Old Coin Auction: ಹಳೇ ಕಾಲದ ನೋಟು, ನಾಣ್ಯ ಇದ್ದರೆ ಲಕ್ಷಗಟ್ಟಲೆ ಸಂಪಾದಿಸಿ; ಆನ್​ಲೈನ್​ ವ್ಯವಹಾರ ಮಾಡುವಾಗ ಎಚ್ಚರವೂ ಇರಲಿ

ಮಾತಾ ವೈಷ್ಣೋದೇವಿ ಚಿತ್ರ ಹೊಂದಿದ 10 ರೂಪಾಯಿ ನೋಟು ಇದ್ದರೆ ಅದಕ್ಕೆ ಲಕ್ಷಗಟ್ಟಲೆ ಹಣ ನೀಡಿ ಖರೀದಿಸುವವರು ಇದ್ದಾರಂತೆ. 1977ರಿಂದ 1979ರ ನಡುವಿನ ಒಂದು ರೂಪಾಯಿ ನೋಟು ಇದ್ದಲ್ಲಿ ಅದು 45 ಸಾವಿರ ರೂಪಾಯಿ ತನಕವೂ ಬಿಕರಿಯಾಗುತ್ತದೆಯಂತೆ.

Old Coin Auction: ಹಳೇ ಕಾಲದ ನೋಟು, ನಾಣ್ಯ ಇದ್ದರೆ ಲಕ್ಷಗಟ್ಟಲೆ ಸಂಪಾದಿಸಿ; ಆನ್​ಲೈನ್​ ವ್ಯವಹಾರ ಮಾಡುವಾಗ ಎಚ್ಚರವೂ ಇರಲಿ
ಹಳೇ ನೋಟು, ನಾಣ್ಯಗಳಿಂದ ಹಣ ಗಳಿಸಿ
Follow us
TV9 Web
| Updated By: Skanda

Updated on: Jul 05, 2021 | 8:45 AM

ದೆಹಲಿ: ಕೆಲವರಿಗೆ ಹಳೇ ಕಾಲದ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸವಿರುತ್ತದೆ. ಎಷ್ಟೋ ವರ್ಷಗಳ ಹಿಂದಿನ ಅಂಚೆ ಚೀಟಿ, ಗಡಿಯಾರ, ಪೆನ್ನು, ನಾಣ್ಯ, ನೋಟಿನಿಂದ ಹಿಡಿದು ಬೈಕು, ಕಾರುಗಳ ತನಕ ತರಹೇವಾರಿ ವಸ್ತುಗಳು ಕೆಲವರ ಸಂಗ್ರಹದಲ್ಲಿರುತ್ತವೆ. ಒಮ್ಮೊಮ್ಮೆ ಅಂತಹ ವಸ್ತುಗಳಿಗೆ ಭಾರೀ ಬೇಡಿಕೆಯೂ ಸೃಷ್ಟಿಯಾಗುತ್ತದೆ. ಇದೀಗ ಅಪರೂಪದ ಹಳೇ ನಾಣ್ಯ, ನೋಟುಗಳನ್ನು ಸಂಗ್ರಹಿಸುವವರಿಗೆ ಶುಭ ಸುದ್ದಿಯೊಂದು ಸಿಕ್ಕಿದೆ. ಹಳೆಯ ಹಾಗೂ ಅತ್ಯಪರೂಪದ 1 ರೂಪಾಯಿ, 2 ರೂಪಾಯಿ ಮುಖಬೆಲೆಯ ನಾಣ್ಯ ಮತ್ತು 1 ರೂಪಾಯಿ, 2 ರೂಪಾಯಿ, 5 ರೂಪಾಯಿ ಮುಖಬೆಲೆಯ ನೋಟುಗಳಿದ್ದರೆ ಅವುಗಳನ್ನು ಅಧಿಕ ಮೊತ್ತಕ್ಕೆ ಖರೀದಿಸಲಾಗುತ್ತಿದೆ.

ಈ ಅಪರೂಪದ ನೋಟು, ನಾಣ್ಯಗಳನ್ನು ಆನ್​ಲೈನ್ ಮೂಲಕ ಹರಾಜು ಹಾಕಬಹುದಾಗಿದ್ದು, ಕಾಯಿನ್​ಬಜಾರ್​ (CoinBazzar) ಎಂಬ ವೆಬ್​ಸೈಟ್​ ಮೂಲಕ ಹರಾಜಿಗೆ ಇಡಬಹುದಾಗಿದೆ. ಅದಕ್ಕಾಗಿ ನಿಮ್ಮ ಹೆಸರು, ಇಮೇಲ್​ ಐಡಿ, ಪೂರ್ಣ ವಿಳಾಸ ನೀಡಬೇಕಾಗಿದ್ದು, ನಿಮ್ಮ ಬಳಿ ಇರುವ ಅಪರೂಪದ ನೋಟು, ನಾಣ್ಯಗಳ ವಿವರ ತಿಳಿಸಿ ಅದಕ್ಕೆ ಎಷ್ಟು ಬೆಲೆ ಬಯಸುತ್ತೀರಿ ಎನ್ನುವುದನ್ನೂ ತಿಳಿಸಬೇಕಾಗುತ್ತದೆ. ಒಂದುವೇಳೆ ಆಸಕ್ತರು ಯಾರಾದರೂ ಇದ್ದಲ್ಲಿ ನಿಮ್ಮನ್ನು ನೇರವಾಗಿ ಸಂಪರ್ಕಿಸಿ, ಅವುಗಳಿಗೆ ತಕ್ಕ ಮೌಲ್ಯ ನೀಡಿ ಖರೀದಿ ಮಾಡುತ್ತಾರೆ.

ಒಂದುವೇಳೆ ಯಾರ ಬಳಿಯಾದರೂ ಮಾತಾ ವೈಷ್ಣೋದೇವಿ ಚಿತ್ರ ಹೊಂದಿದ 10 ರೂಪಾಯಿ ನೋಟು ಇದ್ದರೆ ಅದಕ್ಕೆ ಲಕ್ಷಗಟ್ಟಲೆ ಹಣ ನೀಡಿ ಖರೀದಿಸುವವರು ಇದ್ದಾರಂತೆ. 1977ರಿಂದ 1979ರ ನಡುವಿನ ಒಂದು ರೂಪಾಯಿ ನೋಟು ಇದ್ದಲ್ಲಿ ಅದು 45 ಸಾವಿರ ರೂಪಾಯಿ ತನಕವೂ ಬಿಕರಿಯಾಗುತ್ತದೆಯಂತೆ. ಆದರೆ, ಅದಕ್ಕೂ ಒಂದು ಕಂಡೀಷನ್​ ಇದ್ದು, ಆ ನೋಟಿನಲ್ಲಿ ಅಂದಿನ ವಿತ್ತ ಸಚಿವ ಹೀರೂಭಾಯ್ ಎಂ ಪಟೇಲ್​ ಅವರ ಸಹಿ ಇರಬೇಕಂತೆ.

ಅಂತೆಯೇ, ಒಎನ್​ಜಿಸಿ (Oil and Natural Gas Corporation) ಸ್ಮರಣಾರ್ಥ ಹೊರತಂದ 5ರೂಪಾಯಿ ಬೆಲೆಯ 10 ನಾಣ್ಯಗಳು ಒಟ್ಟು 200ರೂಪಾಯಿಗೆ ಬಿಕರಿಯಾಗುತ್ತಿದ್ದು, ಆರ್​ಬಿಐ ಗವರ್ನರ್​ ಡಿ.ಸುಬ್ಬರಾವ್​ ಅವರ ಸಹಿ ಇರುವ ವಿಶೇಷ ಸರಣಿ ಸಂಖ್ಯೆಯುಳ್ಳ 100 ರೂಪಾಯಿ ನೋಟುಗಳನ್ನು 1,999ರೂಪಾಯಿಗೆ ಕೊಳ್ಳಲಾಗುತ್ತಿದೆ. ಇನ್ನು ಕೆಲ ವಿಶೇಷ ನೋಟು, ನಾಣ್ಯಗಳು 40 ಸಾವಿರ ರೂಪಾಯಿ ತನಕವೂ ಹರಾಜಾಗುತ್ತಿದ್ದು ಭಾರೀ ಗಮನ ಸೆಳೆಯುತ್ತಿವೆ.

1943ರಲ್ಲಿ ಬ್ರಿಟೀಷ್​ ಆಡಳಿತ ಕಾಲದಲ್ಲಿ ಮುದ್ರಣಗೊಂಡ ಒಂದು ಬದಿ ಅಶೋಕ ಸ್ತಂಭ ಹಾಗೂ ಇನ್ನೊಂದು ಬದಿ ಬೋಟ್​ ಚಿತ್ರವುಳ್ಳ 10 ರೂಪಾಯಿ ನೋಟಿಗೆ 25 ಸಾವಿರ ರೂಪಾಯಿ ತನಕವೂ ಬೇಡಿಕೆ ಇದೆಯಂತೆ. ಆದರೆ, ಆ ನೋಟಿನಲ್ಲಿ ಅಂದಿನ ಆರ್​ಬಿಐ ಗವರ್ನರ್ ಸಿಡಿ ದೇಶ್​ಮುಖ್​ ಸಹಿ ಜತೆಗೆ 10 ರೂಪಾಯಿ ಎಂದು ನೋಟಿ ಎರಡೂ ಕಡೆ ಆಂಗ್ಲ ಅಕ್ಷರದಲ್ಲಿ ಬರೆದಿರಬೇಕು ಎನ್ನಲಾಗಿದೆ.

ಕಾಯಿನ್​ಬಜಾರ್​ ವೆಬ್​ಸೈಟ್​ನಲ್ಲಿ ಇಂತಹ ಹಲವು ವ್ಯವಹಾರಗಳಿಗೆ ಅವಕಾಶವಿದ್ದು, ಮಾರ್ಚ್​ 2015ರಿಂದ ಸಕ್ರಿಯವಾದ ಈ ಜಾಲತಾಣ ಹಳೇ ನೋಟು, ನಾಣ್ಯಗಳನ್ನು ಮಾರಲು, ಕೊಳ್ಳಲು ಉತ್ತಮ ವೇದಿಕೆಯಾಗಿದೆ. ಕಾಯಿನ್​ಬಜಾರ್​ನಂತೆಯೇ ಇಂಡಿಯಾಮಾರ್ಟ್​.ಕಾಂ ಎಂಬ ವೆಬ್​ಸೈಟ್​ ಒಂದಿದ್ದು ಅದರಲ್ಲಿ ಹಳೆಯ 25ಪೈಸೆ ಮುಖಬೆಲೆಯ ನಾಣ್ಯ, 1.5ಲಕ್ಷ ರೂಪಾಯಿ ತನಕ ಬಿಕರಿಯಾಗುತ್ತಿದೆಯಂತೆ. ಕ್ವಿಕರ್ ಜಾಲತಾಣದಲ್ಲೂ ಇದಕ್ಕೆ ಅವಕಾಶವಿದ್ದು ಹಳೇ ಕಾಲದ ನೋಟು, ನಾಣ್ಯ ಹೊಂದಿದವರು ಉತ್ತಮ ಹಣಗಳಿಸಬಹುದಾಗಿದೆ.

ಆದರೆ, ಈ ಎಲ್ಲಾ ವಹಿವಾಟಿನಲ್ಲೂ ಎಚ್ಚರಿಕೆ ಅತ್ಯವಶ್ಯಕವಾಗಿದ್ದು, ಯಾವುದೇ ಕಾರಣಕ್ಕೂ ಕ್ಯೂ ಆರ್​ ಕೋಡ್​ ಸ್ಕ್ಯಾಮ್​ನಂತಹ ಮೋಸಗಳಿಗೆ ಒಳಗಾಗದಂತೆ ಹೆಜ್ಜೆ ಇರಿಸಬೇಕಿದೆ. ಹೆಚ್ಚು ಲಾಭದ ಆಸೆ ತೋರಿಸಿ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಜನರು ಜಾಗರೂಕರಾಗಿ ವ್ಯವಹಾರ ಮಾಡಬೇಕಿದೆ.

ಇದನ್ನೂ ಓದಿ: 1 ರೂ. ನಾಣ್ಯಕ್ಕೆ 1 ಕೋಟಿ ರೂ. ಸಿಗಲಿದೆ ಎಂದು ನಂಬಿ 1 ಲಕ್ಷ ರೂ. ಕೊಟ್ಟು ಕೈ ಸುಟ್ಟುಕೊಂಡ ಬೆಂಗಳೂರಿನ ಶಿಕ್ಷಕಿ 

Coin Auction: ಆ ಒಂದು ಚಿನ್ನದ ನಾಣ್ಯ ಹರಾಜಾಗಿದ್ದು 138 ಕೋಟಿ ರೂಪಾಯಿಗೆ; ಏನಿತ್ತು ಅಂಥ ವಿಶೇಷ ಅಂತೀರಾ?

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್