Narada Bribery Case: ಟಿಎಂಸಿ ನಾಯಕರಿಗೆ ವಿಶೇಷ ಸಿಬಿಐ ಕೋರ್ಟ್ ನೀಡಿದ್ದ ಜಾಮೀನಿಗೆ ತಡೆ

ಜಾಮೀನು ಪ್ರಶ್ನಿಸಿ ಸಿಬಿಐ ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಮುಸ್ಸಂಜೆ ಹೊತ್ತಿಗೆ ಜಾಮೀನು ತಡೆಹಿಡಿಯಲಾಯಿತು. ಇದರಿಂದಾಗಿ ಟಿಎಂಸಿ ನೇತಾರರು ರಾತ್ರಿ ಜೈಲಿನಲ್ಲಿ ಕಳೆದಿದ್ದಾರೆ.

Narada Bribery Case: ಟಿಎಂಸಿ ನಾಯಕರಿಗೆ ವಿಶೇಷ ಸಿಬಿಐ ಕೋರ್ಟ್ ನೀಡಿದ್ದ ಜಾಮೀನಿಗೆ ತಡೆ
ಸಿಬಿಐ ಕಚೇರಿ ಮುಂದೆ ಮಮತಾ ಬ್ಯಾನರ್ಜಿ
Rashmi Kallakatta

| Edited By: Apurva Kumar Balegere

May 18, 2021 | 12:57 PM

ಕೊಲ್ಕತ್ತಾ: ನಾರದ ಲಂಚ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಸಚಿವರಾದ ಫಿರ್ಹಾದ್ ಹಕೀಮ್ ಮತ್ತು ಸುಬ್ರತಾ ಮುಖರ್ಜಿ, ತೃಣಮೂಲ ಕಾಂಗ್ರೆಸ್ ಪಕ್ಷ ಶಾಸಕ ಮದನ್ ಮಿತ್ರಾ ಮತ್ತು ಟಿಎಂಸಿ ನೇತಾರ ಸೋವನ್ ಚಟರ್ಜಿ ಅವರನ್ನು ಸೋಮವಾರ ಬೆಳಗ್ಗೆ ಸಿಬಿಐ ಬಂಧಿಸಿತ್ತು. ಇವರಿಗೆ ಸಂಜೆ ಹೊತ್ತು ವಿಶೇಷ ಸಿಬಿಐ ನ್ಯಾಯಾಲಯ ಜಾಮೀನು ನೀಡಿತ್ತು. ಜಾಮೀನು ಪ್ರಶ್ನಿಸಿ ಸಿಬಿಐ ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಮುಸ್ಸಂಜೆ ಹೊತ್ತಿಗೆ ಜಾಮೀನು ತಡೆಹಿಡಿಯಲಾಯಿತು. ಇದರಿಂದಾಗಿ ಟಿಎಂಸಿ ನೇತಾರರು ರಾತ್ರಿ ಜೈಲಿನಲ್ಲಿ ಕಳೆದಿದ್ದಾರೆ. ತಮ್ಮ ನಾಯಕರ ಬಂಧನ ಪ್ರಶ್ನಿಸಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೋಲ್ಕತ್ತಾದ ಸಿಬಿಐ ಕಚೇರಿಯಲ್ಲಿ ಸುಮಾರು ಏಳು ಗಂಟೆಗಳ ಠಿಕಾಣಿ ಹೂಡಿ ತಮ್ಮನ್ನೂ ಬಂಧಿಸುವಂತೆ ಹೇಳಿದ್ದರು. ಕಚೇರಿಯಲ್ಲಿ ನಾಟಕೀಯ ಬೆಳವಣಿಗೆ ನಂತರ ನಾಲ್ವರಿಗೂ ಜಾಮೀನು ನೀಡಲಾಯಿತು. ಆದರೆ ಸಂಜೆ ತಡವಾಗಿ ಸಿಬಿಐ ಜಾಮೀನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿತು. ಹೈಕೋರ್ಟ್ ಜಾಮೀನಿಗೆ ತಡೆ ನೀಡಿದ ನಂತರ ನಾಯಕರನ್ನು ಪ್ರೆಸಿಡೆನ್ಸಿ ಜೈಲಿಗೆ ಕರೆದೊಯ್ಯಲಾಯಿತು. ಮುಂದಿನ ವಿಚಾರಣೆ ಬುಧವಾರ ನಡೆಯಲಿದೆ.

ಸಿಬಿಐ ಸೋಮವಾರದಂದು ಪಶ್ಚಿಮ ಬಂಗಾಳದ ಇಬ್ಬರು ಸಚಿವರು, ಫಿರ್ಹಾದ್ ಹಕೀಮ್ ಮತ್ತು ಸುಬ್ರತಾ ಮುಖರ್ಜಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕರಾದ ಮದನ್ ಮಿತ್ರಾ ಮತ್ತು ಕೊಲ್ಕತ್ತಾದ ಮಾಜಿ ಮೇಯರ್ ಸೋವನ್ ಚಟ್ಟೋಪಾಧ್ಯಾಯ ಅವರನ್ನು ನಾರದ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಿದೆ. ರಾಜ್ಯಪಾಲರಾದ ಜಗದೀಪ್ ಧನ್ ಕರ್  ಅವರು ಬಂಧಿತ ನಾಲ್ವರ ವಿರುದ್ಧ ಸಿಬಿಐಗೆ ಚಾರ್ಜ್​ಶೀಟ್​ ದಾಖಲಿಸಲು ಮತ್ತು ಅವರ ವಿರುದ್ಧ ಮಾಡಲಾಗಿರುವ ಆರೋಪಗಳ ತನಿಖೆ ನಡೆಸಲು ಅನುಮತಿ ನೀಡಿದ ಕೆಲ ದಿನಗಳ ನಂತರ ನಾಲ್ವರನ್ನು ಬಂಧಿಸಲಾಗಿದೆ. ನಾರದ ಕುಟುಕು ಕಾರ್ಯಾಚರಣೆ ನಡೆದಾಗ ಈ ನಾಲ್ವರು ಮಮತಾ ಬ್ಯಾನರ್ಜಿ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರು ಮತ್ತು ಅವರ ಲಂಚ ಸ್ವೀಕರಿಸಿದ್ದು ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿತ್ತು. ಸದರಿ ಟೇಪುಗಳನ್ನು 2016ರ ವಿಧಾನಸಭಾ ಚುನಾವಣೆಗ ಮುಂಚೆ ಬಿಡುಗಡೆ ಮಾಡಲಾಗಿತ್ತು. 2017ರಲ್ಲಿ ಕಲ್ಕತ್ತಾ ಉಚ್ಛ ನ್ಯಾಯಾಲಯವು ಪ್ರಕರಣದ ತನಿಖೆ ನಡೆಸುವಂತೆ ಸಿಬಿಐಗೆ ಆದೇಶ ನೀಡಿತ್ತು.

ಬಂಧನ ನಡೆದ  ಒಂದು ಗಂಟೆಯೊಳಗೆ, ಕೋಪಗೊಂಡ ಮಮತಾ ಬ್ಯಾನರ್ಜಿ ಕೂಡ ನಿಜಾಮ್ ಪ್ಯಾಲೇಸ್ ನಲ್ಲಿರುವ ಸಿಬಿಐ ಕಚೇರಿಗೆ ದೌಡಾಯಿಸಿದ್ದರು.  ಸರಿಯಾದ ಪ್ರಕ್ರಿಯೆ ಇಲ್ಲದೆ ಅವರನ್ನು ಬಂಧಿಸಿರುವ ರೀತಿಯಿಂದಾಗಿ ಸಿಬಿಐ ನನ್ನನ್ನು ಸಹ ಬಂಧಿಸಬೇಕಾಗುತ್ತದೆ ಎಂದು ಬಂಗಾಳ ಮುಖ್ಯಮಂತ್ರಿ ಸಿಬಿಐನಲ್ಲಿ ಕಚೇರಿಯಲ್ಲಿ ಸುಮಾರು 6ಗಂಟೆಗಳ ಕಾಲ ಕುಳಿತಿದ್ದರು.

ಏನಿದು ನಾರದ ಕಾರ್ಯಾಚರಣೆ? ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ) ಯ ಉನ್ನತ ಶ್ರೇಣಿಯ ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ಗುರಿಯಾಗಿಸಿಕೊಂಡು ಮ್ಯಾಥ್ಯೂ ಸ್ಯಾಮುಯೆಲ್ ನಡೆಸಿದ ಕುಟುಕು ಕಾರ್ಯಾಚರಣೆಯೇ ನಾರದಾ ಕುಟುಕು ಕಾರ್ಯಾಚರಣೆ. ಇದು ಹಲವಾರು ರಾಜಕಾರಣಿಗಳು ಮತ್ತು ಉನ್ನತ ದರ್ಜೆಯ ಪೊಲೀಸ್ ಅಧಿಕಾರಿಯೊಬ್ಬರು  ಕಂಪನಿಗೆ ಅನಧಿಕೃತ ಸಹಾಯವನ್ನು ನೀಡುವ ಬದಲು ನಗದು ಲಂಚ ಸ್ವೀಕರಿಸುವುದನ್ನು ತೋರಿಸಿದೆ.  ಭಾರತೀಯ ಸುದ್ದಿ ಪತ್ರಿಕೆ ತೆಹಲ್ಕಾಗಿ 2014 ರಲ್ಲಿ ಮಾಡಿದ ಈ ಕುಟುಕು ಕಾರ್ಯಾಚರಣೆ 2016 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ತಿಂಗಳುಗಳ ಮೊದಲು ಖಾಸಗಿ ವೆಬ್‌ಸೈಟ್‌ನಲ್ಲಿ ಪ್ರಕಟವಾಯಿತು.

ಜೂನ್ 2017 ನಿಂದ ಕೇಂದ್ರ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸಂಸದೀಯ ನೀತಿ ಸಮಿತಿ ಈ ಪ್ರಕರಣದ ತನಿಖೆ ನಡೆಸುತ್ತಿವೆ. ತೃಣಮೂಲ ಕಾಂಗ್ರೆಸ್ ಆರೋಪಗಳನ್ನು ತಿರಸ್ಕರಿಸಿದ್ದು, ದೇಣಿಗೆ ನೀಡುವ ರೀತಿಯಲ್ಲಿ ಹಣವನ್ನು ಸ್ವೀಕರಿಸಲಾಗಿದೆ ಎಂದು ಹೇಳಿಕೊಂಡಿದೆ.

ಇದನ್ನೂ ಓದಿ:  Narada Sting Case: ಸಿಬಿಐ ಬಂಧಿಸಿದ್ದ ಟಿಎಂಸಿ ಸಚಿವ ಮತ್ತು ಶಾಸಕರಿಗೆ ವಿಶೇಷ ಸಿಬಿಐ ನ್ಯಾಯಾಲಯದಿಂದ ಜಾಮೀನು

Narada Sting Case: ಪಶ್ಚಿಮ ಬಂಗಾಳದಲ್ಲಿ ಸಿಬಿಐಯಿಂದ ಟಿಎಂಸಿ ನಾಯಕ ಫಿರ್ಹಾದ್ ಹಕೀಮ್, ಸುಬ್ರತಾ ಮುಖರ್ಜಿ, ಮದನ್ ಮಿತ್ರಾ ಬಂಧನ

(Narada bribery case Calcutta high court on Monday night stayed the bail granted 4 TMC leaders arrested by CBI)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada