Balakrishna Industries: ಈ ಷೇರಿನ ಮೇಲಿನ 10,000 ರೂಪಾಯಿ ಹೂಡಿಕೆ 20 ವರ್ಷದಲ್ಲಿ 3.50 ಕೋಟಿ ರೂಪಾಯಿ

Balakrishna Industries: ಈ ಕಂಪೆನಿಯ ಷೇರಿನಲ್ಲಿ ಹೂಡಿದ ರೂ. 10,000 ಕೇವಲ 20 ವರ್ಷದಲ್ಲಿ 3.47 ಕೋಟಿ ರೂಪಾಯಿ ಆಗಿದೆ. ವಿವಿಧ ಷೇರು ಬ್ರೋಕರೇಜ್​ಗಳು ಏನು ಶಿಫಾರಸು ಮಾಡುತ್ತಾರೆ ಎಂಬ ವಿವರ ಇಲ್ಲಿದೆ.

Balakrishna Industries: ಈ ಷೇರಿನ ಮೇಲಿನ 10,000 ರೂಪಾಯಿ ಹೂಡಿಕೆ 20 ವರ್ಷದಲ್ಲಿ 3.50 ಕೋಟಿ ರೂಪಾಯಿ
ಈ ತಿಂಗಳು, ಅಂದರೆ ಸೆಪ್ಟೆಂಬರ್​ನಲ್ಲಿ ಪೂರ್ಣಗೊಳಿಸಬೇಕಾದ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದ ಐದು ಜವಾಬ್ದಾರಿಗಳು ಇಲ್ಲಿವೆ. ಒಂದು ವೇಳೆ ಈ ಗಡುವನ್ನು ಮೀರಿದಲ್ಲಿ ದಂಡ ಪಾವತಿಸಬೇಕಾದ ಸನ್ನಿವೇಶ ಉದ್ಭವಿಸಬಹುದು. ಯಾವುದು ಆ 5 ಜವಾಬ್ದಾರಿಗಳು ಎಂಬ ವಿವರ ನಿಮ್ಮೆದುರು ಇದೆ.
Follow us
|

Updated on: May 17, 2021 | 7:51 PM

ಪೋಸ್ಟ್ ಆಫೀಸ್ ಉಳಿತಾಯ ಖಾತೆಯಲ್ಲಿ ಹಣ ತೊಡಗಿಸಿದರೆ ಇಷ್ಟು ವರ್ಷದಲ್ಲಿ ಹಣ ಡಬಲ್ ಆಗುತ್ತೆ, ಪಿಪಿಎಫ್​, ಮ್ಯೂಚುವಲ್ ಫಂಡ್, ಚಿನ್ನ, ರಿಯಲ್ ಎಸ್ಟೇಟ್ ಹೀಗೆ ಹೂಡಿಕೆಗೆ ನಾನಾ ಮಾರ್ಗಗಳಿವೆ. ಆದರೆ ಕಳೆದ ಕೆಲ ಸಮಯದಿಂದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಕನಸಲ್ಲೂ ಊಹಿಸಲಾಗದ ರಿಟರ್ನ್ಸ್ ನೀಡಿರುವ ಕಂಪೆನಿಗಳ ಬಗ್ಗೆ ತಿಳಿಸಿಕೊಡುತ್ತಾ ಬರುತ್ತಿದ್ದೇವೆ. ಈ ದಿನ ಅಂಥದ್ದೇ ಮತ್ತೊಂದು ಕಂಪೆನಿಯ ಷೇರಿನ ಯಶೋಗಾಥೆ ಇಲ್ಲಿದೆ. ಈ ಕಂಪೆನಿಯ ಹೆಸರು ಬಾಲಕೃಷ್ಣ ಇಂಡಸ್ಟ್ರೀಸ್. ಇದು ಟೈರ್ ಉದ್ಯಮ ನಡೆಸುತ್ತದೆ. ಕಳೆದ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದ ಫಲಿತಾಂಶ ಬಂದ ಮೇಲೆ ಬ್ರೋಕರೇಜ್​ಗಳಿಂದ ಮಿಶ್ರ ಶಿಫಾರಸುಗಳು ಈ ಕಂಪೆನಿ ಷೇರಿನ ಬಗ್ಗೆ ಬರುತ್ತಿದೆ. ಆದರೆ ಕಳೆದ 20 ವರ್ಷದಲ್ಲಿ ಇದರ ಸಾಧನೆ ನೋಡಿದರೆ, ಅಬ್ಬಾ ಅಚ್ಚರಿಯೋ ಅಚ್ಚರಿ ಆಗುತ್ತದೆ.

ಈ 20 ವರ್ಷದ ಅವಧಿಯಲ್ಲಿ ಬಾಲಕೃಷ್ಣ ಇಂಡಸ್ಟ್ರೀಸ್​ ಷೇರು ಶೇ 3,46,603 ಅಥವಾ 3,467 ಪಟ್ಟು ಬೆಲೆ ಹೆಚ್ಚಳವಾಗಿದೆ. ಮೇ 17, 2021ಕ್ಕೆ ಈ ಷೇರು ಸಾರ್ವಕಾಲಿಕ ದಾಖಲೆ ಬೆಲೆಯಾದ 2,138 ರೂಪಾಯಿ ಮುಟ್ಟಿದೆ. ನಿಮಗೆ ಗೊತ್ತಿರಲಿ, 2001ರ ಮೇ ತಿಂಗಳಲ್ಲಿ ಅಡ್ಜಸ್ಟಡ್ ಷೇರಿನ ಬೆಲೆ 62 ಪೈಸೆ. ಈ ಕಂಪೆನಿಯಲ್ಲಿ ಆಗ 10,000 ರೂಪಾಯಿ ಹೂಡಿಕೆ ಮಾಡಿದ್ದಲ್ಲಿ ಇವತ್ತಿಗೆ 3.47 ಕೋಟಿ ರೂಪಾಯಿ. ಅಂದಹಾಗೆ ಬಾಲಕೃಷ್ಣ ಇಂಡಸ್ಟ್ರೀಸ್ ಗಮನ ಸೆಳೆದಿದ್ದು ಏಪ್ರಿಲ್ 17ನೇ ತಾರೀಕು. ವರ್ಷದಿಂದ ವರ್ಷಕ್ಕೆ (YoY) ಶೇ 45ರಷ್ಟು ನಿವ್ವಳ ಲಾಭದಲ್ಲಿ ಹೆಚ್ಚಳವಾಗಿ 372.20 ಕೋಟಿ ರೂಪಾಯಿ ತಲುಪಿದ ಮೇಲೆ. ಇನ್ನೊಂದು ಕಡೆ ಮಾರಾಟದ ಪ್ರಮಾಣದಲ್ಲಿನ ಬೆಳವಣಿಗೆ ವರ್ಷದಿಂದ ವರ್ಷಕ್ಕೆ ಹತ್ತಿರ ಹತ್ತಿರ ಶೇ 29ರಷ್ಟು ದಾಖಲಿಸಿತು.

ಒಟ್ಟಾರೆಯಾಗಿ ಹೇಳಬೇಕು ಅಂದರೆ ಕಂಪೆನಿಯು ಕಳೆದ 20 ವರ್ಷದಲ್ಲಿ ವರ್ಷಕ್ಕೆ ಶೇ 36ರಂತೆ ಬೆಳವಣಿಗೆ ದಾಖಲಿಸಿದೆ. 2001ರಿಂದ ವಾರ್ಷಿಕ ಶೇ 19ಕ್ಕೂ ಹೆಚ್ಚು ಬೆಳವಣಿಗೆ ಕಂಡಿದೆ. ಇನ್ನು ಆನಂದ್ ರಾಥಿ ಷೇರ್ಸ್ ಮತ್ತು ಸ್ಟಾಕ್ ಬ್ರೋಕರ್ಸ್ ಪ್ರಕಾರ, ಬಾಲಕೃಷ್ಣ ಇಂಡಸ್ಟ್ರೀಸ್ ಆದಾಯ ಹಣಕಾಸು ವರ್ಷ 21-23ರ ಮಧ್ಯೆ ಶೇ 20ರಷ್ಟು ಮತ್ತು ಗಳಿಕೆ ಶೇ 25 ಸಿಎಜಿಆರ್​ (Compound Annual Growth Rate) ಇರುತ್ತದೆ.

ಬಾಲಕೃಷ್ಣ ಇಂಡಸ್ಟ್ರೀಸ್ ಆಡಳಿತ ಮಂಡಳಿ ಕೂಡ ಈ ಬಗ್ಗೆ ಹೇಳಿದ್ದು, ರೀಟೇಲ್ ಮಾರಾಟ ಪ್ರಬಲವಾಗಿದೆ. ಅದರಲ್ಲೂ ಕೃಷಿ ಹಾಗೂ ಒಟಿಆರ್​ ಟೈರ್​ಗೆ ಭಾರೀ ಬೇಡಿಕೆ ಇದೆ. ಯುರೋಪ್, ಅಮೆರಿಕ ಮತ್ತು ಭಾರತದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುತ್ತೇವೆ. ಜತೆಗೆ ರಷ್ಯಾ, ಆಸ್ಟ್ರೇಲಿಯಾದಂಥ ಮಾರುಕಟ್ಟೆಗಳ ಕಡೆಗೂ ಗಮನಿಸುತ್ತೇವೆ ಎಂದು ಹೇಳಿದೆ.

2020-21ನೇ ಸಾಲಿನ ನಾಲ್ಕನೇ ತ್ರೈಮಾಸಿಕದ ಫಲಿತಾಂಶದ ನಂತರ ಬ್ರೋಕರೇಜ್ ಶಿಫಾರಸುಗಳು ಹೀಗಿವೆ: ಆನಂದ್ ರಾಥಿ ಷೇರ್ಸ್ ಮತ್ತು ಸ್ಟಾಕ್ ಬ್ರೋಕರ್ಸ್ ಬಾಲಕೃಷ್ಣ ಇಂಡಸ್ಟ್ರೀಸ್ ಬಗ್ಗೆ ಸಕಾರಾತ್ಮಕ ನಿರೀಕ್ಷೆ ಮುಂದುವರಿಸಿದೆ. 2,232 ರೂಪಾಯಿಗಳ ಟಾರ್ಗೆಟ್​ನೊಂದಿಗೆ ಖರೀದಿ ರೇಟಿಂಗ್ ನೀಡಿದೆ.

ಡೋಲಟ್ ಕ್ಯಾಪಿಟಲ್ 1648 ರೂಪಾಯಿಗಳ ಟಾರ್ಗೆಟ್​ನೊಂದಿಗೆ ಡೋಲಟ್ ಕ್ಯಾಪಿಟಲ್ ಬ್ರೋಕರೇಜ್ ಮಾರಾಟದ ಶಿಫಾರಸು ಮಾಡಿದೆ.

ಬಿಒಬಿ ಕ್ಯಾಪಿಟಲ್ ಬಿಒಬಿ ಕ್ಯಾಪಿಟಲ್ ಸಹ ಮಾರಾಟದ ಶಿಫಾರದು ಮಾಡಿದೆ. 5 ವರ್ಷಗಳ ಸರಾಸರಿ ಲೆಕ್ಕದಲ್ಲಿ 22 ಮಾರ್ಚ್​ಗೆ 1550 ರೂಪಾಯಿಗಳ ಟಾರ್ಗೆಟ್ ನೀಡಿದೆ.

ಈ ಲೇಖನದ ಉದ್ದೇಶವು ಮಾಹಿತಿ ನೀಡುವುದೇ ಹೊರತು ಖರೀದಿ ಅಥವಾ ಮಾರಾಟಕ್ಕೆ ಶಿಫಾರಸು ಮಾಡುವುದಲ್ಲ. ಈ ಲೇಖನದ ಆಧಾರದಲ್ಲಿ ತೀರ್ಮಾನ ತೆಗೆದುಕೊಂಡಲ್ಲಿ ಅದಕ್ಕೆ ಲೇಖಕರಾಗಲಿ ಅಥವಾ ಟಿವಿ9 ನೆಟ್​ವರ್ಕ್ ಅಥವಾ ಸೋದರ ಸಂಸ್ಥೆಗಳಾಗಲೀ ಜವಾಬ್ದಾರಿ ಅಲ್ಲ. ಷೇರು ವ್ಯವಹಾರದಲ್ಲಿ ಹಣಕಾಸಿನ ಅಪಾಯ ಒಳಗೊಂಡಿರುತ್ತದೆ. ತಜ್ಞರ ಸಲಹೆ ಪಡೆದು, ಆ ನಂತರ ನಿರ್ಧಾರ ಕೈಗೊಳ್ಳಿ.

ಲೇಖನದ ಮೂಲ: ಮನಿ9.ಕಾಮ್

ಇದನ್ನೂ ಓದಿ: 10,000 ರೂಪಾಯಿ ಹೂಡಿದವರಿಗೆ 20 ವರ್ಷದಲ್ಲಿ 2 ಕೋಟಿ ಮಾಡಿಕೊಟ್ಟ ಕಂಪೆನಿಯ ಕಥೆಯಿದು

ಇದನ್ನೂ ಓದಿ: stock market investor: ವ್ಯಕ್ತಿಯ ಸಾವಿನ ನಂತರ ಷೇರು ವರ್ಗಾವಣೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

(Balakrishna Industries Ltd shares investment of Rs 10,000 become Rs 3.47 crore in 20 years)