AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರದ ಇಂಧನ ಖರ್ಚಾಗುವುದು ಬೇಡ ಅಂತ ಅರೆಸ್ಟ್ ಆಗಲು ನಾವೇ ಠಾಣೆಗೆ ಬಂದಿದ್ದೇವೆ: ಗಿರೀಶ್ ಮಟ್ಟಣ್ಣನವರ್

ಸರ್ಕಾರದ ಇಂಧನ ಖರ್ಚಾಗುವುದು ಬೇಡ ಅಂತ ಅರೆಸ್ಟ್ ಆಗಲು ನಾವೇ ಠಾಣೆಗೆ ಬಂದಿದ್ದೇವೆ: ಗಿರೀಶ್ ಮಟ್ಟಣ್ಣನವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 22, 2025 | 2:53 PM

Share

ಭೀಮ ಸುಳ್ಳು ಹೇಳುತ್ತಿದ್ದಾನೆ, ಹಾಗಾಗೇ ಮಹೇಶ್ ತಿಮರೋಡಿಯನ್ನು ಬಂಧಿಸಲಾಗಿದೆ ಎಂಬ ಒಂದು ಸುಳ್ಳು ನೆರೇಟಿವನ್ನು ಸೃಷ್ಟಿಸಲಾಗುತ್ತಿದೆ, ತಿಮರೋಡಿಯವರನ್ನು ಬಂಧಿಸಲು ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ, ಕೊಟ್ಟ ನೋಟೀಸ್​ಗೆ ಉತ್ತರ ನೀಡುವ ಅವಕಾಶವನ್ನೂ ನಮಗೆ ನೀಡಿಲ್ಲ, ದಿಢೀರನೆ ಮನೆಯ ಮೇಲೆ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಗಿರೀಶ್ ಮಟ್ಟಣ್ಣನವರ್ ಹೇಳಿದರು.

ಮಂಗಳೂರು, ಆಗಸ್ಟ್ 22: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗಿರೀಶ್ ಮಟ್ಟಣ್ಣನವರ್, ನಿನ್ನೆ ಮಹೇಶ್ ಶೆಟ್ಟಿ ತಿಮರೋಡಿಯನ್ನು ಅರೆಸ್ಟ್ ಮಾಡಲು ಪೊಲೀಸರು ಅವರ ಮನೆವರೆಗೆ ಹೋಗುವ ಅವಶ್ಯಕತೆ ಇರಲಿಲ್ಲ, ನಮಗೆ ಜಾರಿಗೊಳಿಸಿದ್ದ ನೋಟೀಸಿಗೆ ಉತ್ತರ ಕೊಡಲೆಂದು ನಾವೆಲ್ಲ ಸೇರಿ ಬ್ರಹ್ಮಾವರ ಪೊಲೀಸ್ ಠಾಣೆಗೆ ಹೋಗುವ ಸಿದ್ಧತೆಯಲ್ಲಿದ್ದಾಗಲೇ ಎರಡು ಜಿಲ್ಲೆಗಳ ಸುಮಾರು 100 ಕ್ಕೂ ಹೆಚ್ಚು ಪೊಲೀಸರು ಬಂದು ತಿಮರೋಡಿಯನ್ನು ಅರೆಸ್ಟ್ ಮಾಡಿದ್ದಾರೆ ಎಂದು ಹೇಳಿದರು. ಈಗ ಹರಿದಾಡುತ್ತಿರುವ ಸುದ್ದಿಯೇನೆಂದರೆ ಜಯಂತ್, ತಾನು ಮತ್ತು ಇತರ 30 ಜನರ ವಿರುದ್ಧ ಎಫ್ಐಅರ್ ದಾಖಲಾಗಿದೆ, ಪೊಲೀಸರು ತಮ್ಮನ್ನು ಅರೆಸ್ಟ್ ಮಾಡೋದಾದರೆ ಮಾಡಲಿ, ತೊಂದರೆ ಇಲ್ಲ, ತಮ್ಮೊಂದಿಗೆ ತಿಮರೋಡಿ ಅವರ ಸಹೋದರ ಮತ್ತು ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳಿದ್ದಾರೆ, ಇನ್ ಫ್ಯಾಕ್ಟ್ ಪೊಲೀಸರಿಗೆ ತೊಂದರೆ ಬೇಡ, ಸರ್ಕಾರದ ಪೆಟ್ರೋಲ್, ಡೀಸೆಲ್ ಖರ್ಚಾಗೋದು ಬೇಡ ಅಂತ ನಾವೇ ಪೊಲೀಸ್ ಸ್ಟೇಷನ್​ಗೆ ಬಂದಿದ್ದೇವೆ ಎಂದು ಮಟ್ಟಣ್ಣನವರ್ ಹೇಳಿದರು.

ಇದನ್ನೂ ಓದಿ:  ತಿಮರೋಡಿನ ಒದ್ದು ಒಳಗೆ ಹಾಕಿಸಿದ್ದೇವೆ: ಡಿಕೆ ಶಿವಕುಮಾರ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ