AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

How to save 1 crore | ಪ್ರತಿ ತಿಂಗಳು 10,000 ರೂಪಾಯಿ ಉಳಿತಾಯ ಮಾಡಿ, ಕೋಟ್ಯಧಿಪತಿ ಆಗಲು ಇಲ್ಲಿದೆ ಮಾರ್ಗ

ಪ್ರತಿ ತಿಂಗಳಿಗೆ 10.000 ರೂಪಾಯಿ ಉಳಿಸುತ್ತಾ 1 ಕೋಟಿ ರೂಪಾಯಿಯನ್ನು ಉಳಿತಾಯ ಮಾಡೋದು ಹೇಗೆ ಎಂದು ಆಲೋಚಿಸುವವರು ಕಡ್ಡಾಯ ಓದಲೇಬೇಕಾದ ಲೇಖನ ಇದು.

How to save 1 crore | ಪ್ರತಿ ತಿಂಗಳು 10,000 ರೂಪಾಯಿ ಉಳಿತಾಯ ಮಾಡಿ, ಕೋಟ್ಯಧಿಪತಿ ಆಗಲು ಇಲ್ಲಿದೆ ಮಾರ್ಗ
ಪ್ರಾತಿನಿಧಿಕ ಚಿತ್ರ
Srinivas Mata
|

Updated on: May 03, 2021 | 4:09 PM

Share

ಗುರಿ ಮತ್ತು ಸಮಯ ಇವೆರಡರ ಬಗ್ಗೆಯೂ ಸ್ಪಷ್ಟತೆ ಇದ್ದರೆ ಜೀವನ ಸರಾಗವಾಗಿ ಮುನ್ನಡೆಯುತ್ತದೆ. ಮಕ್ಕಳ ಶಿಕ್ಷಣ, ಮದುವೆ, ರಿಟೈರ್​ಮೆಂಟ್ ಹೀಗೆ ಯಾವುದಕ್ಕೆ ಯಾವಾಗ ಎಷ್ಟು ದುಡ್ಡು ಬೇಕಾಗುತ್ತದೆ ಅಂತ ಅಂದಾಜು ಮಾಡಿಟ್ಟುಕೊಂಡು, ತಿಂಗಳಿಗೆ ಇಷ್ಟು ಎಂದು ಹಣ ಕೂಡಿಡುತ್ತಾ ಸಾಗಿದರೆ ಆಯಾ ಸನ್ನಿವೇಶ ನಮ್ಮನ್ನು ಗಾಬರಿ ಪಡಿಸಲ್ಲ. ಇದಕ್ಕೆ ಮೊದಲು ಒಂದು ಸೂತ್ರವನ್ನು ಪಾಲಿಸಬೇಕು. ಅದೇನೆಂದರೆ, ನಿಮಗೆ ಬರುವ ಆದಾಯ ಹಾಗೂ ಅದರಲ್ಲಿ ಉಳಿತಾಯದ ಮೊತ್ತವನ್ನು ಕಳೆದು, ಬಾಕಿ ಉಳಿದ ಮೊತ್ತದಲ್ಲಿ ಖರ್ಚನ್ನು ಮಾಡಬೇಕು. ಬಹಳ ಜನರ ಲೆಕ್ಕ ಹೇಗೆಂದರೆ, ಆದಾಯದಲ್ಲಿ ಖರ್ಚು ಮಾಡಿದ ನಂತರ ಉಳಿದದ್ದು ಉಳಿತಾಯವಾಗಿರುತ್ತದೆ. ಆದ್ದರಿಂದ ಮೊದಲಿಗೆ ಉಳಿತಾಯಕ್ಕೆ ಆದ್ಯತೆ.

ಈಗ ಉದಾಹರಣೆ ನೋಡಿ. ಪ್ರತಿ ತಿಂಗಳು ನೀವು 5000 ರೂಪಾಯಿ ಉಳಿಸ್ತಾ ಇದೀರಿ ಅಂದುಕೊಳ್ಳಿ. ಅದು ಈಕ್ವಿಟಿ ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡ್ತಾ ಇದೀರಿ. ಆ ಮೊತ್ತ ಶೇ 12ರ ದರದಲ್ಲಿ ಬೆಳೆಯುತ್ತಾ ಹೋದಲ್ಲಿ 20 ವರ್ಷದ ನಂತರ 50 ಲಕ್ಷ ರೂಪಾಯಿ ಆಗುತ್ತದೆ. ಆ ಒಟ್ಟು ಮೊತ್ತದಲ್ಲಿ ನಿಮ್ಮ ಹೂಡಿಕೆ 12 ಲಕ್ಷ ರೂಪಾಯಿಯಾದರೆ, ಬಾಕಿ ಮೊತ್ತ ನಿಮ್ಮದೇ ಹಣ ಮಾಡಿರುವ ಗಳಿಕೆಯಾಗಿರುತ್ತದೆ.

ಶೇ 12ರ ಖಾತ್ರಿ ಬೆಳವಣಿಗೆ ದರ ಒಂದು ವೇಳೆ ನೀವು ಉಳಿತಾಯವನ್ನು ಪ್ರತಿ ತಿಂಗಳು 10,000 ರೂಪಾಯಿಗೆ ಹೆಚ್ಚು ಮಾಡಿದಿರಿ ಅಂದುಕೊಳ್ಳಿ. ಆಗ ಮೆಚ್ಯೂರಿಟಿ ಮೊತ್ತವು ರೂ. 1 ಕೋಟಿಯಷ್ಟಾಗುತ್ತದೆ. ಇನ್ನು ಸಮಯವನ್ನೂ ಹೆಚ್ಚು ಮಾಡ್ತೀವಿ, ಅಂದರೆ 25 ವರ್ಷಗಳ ಅವಧಿಗೆ 5000 ಅಥವಾ 10,000 ರೂಪಾಯಿ ಉಳಿತಾಯ ಮಾಡ್ತೀವಿ ಅಂದುಕೊಳ್ಳುವಿರಾದರೆ, ಶೇ 12ರ ಖಾತ್ರಿ ಬೆಳವಣಿಗೆ ದರದಲ್ಲಿ ಕ್ರಮವಾಗಿ 95 ಲಕ್ಷ ರೂಪಾಯಿ ಮತ್ತು 1.9 ಕೋಟಿ ರೂಪಾಯಿ ಆಗುತ್ತದೆ.

ಆದರೆ, ನಿಮ್ಮ ಗುರಿ ನಿಗದಿ ಮಾಡಿಕೊಳ್ಳುವಾಗ ಹಣದುಬ್ಬರದ ಬಗ್ಗೆಯೂ ಗಮನ ಇರಲಿ. ನಿಮ್ಮ ಮಗನದೋ ಮಗಳದೋ ಇಪ್ಪತ್ತು ವರ್ಷದ ನಂತರ ಶೈಕ್ಷಣಿಕ ಉದ್ದೇಶಕ್ಕೆ ಇವತ್ತಿನ ಲೆಕ್ಕಕ್ಕೆ 25 ಲಕ್ಷ ರೂಪಾಯಿ ಹಣ ಬೇಕಾಗಿದ್ದಲ್ಲಿ, ನೀವು ಅದಕ್ಕೆ 10 ಲಕ್ಷ ರೂಪಾಯಿ ಹೆಚ್ಚಿಗೆ ಅಂದುಕೊಂಡು ಹಣ ಕೂಡಿಡಬೇಕು.

ತಿಂಗಳಿಗೆ 3000 ರೂಪಾಯಿಯಂತೆ 30 ವರ್ಷದಲ್ಲಿ 1 ಕೋಟಿ ಯಾರಾದರೂ ತಿಂಗಳಿಗೆ 3000 ರೂಪಾಯಿಯನ್ನು SIP (Systematic Investment Plan) ವಿಧಾನದಲ್ಲಿ 30 ವರ್ಷಗಳ ಅವಧಿಗೆ ಉಳಿತಾಯ ಮಾಡಿದರೆ ಮೆಚ್ಯೂರಿಟಿ ಮೊತ್ತ 1 ಕೋಟಿ ರೂಪಾಯಿ ದಾಟುತ್ತದೆ. ನೀವು ಯಾವುದಾದರೂ ಎಸ್​ಐಪಿ ಕ್ಯಾಲ್ಕುಲೇಟರ್ ಬಳಸಿಕೊಂಡು, ಹೂಡಿಕೆ ಮೊತ್ತ ಹಾಗೂ ಮೆಚ್ಯೂರಿಟಿ ವೇಳೆಯಲ್ಲಿ ಸಿಗವ ಹಣದ ಬಗ್ಗೆ ಲೆಕ್ಕ ಹಾಕಿಕೊಳ್ಳಬಹುದು. ರಿಸ್ಕ್ ತೆಗೆದುಕೊಳ್ಳುವ ನಿಮ್ಮ ಸಾಮರ್ಥ್ಯ, ವಯಸ್ಸು ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಈಕ್ವಿಟಿ ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡಿ. ವಿವಿಧ ವಲಯದ, ವಿವಿಧ ಗಾತ್ರದ ಕಂಪೆನಿಯ ಷೇರುಗಳ ಮೇಲೆ ಹೂಡಿಕೆ ಮಾಡುವಂತೆ ಮೂರ್ನಾಲ್ಕು ಬಗೆಯ ಫಂಡ್​ಗಳನ್ನು ಆರಿಸಿಕೊಳ್ಳಿ. ನಿಮ್ಮ ಗುರಿ ದೀರ್ಘಾವಧಿಯದ್ದಾಗಿರಲಿ.

ನೀವಿನ್ನೂ ಉಳಿತಾಯ ಶುರು ಮಾಡಿಲ್ಲ ಅಂತಾದರೆ ಈಗಲೇ ಆರಂಭಿಸಿ. ನೀವು ಹೆಚ್ಚು ತಡ ಮಾಡಿದಷ್ಟು ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡಬೇಕಾಗುತ್ತದೆ. ತುಂಬ ಬೇಗ ಶುರು ಮಾಡಿದರೆ ಉಳಿತಾಯ ಮಾಡಡಬೇಕಾದ ಮೊತ್ತ ಕಡಿಮೆ ಆಗುತ್ತದೆ. ಆದರೆ ಅದೇ ಉಳಿತಾಯದ ಹಣವು ನಿಮಗಾಗಿ ದುಡಿಯೋದು ಹೆಚ್ಚಿಗೆ ಇರುತ್ತದೆ.

ಇದನ್ನೂ ಓದಿ: Post Office MIS: ಪೋಸ್ಟ್ ಆಫೀಸ್ ತಿಂಗಳ ಆದಾಯ ಯೋಜನೆಯಲ್ಲಿ ರೂ. 4,950 ಪಡೆಯಿರಿ

ಇದನ್ನೂ ಓದಿ: 10,000 ರೂಪಾಯಿ ಹೂಡಿದವರಿಗೆ 20 ವರ್ಷದಲ್ಲಿ 2 ಕೋಟಿ ಮಾಡಿಕೊಟ್ಟ ಕಂಪೆನಿಯ ಕಥೆಯಿದು

(How to become crorepati by saving Rs 5000 per month? Here is an explainer)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ