AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಬಳಿ ಇರುವ 1 ರೂಪಾಯಿಯ ಹಳೆ ನೋಟು ಸಹ ಲಕ್ಷ ಲಕ್ಷ ಗಳಿಸಿಕೊಡಬಹುದು; ಖರ್ಚು ಮಾಡೋ ಮುಂಚೆ ಈ ಲೇಖನ ಓದಿ

ನಿಮ್ಮ ಬಳಿ ಹಳೇ ನೋಟು, ನಾಣ್ಯಗಳಿವೆಯಾ? ಅವುಗಳು ತುಂಬ ವಿಶಿಷ್ಟವಾದದ್ದು ಅನಿಸುತ್ತಾ? ಹಾಗಿದ್ದಲ್ಲಿ ಆನ್​ಲೈನ್​ನಲ್ಲಿ ಮಾರಾಟ ಮಾಡುವ ಮೂಲಕ ಲಕ್ಷಾಂತರ ರೂಪಾಯಿ ಗಳಿಸುವ ಅವಕಾಶ ನಿಮಗಿದೆ.

ನಿಮ್ಮ ಬಳಿ ಇರುವ 1 ರೂಪಾಯಿಯ ಹಳೆ ನೋಟು ಸಹ ಲಕ್ಷ ಲಕ್ಷ ಗಳಿಸಿಕೊಡಬಹುದು; ಖರ್ಚು ಮಾಡೋ ಮುಂಚೆ ಈ ಲೇಖನ ಓದಿ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Jul 21, 2021 | 11:17 AM

Share

ಹಳೇ ನೋಟು, ನಾಣ್ಯಗಳು ಸಂಗ್ರಹಿಸುವವರಿಗೆ ಇಲ್ಲೊಂದು ಶುಭ ಸುದ್ದಿ ಇದೆ. ನಿಮ್ಮ ಬಳೆ ಇರುವ ಒಂದು ರೂಪಾಯಿಯ ನೋಟೇ ಲಕ್ಷಾಂತರ ರೂಪಾಯಿ ಹಣ ತಂದುಕೊಡಬಹುದು. ಈ ಭಾರತೀಯ ಕರೆನ್ಸಿ ಇದ್ದು, ಅದರಲ್ಲಿ ನಿರ್ದಿಷ್ಟವಾದ ಫೀಚರ್​​ಗಳಿರಬೇಕು. ಆಗ 1 ಲಕ್ಷದಿಂದ 5 ಲಕ್ಷ ರೂಪಾಯಿ ತನಕ ಗಳಿಸಬಹುದು. ಏಕೆಂದರೆ, ಕೆಲವು ಕರೆನ್ಸಿಗಳು ಮತ್ತು ಹಳೆ ಕಾಯಿನ್​ಗಳನ್ನು ಅತ್ಯಂತ ಮೌಲ್ಯಯುತ ಎಂದು ಪರಿಗಣಿಸಲಾಗುತ್ತದೆ. ಅದಕ್ಕೆ ವಿಶೇಷ ಕಾರಣಗಳೂ ಇರುತ್ತವೆ. ಅಂಥ ನಾಣ್ಯ, ನೋಟುಗಳಿಂದ ಸಕತ್ ಹಣ ಮಾಡಬಹುದು. ಈಚೆಗಿನ ದಿನಗಳಲ್ಲಿ ಹಲವು ವೆಬ್​ಸೈಟ್​ಗಳು ಆಂಟಿಕ್ ನೋಟುಗಳು ಮತ್ತು ನಾಣ್ಯಗಳನ್ನು ಹರಾಜು ಹಾಕುತ್ತವೆ. ಜನರೂ ಈ ಅಪರೂಪದ ನಾಣ್ಯ, ನೋಟುಗಳ ಸಲುವಾಗಿ ಹೆಚ್ಚಿನ ಮೊತ್ತವನ್ನು ಪಾವತಿಸಲು ಸಿದ್ಧರಿರುತ್ತಾರೆ. ನಿಮಗೆ ಗೊತ್ತಿರಲಿ, ಆಸಕ್ತ ಖರೀದಿದಾರರಿಗೆ ಅಪರೂಪದ ನಾಣ್ಯಗಳು ಮತ್ತು ನೋಟುಗಳನ್ನು ಮಾರಲು ಅವಕಾಶ ಮಾಡಿಕೊಡುವಂಥ ಹಲವಾರು ವೆಬ್​ಸೈಟ್​ಗಳಿವೆ.

ವಿಶೇಷ ಸರಣಿಯ ನೋಟುಗಳು 1. 2, 10, 100, 200, 500 ಮತ್ತು 2000 ರೂಪಾಯಿಯ ನೋಟುಗಳು ಕೆಲವು ನಿರ್ದಿಷ್ಟ ಫೀಚರ್​ಗಳೊಂದದಿಗೆ ಇದ್ದಲ್ಲಿ ಆನ್​ಲೈನ್​ ಮೂಲಕ ಅವುಗಳ ಮಾರಾಟ ಮಾಡಿ, ಒಳ್ಳೆ ಹಣ ಮಾಡಬಹುದು. ಈ ನೋಟುಗಳು 5 ಲಕ್ಷ ರೂಪಾಯಿ ತನಕ ಗಳಿಸುವ ಸಾಧ್ಯತೆ ಇದೆ. ಆ ನೋಟುಗಳ ಮೇಲೆ 12345 ಅಥವಾ 123456 ಅಮತ ಸಂಖ್ಯೆ ಇರಬೇಕು. ಈ ಸರಣಿಯನ್ನು ವಿಶಿಷ್ಟ ಹಾಗೂ ಆಂಟಿಕ್ ಎಂದು ಪರಿಗಣಿಸಲಾಗುತ್ತದೆ. ಇನ್ನೂ ಒಂದು ಸಂಗತಿ ಏನೆಂದರೆ, ಎಲ್ಲವೂ ಏರಿಕೆ ಕ್ರಮದಲ್ಲೇ ಇರಬೇಕು. ಈ ನೋಟುಗಳು ಬಹಳ ಅಪರೂಪ ಮತ್ತು ಈ ನೋಟುಗಳನ್ನು ಖರೀದಿ ಮಾಡುವುದಕ್ಕೆ ದೊಡ್ಡ ಮೊತ್ತವನ್ನು ಮಾರಾಟಗಾರರಿಗೆ ನೀಡಲು ಖರೀದಿದಾರರು ಸಿದ್ಧರಿರುತ್ತಾರೆ.

ಮತ್ತೊಂದು ಜನಪ್ರಿಯ ಸರಣಿ ಅಂದರೆ 786. ಹಳೆ ನೋಟು 786 ಸರಣಿಯನ್ನು ಹೊಂದಿದ್ದರೆ ಅದರಿಂದ ಕೂಡ ಉತ್ತಮ ಮೊತ್ತವನ್ನು ಗಳಿಸಬಹುದು. ಒಂದು ವೇಳೆ ಹಳೆ ನೋಟುಗಳು ಮತ್ತು ಅವುಗಳಲ್ಲಿ ಈ ಸರಣಿ ಸಂಖ್ಯೆ ಇದ್ದಲ್ಲಿ, ಅವುಗಳನ್ನು ಮಾರಾಟ ಮಾಡಿ, ಉತ್ತಮ ಮೊತ್ತ ಗಳಿಸಬಹುದು. ಅದು 1. 2, 10, 100, 200, 500 ಮತ್ತು 2000 ರೂಪಾಯಿಯ ನೋಟು ಯಾವುದೇ ಇರಬಹುದು. ಆದರೆ ಅದರಲ್ಲಿ 786 ಸಂಖ್ಯೆ ಇರಬೇಕು. ಗಮನಿಸಬೇಕಾದದ್ದು ಏನೆಂದರೆ, ನೋಟುಗಳ ಮೇಲೆ 786 ಅಂತ ಮುದ್ರಣವಾಗಿದ್ದಲ್ಲಿ ಅವುಗಳನ್ನು ಆಂಟಿಕ್ ಮತ್ತು ಅಪರೂಪದ್ದು ಎಂದು ಪರಿಗಣಿಸಲಾಗುತ್ತದೆ. 100 ರೂಪಾಯಿ ನೋಟೊಂದರ ಮೇಲೆ 000786 ಎಂದಿದ್ದದ್ದು ಆನ್​ಲೈನ್​ನಲ್ಲಿ 1900 ರೂಪಾಯಿಗೆ ಮಾರಾಟ ಆಗಿದೆ. ಇದರ ಮೇಲೆ ಮಾಜಿ ಗವರ್ನರ್ ಡಿ.ಸುಬ್ಬರಾವ್ ಸಹಿ ಇದೆ. ಈ ಹಿಂದೆಲ್ಲ ಹಲವರಿಗೆ 786 ಎಂಬ ಸಂಖ್ಯೆ ಇರುವ ನೋಟುಗಳಿಗೆ ರೂ. 3 ಲಕ್ಷದ ತನಕ ಹಣ ಸಿಕ್ಕಿದೆ.

ಸಿಕ್ಕಾಪಟ್ಟೆ ಬೇಡಿಕೆಯಲ್ಲಿ ಇರುವ ನಾಣ್ಯ ಹಾಗೂ ನೋಟುಗಳು ನಾಣ್ಯಗಳ ವಿಚಾರಕ್ಕೆ ಬಂದರೆ, 5 ಮತ್ತು 10 ರೂಪಾಯಿ ನಾಣ್ಯಗಳಲ್ಲಿ ಮಾತಾ ವೈಷ್ಣೋದೇವಿ ಇರುವಂಥದ್ದಕ್ಕೆ ಹೆಚ್ಚಿನ ಮೌಲ್ಯ. ಇಂಥ ನಾಣ್ಯಗಳಿರುವವರು ಮಾರಾಟಕ್ಕೆ ಇಟ್ಟು, ಲಕ್ಷಗಟ್ಟಲೆ ಹಣ ಗಳಿಸಬಹುದು. ಈಗೀಗಂತೂ 1 ರೂಪಾಯಿಯ ನೋಟನ್ನು ಚಲಾವಣೆಯಲ್ಲಿ ನೋಡುವುದೇ ಕಷ್ಟವಾಗಿದೆ. ಒಂದು ವೇಳೆ ನಿಮ್ಮ ಬಳಿ ಇದ್ದರೆ ಅದಕ್ಕೆ ರೂ. 45,000 ತನಕ ಗಳಿಸಬಹುದು. ಆರ್​ಬಿಐ ಮಾಜಿ ಗವರ್ನರ್ ಎಚ್.ಎಮ್​.ಪಟೇಲ್ ಸಹಿ ಇರುವ ಒಂದು ರೂಪಾಯಿ ನೋಟು ಆನ್​ಲೈನ್​ನಲ್ಲಿ 45,000 ರೂಪಾಯಿಗೆ ಲಿಸ್ಟ್​ ಆಗಿದೆ. 1943ನೇ ಇಸವಿಯ ಬ್ರಿಟಿಷರ ಕಾಲದ 10 ರೂಪಾಯಿ ನೋಟು, ಅದರ ಮೇಲೆ ಆರ್​ಬಿಐ ಗವರ್ನರ್ ಸಿ.ಡಿ.ದೇಶ್​ಮುಖ್ ಸಹಿ ಇದೆ. ಅದಕ್ಕೆ 25,000 ರೂಪಾಯಿ ಬಂದಿದೆ. ರಾಣಿ ವಿಕ್ಟೋರಿಯಾ ಮುಖವನ್ನು ಒಳಗೊಂಡ ನಾಣ್ಯಗಳು ಕ್ವಿಕರ್​ನಲ್ಲಿ 1.5 ಲಕ್ಷ ರೂಪಾಯಿ ತನಕ ಮಾರಾಟ ಆಗಿವೆ.

ಮೇಲೆ ಹೇಳಲಾದ ಸರಣಿಯ ಯಾವುದೇ ನೋಟುಗಳು, ವಿಶೇಷ ನಾಣ್ಯಗಳು ಹೊಂದಿದ್ದರೆ ಅವುಗಳನ್ನು ಇಬೇ, ಕ್ವಿಕರ್, ಕಾಯಿನ್​ಬಜಾರ್ ಮತ್ತು ಇಂಥ ಹಲವು ವೆಬ್​ಸೈಟ್​ಗಳಲ್ಲಿ ಮಾರಾಟಕ್ಕೆ ಇಡಬಹುದು. ಭಾರತದ ಅಪರೂಪದ ನೋಟುಗಳು ಮತ್ತು ನಾಣ್ಯಗಳನ್ನು ಹರಾಜು ಹಾಕುವುದಕ್ಕೆ ವೇದಿಕೆ ಒದಗಿಸುತ್ತವೆ. ಅಲ್ಲಿ ಜಾಹೀರಾತುಗಳನ್ನು ನೋಡಿ, ಗ್ರಾಹಕರು ಖರೀದಿಗೆ ಮುಂದಾಗುತ್ತಾರೆ. ಆದರೆ ನೆನಪಿನಲ್ಲಿರಲಿ, ಈ ರೀತಿಯ ಹೆಸರಲ್ಲಿ ಕೆಲವು ವಂಚಕರು ಮೋಸ ಮಾಡಲು ಸಹ ಮುಂದಾಗಿದ್ದಾರೆ. ಅಂಥವರಿಗೆ ಎಚ್ಚರಿಕೆಯಾಗಿ ಇರಬೇಕು.

ಇದನ್ನೂ ಓದಿ: Coin Auction: ಆ ಒಂದು ಚಿನ್ನದ ನಾಣ್ಯ ಹರಾಜಾಗಿದ್ದು 138 ಕೋಟಿ ರೂಪಾಯಿಗೆ; ಏನಿತ್ತು ಅಂಥ ವಿಶೇಷ ಅಂತೀರಾ?

ಇದನ್ನೂ ಓದಿ: Old Coin Auction: ಹಳೇ ಕಾಲದ ನೋಟು, ನಾಣ್ಯ ಇದ್ದರೆ ಲಕ್ಷಗಟ್ಟಲೆ ಸಂಪಾದಿಸಿ; ಆನ್​ಲೈನ್​ ವ್ಯವಹಾರ ಮಾಡುವಾಗ ಎಚ್ಚರವೂ ಇರಲಿ

ತಾಯಿಯ ಸಮಾಧಿ ಪಕ್ಕದಲ್ಲೇ ಸರೋಜಾದೇವಿ ಪಾರ್ಥೀವ ಶರೀರ ದಫನ
ತಾಯಿಯ ಸಮಾಧಿ ಪಕ್ಕದಲ್ಲೇ ಸರೋಜಾದೇವಿ ಪಾರ್ಥೀವ ಶರೀರ ದಫನ
‘ಲವ್ ಮಾಕ್ಟೇಲ್ 3’ ಚಿತ್ರಕ್ಕೆ ಶೂಟಿಂಗ್ ಶುರು ಮಾಡಿದ ಡಾರ್ಲಿಂಗ್​ ಕೃಷ್ಣ
‘ಲವ್ ಮಾಕ್ಟೇಲ್ 3’ ಚಿತ್ರಕ್ಕೆ ಶೂಟಿಂಗ್ ಶುರು ಮಾಡಿದ ಡಾರ್ಲಿಂಗ್​ ಕೃಷ್ಣ
ಬಿಬಿಎಂಪಿ ಕಚೇರಿ ಎದುರೇ ನಾಯಿಗಳಿಗೆ ಶಾಲು ಹೊದೆಸಿ ಸನ್ಮಾನಿಸಿದ ವಾಟಾಳ್!
ಬಿಬಿಎಂಪಿ ಕಚೇರಿ ಎದುರೇ ನಾಯಿಗಳಿಗೆ ಶಾಲು ಹೊದೆಸಿ ಸನ್ಮಾನಿಸಿದ ವಾಟಾಳ್!
ಧರ್ಮಶಾಲಾ: ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತ, ವ್ಯಕ್ತಿ ಸಾವು
ಧರ್ಮಶಾಲಾ: ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತ, ವ್ಯಕ್ತಿ ಸಾವು
ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ