Closing Bell: ಸೆನ್ಸೆಕ್ಸ್ 767 ಪಾಯಿಂಟ್ಸ್, ನಿಫ್ಟಿ 229 ಪಾಯಿಂಟ್ಸ್ ಏರಿಕೆ; ಟೆಕ್ ಮಹೀಂದ್ರಾ ಶೇ 4ರಷ್ಟು ಹೆಚ್ಚಳ
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ನವೆಂಬರ್ 12ನೇ ತಾರೀಕಿನ ಶುಕ್ರವಾರದಂದು ಭಾರೀ ಏರಿಕೆ ದಾಖಲಿಸಿದೆ. ನಿಫ್ಟಿಯಲ್ಲಿ ಏರಿಕೆ, ಇಳಿಕೆ ದಾಖಲಿಸಿದ ಷೇರುಗಳ ವಿವರ ಇಲ್ಲಿದೆ.
ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ ಮತ್ತು ನಿಫ್ಟಿ ನವೆಂಬರ್ 12ನೇ ತಾರೀಕಿನ ಶುಕ್ರವಾರದಂದು ಭರ್ಜರಿ ಏರಿಕೆ ದಾಖಲಿಸಿದೆ. ಸತತ ಮೂರು ದಿನಗಳ ಕುಸಿತದ ನಂತರ ಇಂದು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಯಿತು. ಮಾಹಿತಿ ತಂತ್ರಜ್ಞಾನ, ವಿದ್ಯುತ್ ಮತ್ತು ರಿಯಾಲ್ಟಿ ಸ್ಟಾಕ್ಗಳ ಏರಿಕೆ ಮೂಲಕ ನಿಫ್ಟಿ 18000 ಪಾಯಿಂಟ್ಸ್ ಮೇಲ್ಪಟ್ಟು ದಿನಾಂತ್ಯ ಕಂಡಿತು. ದಿನಾಂತ್ಯದ ವಹಿವಾಟು ಮುಕ್ತಾಯಗೊಳ್ಳುವಾಗ ಸೆನ್ಸೆಕ್ಸ್ 767 ಪಾಯಿಂಟ್ಸ್ ಅಥವಾ ಶೇ 1.28ರಷ್ಟು ಏರಿಕೆಯಾದರೆ, ನಿಫ್ಟಿ 229.20 ಪಾಯಿಂಟ್ಸ್ ಅಥವಾ ಶೇ 1.28ರಷ್ಟು ಹೆಚ್ಚಳವಾಯಿತು. ಇಂದಿನ ವಹಿವಾಟಿನಲ್ಲಿ 1556 ಕಂಪೆನಿ ಷೇರುಗಳು ಏರಿಕೆ ದಾಖಲಿಸಿದರೆ, 1628 ಕಂಪೆನಿ ಷೇರುಗಳು ಇಳಿಕೆ ಕಂಡಿವೆ. 143 ಕಂಪೆನಿಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಇನ್ನು ವಲಯವಾರು ನೋಡುವುದಾದರೆ, ಮಾಹಿತಿ ತಂತ್ರಜ್ಞಾನ, ವಿದ್ಯುತ್, ಕ್ಯಾಪಿಟಲ್ ಗೂಡ್ಸ್, ರಿಯಾಲ್ಟಿ ತಲಾ ಶೇ 1ರಷ್ಟು ಏರಿಕೆ ಕಂಡಿದೆ. ಬಿಎಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಏರಿಕೆಯಲ್ಲಿ ಮುಕ್ತಾಯಗೊಂಡಿವೆ.
ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಟೆಕ್ ಮಹೀಂದ್ರಾ ಶೇ 4.14 ಹಿಂಡಾಲ್ಕೋ ಶೇ 3.22 ಎಚ್ಡಿಎಫ್ಸಿ ಶೇ 2.88 ವಿಪ್ರೋ ಶೇ 2.84 ಇನ್ಫೋಸಿಸ್ ಶೇ 2.71
ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ ಬಜಾಜ್ ಆಟೋ ಶೇ -3.06 ಟಾಟಾ ಸ್ಟೀಲ್ ಶೇ -0.95 ಹೀರೋ ಮೋಟೋಕಾರ್ಪ್ ಶೇ -0.66 ಆಕ್ಸಿಸ್ ಬ್ಯಾಂಕ್ ಶೇ -0.27 ಐಒಸಿ ಶೇ -0.26
ಇದನ್ನೂ ಓದಿ: T+1 Settlement Cycle: ಷೇರುಪೇಟೆಯಲ್ಲಿ T+1 ತೀರುವಳಿ ಫೆಬ್ರವರಿ 25ರಿಂದ ಹಂತ ಹಂತವಾಗಿ ಪರಿಚಯ