ಏರ್​ಟೆಲ್​ ಪೇಮೆಂಟ್ಸ್ ಬ್ಯಾಂಕ್​ನಲ್ಲಿ 1 ಲಕ್ಷ ರೂಪಾಯಿ ಮೇಲ್ಪಟ್ಟು ಮೊತ್ತದ ಠೇವಣಿಗೆ ವರ್ಷಕ್ಕೆ ಶೇ 6ರಷ್ಟು ಬಡ್ಡಿ

Airtel Payments Bank: ಉಳಿತಾಯ ಖಾತೆಯಲ್ಲಿ 1 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತ ಇದ್ದಲ್ಲಿ ವರ್ಷಕ್ಕೆ ಶೇ 6ರ ಬಡ್ಡಿ ದರ ದೊರೆಯುತ್ತದೆ ಎಂದು ಏರ್​ಟೆಲ್ ಪೇಮೆಂಟ್ಸ್ ಬ್ಯಾಂಕ್ ಸೋಮವಾರ ಹೇಳಿದೆ.

ಏರ್​ಟೆಲ್​ ಪೇಮೆಂಟ್ಸ್ ಬ್ಯಾಂಕ್​ನಲ್ಲಿ 1 ಲಕ್ಷ ರೂಪಾಯಿ ಮೇಲ್ಪಟ್ಟು ಮೊತ್ತದ ಠೇವಣಿಗೆ ವರ್ಷಕ್ಕೆ ಶೇ 6ರಷ್ಟು ಬಡ್ಡಿ
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: May 03, 2021 | 6:51 PM

ನವದೆಹಲಿ: 1 ಲಕ್ಷ ರೂಪಾಯಿ ಮೇಲ್ಪಟ್ಟು ಮೊತ್ತವನ್ನು ಉಳಿತಾಯ ಖಾತೆಯಲ್ಲಿ ಠೇವಣಿ ಮಾಡಿದಲ್ಲಿ ವಾರ್ಷಿಕ ಬಡ್ಡಿ ದರ ಶೇ 6 ದೊರೆಯುತ್ತದೆ ಎಂದು ಸೋಮವಾರ ಏರ್​ಟೆಲ್​ ಪೇಮೆಂಟ್ಸ್ ಬ್ಯಾಂಕ್ ಘೋಷಣೆ ಮಾಡಿದೆ. ದಿನದ ಕೊನೆಗೆ ಪೇಮೆಂಟ್ಸ್ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಹೆಚ್ಚಿನ ಹಣ ಇಡಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಮಾರ್ಗದರ್ಶಿ ಸೂತ್ರ ಬಿಡುಗಡೆ ಮಾಡಿದ ಮೇಲೆ, 2 ಲಕ್ಷ ರೂಪಾಯಿಗೆ ಉಳಿತಾಯ ಖಾತೆ ಮೊತ್ತವನ್ನು ಹೆಚ್ಚಿಸಿದ ಮೊದಲ ಪೇಮೆಂಟ್ಸ್ ಬ್ಯಾಂಕ್ ಏರ್​ಟೆಲ್ ಪೇಮೆಂಟ್ಸ್ ಬ್ಯಾಂಕ್ ಎಂದು ಕಂಪೆನಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ. ಏರ್​ಟೆಲ್ ಪೇಮೆಂಟ್ಸ್ ಬ್ಯಾಂಕ್​ಗೆ 5.5 ಕೋಟಿಗೂ ಹೆಚ್ಚು ಸಕ್ರಿಯ ಬಳಕೆದಾರರು ಇದ್ದಾರೆ. 1 ಲಕ್ಷ ರೂಪಾಯಿ ತನಕದ ಠೇವಣಿಗೆ ವಾರ್ಷಿಕ ಬಡ್ಡಿ ದರ ಶೇ 2.5 ಇದೆ.

1 ಲಕ್ಷ ರೂಪಾಯಿ ಮೇಲ್ಪಟ್ಟ ಠೇವಣಿ ಮೊತ್ತಕ್ಕೆ ಹೆಚ್ಚಿನ ಬಡ್ಡಿ ದರ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಏರ್​ಟೆಲ್ ಪೇಮೆಂಟ್ಸ್ ಬ್ಯಾಂಕ್ ಸಿಇಒ ಅನುಬ್ರತ ಬಿಸ್ವಾಸ್ ಮಾತನಾಡಿ, ಆರ್​ಬಿಐನಿಂದ ಉಳಿತಾಯ ಠೇವಣಿ ಮೊತ್ತದ ಮಿತಿಯನ್ನು ಏರಿಸಿದ್ದು ಪೇಮೆಂಟ್ಸ್ ಬ್ಯಾಂಕ್​ಗಳ ಪಾಲಿಗೆ ಪ್ರಮುಖ ಮೈಲುಗಲ್ಲು. ಇದು ಗ್ರಾಹಕರಿಂದ ಕೇಳಿಬರುತ್ತಿದ್ದ ಬೇಡಿಕೆಯಾಗಿತ್ತು ಎಂದಿದ್ದಾರೆ. ಒಂದು ಲಕ್ಷ ಮೇಲ್ಪಟ್ಟ ಠೇವಣಿ ಮೊತ್ತಕ್ಕೆ “ಆಕರ್ಷಕ” ಬಡ್ಡಿದರದೊಂದಿಗೆ ಏರ್​ಟೆಲ್ ಪೇಮೆಂಟ್ಸ್​ ಬ್ಯಾಂಕ್​​ನಿಂದ ಇನ್ನಷ್ಟು ಹೆಚ್ಚು ಪ್ರತಿಫಲ ದೊರೆಯುತ್ತದೆ ಎಂದು ಸೇರಿಸಿದ್ದಾರೆ.

ನಮ್ಮದು 5,00,000 ಬ್ಯಾಂಕಿಂಗ್ ಪಾಯಿಂಟ್ಸ್​ಗಳಿದ್ದು, ಜಾಗತಿಕವಾಗಿ ಮೊದಲ ಸುರಕ್ಷಿತ ಮತ್ತು ಸರಳ ಅನುಭವವನ್ನು ಡಿಜಿಟಲ್​ ಆಗಿ ನೀಡುತ್ತದೆ. ನಗರದ ಡಿಜಿಟಲ್ ಮತ್ತು ಗ್ರಾಮೀಣ ಪ್ರದೇಶದ ಬ್ಯಾಂಕಿಂಗ್ ವ್ಯವಸ್ಥೆ ಇಲ್ಲದ ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ಏರ್​ಟೆಲ್ ಪೇಮೆಂಟ್ಸ್ ಬ್ಯಾಂಕ್ ಉತ್ತಮ ಸೇವೆ ಒದಗಿಸುತ್ತದೆ ಎಂದು ಅವರು ಹೇಳಿದ್ದಾರೆ. ಗ್ರಾಹಕರು ಏರ್​ಟೆಲ್ ಪೇಮೆಂಟ್ಸ್ ಬ್ಯಾಂಕ್ ಖಾತೆಯನ್ನು ಕೆಲವೇ ನಿಮಿಷದಲ್ಲಿ ತೆರೆಯಬಹುದು. ಏರ್​ಟೆಲ್ ಥ್ಯಾಂಕ್ಸ್​ ಆ್ಯಪ್ ಮೂಲಕ ವಿಡಿಯೋ ಕಾಲ್ ಮಾಡಿ ಖಾತೆ ತೆರೆಯಬಹುದು.

ಬ್ಯಾಂಕ್​ನಿಂದ ಡಿಜಿಟಲ್ ಸೇವಿಂಗ್ಸ್- ರಿವಾರ್ಡ್ಸ್123 ಇದ್ದು, ಖಾತೆಯನ್ನು ಬಳಸಿ, ಡಿಜಿಟಲ್ ವಹಿವಾಟು ಮಾಡಿದಾಗ ಹೆಚ್ಚಿನ ಅನುಕೂಲ ಆಗುತ್ತದೆ.

ಇದನ್ನೂ ಓದಿ: ಏರ್​ಟೆಲ್ ಪೇಮೆಂಟ್ಸ್ ಬ್ಯಾಂಕ್​ನಿಂದ ಹೊಸ ಉಳಿತಾಯ ಖಾತೆ ರಿವಾರ್ಡ್ಸ್123 ಘೋಷಣೆ

ಇದನ್ನೂ ಓದಿ: Payments Bank: ಪೇಮೆಂಟ್ಸ್ ಬ್ಯಾಂಕ್​ಗಳ ಗ್ರಾಹಕರು 2 ಲಕ್ಷ ರೂಪಾಯಿ ತನಕ ಬ್ಯಾಲೆನ್ಸ್ ಇಡಲು ಅವಕಾಶ

(Airtel payments bank announced 6% pa interest to savings account for deposits above 1 lakhs)

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?