T+1 Settlement Cycle: ಷೇರುಪೇಟೆಯಲ್ಲಿ T+1 ತೀರುವಳಿ ಫೆಬ್ರವರಿ 25ರಿಂದ ಹಂತ ಹಂತವಾಗಿ ಪರಿಚಯ

ಟಿ+1 ತೀರುವಳಿ ಚಕ್ರವನ್ನು ಫೆಬ್ರವರಿ 25ರಿಂದ ಅನ್ವಯ ಆಗುವಂತೆ ಹಂತಹಂತವಾಗಿ ಪರಿಚಯಿಸಲಾಗುವುದು ಎಂದು ತಿಳಿಸಲಾಗಿದೆ. ಈ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ.

T+1 Settlement Cycle: ಷೇರುಪೇಟೆಯಲ್ಲಿ T+1 ತೀರುವಳಿ ಫೆಬ್ರವರಿ 25ರಿಂದ ಹಂತ ಹಂತವಾಗಿ ಪರಿಚಯ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Nov 09, 2021 | 11:50 AM

ಷೇರು ಮಾರುಕಟ್ಟೆಗಳು ಮತ್ತು ಇತರ ಮಾರುಕಟ್ಟೆ ಮೂಲಸೌಕರ್ಯ ಸಂಸ್ಥೆಗಳು T+1 (ಟ್ರೇಡ್ ಪ್ಲಸ್ ಒಂದು ದಿನ) ತೀರುವಳಿ ಚಕ್ರವನ್ನು (Settlement Cycle) ಕಾರ್ಯಗತಗೊಳಿಸುವ ಯೋಜನೆಯೊಂದಿಗೆ ಬಂದಿವೆ. ಈ ಕಾರ್ಯವಿಧಾನವನ್ನು ಫೆಬ್ರವರಿ 25ರಿಂದ ಹಂತ ಹಂತವಾಗಿ ಪರಿಚಯಿಸಲಾಗುತ್ತದೆ. ಈಕ್ವಿಟಿ ವಿಭಾಗದಲ್ಲಿ ಲಭ್ಯ ಇರುವ ಯಾವುದೇ ಸೆಕ್ಯೂರಿಟಿಗಳಲ್ಲಿ ಜನವರಿ 1, 2022ರಿಂದ T+1 ತೀರುವಳಿ ಸೈಕಲ್ ಅನ್ನು ಪರಿಚಯಿಸಲು ಸ್ಟಾಕ್ ಎಕ್ಸ್‌ಚೇಂಜ್‌ಗಳಿಗೆ ಸೆಪ್ಟೆಂಬರ್‌ನಲ್ಲಿ ಸೆಬಿ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಇದು ಬರುತ್ತಿದೆ.

ಮಾರುಕಟ್ಟೆ ಬಂಡವಾಳ ಮೌಲ್ಯದ ಆಧಾರದ ಮೇಲೆ ಶ್ರೇಯಾಂಕ  T+1 ಎಲ್ಲ ಮಾರುಕಟ್ಟೆ ವ್ಯಾಪಾರ-ಸಂಬಂಧಿತ ತೀರುವಳಿ ಮೇಲೆ ಪರಿಣಾಮ ಬೀರುತ್ತದೆ. ವಾಸ್ತವ ವಹಿವಾಟುಗಳು ನಡೆಯುವ ಒಂದು ದಿನದೊಳಗೆ ವಿಲೇವಾರಿ ಮಾಡಬೇಕಾಗುತ್ತದೆ ಎಂದು ಸೂಚಿಸುತ್ತದೆ. ಸದ್ಯಕ್ಕೆ ಭಾರತೀಯ ಷೇರು ವಿನಿಮಯ ಕೇಂದ್ರಗಳಲ್ಲಿನ ತೀರುವಳಿಗಳು ವಹಿವಾಟು ಪೂರ್ಣಗೊಂಡ ನಂತರ ಎರಡು ವರ್ಕಿಂಗ್​ ಡೇಸ್​ನಲ್ಲಿ (ಕಾರ್ಯ ನಿರ್ವಹಣೆ ದಿನಗಳಲ್ಲಿ) ಇತ್ಯರ್ಥಗೊಳ್ಳುತ್ತವೆ (T+2). ತೀರುವಳಿ ಚಕ್ರವನ್ನು ಜಾರಿಗೆ ತರಲಾಗುವುದು ಮತ್ತು ತಳ ಭಾಗದಲ್ಲಿನ 100 ಕಂಪೆನಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಅದರ ನಂತರ ಮುಂದಿನ ತಳ ಭಾಗದಲ್ಲಿನ 500 ಸ್ಟಾಕ್‌ಗಳಿಗೆ T+1 ತೀರುವಳಿ ಪರಿಚಯಕ್ಕೆ ಲಭ್ಯವಿರುತ್ತವೆ. ಮಾರುಕಟ್ಟೆ ಮೂಲಸೌಕರ್ಯ ಸಂಸ್ಥೆಗಳು ಅಥವಾ ಎಂಐಐಗಳು, ಕ್ಲಿಯರಿಂಗ್ ಕಾರ್ಪೊರೇಷನ್‌ಗಳು ಮತ್ತು ಡೆಪಾಸಿಟರಿಗಳು ಈ ನಿರ್ಧಾರವನ್ನು ತೆಗೆದುಕೊಂಡಿವೆ.

ಸ್ಟಾಕ್ ಎಕ್ಸ್​ಚೇಂಜ್​ಗಳಾದ್ಯಂತ (BSE, NSE ಮತ್ತು MSEI) ಎಲ್ಲ ಲಿಸ್ಟ್ ಮಾಡಲಾದ ಷೇರುಗಳನ್ನು ಅವರೋಹಣ ಕ್ರಮದಲ್ಲಿ 2021ರ ಅಕ್ಟೋಬರ್ ತಿಂಗಳ ಸರಾಸರಿ ದೈನಂದಿನ ಮಾರುಕಟ್ಟೆ ಬಂಡವಾಳ ಮೌಲ್ಯದ ಪ್ರಕಾರ ಶ್ರೇಯಾಂಕ ನೀಡಲಾಗುತ್ತದೆ. ಒಂದಕ್ಕಿಂತ ಹೆಚ್ಚು ವಿನಿಮಯ ಕೇಂದ್ರಗಳಲ್ಲಿ ಲಿಸ್ಟ್ ಮಾಡಲಾದ ಸ್ಟಾಕ್‌ಗಾಗಿ, ಮಾರುಕಟ್ಟೆ ಬಂಡವಾಳವನ್ನು ವಿನಿಮಯ ಕೇಂದ್ರದಲ್ಲಿನ ಸ್ಟಾಕ್​ನ ದರ ಜತೆಗೆ ಈ ಅವಧಿಯಲ್ಲಿ ವಹಿವಾಟಿನ ಪರಿಮಾಣವನ್ನು ಗಣನೆಗೆ ತೆಗೆದುಕೊಂಡು ಲೆಕ್ಕ ಹಾಕಲಾಗುತ್ತದೆ.

ಎಲ್ಲ ವಿನಿಮಯ ಕೇಂದ್ರಗಳ ವೆಬ್‌ಸೈಟ್‌ನಲ್ಲಿ ವಿನಿಮಯ ಕೇಂದ್ರಗಳು ಮತ್ತು ಷೇರುಗಳ ಪಟ್ಟಿ ಹಾಗೂ ವಹಿವಾಟಿಗೆ ಅವುಗಳ ಲಭ್ಯತೆಯನ್ನು ಪ್ರಕಟಿಸಲಾಗುತ್ತದೆ.

ಇದನ್ನೂ ಓದಿ: 20 ವರ್ಷದ ಹಿಂದೆ ರಾಯಲ್ ಎನ್​ಫೀಲ್ಡ್​ ಬೈಕ್ ಬದಲಿಗೆ ಈ ಕಂಪೆನಿ ಷೇರು ಖರೀದಿಸಿದ್ದರೆ ಇವತ್ತಿಗೆ ಎಷ್ಟು ಕೋಟಿ ಗೊತ್ತೆ?

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ