ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಹೃದಯ ರೋಗ ತಜ್ಞ ಡಾ. ಕೆ.ಕೆ ಅಗರ್ವಾಲ್ ಕೊರೊನಾ ಸೋಂಕಿನಿಂದ ನಿಧನ
ಭಾರತೀಯ ವೈದ್ಯಕೀಯ ಸಂಘದ( ಐಎಂಎ) ಮಾಜಿ ಅಧ್ಯಕ್ಷ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಕೆ.ಕೆ ಅಗರ್ವಾಲ್ ನಿನ್ನೆ ರಾತ್ರಿ (ಸೋಮವಾರ) ವಿಧವಶರಾಗಿದ್ದಾರೆ.
ದೆಹಲಿ: ಭಾರತೀಯ ವೈದ್ಯಕೀಯ ಸಂಘದ( ಐಎಂಎ) ಮಾಜಿ ಅಧ್ಯಕ್ಷ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಕೆ.ಕೆ ಅಗರ್ವಾಲ್ ನಿನ್ನೆ ರಾತ್ರಿ (ಸೋಮವಾರ) ವಿಧವಶರಾಗಿದ್ದಾರೆ. ಕೊರೊನಾ ಸೋಂಕು ತಗುಲಿದ್ದರಿಂದ ಅವರು ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಹೃದಯರೋಗ ತಜ್ಞರಾಗಿದ್ದ ಡಾ.ಕೆ.ಕೆ ಅಗರ್ವಾಲ್ ಅವರು ಹಾರ್ಟ್ಕೇರ್ ಫೌಂಡೇಷನ್ ಆಫ್ ಇಂಡಿಯಾದ ಮುಖ್ಯಸ್ಥರಾಗಿದ್ದರು. ಕೊರೊನಾ ವೃತ್ತಿಯಲ್ಲಿ ವೈದ್ಯರಾದ್ದರಿಂದ ಕೊರೊನಾ ಸಂದರ್ಭದಲ್ಲಿ ಜನರ ಹಿತ ಬಯಸುತ್ತ, ಜನರಿಗೆ ಜಾಗೃತಿ ಮೂಡುಸುವತ್ತ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ವಿಡಿಯೋ ಮಾಡುವ ಮೂಲಕ ಜನರಿಗೆ ಕೊರೊನಾ ಸೋಂಕಿನ ದುಷ್ಪರಿಣಾಮದ ಕುರಿತಾಗಿ ಅರಿವು ಮೂಡಿಸಿದ್ದರು.
ಕೆ.ಕೆ ಅಗರ್ವಾಲ್ ಅವರಿಗೆ 62 ವರ್ಷ ವಯಸ್ಸಾಗಿತ್ತು. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 2005ರಲ್ಲಿ ಡಾ. ಬಿಸಿ ರಾಯ್ ಪ್ರಶಸ್ತಿ, 2010 ರಲ್ಲಿ ಪ್ರದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದರು. ತಮ್ಮ ಶಾಲಾ ಶಿಕ್ಷಣವನ್ನು ದೆಹಲಿಯಲ್ಲಿ ಪೂರ್ಣಗೊಳಿಸಿದ್ದು, ನಾಗ್ಪುರ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದವಿ ಪಡೆದರು. ನಂತರ ವೈದ್ಯರಾಗಿ ತಮ್ಮ ವೃತ್ತಿಯನ್ನು ಮುಂದುವರೆಸುತ್ತಾ ಸಾರ್ವಜನಿಕ ಹಿತ ಬಯಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
— Dr K K Aggarwal (@DrKKAggarwal) May 17, 2021
Published On - 10:22 am, Tue, 18 May 21