Petrol Diesel Rate Today: ಇಂದೂ ಏರಿದ ಪೆಟ್ರೋಲ್, ಡೀಸೆಲ್ ದರ; ಶತಕ ಬಾರಿಸುವ ಅಂಚಿನಲ್ಲಿದೆ ಮುಂಬೈ ನಗರ!
Petrol Diesel Price Today: ಇಂದು ಪ್ರತಿ ಲೀಟರ್ ಪೆಟ್ರೋಲ್ ದರ 23 ರಿಂದ 27 ಪೈಸೆ ಏರಿಕೆಯಾಗಿದೆ. ಹಾಗೆಯೇ ಪ್ರತಿ ಲೀಟರ್ ಡೀಸೆಲ್ ಬೆಲೆಯಲ್ಲಿ 27 ರಿಂದ 31 ಪೈಸೆಯಷ್ಟು ಹೆಚ್ಚಳವಾಗಿದೆ. ಈ ಮೂಲಕ ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 99 ರೂಪಾಯಿ ಗಡಿ ದಾಟಿ ಗರಿಷ್ಠ ಮಟ್ಟದಲ್ಲಿದೆ.
ದೆಹಲಿ: ಮೇ ತಿಂಗಳ 14ನೇ ತಾರೀಕಿನಿಂದ ಏರಿಕೆ ಕಾಣಲು ಪ್ರಾರಂಭಿಸಿದ ಪೆಟ್ರೋಲ್ ಮತ್ತು ಡೀಸೆಲ್ ದರ ಇಂದಿನ ಒಟ್ಟು 10 ಬಾರಿ ಏರಿಕೆ ಕಂಡಿದೆ. ಬೆಲೆ ಏರಿಕೆಯ ಬಳಿಕ ತೈಲ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಇಂದು (ಮಂಗಳವಾರ) ಪ್ರತಿ ಲೀಟರ್ ಪೆಟ್ರೋಲ್ ದರ 23 ರಿಂದ 27 ಪೈಸೆ ಏರಿಕೆಯಾಗಿದೆ. ಹಾಗೆಯೇ ಪ್ರತಿ ಲೀಟರ್ ಡೀಸೆಲ್ ಬೆಲೆಯಲ್ಲಿ 27 ರಿಂದ 31 ಪೈಸೆಯಷ್ಟು ಹೆಚ್ಚಳವಾಗಿದೆ. ಈ ಮೂಲಕ ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 99 ರೂಪಾಯಿ ಗಡಿ ದಾಟಿ ಗರಿಷ್ಠ ಮಟ್ಟದಲ್ಲಿದೆ.
ಇನ್ನು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ ಕಳೆದ ಸೋಮವಾರ 92.58 ರೂಪಾಯಿ ಇತ್ತು. ಇಂದು ದರ ಏರಿಕೆಯ ಬಳಿಕ 92.85 ರೂಪಾಯಿಗೆ ಏರಿಕೆಯಾಗಿದೆ. ಹಾಗೆಯೇ ಲೀಟರ್ ಡೀಸೆಲ್ ದರ ಕೂಡಾ ಸೋಮವಾರ 83.22 ರೂಪಾಯಿ ಇತ್ತು. ಇಂದು ಮಂಗಳವಾರ 83.51 ರೂಪಾಯಿಗೆ ಏರಿಕೆಯಾಗಿದೆ.
ಮುಂಬೈನಗರದಲ್ಲಿ ಇನ್ನೇನು ಶತಕ ಬಾರಿಸುವ ಅಂಚಿನಲ್ಲಿ ಪೆಟ್ರೋಲ್ ದರವಿದೆ. ಸೋಮವಾದರ ದರಕ್ಕಿಂತ 26 ಪೈಸೆ ಜಿಗಿತ ಕಂಡಿದ್ದು, ಲೀಟರ್ ಪೆಟ್ರೋಲ್ ಬೆಲೆ 99.14 ರೂಪಾಯಿ ಆಗಿದೆ. ಲೀಟರ್ ಡೀಸೆಲ್ದಲ್ಲಿ 31 ಪೈಸೆ ಹೆಚ್ಚಳವಾಗಿದ್ದು, ಡೀಸೆಲ್ ಪ್ರತಿ ಲೀಟರ್ಗೆ 90.71 ರೂಪಾಯಿ ಆಗಿದೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ರಾಜಸ್ಥಾನ, ಮಧ್ರಪ್ರದೇಶ ಹಾಗೂ ಮಹಾರಾಷ್ಟ್ರದ ಕೆಲವು ನಗರಗಳಲ್ಲಿ ಪೆಟ್ರೋಲ್ ದರ 100ರ ಗಡಿ ದಾಟಿ ಸಾರ್ವಕಾಲಿಕ ಗರಿಷ್ಠ ದಾಖಲೆ ಸೃಷ್ಟಿಸಿದೆ.
ಸೋಮವಾರದ ದರಕ್ಕಿಂತ 25 ಪೈಸೆ ಏರಿಕೆಯ ಬಳಿಕ ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 92.92 ರೂಪಾಯಿಗೆ ಏರಿಕೆಯಾಗಿದೆ. ಡೀಸೆಲ್ ದರದಲ್ಲಿ 29 ಪೈಸೆ ಏರಿಕೆಯಾಗಿದ್ದು, ಲೀಟರ್ ಡೀಸೆಲ್ ದರ 86.35 ರೂಪಾಯಿ ಆಗಿದೆ. ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ನಿನ್ನೆ 94.31 ರೂಪಾಯಿ ಇತ್ತು. ಇಂದು ದರ ಹೆಚ್ಚಳದ ಬಳಿಕ 94.54 ರೂಪಾಯಿ ಆಗಿದೆ. ಅದೇ ರೀತಿ ಲೀಟರ್ ಡೀಸೆಲ್ ದರದಲ್ಲಿ ಪೈಸೆ ಏರಿಕೆಯ ಬಳಿಕ 88.34 ರೂಪಾಯಿಗೆ ಹೆಚ್ಚಳವಾಗಿದೆ.
ರಾಜಸ್ಥಾನದ ಶ್ರೀಗಂಗನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 103.80 ರೂಪಾಯಿ ತಲುಪಿದ್ದು, ಪ್ರತಿ ಲೀಟರ್ ಡೀಸೆಲ್ ದರ 96.30 ರೂಪಾಯಿ ಆಗಿದೆ. ಸ್ಥಳೀಯ ತೆರಿಗೆಗಳು ಮತ್ತು ವಿಧಿಸಿದ ವ್ಯಾಟ್ಗಳಿಗೆ ಅನುಸಾರವಾಗಿ ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಪ್ರಸ್ತುತದಲ್ಲಿ ಕೇಂದ್ರ ಮತ್ತು ರಾಜ್ಯ ತೆರಿಗೆಗಳು ಪೆಟ್ರೋಲ್ ಬೆಲೆಯಲ್ಲಿ ಶೇ. 61ಕ್ಕಿಂತ ಹೆಚ್ಚಿದೆ. ಹಾಗೆಯೇ ಡೀಸೆಲ್ ದರದಲ್ಲಿ ಶೇ.56ಕ್ಕಿಂತ ಹೆಚ್ಚಿದೆ. ಕೇಂದ್ರವು ವಿಧಿಸುವ ಅಬಕಾರಿ ಸುಂಕ ಲೀಟರ್ ಪೆಟ್ರೋಲ್ 32.90 ರೂಪಾಯಿ ಮತ್ತು ಡೀಸೆಲ್ಗೆ 31.80 ರೂಪಾಯಿ ಇದೆ.
ನಗರ ಪೆಟ್ರೋಲ್ ದರ (ಲೀ.) ಡೀಸೆಲ್ ದರ (ಲೀ) ದೆಹಲಿ 92.85 83.51 ಕೋಲ್ಕತಾ 92.92 86.35 ಮುಂಬೈ 99.14 90.71 ಚೆನ್ನೈ 94.54 88.34 ಬೆಂಗಳೂರು 95.94 88.53 ಹೈದರಾಬಾದ್ 96.50 91.04 ಶ್ರೀ ಗಂಗನಗರ 103.80 96.30 ಜೈಪುರ 99.30 92.18 ಪಾಟ್ನಾ 95.05 88.75 ಲಕ್ನೋ 90.57 83.89
ಇದನ್ನೂ ಓದಿ:
ವಿವಿಧ ನಗರದಲ್ಲಿ ಪೆಟ್ರೋಲ್ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/petrol-price-today.html
ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.html