ಜಮೀರ್ರನ್ನು ಛೇಡಿಸಲು ಹೋಗಿ ಸಿದ್ದರಾಮಯ್ಯರಿಂದ ಬುದ್ಧಿಮಾತು ಹೇಳಿಸಿಕೊಂಡ ಅರವಿಂದ್ ಬೆಲ್ಲದ್
ಬಿಜೆಪಿ ಶಾಸಕ ಎಸ್ ಸುರೇಶ್ ಕುಮಾರ್ ಬೆಂಗಳೂರು ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರವೇ ಪ್ರಚೋದಕ ಅಂತ ಹೇಳಿದ್ದನ್ನು ಸಿಎಂ ಸಿದ್ದರಾಮಯ್ಯ ಒಪ್ಪಲ್ಲ. ಅವರು ಸರ್ಕಾರವನ್ನು ಯಾಕೆ ಅಬೆಟರ್ ಅಂತಾರೋ ಗೊತ್ತಿಲ್ಲ, ಆದರೆ ವಿಷಯವನ್ನು ಸಾರ್ವಜನಿಕರ ಸುಪರ್ದಿಗೆ ಬಿಡುತ್ತೇನೆ, ಅವರೇ ನಿರ್ಧಾರ ತೆಗೆದುಕೊಳ್ಳಲಿ, ಕಾಲ್ತುಳಿತ ಪ್ರಕರಣದಲ್ಲಿ 11 ಜನ ಅಮಾಯಕ ಯುವಕರು ಪ್ರಾಣ ಕಳೆದುಕೊಂಡಿದ್ದಕ್ಕೆ ಸರ್ಕಾರ ಕಾರಣವೇ ಅಲ್ಲವೇ ಅನ್ನೋದನ್ನು ಅವರೇ ಹೇಳಲಿ ಎಂದು ಸಿಎಂ ಹೇಳಿದರು.
ಬೆಂಗಳೂರು, ಅಗಸ್ಟ್ 22: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾತೇ ಹಾಗೆ, ನೇರ ಹಾಗೂ ಮೊನಚು. ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ (Aravind Bellad) ಅವರಿಗೆ ಅದು ಗೊತ್ತಿತ್ತು, ಆದರೆ ಇವತ್ತು ಸದನದಲ್ಲಿ ಮತ್ತೊಮ್ಮೆ ಅದನ್ನು ಅರಿತುಕೊಂಡರು. ಮುಖ್ಯಮಂತ್ರಿ ಬೆಂಗಳೂರು ಕಾಲ್ತುಳಿತ ದುರಂತ ವಿಷಯದಲ್ಲಿ ಸದನಕ್ಕೆ ಉತ್ತರ ನೀಡುವಾಗ ಬೆಂಗಳೂರು ಜಿಲ್ಲಾಧಿಕಾರಿ ಅನ್ನುವ ಬದಲು ಜಿಲ್ಲಾಧ್ಯಕ್ಷರು ಅನ್ನುತ್ತಾರೆ. ಅವರ ಹಿಂದೆ ಕುಳಿತಿದ್ದ ಶಾಸಕರೊಬ್ಬರು ಅವರನ್ನು ಸರಿಮಾಡುತ್ತಾರೆ, ಈ ವಿಷಯದಲ್ಲೇ ಬಿಜೆಪಿ ಶಾಸಕರು ಸಿದ್ದರಾಮಯ್ಯ ಕಾಲೆಳೆಯುವ ಪ್ರಯತ್ನ ಮಾಡುತ್ತಾರೆ. ಬೆಲ್ಲದ್ ಅವರು, ನಿಮ್ಮ ಜಮೀರ್ ಅಹ್ಮದ್ಗೆ ಕೊಂಚ ಕನ್ನಡ ಕಲಿಸಿ ಅಂದಾಗ ಸಿದ್ದರಾಮಯ್ಯ, ನಿಂಗೇನೇ ಸರಿಯಾಗಿ ಕನ್ನಡ ಮಾತಾಡಲು ಬರಲ್ಲ, ಬೇರೆಯವರನ್ನು ಛೇಡಿಸುತ್ತೀಯಲ್ಲ ಅನ್ನುತ್ತಾ ಬೆಲ್ಲದ್ ಅವರ ತಂದೆ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಮಾಡಿದ ಕೆಲಸವನ್ನು ವಿವರಿಸುತ್ತಾರೆ.
ಇದನ್ನೂ ಓದಿ: ವಯನಾಡಿಗೆ ಕರ್ನಾಟಕ ಸರ್ಕಾರದಿಂದ 10 ಕೋಟಿ ರೂ. ವಿಶೇಷ ಅನುದಾನ: ‘ಕೇರಳ ಸಿಎಂ ಸಿದ್ದರಾಮಯ್ಯ’ ಎಂದು ಅಶೋಕ್ ವ್ಯಂಗ್ಯ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

