Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏರ್​ಟೆಲ್ ಪೇಮೆಂಟ್ಸ್ ಬ್ಯಾಂಕ್​ನಿಂದ ಹೊಸ ಉಳಿತಾಯ ಖಾತೆ ರಿವಾರ್ಡ್ಸ್123 ಘೋಷಣೆ

Airtel Payments Bank Rewards123: ಏರ್​ಟೆಲ್ ಪೇಮೆಂಟ್ಸ್ ಬ್ಯಾಂಕ್​ನಿಂದ ರಿವಾರ್ಡ್ಸ್123 ಎಂಬ ಹೊಸ ಉಳಿತಾಯ ಖಾತೆಯನ್ನು ಶುಕ್ರವಾರ ಘೋಷಣೆ ಮಾಡಲಾಗಿದೆ. ಇದರಿಂದ ಕ್ಯಾಶ್​ಬ್ಯಾಕ್ ಸೇರಿದಂತೆ ಇತರ ಲಾಭಗಳೇನು ಎಂಬ ಮಾಹಿತಿ ಈ ಲೇಖನದಲ್ಲಿದೆ.

ಏರ್​ಟೆಲ್ ಪೇಮೆಂಟ್ಸ್ ಬ್ಯಾಂಕ್​ನಿಂದ ಹೊಸ ಉಳಿತಾಯ ಖಾತೆ ರಿವಾರ್ಡ್ಸ್123 ಘೋಷಣೆ
ಪ್ರಾತಿನಿಧಿಕ ಚಿತ್ರ
Follow us
Srinivas Mata
|

Updated on:Apr 09, 2021 | 8:10 PM

ಏರ್​ಟೆಲ್ ಪೇಮೆಂಟ್ಸ್ ಬ್ಯಾಂಕ್ ಶುಕ್ರವಾರದಂದು ಹೊಸ ಉಳಿತಾಯ ಖಾತೆ ರಿವಾರ್ಡ್ಸ್123 (Rewards123) ಘೋಷಣೆ ಮಾಡಿದೆ. ಬ್ಯಾಂಕ್ ಖಾತೆಯನ್ನು ಡಿಜಿಟಲ್ ಆಗಿ ಬಳಸಿ, ವಹಿವಾಟು ನಡೆಸುವಾಗ ಗ್ರಾಹಕರಿಗೆ ಇದು ಅನುಕೂಲ ಮತ್ತು ಮೌಲ್ಯವನ್ನು ದೊರಕಿಸುತ್ತದೆ. ಗ್ರಾಹಕರು ವಾರ್ಷಿಕ ಶುಲ್ಕ ರೂ. 299ರೊಂದಿಗೆ ರಿವಾರ್ಡ್ಸ್​​123 ಪಡೆಯಬಹುದು. ಈ ಮೂಲಕ ಪ್ರೀಪೇಯ್ಡ್ ರೀಚಾರ್ಜ್​ಗಳು, ಪೋಸ್ಟ್-ಪೇಯ್ಡ್, ಬ್ರಾಡ್​​ಬ್ಯಾಂಡ್, ಲ್ಯಾಂಡ್​ಲೈನ್ ಮತ್ತು ಡಿಟಿಎಚ್ ಬಿಲ್ ಪಾವತಿ, ಹಣ ಲೋಡ್ ಅನುಕೂಲಗಳು ಮತ್ತು ಶಾಪಿಂಗ್ ರಿವಾರ್ಡ್​​ಗಳ ತನಕ ಇವುಗಳ ಮೇಲೆ ಪ್ರತಿ ತಿಂಗಳು ಕ್ಯಾಶ್​ಬ್ಯಾಕ್ ಪಡೆಯಬಹುದು.

ಇದರಲ್ಲಿ ಶೂನ್ಯ ಕನಿಷ್ಠ ಬ್ಯಾಲೆನ್ಸ್, ಉಚಿತ ಪ್ಲಾಟಿನಂ ಆನ್​ಲೈನ್ ಮಾಸ್ಟರ್​ಕಾರ್ಡ್ ಡೆಬಿಟ್ ಕಾರ್ಡ್​ನಂತಹ ಇತರ ಅನುಕೂಲಗಳೂ ಇವೆ. ಏರ್​ಟೆಲ್ ರಿವಾರ್ಡ್ಸ್123 ಡಿಜಿಟಲ್ ಸೇವಿಂಗ್ಸ್ ಖಾತೆ ಘೋಷಣೆ ಮಾಡುವಾಗ ಹೇಳಿಕೆಯಲ್ಲಿ ತಿಳಿಸಿರುವಂತೆ, ಇಡೀ ವರ್ಷ ವಿವಿಧ ಬಗೆಯ ಡಿಜಿಟಲ್ ವಹಿವಾಟುಗಳಿಗ ನಿರಂತರ ಮೌಲ್ಯ, ಖಾತ್ರಿ ರಿವಾರ್ಡ್ಸ್ ಒದಗಿಸುತ್ತದೆ. ಹೊಸ ಸೇವಿಂಗ್ಸ್ ಬ್ಯಾಂಕ್ ಖಾತೆಯು ರೆಗ್ಯುಲರ್ ಅನುಕೂಲಗಳು ರೂ. 960ರ ತನಕ ವರ್ಷವಿಡೀ ಒದಗಿಸುತ್ತದೆ.

ಏರ್​ಟೆಲ್ ಥ್ಯಾಂಕ್ಸ್ ಆ್ಯಪ್​ನಲ್ಲಿ ವಿಡಿಯೋ ಕೆವೈಸಿ ಬಳಸಿಕೊಂಡು, ಗ್ರಾಹಕರು ಸುಲಭವಾಗಿ ರಿವಾರ್ಡ್ಸ್123 ತೆರೆಯಬಹುದು ಅಥವಾ ಅಪ್​ಗ್ರೇಡ್ ಮಾಡಬಹುದು. ಏರ್​ಟೆಲ್ ಪೇಮೆಂಟ್ಸ್ ಬ್ಯಾಂಕ್​ನ ಎಂ.ಡಿ., ಸಿಇಒ ಅನುಬ್ರತ ಬಿಸ್ವಾಸ್ ಮಾತನಾಡಿ, “ನಮ್ಮ ಸಂಶೋಧನೆಯ ಪ್ರಕಾರ ಡಿಜಿಟಲ್ ಸಿದ್ಧವಾದ, ಸಮಯ ಸಂವೇದನೆಯ ಗ್ರಾಹಕರು ವಹಿವಾಟಿನ ಸಂದರ್ಭದಲ್ಲಿ ನಿರಂತರವಾಗಿ ಮೌಲ್ಯವನ್ನು ಕೇಳುತ್ತಾರೆ. ಮುಂದಿನ ಅತ್ಯುತ್ತಮ ಡೀಲ್​ಗಾಗಿ ಸರ್ಫ್ ಮಾಡಿ ಬಸವಳಿದಿದ್ದಾರೆ.

“ನಮಗೆ ಸಿಕ್ಕ ಈ ಒಳನೋಟದಿಂದ ಸ್ಥಿರವಾದ ಮೌಲ್ಯಧಾರಿತ ರಿವಾರ್ಡ್ಸ್123 ಅಭಿವೃದ್ಧಿ ಪಡಿಸಿದ್ದೇವೆ. ಇದನ್ನು ಡಿಜಿಟಲ್ ವ್ಯವಹಾರಗಳಲ್ಲಿ ಸುರಕ್ಷತೆಗಾಗಿ ಪ್ರತ್ಯೇಕ ಖಾತೆಯಾಗಿ ಬಳಸಬಹುದು. ಇನ್ನು ನಮ್ಮ ಸರಳ, ಸುರಕ್ಷಿತ ಮತ್ತು ಮೌಲ್ಯಾಧಾರಿತ ಪರಿಹಾರಕ್ಕೆ ನಮ್ಮ ನಿಯೋ- ಬ್ಯಾಂಕಿಂಗ್ ಅತಿ ಮುಖ್ಯವಾದ ಆವಿಷ್ಕಾರದ ಸೇರ್ಪಡೆ ಆಗುತ್ತದೆ. ಡಿಜಿಟಲ್ ಒಳಗೊಳ್ಳುವಿಕೆಯ ಭಾರತದ ಅಭಿಯಾನವನ್ನು ಇನ್ನಷ್ಟು ವಿಸ್ತರಿಸುತ್ತದೆ,” ಎಂದಿದ್ದಾರೆ.

ಇದನ್ನೂ ಓದಿ: Payments Bank: ಪೇಮೆಂಟ್ಸ್ ಬ್ಯಾಂಕ್​ಗಳ ಗ್ರಾಹಕರು 2 ಲಕ್ಷ ರೂಪಾಯಿ ತನಕ ಬ್ಯಾಲೆನ್ಸ್ ಇಡಲು ಅವಕಾಶ

ಇದನ್ನೂ ಓದಿ: RTGS, NEFT extension to Payments bank: ಪೇಮೆಂಟ್ಸ್ ಬ್ಯಾಂಕ್​ಗಳಿಗೂ ಆರ್​ಟಿಜಿಎಸ್, ಎನ್​ಇಎಫ್​ಟಿ ವಿಸ್ತರಣೆ

(Airtel paymets bank Friday announces Rewards123 new savings account.)

Published On - 8:02 pm, Fri, 9 April 21