20 ವರ್ಷದ ಹಿಂದೆ ರಾಯಲ್ ಎನ್​ಫೀಲ್ಡ್​ ಬೈಕ್ ಬದಲಿಗೆ ಈ ಕಂಪೆನಿ ಷೇರು ಖರೀದಿಸಿದ್ದರೆ ಇವತ್ತಿಗೆ ಎಷ್ಟು ಕೋಟಿ ಗೊತ್ತೆ?

20 ವರ್ಷದ ಹಿಂದೆ ರಾಯಲ್ ಎನ್​ಫೀಲ್ಡ್​ ಬೈಕ್ ಖರೀದಿ ಮಾಡುವ ಬದಲಿಗೆ ಅದನ್ನು ತಯಾರು ಮಾಡುವ ಐಷರ್​ ಮೋಟಾರ್ಸ್ ಷೇರುಗಳನ್ನು ಖರೀದಿ ಮಾಡಿದ್ದರೆ ಇವತ್ತಿಗೆ ಅದು ಎಷ್ಟು ಮೊತ್ತ ಆಗಿರುತ್ತಿತ್ತು ಗೊತ್ತೆ?

20 ವರ್ಷದ ಹಿಂದೆ ರಾಯಲ್ ಎನ್​ಫೀಲ್ಡ್​ ಬೈಕ್ ಬದಲಿಗೆ ಈ ಕಂಪೆನಿ ಷೇರು ಖರೀದಿಸಿದ್ದರೆ ಇವತ್ತಿಗೆ ಎಷ್ಟು ಕೋಟಿ ಗೊತ್ತೆ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Oct 24, 2021 | 7:51 AM

ಹೂಡಿಕೆ, ಉಳಿತಾಯದ ಬಗ್ಗೆ ಹೇಳಬೇಕಾದರೆ ಉದಾಹರಣೆ ಸಮೇತ ವಿವರಿಸಿದರೆ ಇನ್ನಷ್ಟು ಪರಿಣಾಮಕಾರಿಯಾಗಿ ಮನಸ್ಸಿನೊಳಗೆ ಇಳಿಯುತ್ತದೆ. ಷೇರು ಮಾರ್ಕೆಟ್ ಎಂಬುದು ಎಂಥ ಮಾಯಾಬಜಾರ್ ಎಂದು ನಿದರ್ಶನ ಸಹಿತ ನಿಮ್ಮೆದುರು ಇಡುವ ಪ್ರಯತ್ನ ಇದು. ಒಂದು ಹಿಡಿ ತಾಳ್ಮೆ, ಸ್ವಲ್ಪ ಬುದ್ಧಿವಂತಿಕೆ ಜತೆಯಾದರೆ ಏನಾಗಬಹುದು ಗೊತ್ತಾ? ರಾಯಲ್ ಎನ್​ಫೀಲ್ಡ್ ಬುಲೆಟ್ ತಯಾರಿಸುವ ಐಷರ್ ಮೋಟಾರ್ಸ್ ಷೇರಿನ ಉದಾಹರಣೆಯನ್ನೇ ತೆಗೆದುಕೊಳ್ಳಿ. 2001ನೇ ಇಸವಿಯಲ್ಲಿ ರಾಯಲ್ ಎನ್​ಫೀಲ್ಡ್ ಬುಲೆಟ್ ಬೈಕ್​ನ ಬೆಲೆ 60,000 ರೂಪಾಯಿ ಇತ್ತು. ಅದನ್ನು ತಯಾರಿಸುವ ಐಷರ್​ ಮೋಟಾರ್ಸ್ ಕಂಪೆನಿ ಷೇರಿನ ಬೆಲೆ ಒಂದಕ್ಕೆ 2 ರೂಪಾಯಿ ಇತ್ತು. ಇವತ್ತಿಗೆ ಒಂದು ಷೇರಿನ ಬೆಲೆ 2600 ರೂಪಾಯಿ ಆಗಿದೆ. ಅಂದರೆ ಇಪ್ಪತ್ತು ವರ್ಷದಲ್ಲಿ 1300 ಪಟ್ಟು ಹೆಚ್ಚಾಗಿದೆ. 2001ನೇ ಇಸವಿಯ ಅಕ್ಟೋಬರ್​ನಲ್ಲಿ 60 ಸಾವಿರ ಖರ್ಚು ಮಾಡಿ, ಬುಲೆಟ್​ ಬೈಕ್ ಖರೀದಿ ಮಾಡುವ ಬದಲಿಗೆ ಅದೇ 60 ಸಾವಿರ ರೂಪಾಯಿ ಮೊತ್ತಕ್ಕೆ ಆಗ ಐಷರ್ ಮೋಟಾರ್ಸ್ ಷೇರು ಖರೀದಿಸಿ, ಈ ಅವಧಿಯುದ್ದಕ್ಕೂ ಇಟ್ಟುಕೊಂಡಿದ್ದಲ್ಲಿ 7.80 ಕೋಟಿ ರೂಪಾಯಿ ಆಗಿರುತ್ತಿತ್ತು. ಹೌದು, ನೀವು ಓದುತ್ತಿರುವುದು ನಿಜ. 7.80 ಕೋಟಿ ರೂಪಾಯಿ.

ಅಂದರೆ, ಆಗ ಐಷರ್ ಮೋಟಾರ್ಸ್ ಷೇರು ಖರೀದಿಸಿ ಇವತ್ತಿಗೆ 7.80 ಕೋಟಿ ರೂಪಾಯಿ ಕೈಗೆ ಬಂದಿದ್ದರೆ ಅದರಲ್ಲಿ ಔಡಿ Q2, ಬಿಎಂಡಬ್ಲ್ಯು ಬೈಕ್ ಮತ್ತು ಬಿಎಂಡಬ್ಲ್ಯು ಕಾರು ಖರೀದಿಸಬಹುದಿತ್ತು. ಅಷ್ಟೇ ಅಲ್ಲ, ಇಷ್ಟೆಲ್ಲ ವಾಹನಗಳನ್ನು ಖರೀದಿ ಮಾಡಿದ ಮೇಲೂ 5 ಕೋಟಿ ರೂಪಾಯಿ ಬ್ಯಾಂಕ್​ ಖಾತೆಯಲ್ಲಿ ಇರುತ್ತಿತ್ತು. ಅಂದರೆ ಈ ಮೇಲೆ ಹೇಳಿದ ಎಲ್ಲ ವಾಹನಗಳೂ ಸೇರಿ ಇವತ್ತಿಗೆ ಭಾರತದಲ್ಲಿ 2.80 ಕೋಟಿ ರೂಪಾಯಿ ಸಾಕಾಗುತ್ತಿತ್ತು.

2008ರ ಸಾಲದ ಬಿಕ್ಕಟ್ಟಿನ ನಂತರ ಐಷರ್ ಮೋಟಾರ್ಸ್ ಮಾರ್ಕೆಟ್​ನಲ್ಲಿ ಮೇಲ್ಮುಖದ ಪ್ರಯಾಣ ಆರಂಭಿಸಿತು. ಕೇವಲ ಎರಡೇ ವರ್ಷದೊಳಗೆ, ಅಂದರೆ 2010ರ ಜೂನ್​ನೊಳಗೆ ಮೂರಂಕಿಯ ಮೊತ್ತ ಮುಟ್ಟಿತು. ಮುಂದಿನ ನಾಲ್ಕು ವರ್ಷದಲ್ಲಿ ಪ್ರತಿ ಷೇರಿಗೆ 500 ರುಪಾಯಿಗೆ ಬಂದಿತು. ಅದಾಗಿ ಆರು ತಿಂಗಳ ಒಳಗೆ ನಾಲ್ಕಂಕಿಯನ್ನು ತಲುಪಿತು. ಎರಡಂಕಿಯಿಂದ ನಾಲ್ಕಂಕಿಗೆ ಕೇವಲ ನಾಲ್ಕು ವರ್ಷದಲ್ಲಿ ಮುಟ್ಟಿತು. ಐಷರ್ ಮೋಟಾರ್ಸ್ ಮುಂದಿನ ಎರಡು ವರ್ಷದೊಳಗೆ (2017) 3000 ರೂಪಾಯಿ ಆಯಿತು. ಕೊವಿಡ್​ ಬಿಕ್ಕಟ್ಟಿನಿಂದ 2020ರಲ್ಲಿ ಪ್ರತಿ ಷೇರಿಗೆ 1250 ರೂಪಾಯಿ ತಲುಪಿತ್ತು. ಆದರೆ ಆ ನಂತರ ಮಾರುಕಟ್ಟೆ ಏರಿಕೆ ಕಂಡ ಮೇಲೆ ಮತ್ತೆ ಪ್ರತಿ ಷೇರಿಗೆ 3000 ರೂಪಾಯಿ ಸಮೀಪ ಬಂದಿತು. ​

ಇದನ್ನೂ ಓದಿ: Multibagger: 10 ವರ್ಷ ಹಿಂದೆ ಟಾಟಾ ನ್ಯಾನೋ ಖರೀದಿ ದುಡ್ಡು ಈ ಷೇರಿಗೆ ಹಾಕಿದ್ದರೆ ಇವತ್ತಿಗೆ ಬರ್ತಿತ್ತು ಮರ್ಸಿಡೀಸ್ ಬೆಂಜ್ ಕಾರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ