AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

1 ಲಕ್ಷ ಹೂಡಿಕೆ ಮಾಡಿದ ಈ ಷೇರುದಾರನಿಗೆ ಸಿಕ್ತು 40 ಲಕ್ಷ; ಅಬ್ಬಾ ಯಾವುದೀ ಷೇರು

ಗೀತಾ ರಿನೀವಬಲ್ಸ್ ಷೇರಿನ ಬೆಲೆಯು ಕಳೆದ ಒಂದು ವರ್ಷದಲ್ಲಿ 4600 ಪರ್ಸೆಂಟ್ ರಿಟರ್ನ್ಸ್ ನೀಡಿದೆ. ಪ್ರತಿ ಷೇರಿಗೆ 5.50 ರೂಪಾಯಿ ಇದ್ದದ್ದು ಈಗ 260 ರೂಪಾಯಿ ಇದೆ.

1 ಲಕ್ಷ ಹೂಡಿಕೆ ಮಾಡಿದ ಈ ಷೇರುದಾರನಿಗೆ ಸಿಕ್ತು 40 ಲಕ್ಷ; ಅಬ್ಬಾ ಯಾವುದೀ ಷೇರು
ಷೇರು ಮಾರುಕಟ್ಟೆ (ಸಾಂದರ್ಭಿಕ ಚಿತ್ರ)
TV9 Web
| Updated By: Srinivas Mata|

Updated on:Aug 07, 2021 | 4:03 PM

Share

ಎನ್​ಎಸ್​ಇ ನಿಫ್ಟಿ ಮತ್ತು ಬಿಎಸ್​ಇ ಸ್ಮಾಲ್- ಕ್ಯಾಪ್ ಸೂಚ್ಯಂಕವು ದಾಖಲೆ ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದು, 2021ರಲ್ಲಿ ಹಲವು ಷೇರುಗಳು ಒಂದೇ ವರ್ಷದಲ್ಲಿ ಷೇರುದಾರರ ಹಣವನ್ನು ದುಪ್ಪಟ್ಟಾಗಿಸಿವೆ. ಹೀಗೆ ಮಲ್ಟಿಬ್ಯಾಗರ್ ಸ್ಟಾಕ್​ಗಳು (ಷೇರಿನ ದರಗಳು ಹಲವು ಪಟ್ಟು ಏರಿಕೆ ಆದಲ್ಲಿ ಮಲ್ಟಿಬ್ಯಾಗರ್​ ಎನ್ನಲಾಗುತ್ತದೆ) ಸ್ಮಾಲ್​ ಕ್ಯಾಪ್, ಮಿಡ್​ ಮತ್ತು ಲಾರ್ಜ್​ ಕ್ಯಾಪ್ ಎಲ್ಲದರಲ್ಲೂ ಇವೆ. ಹಾಗೆ ನೋಡಿದರೆ ಎಸ್​ಎಂಇ ಸ್ಟಾಕ್​ಗಳು ಕೂಡ ಈ ಮಲ್ಟಿಬ್ಯಾಗರ್ ಸ್ಟಾಕ್ ಪಟ್ಟಿಯಲ್ಲಿವೆ. ಈ ಪಟ್ಟಿಯಲ್ಲಿ ಇರುವ ಷೇರುಗಳು ಹೂಡಿಕೆದಾರರ ಹಣವನ್ನು ಹಲವು ಪಟ್ಟು ಬೆಳೆಯುವಂತೆ ಮಾಡಿವೆ. ಅಂಥದ್ದರಲ್ಲಿ ಗೀತಾ ರಿನೀವಬಲ್ ಎನರ್ಜಿ (Gita Renewable Energy) ಸಹ ಒಂದು. ಕಳೆದ ಒಂದು ವರ್ಷದಲ್ಲಿ ಈ ಷೇರು ಶೇ 4600ಕ್ಕಿಂತ ಹೆಚ್ಚು ರಿಟರ್ನ್ಸ್ ನೀಡಿದೆ.

ಗೀತಾ ರಿನೀಬಬಲ್ಸ್ ಶುಕ್ರವಾರದಂದು (ಆಗಸ್ಟ್ 6, 2021) ಶೇ 5ರಷ್ಟು ಮೇಲ್​ಸ್ತರದ ಮಟ್ಟವನ್ನು ಮುಟ್ಟಿದೆ. ಕಳೆದ ಐದು ಟ್ರೇಡಿಂಗ್ ಸೆಷನ್​ನಲ್ಲಿ ಶೇ 21.50ಯಷ್ಟು ಮೇಲೇರಿದೆ. ಆ ಮೂಲಕವಾಗಿ ಪ್ರತಿ ಈಕ್ವಿಟಿ ಷೇರಿಗೆ 215 ರೂಪಾಯಿಯಿಂದ 260ಕ್ಕೆ ಏರಿಕೆ ಆಗಿದೆ. ಕಳೆದ ಒಂದು ತಿಂಗಳಲ್ಲೇ ಶೇ 175ಕ್ಕಿಂತ ಹೆಚ್ಚು ಬೆಲೆ ಏರಿಕೆ ಆಗಿದೆ. ಪ್ರತಿ ಷೇರಿಗೆ 93.60 ರೂಪಾಯಿ ಇದ್ದ್ದದ್ದು, 260 ರೂಪಾಯಿ ಮಟ್ಟಕ್ಕೆ ಏರಿದೆ. ಅದೇ ರೀತಿ ಕಳೆದ ಆರು ತಿಂಗಳದ್ದು ಗಮನಿಸುವುದಾದರೆ ರೂ. 10.90ರಿಂದ 260ರ ಮಟ್ಟಕ್ಕೆ ನೆಗೆದಿದೆ. ಆ ಮೂಲಕ ಷೇರುದಾರರಿಗೆ ಶೇ 2285ರಷ್ಟು ರಿಟರ್ನ್ಸ್ ಸಿಕ್ಕಿದೆ.

ಇನ್ನು ಕಳೆದ ಒಂದು ವರ್ಷದ ಹಿಂದಿನ ಸ್ಥಿತಿಯನ್ನು ಗಮಸಿಸುವುದಾದರೆ, ಪ್ರತಿ ಷೇರಿಗೆ 5.50 ರೂಪಾಯಿ ಇದ್ದದ್ದು 260ರ ಹಂತಕ್ಕೆ ಬಂದಿದೆ. ಆ ಮೂಲಕವಾಗಿ ಷೇರುದಾರರುಗೆ ಶೇ 4627ರಷ್ಟು ರಿಟರ್ನ್ಸ್ ಕೊಟ್ಟಿದೆ. ಕಳೆದ ಐದು ದಿನಗಳ ಹಿಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿ, ಹಾಗೇ ಉಳಿದಿದ್ದಲ್ಲಿ ಅದೀಗ 1.21 ಲಕ್ಷ ರೂಪಾಯಿ ಆಗಿರುತ್ತದೆ. ಅದೇ ಒಂದೇ ತಿಂಗಳ ಹಿಂದೆ 1 ಲಕ್ಷ ಹೂಡಿದ್ದರೆ ಈಗ 2.77 ಲಕ್ಷ ರೂಪಾಯಿ, ಆರು ತಿಂಗಳ ಹಿಂದೆ ಹೂಡಿದ್ದರೆ 23.85 ಲಕ್ಷ ಮತ್ತು ಒಂದು ವರ್ಷದ ಹಿಂದಿನ ಅವಧಿಯಲ್ಲೇ ಹೂಡಿಕೆ ಮಾಡಿದ್ದರೆ 47.27 ಲಕ್ಷ ರೂಪಾಯಿ ಆಗಿರುತ್ತಿತ್ತು.

ಇದನ್ನೂ ಓದಿ: Balakrishna Industries: ಈ ಷೇರಿನ ಮೇಲಿನ 10,000 ರೂಪಾಯಿ ಹೂಡಿಕೆ 20 ವರ್ಷದಲ್ಲಿ 3.50 ಕೋಟಿ ರೂಪಾಯಿ

ಇದನ್ನೂ ಓದಿ: 10,000 ರೂಪಾಯಿ ಹೂಡಿದವರಿಗೆ 20 ವರ್ಷದಲ್ಲಿ 2 ಕೋಟಿ ಮಾಡಿಕೊಟ್ಟ ಕಂಪೆನಿಯ ಕಥೆಯಿದು

(Gita Renewable Share Price Increased Multi Folds In Last One Year)

Published On - 3:26 pm, Sat, 7 August 21