ಅಮೆರಿಕದ ಗೂಗಲ್, ಆಪಲ್ ಕಂಪೆನಿ ಷೇರುಗಳನ್ನು ಭಾರತದಿಂದ ಖರೀದಿ ಮಾಡುವುದು ಹೇಗೆ?
ಅಮೆರಿಕದ ಸ್ಟಾಕ್ ಎಕ್ಸ್ಚೇಂಜ್ಗಳಿಂದ ಆಪಲ್, ಗೂಗಲ್, ಫೇಸ್ಬುಕ್ ಕಂಪೆನಿಯ ಷೇರುಗಳನ್ನು ಭಾರತದಿಂದಲೇ ಖರೀದಿ ಮಾಡುವುದು ಹೇಗೆ ಎಂಬುದರ ವಿವರ ಇಲ್ಲಿದೆ.
ಅಮೆರಿಕದ ಷೇರು ಮಾರುಕಟ್ಟೆ, ಅದರಲ್ಲೂ FAANG ಎಂದು ಕರೆಸಿಕೊಳ್ಳುವ ಟೆಕ್ ದೈತ್ಯ ಕಂಪೆನಿಗಳಾದ ಫೇಸ್ಬುಕ್, ಅಮೆಜಾನ್, ಆಪಲ್, ನೆಟ್ಫ್ಲಿಕ್ಸ್ ಮತ್ತು ಗೂಗಲ್ ಕಂಪೆನಿಯ ಷೇರುಗಳ ಬಗ್ಗೆ ಭಾರತೀಯ ಹೂಡಿಕೆದಾರರ ಆಕರ್ಷಣೆ ಹೆಚ್ಚು. ದೇಶೀಯ ಮಾರುಕಟ್ಟೆಗಳಿಂದ ಆಚೆಗೆ ಅವುಗಳಲ್ಲಿ ಕೂಡ ಹಣ ಹೂಡಬಹುದು ಎಂಬ ಸಂಗತಿ ನಿಮಗೆ ಗೊತ್ತಿದೆಯೇ? ದೇಶೀಯ ಹೂಡಿಕೆದಾರರ ಆಸಕ್ತಿ ಹೆಚ್ಚಾದ ಹಿನ್ನೆಲೆಯಲ್ಲಿ ಹಲವು ಆನ್ಲೈನ್ ಹೂಡಿಕೆ ಪ್ಲಾಟ್ಫಾರ್ಮ್ಗಳು ದೇಶೀ, ವಿದೇಶೀ ಸ್ಟಾಕ್ಗಳು, ಮ್ಯೂಚುವಲ್ ಫಂಡ್ಗಳಲ್ಲಿ ಟ್ರೇಡಿಂಗ್ ಮಾಡಲು ಆಫರ್ ನೀಡುತ್ತವೆ. ಅದೇ ರೀತಿ ಯುಎಸ್ನ ಪ್ರಮುಖ ಷೇರು ಮಾರ್ಕೆಟ್ನ ಲಿಸ್ಟೆಡ್ ಇಟಿಎಫ್ ಹಾಗೂ ಸ್ಟಾಕ್ಗಳಲ್ಲಿ ವಹಿವಾಟು ನಡೆಸಬಹುದು.
ಅಮೆರಿಕ ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆಗೆ ಅವಕಾಶ ನೀಡುವ ಪ್ಲಾಟ್ಫಾರ್ಮ್ಗಳು ಅಮೆರಿಕದ ಲಿಸ್ಟೆಡ್ ಕಂಪೆನಿಗಳಲ್ಲಿ ಹೂಡಿಕೆ ಮಾಡುವುದಕ್ಕೆ ಭಾರತ ಮತ್ತು ಮಧ್ಯಪ್ರಾಚ್ಯದ ಹೂಡಿಕೆದಾರರಿಗೆ Stockal ಅವಕಾಶ ಒದಗಿಸುತ್ತದೆ. ಈ ಜಾಗತಿಕ ಹೂಡಿಕೆ ಪ್ಲಾಟ್ಫಾರ್ಮ್ ಹಲವು ಭಾರತೀಯ ಡಿಜಿಟಲ್ ಸ್ಟಾಕ್ ಬ್ರೋಕಿಂಗ್, ಮ್ಯೂಚುವಲ್ ಫಂಡ್ ಪ್ಲಾಟ್ಫಾರ್ಮ್ಗಳ ಸಹಯೋಗದಲ್ಲಿ ಇಂಥ ಸೇವೆಗಳನ್ನು ಒದಗಿಸುತ್ತದೆ.
ಈಚೆಗೆ Scripbox ಎಂಬ ಡಿಜಿಟಲ್ ವೆಲ್ತ್ ಮ್ಯಾನೇಜ್ಮೆಂಟ್ ಸರ್ವೀಸಸ್ ತನ್ನ ಪ್ಲಾಟ್ಫಾರ್ಮ್ನಲ್ಲಿ ಯುಎಸ್ ಈಕ್ವಿಟಿ ಆಧಾರಿತ ಮ್ಯೂಚುವಲ್ ಫಂಡ್ ಅವಕಾಶ ನೀಡುತ್ತದೆ. Stockal ಜತೆಗೆ ಸಹಭಾಗಿತ್ವ ವಹಿಸಿದ್ದು, ನೇರವಾಗಿ ಅಮೆರಿಕ ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆಗೆ ಅವಕಾಶ ಸಿಗುತ್ತದೆ. ಈ ಹೊಸ ಸೇವೆ ಮೂಲಕ ಬಳಕೆದಾರರಿಗೆ ಅಮೆರಿಕದ ಎಕ್ಸ್ಚೇಂಜ್ಗಳಲ್ಲಿನ ಪ್ರಮುಖ ಸ್ಟಾಕ್ಗಳಲ್ಲಿ ಹೂಡಿಕೆ ಮಾಡಲು ಅವಕಾಶ ನೀಡುತ್ತದೆ. ಇದರ ಜತೆಗೆ ಸೂಚ್ಯಂಕ (Index) ಆಧಾರಿತ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ಗಳಲ್ಲಿ (ETF) ಹೂಡಿಕೆ ಮಾಡಲು ಸಹ ಅವಕಾಶ ದೊರೆಯುತ್ತದೆ.
ಆ್ಯಪ್ ಮೂಲಕ ಆಫರ್ ಕಳೆದ ವರ್ಷ ಸೆಕ್ಯೂರಿಟೀಸ್ ಸಂಸ್ಥೆ Emkay Global Financial Services ಕೂಡ Scripbox ಜತೆಗೆ ಸಹಭಾಗಿತ್ವ ವಹಿಸಿದ್ದು, ಆ ಮೂಲಕವಾಗಿ ತನ್ನ ಗ್ರಾಹಕರಿಗೆ ಅಮೆರಿಕದಲ್ಲಿ ಲಿಸ್ಟ್ ಆದ ಸೆಕ್ಯೂರಿಟೀಸ್ ಮತ್ತು ಸ್ಟಾಕ್ಗಳಲ್ಲಿ ಹೂಡಿಕೆ ಮಾಡಲು ನೆರವು ನೀಡುತ್ತದೆ. ಫಿನ್ಟೆಕ್ ಸಂಸ್ಥೆಯಾದ Cube Wealthನಿಂದಲೂ Scripbox ಜತೆಗೆ 2019ರಲ್ಲಿ ಸಹಭಾಗಿತ್ವ ಮಾಡಿಕೊಳ್ಳಲಾಗಿದೆ. ಅದು ಕೂಡ ಅಂಥದ್ದೇ ಅನುಕೂಲ ಒದಗಿಸುತ್ತದೆ. ಇದರ ಜತೆಗೆ ಆನ್ಲೈನ್ ಮ್ಯೂಚುವಲ್ ಫಂಡ್ ಹಾಗೂ ಸ್ಟಾಕ್ ಬ್ರೋಕಿಂಗ್ ಪ್ಲಾಟ್ಫಾರ್ಮ್ Kuveraದಿಂದ US SEC ನೋಂದಾಯಿತ ಹಣಕಾಸು ಸಲಹೆಗಾರರು ತಮ್ಮ ಆ್ಯಪ್ ಮೂಲಕ ಈ ಆಫರ್ ಒದಗಿಸುತ್ತಿದ್ದಾರೆ.
ಅಂತರರಾಷ್ಟ್ರೀಯ/ಗ್ಲೋಬಲ್ ಮ್ಯೂಚುವಲ್ ಫಂಡ್ಗಳು ಸಹ ಹೂಡಿಕೆದಾರರಿಗೆ ಜನಪ್ರಿಯ ಮೂಲಗಳಾಗಿವೆ. ವಿದೇಶೀ ಕಂಪೆನಿಗಳು ಮತ್ತು ಆರ್ಥಿಕತೆಗಳಲ್ಲಿ ಹೂಡಿಕೆ ಮಾಡುವುದಕ್ಕೆ, ಈಕ್ವಿಟಿ, ಈಕ್ವಿಟಿಗೆ ಸಂಬಂಧಿಸಿದ ಇನ್ಸ್ಟ್ರುಮೆಂಟ್ಗಳು ಮತ್ತು ಸಾಲಪತ್ರ ಸೆಕ್ಯೂರಿಟಿಗಳಲ್ಲಿ ಭಾರತೀಯ ಅಸೆಟ್ ಮ್ಯಾನೇಜ್ಮೆಂಟ್ ಕಂಪೆನಿಗಳು (ಎಎಂಸಿ) ಆಫರ್ ನೀಡುತ್ತಿವೆ. ಕೆಲವು ಜಾಗತಿಕೆ ಫಂಡ್ಗಳು ದೇಶೀ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳು, ಕೆಲವು ನಿರ್ದಿಷ್ಟ ಥೀಮ್ಸ್ಗಳು, ಈ ಕೆಟಗಿರಿಯಲ್ಲಿ ಕೆಲವು ಫಂಡ್ ಆಫ್ ಫಂಡ್ಸ್ (FoFs)ನಲ್ಲಿ ಹೂಡಿಕೆ ಮಾಡಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಲಿಬರಲೈಸ್ಡ್ ರೆಮಿಟನ್ಸ್ ಸ್ಕೀಮ್ (LRS) ಅಡಿಯಲ್ಲಿ ಭಾರತೀಯರು ಒಂದು ವರ್ಷದಲ್ಲಿ 2,50,000 ಯುಎಸ್ಡಿ ತನಕ ಜಾಗತಿಕ ಸ್ಟಾಕ್ಗಳು ಮತ್ತು ಬಾಂಡ್ಗಳಲ್ಲಿ ಹೂಡಿಕೆ ಮಾಡಬಹುದು.
ಇದನ್ನೂ ಓದಿ: 1 ವರ್ಷದಲ್ಲಿ 4 ಪಟ್ಟು ರಿಟನ್ಸ್ ನೀಡಿದ ಈ ಕಂಪೆನಿ ಷೇರಿನಲ್ಲಿ ಹಾಕಿದ ದುಡ್ಡು 10 ವರ್ಷದಲ್ಲಿ ಬೆಳೆದಿದ್ದು 25 ಪಟ್ಟು
(How To Buy Google Apple Shares Of US Stock Exchange From India)