ಏಪ್ರಿಲ್​ನಲ್ಲಿ ಉತ್ಪಾದನೆ ಚಟುವಟಿಕೆ ಸ್ವಲ್ಪ ಮಟ್ಟದ ಏರಿಕೆ; ಸತತ ಎಂಟನೇ ತಿಂಗಳು ರಫ್ತು ಹೆಚ್ಚಳ

IHS Markit ಅನಲಿಟಿಕ್ಸ್ ಸಂಸ್ಥೆ ಬಿಡುಗಡೆ ಮಾಡಿದ ದತ್ತಾಂಶವು ಏಪ್ರಿಲ್​ಗೆ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (PMI)55.5 ತೋರಿಸಿದೆ. ಅಂದಹಾಗೆ ಮಾರ್ಚ್​ ತಿಂಗಳಲ್ಲಿ ಅದು ಏಳು ತಿಂಗಳ ಕನಿಷ್ಠ ಮಟ್ಟವಾದ 55.4 ಇತ್ತು.

ಏಪ್ರಿಲ್​ನಲ್ಲಿ ಉತ್ಪಾದನೆ ಚಟುವಟಿಕೆ ಸ್ವಲ್ಪ ಮಟ್ಟದ ಏರಿಕೆ; ಸತತ ಎಂಟನೇ ತಿಂಗಳು ರಫ್ತು ಹೆಚ್ಚಳ
ಪ್ರಾತಿನಿಧಿಕ ಚಿತ್ರ
Follow us
Srinivas Mata
|

Updated on: May 03, 2021 | 12:49 PM

ನವದೆಹಲಿ: ಹೊಸದಾಗಿ ದೇಶೀಯ ಕೈಗಾರಿಕೆ ಆರ್ಡರ್​ಗಳ ಹೊರತಾಗಿಯೂ ಭಾರತದಲ್ಲಿನ ಉತ್ಪಾದನಾ ಚಟುವಟಿಕೆ ಏಪ್ರಿಲ್​ನಲ್ಲಿ ಸ್ವಲ್ಪ ಮಟ್ಟಿಗೆ ಹೆಚ್ಚಾಗಿದೆ. ಮತ್ತು ಕೊರೊನಾ ಬಿಕ್ಕಟ್ಟಿನಿಂದ ಉತ್ಪಾದನೆ ಎಂಟು ತಿಂಗಳ ಕನಿಷ್ಠ ಮಟ್ಟವನ್ನು ತಲುಪಿದ್ದರೂ ಅದು ಹೊಸದಾಗಿ ಬಂದ ರಫ್ತು ಆರ್ಡರ್​ಗಳಿಂದ ಸರಿತೂಗಿಸಿಕೊಂಡುಹೋಗಿದೆ. ಆ ಮೂಲಕವಾಗಿ 2020ರ ಅಕ್ಟೋಬರ್​ನಿಂದ ಈಚೆಗೆ ಭಾರೀ ವೇಗವನ್ನು ದಾಖಲಿಸಿದೆ. IHS Markit ಅನಲಿಟಿಕ್ಸ್ ಸಂಸ್ಥೆ ಬಿಡುಗಡೆ ಮಾಡಿದ ದತ್ತಾಂಶವು ಏಪ್ರಿಲ್​ಗೆ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (PMI)55.5 ತೋರಿಸಿದೆ. ಅಂದಹಾಗೆ ಮಾರ್ಚ್​ ತಿಂಗಳಲ್ಲಿ ಅದು ಏಳು ತಿಂಗಳ ಕನಿಷ್ಠ ಮಟ್ಟವಾದ 55.4 ಇತ್ತು. 50 ಮತ್ತು ಅದಕ್ಕಿಂತ ಮೇಲ್ಪಟ್ಟ ಸಂಖ್ಯೆಯು ವಿಸ್ತರಣೆಯನ್ನು ಸೂಚಿಸಿದರೆ, 50ರೊಳಗೆ ಈ ಸಂಖ್ಯೆ ಇದ್ದಲ್ಲಿ ಸಂಕುಚಿತತೆಯನ್ನು ಪ್ರತಿನಿಧಿಸುತ್ತದೆ.

ಹೊಸ ರಫ್ತು ಆರ್ಡರ್​ಗಳು ಸತತವಾಗಿ ಎಂಟನೇ ತಿಂಗಳು ಏಪ್ರಿಲ್​ನಲ್ಲೂ ಏರಿಕೆ ಆಗಿದೆ. “ಭಾರತೀಯ ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇರುವುದರಿಂದ ಈ ಹೆಚ್ಚಳವಾಗಿದೆ. ಉದಾಹರಿಸಿದ ಎಲ್ಲ ಮೂರೂ ಉಪ-ವಲಯಗಳಲ್ಲಿ ವಿಸ್ತರಣೆ ದಾಖಲಾಗಿದೆ.” ಎಂದು IHS Markit ಹೇಳಿದೆ.

ವಾಣಿಜ್ಯ ಸಚಿವಾಲಯವು ಭಾನುವಾರದಂದು ಬಿಡುಗಡೆ ಮಾಡಿದ ದತ್ತಾಂಶಗಳಿಗೆ ಪೂರಕವಾಗಿಯೇ ಏಪ್ರಿಲ್ ತಿಂಗಳ ರಫ್ತು ಪ್ರಮಾಣ ಇದೆ. ದೇಶದಾದ್ಯಂತ ಸ್ಥಳೀಯ ಲಾಕ್​ಡೌನ್ ಹೊರತಾಗಿಯೂ ಈ ಬೆಳವಣಿಗೆ ಆಗಿದೆ. ಭಾರತೀಯ ಉತ್ಪನ್ನಗಳಿಗೆ ಬೇಡಿಕೆ ಇರುವುದನ್ನು ಈ ದತ್ತಾಂಶಗಳು ಸೂಚಿಸುತ್ತವೆ. ರಫ್ತು ಪ್ರಮಾಣ ದಾಖಲೆಯ ಶೇ 197ರಷ್ಟು ಹೆಚ್ಚಳವಾಗಿ, 30.21 ಬಿಲಿಯನ್ ಅಮೆರಿಕನ್ ಡಾಲರ್ ಅನ್ನು ತಲುಪಿದೆ. ಕಳೆದ ವರ್ಷ ಈ ಅವಧಿಯಲ್ಲಿ ಲಾಕ್​ಡೌನ್​ನಿಂದಾಗಿ ಪೂರೈಕೆ ವ್ಯತ್ಯಯವಾಗಿ, ಆಮದು ಮತ್ತು ರಫ್ತಿನಲ್ಲಿ ವ್ಯತ್ಯಯ ಆಗಿತ್ತು.

IHS Markit ಅರ್ಥಶಾಸ್ತ್ರ ಸಹಾಯಕ ನಿರ್ದೇಶಕ ಪಾಲಿಯನ್ನ ಡಿ ಲಿಮಾ ಮಾತನಾಡಿ, ಏಪ್ರಿಲ್​ನಲ್ಲಿ ಉದ್ಯೋಗ ಇಳಿಮುಖ ಪ್ರಮಾಣ ಕಡಿಮೆ ಕಡಿಮೆ ಆಗಿದೆ. ಒಂದು ವರ್ಷದ ಅವಧಿಗೆ ಉದ್ಯಮ ವಿಶ್ವಾಸಾರ್ಹತೆ ಬಲಗೊಂಡಿದೆ. ಉತ್ಪಾದಕರು ಈಗಲೂ ಎದುರಿಸುತ್ತಿರುವ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಹಲವು ಸಂಸ್ಥೆಗಳ ಹಣಕಾಸು ಸ್ಥಿತಿಗೆ ಪೆಟ್ಟು ಬಿದ್ದಿದೆ. ಏಪ್ರಿಲ್ ತಿಂಗಳಲ್ಲಿ ಇನ್​ಪುಟ್ ವೆಚ್ಚ 7 ವರ್ಷದ ಗರಿಷ್ಠ ಮಟ್ಟವನ್ನು ಮುಟ್ಟಿದೆ. 2013ರ ಅಕ್ಟೋಬರ್ ನಂತರ ಇದು ಗರಿಷ್ಠ ಮಟ್ಟದ್ದಾಗಿದೆ. ಈ ಎಲ್ಲದರ ಹೊರತಾಗಿಯೂ ಗ್ರಾಹಕರಿಂದ ಬೇಡಿಕೆ ಬರುತ್ತದೆಯೋ ಎಂಬುದನ್ನು ಪರಿಶೀಲಿಸಬೇಕಿದೆ. ಹೊಸ ಕೆಲಸಗಳನ್ನು ವಹಿಸಿಕೊಳ್ಳುವುದಕ್ಕಾಗಿ ಈ ವೆಚ್ಚದ ಹೊರೆಯನ್ನು ತಮ್ಮ ಮೇಲೆ ಹಾಕಿಕೊಳ್ಳಬೇಕಾ ಎಂಬುದನ್ನು ಸಹ ಆಲೋಚಿಸಬೇಕಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಿಪಿಐ ಆಧಾರಿತ ಮಾರ್ಚ್ ತಿಂಗಳ ಹಣದುಬ್ಬರ ಏರಿಕೆ; ಫೆಬ್ರವರಿಯ ಕೈಗಾರಿಕೆ ಉತ್ಪಾದನೆಯಲ್ಲಿ ಇಳಿಕೆ

(India’s manufacturing activities extended tad in the month of April, according to IHS Markit Purchasing Manager Index)

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ