AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲಾಲ್ ಡ್ಯಾಂನ ಗೇಟ್​ಗಳನ್ನು ಪಾಕಿಸ್ತಾನಕ್ಕೆ ಸೂಚನೆ ನೀಡದೆ ಓಪನ್ ಮಾಡಿದ ಭಾರತ, ನೆರೆರಾಷ್ಟ್ರದಲ್ಲಿ ಪ್ರವಾಹದಂಥ ಸ್ಥಿತಿ?

ಸಲಾಲ್ ಡ್ಯಾಂನ ಗೇಟ್​ಗಳನ್ನು ಪಾಕಿಸ್ತಾನಕ್ಕೆ ಸೂಚನೆ ನೀಡದೆ ಓಪನ್ ಮಾಡಿದ ಭಾರತ, ನೆರೆರಾಷ್ಟ್ರದಲ್ಲಿ ಪ್ರವಾಹದಂಥ ಸ್ಥಿತಿ?

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: May 08, 2025 | 8:42 PM

Share

ಪಾಕಿಸ್ತಾನ ನೀರಿಗಾಗಿ ಭಾರತದ ಮೂಲಕ ಹರಿದು ಹೋಗುವ ನದಿಗಳನ್ನು ಆಶ್ರಯಿಸಿಕೊಂಡಿರೋದು ಗೊತ್ತಿರುವ ಸಂಗತಿಯೇ. ಭಾರತ ಸರ್ಕಾರವು ಸುಮಾರು ಆರೂವರೆ ದಶಕಗಳ ಇತಿಹಾಸವಿರುವ ಸಿಂಧೂ ನದಿ ನೀರು ಒಪ್ಪಂದವನ್ನು ರದ್ದು ಮಾಡಿದ ಬಳಿಒಕ ಸಲಾಲ್ ಡ್ಯಾಂ ಗೇಟ್ ಗಳನ್ನು ಮುಚ್ಚಿತ್ತು. ಈಗ ಪಾಕಿಸ್ತಾನಕ್ಕೆ ಯಾವುದೇ ಸೂಚನೆ ನೀಡದೆ ಗೇಟ್​​ಗಳನ್ನು ಓಪನ್ ಮಾಡಿದೆ.

ಜಮ್ಮು ಮತ್ತು ಕಾಶ್ಮೀರ, ಮೇ 8: ಭಾರತವು ಸೇನೆ ಮೂಲಕ ಮತ್ತು ರಾಜತಾಂತ್ರಿಕವಾಗಿ ನೀಡುತ್ತಿರುವ ಹೊಡೆತಗಳಿಂದ ಪಾಕಿಸ್ತಾನಕ್ಕೆ ವಿಲವಿಲ ಒದ್ದಾಡುವ ಸ್ಥಿತಿ ನಿರ್ಮಾಣವಾಗಿದೆ. ಈಗ ನೀಡಿರುವ ಹೊಡೆತವೇನು ಗೊತ್ತಾ? ಕಳೆದ ಕೆಲ ದಿನಗಳಿಂದ ಬಂದ್ ಮಾಡಲಾಗಿದ್ದ, ಭಾರತದ ಮೂಲಕ ಪಾಕಿಸ್ತಾನಕ್ಕೆ ಹರಿದು ಹೋಗುವ ಮತ್ತು ಚೆನಾಬ್ ನದಿಗೆ (River Chenab) ಅಡ್ಡಲಾಗಿರುವ ಕಟ್ಟಿರುವ ಸಲಾಲ್ ಡ್ಯಾಂನ ಗೇಟ್ ಗಳನ್ನು ದಿಢೀರನೆ ಓಪನ್ ಮಾಡಿದೆ! ಭಾರತದ ಈ ನಡೆಯಿಂದ ಪಾಕಿಸ್ತಾನದಲ್ಲಿ ಪ್ರವಾಹದಂಥ ಸ್ಥಿತಿ ನಿರ್ಮಾಣಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ:  IMF loan: ಮೇ 9, ಪಾಕಿಸ್ತಾನಕ್ಕೆ ಪೀಕಲಾಟ; 1,10,55,26,78,340 ರೂ ಐಎಂಎಫ್ ಸಾಲಕ್ಕೆ ಅಡ್ಡಗಾಲು ಹಾಕಲಿದೆ ಭಾರತ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.