಿಗೂ ಲಿಂಕ್!

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ