AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಪಿಐ ಆಧಾರಿತ ಮಾರ್ಚ್ ತಿಂಗಳ ಹಣದುಬ್ಬರ ಏರಿಕೆ; ಫೆಬ್ರವರಿಯ ಕೈಗಾರಿಕೆ ಉತ್ಪಾದನೆಯಲ್ಲಿ ಇಳಿಕೆ

ಗ್ರಾಹಕ ದರ ಸೂಚ್ಯಂಕ (CPI) ಆಧಾರಿತ ಮಾರ್ಚ್ ತಿಂಗಳ ಹಣದುಬ್ಬರ ದರ ಹಾಗೂ ಫೆಬ್ರವರಿ ತಿಂಗಳ ಇಂಡೆಕ್ಸ್ ಆಫ್ ಇಂಡಸ್ಟ್ರಿಯಲ್ ಪ್ರೊಡಕ್ಷನ್ (IIP) ಅಂಕಿ- ಅಂಶ ಬಿಡುಗಡೆಯಾಗಿದೆ.

ಸಿಪಿಐ ಆಧಾರಿತ ಮಾರ್ಚ್ ತಿಂಗಳ ಹಣದುಬ್ಬರ ಏರಿಕೆ; ಫೆಬ್ರವರಿಯ ಕೈಗಾರಿಕೆ ಉತ್ಪಾದನೆಯಲ್ಲಿ ಇಳಿಕೆ
ಪ್ರಾತಿನಿಧಿಕ ಚಿತ್ರ
Follow us
Srinivas Mata
|

Updated on: Apr 12, 2021 | 6:54 PM

ನವದೆಹಲಿ: ಗ್ರಾಹಕ ದರ ಸೂಚ್ಯಂಕ ಆಧಾರಿತ ಹಣದುಬ್ಬರ (ಸಿಪಿಐ) ಮಾರ್ಚ್ ತಿಂಗಳ ಅಂಕಿ- ಅಂಶವು ಹೊರಬಂದಿದ್ದು, ಶೇ 5.52 ಇದೆ. ಇದು ಫೆಬ್ರವರಿಯಲ್ಲಿ ಶೇ 5.03 ಇತ್ತು. ಏಪ್ರಿಲ್ 12ರಂದು ಬಿಡುಗಡೆಯಾದ ಅಧಿಕೃತ ದತ್ತಾಂಶದ ಪ್ರಕಾರ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಮಧ್ಯಮ ಅವಧಿಗೆ ನಿಗದಿ ಮಾಡಿದ ಹಣದುಬ್ಬರ ಗುರಿಯಾದ 4 (+/- ಶೇ 2)ರಲ್ಲೇ ಸತತ ನಾಲ್ಕನೇ ತಿಂಗಳು ಸಹ ಇದೆ. ಒಟ್ಟಾರೆ ಆಹಾರ ಬೆಲೆ ಹಣದುಬ್ಬರ ಮಾರ್ಚ್​ನಲ್ಲಿ ಶೇ 4.94ಕ್ಕೆ ಏರಿಕೆ ಆಗಿದೆ. ಫೆಬ್ರವರಿಯಲ್ಲಿ ಈ ಪ್ರಮಾಣ ಶೇ 3.87 ಇತ್ತು.

ಡಿಸೆಂಬರ್​ನಲ್ಲಿ ಸಿಪಿಐ ಹಣದುಬ್ಬರ ದರವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗುರಿಯೊಳಗೆ ಬಂದಿತ್ತು. ಎಂಟು ತಿಂಗಳ ನಂತರ ಶೇ 4.59 ಬಂದಿತ್ತು. ಅದಕ್ಕೂ ಮುಂಚೆ ಹಣದುಬ್ಬರ ದರವು ಶೇ 6ಕ್ಕಿಂತ ಕಡಿಮೆ ಇದ್ದದ್ದು 2020ರ ಮಾರ್ಚ್​ನಲ್ಲಿ. ಅದು ಅಕ್ಟೋಬರ್​ನಲ್ಲಿ ಶೇ 7.61 ಮುಟ್ಟಿತ್ತು.

ಇಂಡೆಕ್ಸ್ ಆಫ್ ಇಂಡಸ್ಟ್ರಿಯಲ್ ಪ್ರೊಡಕ್ಷನ್ (ಐಐಪಿ) ಫೆಬ್ರವರಿ ತಿಂಗಳ ಇಂಡೆಕ್ಸ್ ಆಫ್ ಇಂಡಸ್ಟ್ರಿಯಲ್ ಪ್ರೊಡಕ್ಷನ್ ದತ್ತಾಂಶ ಕೂಡ ಹೊರಬಿದ್ದಿದೆ. ಉತ್ಪಾದನಾ ಚಟುವಟಿಕೆ ಶೇ 3.7 ಕಡಿಮೆ ಆಗಿದೆ. ಜನವರಿಯಲ್ಲಿ ಶೇ 2ರಷ್ಟು ಕುಸಿದಿತ್ತು. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದಲ್ಲಿ ಹಣಕಾಸು ವರ್ಷ FY21ಕ್ಕೆ ಏಪ್ರಿಲ್​ನಿಂದ ಫೆಬ್ರವರಿ ಅವಧಿಯಲ್ಲಿ ಭಾರತದ ಕೈಗಾರಿಕೆ ಉತ್ಪಾದನೆ (IIP) ಶೇ 11.3ರಷ್ಟು ಕುಗ್ಗಿದೆ.

ತಜ್ಞರು ಹೇಳುವಂತೆ, ಕೊರೊನಾ ಕಾರಣಕ್ಕೆ 2020ರಲ್ಲಿ ಘೋಷಿಸಿದ ರಾಷ್ಟ್ರೀಯ ಮತ್ತು ಪ್ರಾದೇಶಿಕ ಕೊರೊನಾ ಲಾಕ್​ಡೌನ್​ನಿಂದ ಬಿದ್ದ ಭಾರೀ ಪೆಟ್ಟಿನಿಂದ ಉತ್ಪಾದನಾ ವಲಯವು ಚೇತರಿಸಿಕೊಳ್ಳುವುದಕ್ಕೆ ಪ್ರಬಲವಾದ ಬೆಳವಣಿಗೆ ಅಗತ್ಯವಿದೆ. ಕೈಗಾರಿಕೆ ಉತ್ಪಾದನೆ ಕಡೆಯದಾಗಿ ಹೆಚ್ಚಳ ಅಂತ ಕಂಡಿದ್ದು ಡಿಸೆಂಬರ್​ನಲ್ಲಿ, ಅದು ಶೇ 1.5ರಷ್ಟು. 2020- 21ನೇ ಹಣಕಾಸು ವರ್ಷದ ಮೊದದಲ ಹನ್ನೊಂದು ತಿಂಗಳಲ್ಲಿ 8 ತಿಂಗಳು ಕುಸಿತವನ್ನೇ ಕಂಡಿದೆ.

ಇದನ್ನೂ ಓದಿ: Bloodbath in stock market | ಕೊರೊನಾ ಎರಡನೇ ಅಲೆ ಆತಂಕದಲ್ಲಿ ಷೇರುಪೇಟೆ ಹೂಡಿಕೆದಾರರ 6 ಲಕ್ಷ ಕೋಟಿ ರೂ. ಖಲಾಸ್

(CPI-based inflation for the month of March increased and February index of industrial production decreased, data revealed by the government.)

Daily Devotional: ಯಾರಿಗೆಲ್ಲಾ ಮನೆ ಖರೀದಿ ಯೋಗವಿದೆ ತಿಳಿಯಿರಿ
Daily Devotional: ಯಾರಿಗೆಲ್ಲಾ ಮನೆ ಖರೀದಿ ಯೋಗವಿದೆ ತಿಳಿಯಿರಿ
Daily horoscope: ಇಂದಿನ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯಿರಿ
Daily horoscope: ಇಂದಿನ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯಿರಿ
ಐಎನ್‌ಎಸ್ ವಿಕ್ರಾಂತ್ ಪರಾಕ್ರಮ : ಪಾಕಿಸ್ತಾನದ ಕರಾಚಿ ಬಂದರು ಧ್ವಂಸ
ಐಎನ್‌ಎಸ್ ವಿಕ್ರಾಂತ್ ಪರಾಕ್ರಮ : ಪಾಕಿಸ್ತಾನದ ಕರಾಚಿ ಬಂದರು ಧ್ವಂಸ
34 ಎಸೆತಗಳಲ್ಲಿ 70 ರನ್; ಡೆಲ್ಲಿ ವಿರುದ್ಧ ಪ್ರಿಯಾಂಶ್ ಅಬ್ಬರ
34 ಎಸೆತಗಳಲ್ಲಿ 70 ರನ್; ಡೆಲ್ಲಿ ವಿರುದ್ಧ ಪ್ರಿಯಾಂಶ್ ಅಬ್ಬರ
ಜಮ್ಮುವಿನಲ್ಲಿ ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಭಾರತ
ಜಮ್ಮುವಿನಲ್ಲಿ ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಭಾರತ
ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಕಥೆ ಊಹೆ ಮಾಡಲೂ ಸಾಧ್ಯವಿಲ್ಲ: ಚಂದು ಗೌಡ
ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಕಥೆ ಊಹೆ ಮಾಡಲೂ ಸಾಧ್ಯವಿಲ್ಲ: ಚಂದು ಗೌಡ
ಭಾರತದ ನಡೆಗಳಿಂದ ತತ್ತರಿಸುತ್ತಿದೆ ಪಾಕಿಸ್ತಾನ, ಅದಕ್ಕೆ ಮುಂದೇನು ಕಾದಿದೆಯೋ
ಭಾರತದ ನಡೆಗಳಿಂದ ತತ್ತರಿಸುತ್ತಿದೆ ಪಾಕಿಸ್ತಾನ, ಅದಕ್ಕೆ ಮುಂದೇನು ಕಾದಿದೆಯೋ
ಉಡುಪಿ ಶ್ರೀಕೃಷ್ಣನಿಗೆ ಪರ್ಯಾಯ ಶ್ರೀ, ಪುತ್ತಿಗೆ ಶ್ರೀಗಳಿಂದ ವಿಶೇಷ ಅಲಂಕಾರ
ಉಡುಪಿ ಶ್ರೀಕೃಷ್ಣನಿಗೆ ಪರ್ಯಾಯ ಶ್ರೀ, ಪುತ್ತಿಗೆ ಶ್ರೀಗಳಿಂದ ವಿಶೇಷ ಅಲಂಕಾರ
ಸ್ಥಳಾಂತರಗೊಂಡವರಿಗೆ ಊಟದ ವ್ಯವಸ್ಥೆ ಮಾಡುತ್ತಿರುವ ಸರ್ಕಾರ
ಸ್ಥಳಾಂತರಗೊಂಡವರಿಗೆ ಊಟದ ವ್ಯವಸ್ಥೆ ಮಾಡುತ್ತಿರುವ ಸರ್ಕಾರ
ರಕ್ಷಣೆ ಮಾಡಿ: ಭಾರತದ ಏಟಿಗೆ ಗೋಳೋ ಅಂತ ಅತ್ತ ಪಾಕ್ ಎಂಪಿ, ವಿಡಿಯೋ ನೋಡಿ
ರಕ್ಷಣೆ ಮಾಡಿ: ಭಾರತದ ಏಟಿಗೆ ಗೋಳೋ ಅಂತ ಅತ್ತ ಪಾಕ್ ಎಂಪಿ, ವಿಡಿಯೋ ನೋಡಿ