stock market investor: ವ್ಯಕ್ತಿಯ ಸಾವಿನ ನಂತರ ಷೇರು ವರ್ಗಾವಣೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದವರು ಮೃತಪಟ್ಟ ನಂತರ ಆ ಸೆಕ್ಯೂರಿಟಿಗಳ ವರ್ಗಾವಣೆ ಮಾಡಿಕೊಳ್ಳುವುದು ಹೇಗೆ, ನಿಯಮಗಳೇನು ಹಾಗೂ ಬೇಕಾದ ದಾಖಲೆಗಳೇನು ಎಂಬುದರ ವಿವರ ಇಲ್ಲಿದೆ.

stock market investor: ವ್ಯಕ್ತಿಯ ಸಾವಿನ ನಂತರ ಷೇರು ವರ್ಗಾವಣೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: May 17, 2021 | 4:54 PM

ಸಾವಿನ ಅನಿಶ್ಚಿತತೆಯ ಬಗ್ಗೆ ಹಾಗೂ ಅದರ ನಂತರದಲ್ಲಿ ಕುಟುಂಬದ ಮೇಲೆ ಆಗುವ ಆರ್ಥಿಕ ಪರಿಣಾಮಗಳ ಬಗ್ಗೆ ಯಾವ ಕಾಲದಲ್ಲಿ ನಾವೆಲ್ಲ ಆಲೋಚನೆ ಮಾಡಿಲ್ಲ ಹೇಳಿ? ಆದರೆ ಕೋವಿಡ್- 19 ಬಿಕ್ಕಟ್ಟು ಇನ್ನಷ್ಟು ಚಿಂತೆಗೀಡು ಮಾಡಿತು. ಕುಟುಂಬ ಸದಸ್ಯರ ಸಾವಿನ ದುಃಖ ಇಷ್ಟಿಷ್ಟೇ ಕಡಿಮೆ ಆಗುತ್ತಾ ಬದುಕಿರುವರರ ಭವಿಷ್ಯದ ಬಗ್ಗೆ ಪ್ರಶ್ನೆ ಎದ್ದು ನಿಂತೇ ನಿಲ್ಲತ್ತದೆ. ಇಂದಿನ ಲೇಖನದಲ್ಲಿ ತಿಳಿಸುವುದಕ್ಕೆ ಹೊರಟಿರುವ ಸಂಗತಿ ಏನೆಂದರೆ, ಕುಟುಂಬದ ಸದಸ್ಯರೊಬ್ಬರು ತೀರಿಕೊಂಡಿದ್ದಾರೆ. ಅವರ ಹೆಸರಲ್ಲಿ ಷೇರುಗಳಿವೆ. ಅದನ್ನು ಮಾರಿ ನಗದು ಮಾಡಿಕೊಳ್ಳಬೇಕು. ಅದೇನು ಈಗಲೇ ಮಾಡಲು ಸಾಧ್ಯವೋ ಅಥವಾ ಸಮಯ ತೆಗೆದುಕೊಳ್ಳಬೇಕಾ? ಮೃತ ವ್ಯಕ್ತಿಯು ನಾಮಿನಿಯನ್ನು ಸೂಚಿಸಿದರೆ ಹೇಗೆ ಅಥವಾ ಸೂಚಿಸದಿದ್ದಲ್ಲಿ ಹೇಗೆ ಮತ್ತು ಯಾವುದೇ ವಿಲ್​ ಇಲ್ಲದಿದ್ದಲ್ಲಿ ಈ ಪ್ರಕ್ರಿಯೆ ಹೇಗೆ ಎಂಬುದಕ್ಕೆ ಕೆಲವು ತಜ್ಞರನ್ನು ಮಾತನಾಡಿಸಿ, ಉತ್ತರಗಳನ್ನು ಇಲ್ಲಿ ನೀಡಲಾಗಿದೆ.

ಒಂದು ವೇಳೆ ನಾಮಿನಿ ಇದ್ದಲ್ಲಿ ಮೃತ ವ್ಯಕ್ತಿಯು ನಾಮಿನಿಯನ್ನು ತಾನೇ ಸೂಚಿಸಿದ್ದಲ್ಲಿ ಷೇರು ವರ್ಗಾವಣೆ ಎಂಬುದು ಸಲೀಸಾದ ಪ್ರಕ್ರಿಯೆ. ಇಂಥ ಸನ್ನಿವೇಶದಲ್ಲಿ ವಿಲ್ ಅಥವಾ ಉತ್ತರಾಧಿಕಾರಿ ಪ್ರಮಾಣಪತ್ರ ಮುಂತಾದವು ಯಾವುದೂ ಅಗತ್ಯ ಇರಲ್ಲ. ಆ ಷೇರುಗಳು ಇರುವಂಥ ಡೆಪಾಸಿಟರಿ ಪಾರ್ಟಿಸಿಪೆಂಟ್ (DP) ಮೂಲಕ ವರ್ಗಾವಣೆ ಆಗಿಹೋಗುತ್ತದೆ. ಒಬ್ಬರೇ ವ್ಯಕ್ತಿಗಳ ಹೆಸರಲ್ಲಿ ಅಥವಾ ಜಂಟಿ ಖಾತೆಯಲ್ಲಿ ಷೇರುಗಳಿದ್ದ ಸನ್ನಿವೇಶದಲ್ಲಿ ವ್ಯಕ್ತಿಯು ಮೃತಪಟ್ಟಾಗ ನಾಮಿನಿಯು ದೃಢೀಕೃತವಾದ ಮರಣ ಪ್ರಮಾಣ ಪತ್ರ (ಸರ್ಟಿಫೈಡ್ ಡೆಟ್ ಸರ್ಟಿಫಿಕೇಟ್) ಮತ್ತು ಟ್ರಾನ್ಸ್​ಮಿಷನ್ ರಿಕ್ವೆಸ್ಟ್​ ಫಾರ್ಮ್ (ಟಿಆರ್​ಎಫ್​) ಜತೆಗೆ ಲಿಖಿತ ರೂಪದ ಮನವಿ ನೀಡಬೇಕು. ಅದಾದ ನಂತರ ಆ ಅರ್ಜಿಯು ಪೂರ್ಣವಾಗಿದೆಯಾ, ಗ್ರಾಹಕರ ಸಹಿ ಸಿಂಧುವಾಗಿದೆಯಾ ಎಂಬುದನ್ನು ಪರಿಶೀಲಿಸಿ, ಆ ನಂತರ ಟ್ರಾನ್​ಮಿಷನ್ ಮನವಿಯನ್ನು ಅನುಷ್ಠಾನಕ್ಕೆ ತರಲಾಗುತ್ತದೆ.

ಒಂದು ವೇಳೆ ನಾಮಿನಿಯನ್ನು ಸೂಚಿಸದೇ ಇದ್ದಲ್ಲಿ ಒಂದು ವೇಳೆ ನಾಮಿನಿಯನ್ನು ಸೂಚಿಸದೇ ಇದ್ದ ಪಕ್ಷದಲ್ಲಿ ಷೇರು ವರ್ಗಾವಣೆಯ ಪ್ರಕ್ರಿಯೆಯೇ ವಿಭಿನ್ನವಾಗಿರುತ್ತದೆ. ಅದು ಕೂಡ 5 ಲಕ್ಷ ರೂಪಾಯಿಯೊಳಗೆ ಇರುವ ಮೊತ್ತಕ್ಕೆ ಒಂದು ರೀತಿಯಲ್ಲೂ ಹಾಗೂ 5 ಲಕ್ಷ ರೂಪಾಯಿ ಮೇಲ್ಪಟ್ಟ ಮೊತ್ತಕ್ಕೆ ಮತ್ತೊಂದು ರೀತಿಯಲ್ಲೂ ಇದೆ.

5 ಲಕ್ಷ ರೂಪಾಯಿಯೊಳಗಿನ ಷೇರಿಗೆ ಮರಣ ಪ್ರಮಾಣ ಪತ್ರಕ್ಕೆ ನೋಟರಿಯಿಂದ ಸಹಿ ಆಗಿರಬೇಕು, ಟಿಆರ್​ಎಫ್ ಭರ್ತಿ ಮಾಡಿರಬೇಕು, ಒಂದು ವೇಳೆ ಮೃತ ವ್ಯಕ್ತಿಯು ವಿಲ್ ಅಥವಾ ನಾಮಿನಿಯನ್ನು ಮಾಡದಿದ್ದಲ್ಲಿ ಉತ್ತರಾಧಿಕಾರಿ ಎಂಬ ಪ್ರಮಾಣಪತ್ರವನ್ನು ಒದಗಿಸಿ, ಅದಕ್ಕೆ ನೋಟರಿಯಿಂದ ಸಹಿ ಮಾಡಿಸಿ ಕ್ಲೇಮ್ ಮಾಡಬೇಕಾಗುತ್ತದೆ. ಉತ್ತರಾಧಿಕಾರಿ ಎಂಬ ಪ್ರಮಾಣಪತ್ರಕ್ಕೆ ಮೃತಪಟ್ಟ ದಿನದಿಂದ ಆರು ತಿಂಗಳೊಳಗೆ ಅರ್ಜಿ ಹಾಕಿಕೊಳ್ಳಬೇಕು. ಇದರ ಜತೆಗೆ ಬಾಕಿ ಕಾನೂನು ವಾರಸುದಾರರಿಂದ ನಿರಾಕ್ಷೇಪಣೆ (NOC) ಕೊಡಿಸಬೇಕು. ನಾನ್- ಜ್ಯುಡಿಷಿಯಲ್ ಛಾಪಾ ಕಾಗದದ ಮೇಲೆ ಅಫಿಡವಿಟ್ ಮತ್ತು ಲೆಟರ್ ಆಫ್ ಇಂಡೆಮ್ನಿಟಿ ಹಾಗೂ ನಾನ್- ಜ್ಯುಡಿಷಿಯಲ್ ಛಾಪಾ ಕಾಗದದ ಮೇಲೆ ಡೆಪಾಸಿಟರಿ ಪಾರ್ಟಿಸಿಪೆಂಟ್ ಒಪ್ಪುವಂಥ ವೈಯಕ್ತಿಕ ಗ್ಯಾರಂಟಿ ಶ್ಯೂರಿಟಿಯನ್ನು ಕೊಡಬೇಕು. ಒಂದು ವೇಳೆ ಸೆಕ್ಯೂರಿಟಿಗಳ ಮೊತ್ತ 5 ಲಕ್ಷ ರೂಪಾಯಿ ದಾಟಿದಲ್ಲಿ ಆಗ ಡಿ.ಪಿ.ಯಿಂದ ಪ್ರೊಬೇಟೆಡ್ ವಿಲ್ ಅಥವಾ ಶ್ಯೂರಿಟಿ ಅರ್ಜಿ ಕೇಳಲಾಗುತ್ತದೆ.

ಒಬ್ಬರಿಗಿಂತ ಹೆಚ್ಚು ಮಂದಿ ಕ್ಲೇಮ್ ಮಾಡುವಂತಿದ್ದರೆ ಒಬ್ಬರಿಗಿಂತ ಹೆಚ್ಚು ಮಂದಿ ಕ್ಲೇಮೆಂಟ್​ಗಳು/ಉತ್ತರಾಧಿಕಾರಿಗಳು ಇದ್ದಲ್ಲಿ ಟ್ರಾನ್ಸ್​ಮಿಷನ್ ರಿಕ್ವೆಸ್ಟ್ ಫಾರ್ಮ್ ಜತೆಗೆ ಎಲ್ಲ ವಾರಸುದಾರರ ನಿರಾಕ್ಷೇಪಣೆ ಪ್ರಮಾಣಪತ್ರ ಸಲ್ಲಿಸಬೇಕು. ಆ ವಾರಸುದಾರರಿಗೆ ಈಗ ಸೆಕ್ಯೂರಿಟಿಗಳನ್ನು ಅರ್ಜಿದಾರರಿಗೆ ವರ್ಗಾವಣೆ ಮಾಡುವುದಕ್ಕೆ ಯಾವುದೇ ಆಕ್ಷೇಪಣೆ ಇಲ್ಲ ಎಂಬ ಅಂಶ ಅರ್ಜಿಯ ಮೂಲಕ ಮನದಟ್ಟಾಗಬೇಕು. ನಿರಾಕ್ಷೇಪಣೆ ಪ್ರಮಾಣ ಪತ್ರಕ್ಕೆ ಪರ್ಯಾಯವಾಗಿ ನೋಟರಿ ಆದಂಥ ಕುಟುಂಬದ ಪಾಲು ಪತ್ರ ಅಥವಾ ಗೆಜೆಟೆಡ್ ಅಧಿಕಾರಿಯಿಂದ ಸಹಿ ಆಗಿರುವಂಥದ್ದು ಮತ್ತು ಮೃತಪಟ್ಟ ವ್ಯಕ್ತಿಯ ಎಲ್ಲ ವಾರಸುದಾರರಿಂದ ಅನುಷ್ಠಾನಕ್ಕೆ ಬಂದ ಪತ್ರವನ್ನು ಸಲ್ಲಿಸಬಹುದು. ಆ ಪತ್ರವು ಯಾರು ತಮ್ಮ ಹೆಸರಿಗೆ ಸೆಕ್ಯೂರಿಟೀಸ್​ಗಳು ವರ್ಗಾವಣೆ ಆಗಬೇಕು ಎಂದು ಬಯಸುತ್ತಾರೋ ಅವರ ಪರವಾಗಿರಬೇಕು.

ಕುಟುಂಬ ಪಾಲು ಪತ್ರದ ಪ್ರಕಾರ, ಒಬ್ಬರಿಗಿಂತ ಹೆಚ್ಚು ಮಂದಿಗೆ ಈ ಷೇರುಗಳು ಹಂಚಿಕೆ ಆಗುತ್ತಿದ್ದಲ್ಲಿ ಆಗ ಆ ಪಾಲು ಪತ್ರವನ್ನೇ ನಿರಾಕ್ಷೇಪಣೆ ಪ್ರಮಾಣ ಪತ್ರ ಎಂದು ಪರಿಗಣಿಸಲಾಗುತ್ತದೆ. ಅದರ ಪ್ರಕಾರವಾಗಿ ಷೇರು ವರ್ಗಾವಣೆ ಆಗುತ್ತದೆ.

ಉತ್ತರಾಧಿಕಾರಿ/ನಾಮಿನಿ ಅಪ್ರಾಪ್ತರಾಗಿದ್ದಲ್ಲಿ ಒಂದು ವೇಳೆ ನಾಮಿನಿ ಅಪ್ರಾಪ್ತರಾಗಿದ್ದಲ್ಲಿ ಆಗ ಪಾಲಕರಿಗೆ ಸಹಿ ಹಾಕುವ ಅಧಿಕಾರ ನೀಡಲಾಗುತ್ತದೆ. ಷೇರುದಾರರು ಮತ್ತೊಬ್ಬ ವ್ಯಕ್ತಿಯನ್ನು, ಸಾಮಾನ್ಯವಾಗಿ ಪೋಷಕರನ್ನು ನೇಮಿಸಿ, ಎಲ್ಲಿಯ ತನಕ ವಾರಸುದಾರರಿಗೆ/ನಾಮಿನಿಗೆ 18 ವರ್ಷ ಪೂರ್ತಿ ಆಗುವುದಿಲ್ಲವೋ ಅಲ್ಲಿಯ ತನಕ ಷೇರು ವರ್ಗಾವಣೆ ಅಧಿಕಾರ ನೀಡುತ್ತಾರೆ. ಆ ನಂತರ ಉತ್ತರಾಧಿಕಾರಿ ಖಾತೆಗೆ ಷೇರು ವರ್ಗಾವಣೆಗೆ 3 ವರ್ಷಗಳ ಮಿತಿಯ ಅವಧಿ ಇರುತ್ತದೆ.

ನಾಮಿನಿ ಹೆಸರು, ಫೋಟೋಗ್ರಾಫ್ ಜತೆಗೆ ಗಾರ್ಡಿಯನ್ ಹೆಸರು, ವಿಳಾಸ ಮತ್ತು ಫೋಟೋಗ್ರಾಫ್ ಕೂಡ ಡೆಪಾಸಿಟರಿ ಪಾರ್ಟಿಸಿಪೆಂಟ್​ಗೆ ಸಲ್ಲಿಸಬೇಕು. ಈ ಎಲ್ಲ ಪ್ರಕ್ರಿಯೆಗೆ ಯಾರ ಹೆಸರಿಗೆ ವರ್ಗಾವಣೆ ಆಗಬೇಕಿರುತ್ತದೋ ಅವರಿಗೆ ಡಿಮ್ಯಾಟ್ ಖಾತೆ ಇರುವುದು ಕಡ್ಡಾಯ ಆಗಿರುತ್ತದೆ.

ಷೇರು ವರ್ಗಾವಣೆಗೆ ಬೇಕಾಗುವ ದಾಖಲೆಗಳು ಯಾವುವು * ಟ್ರಾನ್ಸ್​ಮಿಷನ್ ರಿಕ್ವೆಸ್ಟ್ ಫಾರ್ಮ್ (TRF) * ನೋಟರಿಯಿಂದ ಸಹಿ ಮರಣ ಪ್ರಮಾಣ ಪತ್ರ (ಡೆತ್ ಸರ್ಟಿಫಿಕೇಟ್) ಕಾಪಿ * ನಾಮಿನಿ ಡಿಮ್ಯಾಟ್​ ಖಾತೆಯ ಕ್ಲೈಂಟ್ ಮಾಸ್ಟರ್ ರಿಪೋರ್ಟ್ * ಉತ್ತರಾಧಿಕಾರಿ ಹಕ್ಕನ್ನು ಕ್ಲೇಮ್ ಮಾಡುವಂಥ ಸಕ್ಸೆಷನ್ ಪ್ರಮಾಣ ಪತ್ರ * ಎಲ್ಲ ವಾರಸುದಾರರಿಂದ ನಿರಾಕ್ಷೇಪಣಾ ಪತ್ರ * ನಾನ್ – ಜ್ಯುಡಿಷಿಯಲ್ ಸ್ಟ್ಯಾಂಪ್ ಪೇಪರ್ ಮೇಲೆ ಅಫಿಡವಿಟ್ * ಲೆಟರ್ ಆಫ್ ಇಂಡೆಮ್ನಿಟಿ ಜತೆಗೆ ವೈಯಕ್ತಿಕ ಶ್ಯೂರಿಟಿ ಜತೆಗೆ ಗ್ಯಾರಂಟಿ * ಒಂದು ವೇಳೆ ಸೆಕ್ಯೂರಿಟಿ ಮೌಲ್ಯ 5 ಲಕ್ಷ ರೂಪಾಯಿ ದಾಟಿದರೆ ಪ್ರೊಬೇಟೆಡ್ ವಿಲ್ ಅಥವಾ ಶ್ಯೂರಿಟಿ

ಮೂಲ: ಮನಿ9.ಕಾಮ್ ಲೇಖಕರು: ಸರಬ್ಜಿತ್ ಕೆ ಸೇನ್

ಇದನ್ನೂ ಓದಿ: Estate planning: ಏನಿದು ಎಸ್ಟೇಟ್ ಪ್ಲಾನಿಂಗ್ ಸಂಗತಿ, ಇದು ನಿಮಗೆ ಗೊತ್ತಿರಲೇಬೇಕಾದ ಮಾಹಿತಿ

ಇದನ್ನೂ ಓದಿ: How to save 1 crore | ಪ್ರತಿ ತಿಂಗಳು 10,000 ರೂಪಾಯಿ ಉಳಿತಾಯ ಮಾಡಿ, ಕೋಟ್ಯಧಿಪತಿ ಆಗಲು ಇಲ್ಲಿದೆ ಮಾರ್ಗ

(Here is the procedure to follow transfer securities from deceased stock market investors to legal heirs or nominees)

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ