AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Multibagger: 10 ವರ್ಷ ಹಿಂದೆ ಟಾಟಾ ನ್ಯಾನೋ ಖರೀದಿ ದುಡ್ಡು ಈ ಷೇರಿಗೆ ಹಾಕಿದ್ದರೆ ಇವತ್ತಿಗೆ ಬರ್ತಿತ್ತು ಮರ್ಸಿಡೀಸ್ ಬೆಂಜ್ ಕಾರು

ಈ ಮಲ್ಟಿಬ್ಯಾಗರ್ ಸ್ಟಾಕ್​ ಮೇಲೆ ಹತ್ತು ವರ್ಷದ ಹಿಂದೆ ಹೂಡಿದ್ದ 1 ಲಕ್ಷ ರೂಪಾಯಿ ಇವತ್ತಿಗೆ 40 ಲಕ್ಷ ರೂಪಾಯಿ ಆಗಿದೆ. ಯಾವುದು ಆ ಷೇರು? ಇಲ್ಲಿದೆ ವಿವರ.

Multibagger: 10 ವರ್ಷ ಹಿಂದೆ ಟಾಟಾ ನ್ಯಾನೋ ಖರೀದಿ ದುಡ್ಡು ಈ ಷೇರಿಗೆ ಹಾಕಿದ್ದರೆ ಇವತ್ತಿಗೆ ಬರ್ತಿತ್ತು ಮರ್ಸಿಡೀಸ್ ಬೆಂಜ್ ಕಾರು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Aug 20, 2021 | 5:19 PM

2020ರ ಏಪ್ರಿಲ್​ ತಿಂಗಳಿಂದ ಈಚೆಗೆ ಎನ್​ಎಸ್​ಇ ನಿಫ್ಟಿ ಇಂದಿನ ಮಟ್ಟಕ್ಕೆ ಹೋಲಿಸಿದಲ್ಲಿ ದುಪ್ಪಟ್ಟಿಗಿಂತ ಹೆಚ್ಚಾಗಿದೆ. ಮಾರ್ಕೆಟ್ ಪ್ರಬಲವಾದ ಏರಿಕೆ ದಾಖಲಿಸಿರುವ ಈ ಕಾಲಘಟ್ಟದಲ್ಲಿ ಸ್ಮಾಲ್-ಕ್ಯಾಪ್, ಮಿಡ್- ಕ್ಯಾಪ್ ಅವುಗಳ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿವೆ. ಭಾರತದ ಷೇರು ಮಾರುಕಟ್ಟೆಯಲ್ಲಿ ಮಲ್ಟಿಬ್ಯಾಗರ್ ಸ್ಟಾಕ್​ಗಳ ಸಂಖ್ಯೆ ಜಾಸ್ತಿ ಆಗಿವೆ. ಈ ಷೇರುಗಳನ್ನು ದೀರ್ಘ ಕಾಲ ಹಾಗೇ ಇಟ್ಟುಕೊಂಡವರಿಗೆ ಅದ್ಭುತವಾದ ರಿಟರ್ನ್ಸ್ ಕೊಟ್ಟಿದೆ. ಮಲ್ಟಿಬ್ಯಾಗರ್ ಅಂದರೆ ಬಹು ಪಟ್ಟಿನ ರಿಟರ್ನ್ಸ್ ಎಂದರ್ಥ. ಉದಾಹರಣೆಯಾಗಿ ಮೈಂಡ್​ಟ್ರೀ ತೆಗೆದುಕೊಳ್ಳಿ. ಈ ಐ.ಟಿ. ಸ್ಟಾಕ್ 81.75 ರೂಪಾಯಿ ಇದ್ದದ್ದು, ಇಂದು (ಆಗಸ್ಟ್ 20ರ ಮಧ್ಯಾಹ್ನ 12.04ರ ಹೊತ್ತಿಗೆ) 3355.40 ರೂಪಾಯಿ ತಲುಪಿದೆ. ಕಳೆದ ಹತ್ತು ವರ್ಷದಲ್ಲಿ 41 ಪಟ್ಟು ದರ ಹೆಚ್ಚಾಗಿದೆ.

ಮೈಂಡ್​ಟ್ರೀ ಷೇರು ದರದ ಇತಿಹಾಸ ಕಳೆದ 5 ಟ್ರೇಡಿಂಗ್ ಸೆಷನ್​ನಲ್ಲಿ ಮೈಂಡ್​ಟ್ರೀ ಷೇರು 2930 ರೂಪಾಯಿ ಹಂತದಿಂದ 3355.40 ರೂಪಾಯಿಗೆ ಏರಿದೆ. ಶೇಕಡಾ 14ರಷ್ಟು ಗಳಿಕೆಯನ್ನು ಕಂಡಿದೆ. ಕಳೆದ ಒಂದು ತಿಂಗಳಲ್ಲಿ 2762.95 ರೂಪಾಯಿಯಿಂದ 3355.40 ರೂಪಾಯಿ ಬಳಿ ಬಂದಿದೆ. ಷೇರುದಾರರಿಗೆ ಶೇ 21ರಷ್ಟು ರಿಟರ್ನ್ಸ್​ ನೀಡಿದೆ. ಆರು ತಿಂಗಳ ಹಿಂದಿನ ದರವನ್ನು ನೋಡುವುದಾದರೆ 1614.55 ರೂಪಾಯಿಯಲ್ಲಿ ಇದ್ದದ್ದು 3355.40ಗೆ ಏರಿಕೆಯಾಗಿ, ಶೇ 107ರಷ್ಟು ಏರಿಕೆಯನ್ನು ಈ ಅವಧಿಯಲ್ಲೇ ದಾಖಲಿಸಿದೆ. ಒಂದು ವರ್ಷದಲ್ಲಿ ಮೈಂಡ್​ಟ್ರೀ ಷೇರಿನದ ದರವು ಶೇ 185ರಷ್ಟು ಹೆಚ್ಚಳವಾಗಿದೆ. ಕಳೆದ 5 ವರ್ಷದಲ್ಲಿ ಶೇ 486ರಷ್ಟು ರಿಟರ್ನ್ಸ್​ ನೀಡಿರುವ ಈ ಷೇರು, 569.25 ರೂಪಾಯಿಯಿಂದ 3355.40 ರೂಪಾಯಿಗೆ ಬಂದಿದೆ. ಮೈಂಡ್​ಟ್ರೀ ಕಂಪೆನಿ ಷೇರಿನ ಹತ್ತು ವರ್ಷದ ಇತಿಹಾಸ ಗಮನಿಸಿದರೆ, 81.75 ರೂಪಾಯಿಯಿಂದ 3355.40 ರೂಪಾಯಿಗೆ ತಲುಪಿ, ಷೇರುದಾರರಿಗೆ ಶೇ 4000ದಷ್ಟು ರಿಟರ್ನ್ಸ್ ದಕ್ಕಿಸಿಕೊಟ್ಟಿದೆ.

ಹೂಡಿಕೆ ಮೇಲಿನ ಪರಿಣಾಮ ಐತಿಹಾಸಿಕ ದರಗಳನ್ನು ನೋಡುವುದಾದರೆ, ಈ ಮಲ್ಟಿಬ್ಯಾಗರ್ ಸ್ಟಾಕ್​ ಮೇಲೆ ತಿಂಗಳ ಹಿಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಲ್ಲಿ ಇವತ್ತಿಗೆ 1.21 ಲಕ್ಷ ರೂಪಾಯಿ ಆಗಿರುತ್ತದೆ. ಅದೇ ಆರು ತಿಂಗಳ ಹಿಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಲ್ಲಿ ಆ ಮೊತ್ತ ಇವತ್ತಿಗೆ 2.07 ಲಕ್ಷ ರೂಪಾಯಿ ಆಗಿರುತ್ತದೆ. ಇನ್ನು ಹೂಡಿಕೆದಾರರು ವರ್ಷದ ಹಿಂದೆ ಇದೇ ಐ.ಟಿ. ಸ್ಟಾಕ್​ ಮೇಲೆ ಒಂದು ಲಕ್ಷ ಹೂಡಿದ್ದರೆ ಹಾಗೂ ಅದನ್ನು ಹಾಗೂ ಉಳಿಸಿಕೊಂಡಿದ್ದಲ್ಲಿ 2.85 ಲಕ್ಷ ರೂಪಾಯಿ ಆಗಿರುತ್ತದೆ. 5 ವರ್ಷದ ಹಿಂದೆ ಮೈಂಡ್​ಟ್ರೀ ಷೇರಿನ ಮೇಲೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿ, ಇವತ್ತಿಗೂ ಹಾಗೇ ಉಳಿಸಿಕೊಂಡಿದ್ದಲ್ಲಿ ಇವತ್ತಿಗೆ ಅದು 5.86 ಲಕ್ಷ ರೂಪಾಯಿ ಆಗಿರುತ್ತಿತ್ತು. ಇನ್ನು ಹತ್ತು ವರ್ಷದ ಹಿಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿ, ಮೈಂಡ್​ಟ್ರೀ ಷೇರುಗಳನ್ನು ಹಾಗೇ ಉಳಿಸಿಕೊಂಡಿದ್ದಲ್ಲಿ ಇವತ್ತಿಗೆ 41 ಲಕ್ಷ ರೂಪಾಯಿ ಆಗಿರುತ್ತಿತ್ತು.

ಸಿಂಪಲ್​ ಆಗಿ ಹೇಳಬೇಕು ಅಂದರೆ, ಹತ್ತು ವರ್ಷದ ಹಿಂದೆ ಟಾಟಾ ನ್ಯಾನೋ ಕಾರು ಖರೀದಿಸುವಷ್ಟು ಮೊತ್ತವನ್ನು ಮೈಂಡ್​ ಟ್ರೀ ಷೇರಿನ ಮೇಲೆ ಹಾಕಿದ್ದರೆ ಇವತ್ತಿಗೆ ಮರ್ಸಿಡೀಸ್ ಅಥವಾ ಬಿಎಂಡಬ್ಲ್ಯು ಕಾರು ಖರೀದಿ ಮಾಡುವಷ್ಟು ದುಡ್ಡು ಬಂದಿರುತ್ತಿತ್ತು.

ಇದನ್ನೂ ಓದಿ: 1 ಲಕ್ಷ ಹೂಡಿಕೆ ಮಾಡಿದ ಈ ಷೇರುದಾರನಿಗೆ ಸಿಕ್ತು 40 ಲಕ್ಷ; ಅಬ್ಬಾ ಯಾವುದೀ ಷೇರು

(Investment Of Rs 1 Lakh In Mindtree IT Stock Become Rs 40 Lakh In 10 Years)

Published On - 5:18 pm, Fri, 20 August 21

ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!