Karvy Stock Broking: ಕಾರ್ವಿ ಸ್ಟಾಕ್ ಬ್ರೋಕಿಂಗ್ ಅಧ್ಯಕ್ಷ ಪಾರ್ಥಸಾರಥಿಯನ್ನು ಬಂಧಿಸಿದ ಹೈದರಾಬಾದ್ ಪೊಲೀಸರು
ಕಾರ್ವಿ ಸ್ಟಾಕ್ ಬ್ರೋಕಿಂಗ್ ಅಧ್ಯಕ್ಷ ಸಿ. ಪಾರ್ಥಸಾರಥಿ ಅವರನ್ನು ಹೈದರಾಬಾದ್ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಇಂಡಸ್ಇಂಡ್ ಬ್ಯಾಂಕ್ ನೀಡಿದ ದೂರಿನ ಮೇಲೆ ಈ ಕ್ರಮ ಕೈಗೊಳ್ಳಲಾಯಿತು.
ಕಾರ್ವಿ ಸ್ಟಾಕ್ ಬ್ರೋಕಿಂಗ್ ಲಿಮಿಟೆಡ್ (KSBL) ಅಧ್ಯಕ್ಷ ಸಿ.ಪಾರ್ಥಸಾರಥಿ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಇಂಡಸ್ಇಂಡ್ ಬ್ಯಾಂಕ್ ದಾಖಲಿಸಿದ ದೂರನ್ನು ಆಧರಿಸಿ, ಈ ಕ್ರಮವನ್ನು ಕೈಗೊಳ್ಳಲಾಗಿದೆ. ಇಂಡಸ್ಇಂಡ್ ಬ್ಯಾಂಕ್ ಆರೋಪಿಸಿರುವಂತೆ, ಕಾರ್ವಿ ಸ್ಟಾಕ್ ಬ್ರೋಕಿಂಗ್ ಲಿಮಿಟೆಡ್ನಿಂದ ಸೆಕ್ಯೂರಿಟೀಸ್ಗಳನ್ನು ಅಡಮಾನ ಮಾಡಿ ಹಾಗೂ ಪಾರ್ಥಸಾರಥಿ ಅವರ ವಯಕ್ತಿಕ ಖಾತ್ರಿ ಮೇಲೆ 137 ಕೋಟಿ ರೂಪಾಯಿ ಸಾಲ ವ್ಯವಸ್ಥೆ ಮಾಡಿಕೊಡಲಾಗಿದೆ. ಆದರೆ ತನ್ನ ಗ್ರಾಹಕರಿಗೆ ಸೇರಿದ ಸೆಕ್ಯೂರಿಟೀಸ್ ಎಂಬುದನ್ನು ಮರೆಮಾಚಿ, ಬ್ರೋಕರೇಜ್ ಸಂಸ್ಥೆಯು ಅಡ ಇಟ್ಟಿದೆ ಎಂದು ಬ್ಯಾಂಕ್ನಿಂದ ದೂರು ನೀಡಲಾಗಿದೆ ಎಂಬುದನ್ನು ಪೊಲೀಸರು ತಿಳಿಸಿದ್ದಾರೆ.
“ಈ ಮೇಲ್ಕಂಡ ಪ್ರಕರಣದಲ್ಲಿ, ಗ್ರಾಹಕರ ಒಪ್ಪಿಗೆ ಇಲ್ಲದೆ ಪವರ್ ಆಫ್ ಅಟಾರ್ನಿ ದುರುಪಯೋಗ ಮಾಡಿಕೊಳ್ಳಲಾಗಿದೆ. ಕಾರ್ವಿ ಸೆಕ್ಯೂರಿಟೀಸ್ ಬ್ರೋಕರೇಜ್ ಲಿಮಿಟೆಡ್ ಡಿಮ್ಯಾಟ್ ಖಾತೆಗೆ ವರ್ಗಾವಣೆ ಮಾಡಿದ್ದ ಸೆಕ್ಯೂರಿಟೀಸ್ಗಳನ್ನು ಮಾರ್ಜಿನ್ಗಾಗಿ ಮತ್ತು KSBL ವ್ಯವಹಾರದ ಅಲ್ಪಾವಧಿ ಅಗತ್ಯಗಳಿಗಾಗಿ 2013ರ ಮಾರ್ಚ್ನಿಂದ ಬ್ಯಾಂಕ್ ಬಳಿ ಅಡಮಾನ ಮಾಡಲಾಗಿತ್ತು,” ಎಂದು ಪೊಲೀಸರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪಾರ್ಥಸಾರಥಿ ಅವರನ್ನು ಮನೆಯಿಂದ ಬಂಧಿಸಲಾಗಿತ್ತು. ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಲಾಯಿತು. ಅಲ್ಲಿಂದ ಹದಿನಾಲ್ಕು ದಿನಗಳ ನ್ಯಾಯಾಂಗ ವಶಕ್ಕೆ ನೀಡಲಾಯಿತು. ಪಾರ್ಥಸಾರಥಿ ಪರ ವಕೀಲರು ತಕ್ಷಣಕ್ಕೆ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ. ಪೊಲೀಸರು ಹೇಳುವಂತೆ, ತನಿಖಾ ಇಲಾಖೆಯ ವಿಚಾರಣೆ ವೇಳೆ ಸೆಂಟರ್ ಕ್ರೈಮ್ ಸ್ಟೇಷನ್ (ಸಿಸಿಎಸ್) ಘಟಕದಿಂದ ಬಹಿರಂಗ ಆಗಿರುವ ಸಂಗತಿ ಏನೆಂದರೆ, 1400 ಕೋಟಿ ರೂಪಾಯಿ ಮೊತ್ತವನ್ನು ಪಾರ್ಥಸಾರಥಿ ಒಂದೋ ಸಾಲಕ್ಕಾಗಿ ಅಥವಾ ವ್ಯವಸ್ಥಾಪರ ಟ್ರೇಡಿಂಗ್ಗಾಗಿ ಬಳಸಿರುವ ಸಾಧ್ಯತೆ ಇದೆ.
ಇದನ್ನೂ ಓದಿ: ಅಮೆರಿಕದ ಗೂಗಲ್, ಆಪಲ್ ಕಂಪೆನಿ ಷೇರುಗಳನ್ನು ಭಾರತದಿಂದ ಖರೀದಿ ಮಾಡುವುದು ಹೇಗೆ?
(Karvy Stock Broking Chairman C Parthasarathy Arrest By Hyderabad Police On IndusInd Bank Complaint)